ಹಣಕಾಸಿನ ವಹಿವಾಟುಗಳು ಆನ್ಲೈನ್, ನಗದು ಮಾತ್ರವಲ್ಲದೆ ಚೆಕ್ (Cheque) ರೂಪದಲ್ಲಿ ಕೂಡ ನಡೆಯುತ್ತವೆ. ದೊಡ್ಡ ದೊಡ್ಡ ಕಂಪನಿಗಳ ನಡುವೆ ಚೆಕ್ ಮೂಲಕ ವ್ಯವಹಾರ ನಡೆಯುತ್ತದೆ ಮತ್ತು ಕೆಲವೊಮ್ಮೆ ನಾವು ಸಾಲ ಪಡೆದುಕೊಳ್ಳುವಾಗ ಕೂಡ ಬ್ಯಾಂಕ್ ಚೆಕ್ ನೀಡಿ ಅದರ ಆಧಾರದ ಮೇಲೆ ನಂಬಿಕೆ ಗಳಿಸಿ ಸಾಲ ಪಡೆದುಕೊಂಡಿರುತ್ತೇವೆ.
ಈ ರೀತಿ ಪರಿಸ್ಥಿತಿಗಳಲ್ಲಿ ನಾವು ಸಾಲ ಮರುಪಾವತಿ ಮಾಡಿದ ನಂತರ ನಾವು ಕೊಟ್ಟಿದ್ದ ಚೆಕ್ ವಾಪಸ್ ಪಡೆದುಕೊಳ್ಳಬಹುದು ಅಥವಾ ವ್ಯವಹಾರ ಕಾರಣಕ್ಕಾಗಿ ನಾವು ಚೆಕ್ ನೀಡಿದ್ದರೆ ನಮ್ಮಿಂದ ಚೆಕ್ ಪಡೆದವರು ಬ್ಯಾಂಕ್ ಗೆ ಹಾಕಿ ಹಣ ಪಡೆಯುತ್ತಾರೆ. ಇಂತಹ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ಚೆಕ್ ನೀಡಿದ ವ್ಯಕ್ತಿಯ ಖಾತೆಯಲ್ಲಿ ಆತನು ಬರೆದು ಕೊಟ್ಟಿದ್ದಷ್ಟು ಹಣ ಇದದೆ ಇದ್ದರೆ ಚೆಕ್ ಬೌನ್ಸ್ ಆಗಿದೆ (Cheque bounce) ಎಂದು ಹೇಳುತ್ತಾರೆ.
ಈ ಸುದ್ದಿ ನೋಡಿ:- ಇನ್ಮುಂದೆ ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ.! ನರೇಂದ್ರ ಮೋದಿ ಅವರಿಂದ ಹೊಸ ಘೋಷಣೆ.!
ಅಥವಾ ನೀಡಿದ್ದ ಚೆಕ್ ಸರಿ ಇಲ್ಲದಿದ್ದರೆ ಚೆಕ್ ಡಿಸ್ ಹಾನರ್ (Dis honor) ಆಗಿದೆ ಎಂದು ಕೂಡ ಹೇಳುತ್ತಾರೆ ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಈ ಚೆಕ್ ಬೌನ್ಸ್ ಪ್ರಕರಣಗಳ ಹೆಚ್ಚಾಗುತ್ತಿವೆ. ಈ ರೀತಿ ಚೆಕ್ ಪೋಸ್ಟ್ ಪ್ರಕರಣ ಎಂದ ಕೂಡಲೇ ಚೆಕ್ ನೀಡಿದವರು ಗಾಬರಿಗೊಳಾಗುತ್ತಾರೆ.
ತಮಗೆ ಶಿಕ್ಷೆ ಹಾಗೂ ದೊಡ್ಡ ದಂಡ ಬೀಳುತ್ತದೆ ಎಂದು ಭಯ ಪಡುತ್ತಾರೆ ಹಾಗಾಗಿ ಕಾನೂನು ಮೂಲಕ ನಡೆಯುವ ಅನೇಕ ಪ್ರಕ್ರಿಯೆಗಳಲ್ಲಿ ತಪ್ಪಾಗಿ ನಡೆದುಕೊಂಡು ಹೆಚ್ಚಿನ ಸಮಸ್ಯೆ ಎದುರಿಸುತ್ತಾರೆ. ಆದ ಕಾರಣ ಈ ರೀತಿ ಸಮಸ್ಯೆ ಪಡಬಾರದು ಎನ್ನುವ ಕಾರಣಕ್ಕಾಗಿ ಯಾವ ರೀತಿ ನಡೆದುಕೊಂಡರೆ ನಮಗೆ ಅಪಾಯ ಇಲ್ಲ ಮತ್ತು ಇಂತಹ ಸಮಸ್ಯೆಗಳನ್ನು ಹೇಗೆ ಎದುರಿಸಿ ಪರಿಹಾರ ಮಾಡಿಕೊಳ್ಳಬೇಕು ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಈ ಸುದ್ದಿ ನೋಡಿ:- ಇಂಥವರಿಗೆ ಮಾತ್ರ ಇನ್ಮುಂದೆ ವೃದ್ಧಾಪ್ಯ ವೇತನ ಸರ್ಕಾರದ ಹೊಸ ರೂಲ್ಸ್.! ಕಂಗಾಲದ ಪಿಂಚಣಿದಾರರು.!
ಯಾವುದೇ ವ್ಯಕ್ತಿಗೆ ನೀವು ನೀಡಿದ ಚೆಕ್ ಬೌನ್ಸ್ ಆಗಿದ್ದರೆ ಆತ ನೇರವಾಗಿ ಹೋಗಿ ದಾವಗ ಹೂಡುವುದಿಲ್ಲ. ಮೊದಲಿಗೆ ವಕೀಲರ ಮೂಲಕ ಅಥವಾ ನ್ಯಾಯಾಲದ ಮೂಲಕ ನಿಮಗೆ ನೋಟಿಸ್ ಕಳುಹಿಸುತ್ತಾರೆ. ಆ ನೋಟಿಸ್ ನಲ್ಲಿ 15 ದಿನಗಳ ಕಾಲಾವಕಾಶ ಇರುತ್ತದೆ ಮತ್ತು ನೋಟಿಸ್ ನಿಮಗೆ ತಲುಪಿದ 30 ದಿನಗಳಾದ ನಂತರ ಅವರು ನಿಮ್ಮ ಮೇಲೆ ಕೋರ್ಟ್ ನಲ್ಲಿ ಕೇಸ್ ಹಾಕಬಹುದು.
ಈ ರೀತಿ ಕೇಸ್ ದಾಖಲಿಸಿದರು ಕೂಡ ಕೋರ್ಟ್ ನಿಮಗೆ ಮೂರು ಬಾರಿ ಸಮನ್ಸ್ ಕಳಿಸುತ್ತದೆ. 30 ದಿನಗಳಿಗೊಮ್ಮೆ, 60 ದಿನಗಳಿಗೊಮ್ಮೆ ಹಾಗೂ 90 ದಿನಗಳಿಗೊಮ್ಮೆ ನಿಮಗೆ ಸಮನ್ಸ್ ಬರುತ್ತದೆ. ಈ ನೋಟಿಸ್ ಹಾಗು ಸಮನ್ಸ್ ಗಳನ್ನು ಸ್ವೀಕರಿಸಲು ಅನೇಕರು ಭ’ಯ ಬೀಳುತ್ತಾರೆ. ಊರಿಂದ ಇಲ್ಲ ಎಂದು ಸುಳ್ಳು ಹೇಳಿ ಕಳುಹಿಸುತ್ತಾರೆ ಅಥವಾ ಅಡ್ರೆಸ್ ಚೇಂಜ್ ಮಾಡಿಕೊಂಡು ತಲೆಮರೆಸಿಕೊಳ್ಳುತ್ತಾರೆ.
ಈ ಸುದ್ದಿ ನೋಡಿ:- ನಿಮ್ಮ ಬಳಿ ಈ ರೀತಿ 5 ರೂಪಾಯಿಯ ಈ ನೋಟು ಇದ್ದರೆ 21 ಲಕ್ಷ ಸಿಗಲಿದೆ ಬಂಪರ್ ಆಫರ್.!
ಅಥವಾ ಸಮನ್ಸ್ ನೀಡಲು ಬಂದವರಿಗೆ ಲಂಚ ಕೊಟ್ಟು ಇಲ್ಲ ಎಂದು ಹೇಳಿ ಕಳುಹಿಸಿಬಿಡುತ್ತಾರೆ ಈ ರೀತಿ ಮಾಡುವುದು ದೊಡ್ಡ ತಪ್ಪು. ನೀವು ಸಮನ್ಸ್ ಸ್ವೀಕರಿಸಿದರೆ ವಿಷಯ ಏನಿದೆ ಎನ್ನುವುದು ನಿಮ್ಮ ತಿಳುವಳಿಕೆಗೆ ಬರುತ್ತದೆ ಮತ್ತು ಅಲ್ಲೂ ಕೂಡ ಕಾಲಾವಕಾಶ ನೀಡುವುದು ತಿಳಿಯುತ್ತದೆ.
ಆ ಸಮನ್ಸ್ ಸ್ವೀಕರಿಸಿ ಕೋರ್ಟ್ ಗೆ ಹಾಜರಾದರೆ ನ್ಯಾಯಾಲಯದಲ್ಲಿ ನಿಮ್ಮ ಮೇಲೆ ಆರೋಪ ಮಾಡಿರುವ ದೂರುದಾರ ಮತ್ತು ನಿಮ್ಮನ್ನು ನ್ಯಾಯಾಧೀಶರು ಸಂಧಾನ ಮಾಡುವ ಪ್ರಯತ್ನ ಪಡುತ್ತಾರೆ. ಎಷ್ಟೋ ಪ್ರಕರಣಗಳಲ್ಲಿ ಮೊದಲ ಹಿಯರ್ ರಿಂಗ್ ನಲ್ಲಿಯೇ ಕೇಸ್ ಪರಿಹಾರವಾದ ಉದಾಹರಣೆಗಳು ಇವೆ.
ಈ ಸುದ್ದಿ ನೋಡಿ:- ಮಹಿಳೆಯರಿಗಾಗಿ ಹೊಸ ಯೋಜನೆ.! ಗೆಳತಿ ಯೋಜನೆಯಡಿ 2.25 ಲಕ್ಷ ಸಂಪೂರ್ಣ ಉಚಿತ.!
ಒಂದು ವೇಳೆ ನಿಮ್ಮಲ್ಲಿ ಪೂರ್ತಿ ಮೊತ್ತದ ಹಣ ಕೊಡಲು ಆಗಲಿಲ್ಲ ಎಂದರೆ ಉದಾಹರಣೆಗೆ 2 ಲಕ್ಷಕ್ಕೆ ಚೆಕ್ ಬೌನ್ಸ್ ಆಗಿದ್ದರೆ ನೀವು ಎಷ್ಟು ಹಣ ಕೊಡುತ್ತಿರಿ ಎಂದು ಒಪ್ಪಿಕೊಳ್ಳ ಬಹುದು ಉಳಿದ ಹಣವನ್ನು ಕೊಡಲು ಕಾಲಾವಕಾಶವನ್ನು ಕೂಡ ನೀವು ಕೇಳಿಕೊಳ್ಳಬಹುದು ಆಗ ನಿಮ್ಮ ಮೇಲೆ ಯಾವುದೇ ರೀತಿ ದುಷ್ಪರಿಣಾಮ ಬೀಳುವುದಿಲ್ಲ.
ಆ ರೀತಿ ಕೋರ್ಟ್ ಸಮ್ಮುಖದಲ್ಲಿ ಹಣ ತಲುಪಿಸಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು. ಆದರೆ ಕೋರ್ಟ್ ನೀಡಿದ ಮೂರು ಸಮನ್ಸ್ ಸ್ವೀಕರಿಸದೆ ನೀವು ಕೋರ್ಟ್ ಗೆ ಹಾಜರಾಗದಿದ್ದರೆ ನಿಮಗೆ ನಾನ್ ಬೇಲೇಬಲ್ ವಾರೆಂಟ್ ಇಶ್ಯೂ ಆಗುತ್ತದೆ.
ಈ ಸುದ್ದಿ ನೋಡಿ:- ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು 9250 ಬಡ್ಡಿ ಸಿಗುತ್ತೆ.!
ಗರಿಷ್ಠ ಎರಡು ವರ್ಷದವರೆಗೆ ಶಿಕ್ಷೆ ಅನುಭವಿಸುವುದು ಮಾತ್ರವಲ್ಲದೆ ನೀವು ದುಪ್ಪಟ್ಟು ಹಣವನ್ನು ಕೊಡಬೇಕಾದ ಸಂದರ್ಭ ಬರಬಹುದು. ಹಾಗಾಗಿ ಇಂತಹ ನೋಟಿಸ್ ಅಥವಾ ಸಮನ್ಸ್ ಬಂದ ಕೂಡಲೇ ನಿಮ್ಮ ಹತ್ತಿರದ ವಕೀಲರನ್ನು ಸಂಪರ್ಕಿಸಿ ಕಾನೂನು ಮೂಲಕ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಪ್ರಯತ್ನಿಸಿ.