ಪ್ರತಿಯೊಬ್ಬರಿಗೂ ಕೂಡ ಆಶ್ರಯ ಬೇಕು. ನೆಮ್ಮದಿಯಾಗಿ ನೆಲೆಯೂರಲು ನಮ್ಮದೆನ್ನುವ ಸ್ವಂತ ಮನೆ (Own House) ಇರಬೇಕು ಅಥವಾ ಸ್ವಂತ ಮನೆ ನಿರ್ಮಿಸಿಕೊಳ್ಳುವುದಕ್ಕೆ ಜಾಗ ಆದರೂ ಇರಬೇಕು. ಆದರೆ ಇನ್ನೂ ಅಭಿವೃದ್ಧಿಶೀಲ ರಾಷ್ಟ್ರವಾಗಿರುವ ನಮ್ಮ ದೇಶದಲ್ಲಿ ಬಡವರು, ನಿರ್ಗತಿಕರು, ಹಿಂದುಳಿದ ವರ್ಗದವರು ಚಿಕ್ಕ ಪುಟ್ಟ ಬಾಡಿಗೆ ಮನೆಗಳಲ್ಲಿ ರಸ್ತೆ ಬದಿಯಲ್ಲಿ ಜೀವನ ಸಾಗುತ್ತಿದ್ದಾರೆ, ಇನ್ನು ಕೆಲವರು ಸರ್ಕಾರದ ನೆರವಿಗಾಗಿ ಕಾಯುತ್ತಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಸತಿ ಯೋಜನೆಗಳನ್ನು ಆಯೋಜಿಸಿ(Government Housing Schemes) ಮನೆ ಕಟ್ಟುವ ಕೊಳ್ಳುವವರಿಗೆ ಅನುಕೂಲ ಮಾಡಿಕೊಡುತ್ತಿದೆ. ಆದರೆ ಮನೆ ನಿರ್ಮಿಸಿಕೊಳ್ಳುವುದಕ್ಕೂ ಖಾಲಿ ನಿವೇಶನ ಇಲ್ಲದವರೂ ಇದ್ದಾರೆ. ಈಗ ಅಂತಿಮವಾಗಿ ಎಲ್ಲರಿಗೂ ಸ್ವಂತ ಮನೆ ಅವಕಾಶ ನೀಡಬೇಕು ಎಂದು ದೃಢ ನಿರ್ಧಾರ ಮಾಡಿರುವ ಕರ್ನಾಟಕ ಸರ್ಕಾರವು ಆಶ್ರಯ ಯೋಜನೆಯಡಿ(Ashraya Scheme) ನಿವೇಶನ ರಹಿತ ಹಾಗೂ ವಸತಿ ರಹಿತ ಜನರನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಲು ಮುಂದಾಗಿದೆ.
ಸಂಕ್ರಾತಿ ಹಬ್ಬದ ಪ್ರಯುಕ್ತ ರೈತ ಮಹಿಳೆಯರಿಗೆ 12,000 ಗಿಫ್ಟ್ ಮೋದಿ ಸರ್ಕಾರದಿಂದ ಹೊಸ ಯೋಜನೆ.!
ಬೆಂಗಳೂರಿನಂತಹ (Bengaluru) ಮಹಾನಗರದಲ್ಲೂ ಕೂಡ ಈ ಸಮಸ್ಯೆ ಬೃಹದಾಕಾರದಲ್ಲಿ ಬೆಳೆದಿದೆ. ಯಾಕೆಂದರೆ ಪ್ರತಿ ವರ್ಷವೂ ಬೆಂಗಳೂರಿನತ್ತ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿ ಜನಸಂಖ್ಯೆ ಹೆಚ್ಚಾದಷ್ಟು ಬಾಡಿಗೆ ಹೆಚ್ಚಾಗುತ್ತಿದೆ, ಹೀಗಾಗಿ ಬದುಕು ದುಸ್ತರವಾಗುತ್ತಿದೆ.
ಇದನ್ನು ಪರಿಹರಿಸುವ ಉದ್ದೇಶದಿಂದ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ (RGRHCL) ಐದು ವರ್ಷಗಳ ಹಿಂದೆಯೇ ಬೆಂಗಳೂರಿನ ನಿವಾಸಿಗಳಲ್ಲಿ ವಸತಿರಹಿತರು ಹಾಗೂ ನಿವೇಶನರಹಿತರ ಸರ್ವೆ ಕಾರ್ಯ ನಡೆದಿದ್ದು ಈ ನಿವೇಶನ ಹಾಗೂ ಮನೆಗಳಿಗಾಗಿ ಅರ್ಜಿ ಸಲ್ಲಿಸಿದವರ ಪೂರ್ವಾಪರ ಮಾಹಿತಿಯನ್ನು ರಾಜೀವ್ಗಾಂಧಿ ವಸತಿ ನಿಗಮದವರು ಸಂಗ್ರಹಿಸಿದ್ದಾರೆ.
ಗೃಹಲಕ್ಷ್ಮಿ ಹಣ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ಸುಲಭ ವಿಧಾನ.! ಇದೊಂದು ನಂಬರ್ ಹಾಕಿ ಸಾಕು.!
ಮಂದಗತಿಯಲ್ಲಿ ಸಾಗುತ್ತಿದ್ದೆ ಎನ್ನುವ ಆರೋಪ ಜನಸಾಮಾನ್ಯದಿಂದ ಎದುರಾಗಿತ್ತು ಈಗ ಅಂತಿಮ ಹಂತಕ್ಕೆ ಯೋಜನೆ ಬಂದಿದೆ. ಕಡು ಬಡತನದಲ್ಲಿ ಇರುವವರು, ಮತ್ತು ಉಳಿದುಕೊಳ್ಳಲು ಮನೆ ಬೇಕು ಎಂದು ಅರ್ಜಿಯಲ್ಲಿ ತಿಳಿಸಿದವರ ವಿಳಾಸಕ್ಕೆ ಭೇಟಿ ನೀಡಿ ಅವರು ವಾಸವಾಗಿರುವ ಮನೆಗಳ ಫೋಟೊ ಸಮೇತವಾಗಿ ಮಾಹಿತಿಯನ್ನು ಸಂಗ್ರಹಿಸಿ ಅರ್ಜಿ ಸಲ್ಲಿಸಿದವರ ಫಲಾನುಭವಿಗಳ ಮಾಹಿತಿಯನ್ನು ಗ್ರಾಮ ಪಂಚಾಯಿತಿಗಳಿಗೆ ರವಾನಿಸುವ ಕಾರ್ಯವು ಮುಗಿದಿದೆ.
ಇನಾನೇನಿದೊದರೂ ಗ್ರಾಮ ಪಂಚಾಯತ್ ಗಳಿಗೆ ಕಳುಹಿಸಿದ ಅರ್ಜಿ ದಾರರ ಅರ್ಜಿಯಲ್ಲಿ ಅರ್ಹರನ್ನು ಗುರುತಿಸಿ ಜಿಲ್ಲಾಡಳಿತವು ನಿವೇಶನ ಹಂಚಿಕೆ ಮಾಡಬೇಕು. ಜಿಲ್ಲಾಡಳಿತ ಈಗಾಗಲೇ ಎಲ್ಲ ನಾಲ್ಕು ತಾಲೂಕುಗಳ ವ್ಯಾಪ್ತಿಯಲ್ಲಿ ಇರುವ ಸರಕಾರಿ ಗೋಮಾಳ ಜಮೀನನ್ನು (land) ಆಶ್ರಯ ನಿವೇಶನಗಳಿಗಾಗಿಯೇ ಗುರುತಿಸಿ.
ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!
ಪಹಣಿಯಲ್ಲೂ ಆಶ್ರಯ ನಿವೇಶನಕ್ಕೆ ಮೀಸಲು ಎಂದು ಕಾಣಿಸಿ ತಾಲೂಕು ಪಂಚಾಯತ್ ಗಳಿಗೆ ನೀಡಲಾಗಿದೆ. ಅಂತಿಮವಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದ ಅರ್ಹರಿಗೆ ಆಶ್ರಯ ಯೋಜನೆಯಡಿ ಉಚಿತ ಸೈಟ್ ಹಂಚಿಕೆಗಾಗಿ 527 ಎಕರೆ ಭೂಮಿ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.
ನಿವೇಶನಗಳಿಗೆ ಜಮೀನು ಮಂಜೂರು ಮಾಡಿರುವ ಎಕರೆಯ ವಿವರ :-
* ದೇವನಹಳ್ಳಿ ತಾಲೂಕಿನಲ್ಲಿ 62.14 ಎಕರೆ.
* ದೊಡ್ಡಬಳ್ಳಾಪುರ ತಾಲೂಕಿನಲ್ಲಿ 93.39 ಎಕರೆ.
* ಹೊಸಕೋಟೆ ತಾಲೂಕಿನಲ್ಲಿ 324.20 ಎಕರೆ.
* ನೆಲಮಂಗಲ ತಾಲೂಕಿನಲ್ಲಿ 46.37 ಎಕರೆ.:-
* ಅರ್ಜಿದಾರರು ಪುರಸಭೆ ಹಾಗೂ ಇತರೇ ಯಾವುದೇ ಪ್ರದೇಶದಲ್ಲಿ ಕುಟುಂಬದವರ ಬಳಿ ಆಗಲೀ, ಅರ್ಜಿದಾರರ ಹೆಸರಿನಲ್ಲಾಗಲೀ ಯಾವುದೇ ಆಸ್ತಿ ಇರಬಾರದು.
* ಇದರ ಬಗ್ಗೆ ಅರ್ಜಿಗೆ ನೋಟರಿ ಅಫಿಡೇವಿಟ್ ಲಗತ್ತಿಸಬೇಕು.
* ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ನಿಮ್ಮ ವಿವರಗಳನ್ನು ತುಂಬಿ ಸಲ್ಲಿಸಬೇಕು.
* ಮಹಿಳೆ, ವಿಧವೆ, ವಿಚ್ಛೇದಿತರಿಗೆ, ಅಂಗವಿಕಲರು ಮಾಜಿ ಸೈನಿಕರು ಮತ್ತು ಹಿರಿಯ ನಾಗರಿಕರಿಗೆ ಹೆಚ್ಚಿನ ಆದ್ಯತೆ ಇರುತ್ತದೆ.
ಬೇಕಾಗುವ ದಾಖಲೆಗಳು:-
* ಅರ್ಜಿದಾರರ ಇತ್ತೀಚಿನ ಪಾಸ್ಪೋರ್ಟ್ ಅಳತೆಯ 2 ಭಾವಚಿತ್ರ
* ಜಾತಿ ಮತ್ತು ಆದಾಯ ಪ್ರಮಾಣ
* ಕುಟುಂಬದ ಪಡಿತರ ಚೀಟಿ
* ಅರ್ಜಿದಾರರ ಆಧಾರ್ ಕಾರ್ಡ್ ಮತ್ತು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಜೆರಾಕ್ಸ್
* ಅರ್ಜಿದಾರನ ಮತದಾರ ಗುರುತಿನ ಚೀಟಿ
* ವಿಕಲಚೇತನರಾಗಿದ್ದರೆ ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರವನ್ನು
* ಮಾಜಿ ಸೈನಿಕರು, ಹಿರಿಯ ನಾಗರಿಕರಾಗಿದ್ದಲ್ಲಿ ಸಂಬಂಧಿಸಿದ ಪ್ರಮಾಣ ಪತ್ರ
* ಇತರೆ ಯಾವುದೇ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿದರು ಸಂಬಂಧಪಟ್ಟ ಪುರಾವೆಗಳು