ಯಾವುದೇ ಗ್ಯಾರಂಟಿ ಇಲ್ಲದೆ ಸ್ವಂತ ಉದ್ಯೋಗ ಮಾಡಲು ಬಡ್ಡಿ ಇಲ್ಲದೆ 2 ಲಕ್ಷ ಸಾಲ.! ಕೆಂದ್ರ ಸರ್ಕಾರದಿಂದ ಘೋಷಣೆ.!

 

WhatsApp Group Join Now
Telegram Group Join Now

ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ಜನರಿಗಾಗಿ ಎಲ್ಲಾ ವರ್ಗವನ್ನು ಕೂಡ ಪರಿಗಣನೆಗೆ ತೆಗೆದುಕೊಂಡು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅಂತೆಯೇ ಕಳೆದ ವರ್ಷ ದೇಶದ ಮಟ್ಟದಲ್ಲಿ ವಿಶೇಷವಾಗಿ ವಿಶ್ವಕರ್ಮ ದಿನಾಚರಣೆ ಆಚರಿಸಿ ಪಿಎಂ ವಿಶ್ವಕರ್ಮ ಯೋಜನೆಯ ( PM Vishvakarma Scheme ) ಮೂಲಕ ಕುಶಲಕರ್ಮಿಗಳ ಬದುಕನ್ನು ಬೆಳಗುವಂತಹ ಅನೇಕ ಯೋಜನೆಗಳನ್ನು ಘೋಷಿಸಿದೆ.

ದೇಶದಾದ್ಯಂತೆ ಇರುವ 18ಕ್ಕೂ ಹೆಚ್ಚು ಈ ರೀತಿ ಕುಶಲಗಾರಿಕೆ ಕಸುಬುಗಳಲ್ಲಿ ತೊಡಗಿಕೊಂಡಿರುವವರಿಗೆ ಅವರ ಕೌಶಲ್ಯವನ್ನು (Skill) ಅಭಿವೃದ್ಧಿಪಡಿಸಲು ಶಿಷ್ಯ ವೇತನ ಸಮೇತ ತರಬೇತಿ ಏರ್ಪಡಿಸಿ ಆ ಕ್ಷೇತ್ರದಲ್ಲಿ ಸ್ವಾವಲಂಬಿಗಳನ್ನಾಗಿಸಲು ಸ್ವ ಉದ್ಯಮದಲ್ಲಿ ತೊಡಗಿರುವವರಿಗೆ 3 ಲಕ್ಷದವರೆಗೆ ಸಾಲವನ್ನು ( Loan ) ನೀಡಲು ಮುಂದಾಗಿದೆ. ಇದರ ಕುರಿತ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಈ ಸುದ್ದಿ ಓದಿ :- ರೇಷನ್ ಕಾರ್ಡ್ ಇದ್ದವರಿಗೆ ಇಂದಿನಿಂದ ಹೊಸ ಸೇವೆ ಆರಂಭ.!

ಪಿಎಂ ವಿಶ್ವಕರ್ಮ ಯೋಜನೆಯ ಗುರಿ:-

* ದೇಶದ ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡಿ ಕುಶಲಕರ್ಮಿಗಳಿಗೆ ಏಳಿಗೆಗೆ ನೆರವಾಗುವುದು.
* ದೇಶದ ಗ್ರಾಮೀಣ ಹಾಗೂ ನಗರ ಪ್ರದೇಶದ 18 ವರ್ಗದ ಕುಶಲಕರ್ಮಿಗಳಿಗೆ ಈ ಯೋಜನೆಯಡಿ ಕೌಶಲ ಅಭಿವೃದ್ಧಿ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ ಹಾಗೂ ಬ್ಯಾಂಕ್‌ ಖಾತರಿ ರಹಿತ ಸಾಲ ಸೌಲಭ್ಯ ಒದಗಿಸುವುದು ಮಾತ್ರವಲ್ಲದೆ ಅವರು ತಯಾರಿಸುವ ಉತ್ಪನ್ನಗಳಿಗೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸುವುದು.

ಈ ಯೋಜನೆಯ ಪ್ರಯೋಜನಗಳು:-

* ಅಕ್ಕಸಾಲಿಗ, ಕಮ್ಮಾರ, ಕ್ಷೌರಿಕ ಮತ್ತು ಚಮ್ಮಾರ ಮುಂತಾದ 18 ಬಗೆಯ ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರು 3 ಲಕ್ಷದವರೆಗೆ ಯಾವುದೇ ಆಧಾರವಿಲ್ಲದೆ ಸಾಲವನ್ನು ಪಡೆರಬಹುದು,
* ವಾರ್ಷಿಕವಾಗಿ 5% ಬಡ್ಡಿ ದರದಲ್ಲಿ ಎರಡು ಕಂತುಗಳಲ್ಲಿ ಈ ಸಾಲಸೌಲಭ್ಯ ಸಿಗುತ್ತದೆ.

ಈ ಸುದ್ದಿ ಓದಿ :- ಗೃಹಲಕ್ಷ್ಮಿ ಯೋಜನೆ ಮರು ಪರಿಶೀಲನೆ.! 26,000 ಮಹಿಳೆಯರಿಗೆ ಸಿಗಲ್ಲ 6ನೇ ಕಂತಿನ ಹಣ.!

ಬೇಕಾಗಿರುವ ಅರ್ಹತೆ :-

* ಅರ್ಜಿ ಸಲ್ಲಿಸಲು ಬಯಸುವವರು ಸಾಂಪ್ರದಾಯಿಕ ಕಸಬುಗಳು ಎಂದು ಘೋಷಿತವಾಗಿರುವ 18 ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ ಉದ್ಯೋಗಿಯಾಗಿರಬೇಕು.
* 18 ವರ್ಷ ಮೇಲ್ಪಟ್ಟವರಾಗಿರಬೇಕು.
* ಒಂದು ಕುಟುಂಬದಿಂದ ಒಬ್ಬ ಸದಸ್ಯರು ಮಾತ್ರ ನೊಂದಣಿಗೆ ಅರ್ಹರಾಗಿರುತ್ತಾರೆ.
* ಅರ್ಜಿ ಸಲ್ಲಿಸಿ ನೊಂದಹಿಸಿಕೊಳ್ಳುವ ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಕೆಲಸದಲ್ಲಿರಬಾರದು.
* ಕಳೆದ 5 ವರ್ಷಗಳಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳಲ್ಲಿ ಸಾಲಗಳನ್ನು ಪಡೆದಿರಬಾರದು.
* ಮುದ್ರಾ ಮತ್ತು ಪಿಎಂ-ಸ್ವನಿಧಿ ಯೋಜನೆಗಳಲ್ಲಿ ಸಾಲ ಪಡೆದು ಪೂರ್ಣ ಮರುಪಾವತಿ ಮಾಡಿದ್ದರೆ ಅರ್ಹರಾಗಿರುತ್ತಾರೆ.

ಬೇಕಾಗುವ ದಾಖಲೆಗಳು:-

* ಆಧಾರ್ ಕಾರ್ಡ್
* ವೋಟರ್ ಐಡಿ
* ಪ್ಯಾನ್ ಕಾರ್ಡ್
* ನಿವಾಸದ ಪ್ರಮಾಣ ಪತ್ರ
* ಮೊಬೈಲ್ ನಂಬ‌ರ್ ಮತ್ತು ಇಮೇಲ್ ಐಡಿ
* ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
* ಕೆಲಸಕ್ಕೆ ಸಂಬಂಧಿಸಿದ ದಾಖಲೆಗಳು (ಗ್ರಾಮ ಪಂಚಾಯಿತಿಯಿಂದ ದೃಢೀಕರಿಸಿದ್ದು)
* ಆದಾಯ ಮತ್ತು ಜಾತಿ ಪ್ರಮಾಣ ಪತ್ರ
* ಬ್ಯಾಂಕ್ ಖಾತೆ ವಿವರಗಳು

ಈ ಸುದ್ದಿ ಓದಿ :- ಆಡು, ಕುರಿ, ಕೋಳಿ, ಮೇಕೆ ಸಾಕಾಣಿಕೆಗೆ ರೈತರಿಗೆ PMEGP ಯೋಜನೆಯಡಿ 20 ದಿನಗಳಲ್ಲಿ ಸಿಗಲಿದೆ 20 ಲಕ್ಷ ಲೋನ್ 7 ಲಕ್ಷ ಸಬ್ಸಿಡಿ ಸಿಗುತ್ತೆ.!

ಅರ್ಜಿ ಸಲ್ಲಿಸುವ ವಿಧಾನ:-

* ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
* ಪ್ರತೀ ಗ್ರಾಮಗಳಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳಲ್ಲಿಯೇ ಅರ್ಜಿ ಸಲ್ಲಿಸಬಹುದು.
https://pmvishwakarma.gov.in  ವೆಬ್ಸೈಟ್ ಗೆ ಭೇಟಿ ನೀಡಿ ಯೋಜನೆ ಕುರಿತು ಸಂಪೂರ್ಣ ಮಾಹಿತಿ ಪಡೆದು ಅಲ್ಲೇ ಅರ್ಜಿ ಸಲ್ಲಿಸುವ ಲಿಂಕ್ ಇರುತ್ತದೆ, ಅದನ್ನು ಕ್ಲಿಕ್ ಮಾಡುವ ಮೂಲಕ ಮುಂದುವರಿಯಬಹುದು.

* ಅರ್ಜಿ ಸಲ್ಲಿಕೆ ಯಶಸ್ವಿ ಆದ ಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಬೇಕು, ಮುಂದೆ ಹಲವಾರು ಹಂತಗಳಲ್ಲಿ ಈ ರೆಫರೆನ್ಸ್ ನಂಬರ್ ಬೇಕಾಗುತ್ತದೆ. ಯೋಜನೆ ಕುರಿತು ಸಂಪೂರ್ಣ ಮಾಹಿತಿಗಾಗಿ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಹತ್ತಿರದಲ್ಲಿರುವ ಕಾಮನ್ ಸೇವಾ ಸೆಂಟರ್ (CSC Centre) ಪ್ರತಿನಿಧಿಯನ್ನು ಕೇಳಿ ಮಾಹಿತಿ ಪಡೆಯಿರಿ.

ಈ ಸುದ್ದಿ ಓದಿ :- 1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿ, PUC ಪಾಸ್ ಆದವರು ಅರ್ಜಿ ಸಲ್ಲಿಸಬಹುದು.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now