ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮಾಲೀಕ ಮ’ರ’ಣ ಹೊಂದಿದರೂ ಕೂಡ ನಂತರ ಆತನ ಮಕ್ಕಳು ಆಸ್ತಿ ಹಕ್ಕು ವರ್ಗಾವಣೆ ಮಾಡಿಸಿಕೊಳ್ಳುವುದಿಲ್ಲ, ಆದರೆ ಅದರಲ್ಲಿಯೇ ವಾಸ ಮಾಡುತ್ತಿರುತ್ತಾರೆ. ಮುಂದೆ ಇದರಿಂದ ಸಾಕಷ್ಟು ತೊಂದರೆಗಳು ಎದುರಾಗುತ್ತವೆ ಇದನ್ನು ತಪ್ಪಿಸಲು ಮನೆಗೆ ಇ-ಸ್ವತ್ತು ಮಾಡಿಸಿಕೊಳ್ಳಬೇಕು.
ಈ ಸುದ್ದಿ ಓದಿ:- ಈ ಬೆಲೆ ಬೆಳೆದರೆ ಎಕರೆಗೆ 30 ಲಕ್ಷ ಆದಾಯ ಗ್ಯಾರಂಟಿ.!
ಇದು ಹೇಗೆ ನಡೆಯುತ್ತದೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಏನೆಲ್ಲ ದಾಖಲೆಗಳನ್ನು ಕೇಳುತ್ತಾರೆ ಮತ್ತು ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಇದರ ನಿಯಮಗಳೇನು ಹಾಗೂ ಉಪಯೋಗಗಳೇನು ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಆಸ್ತಿಗಳನ್ನು ಗಣಕೀಕರಣ ಮಾಡುವ ಮೂಲಕ ಖಾತೆ ಮಾಡಿ ಒದಗಿಸುವ ಸೇವೆಯೇ ಇ-ಸ್ವತ್ತು.
ಬೇಕಾಗುವ ದಾಖಲೆಗಳು:-
* ಗ್ರಾಮಠಾಣಾ ವ್ಯಾಪ್ತಿಯಲ್ಲಿನ ಮನೆ ಹಕ್ಕು ಪತ್ರ (ಕ್ರಯ ಪತ್ರ ಅಥವಾ ನೋಂದಣಿ ಪತ್ರ ಅಥವಾ ಹೊಸದಾಗಿ ಸೃಷ್ಟಿಸಿದ ಆಸ್ತಿಪತ್ರ ಅಥವಾ ಊರಿನ ಹೊರಬಾಗದಲ್ಲಿ NA ಫ್ಲಾಟ್ ಗಳಲ್ಲಿ ನಿಮ್ಮ ಮನೆ ಇದ್ದರೆ ಅದಕ್ಕೆ ಸಂಬಂಧಿಸಿದ ರಿಜಿಸ್ಟರ್ ಪತ್ರ)
* ಅರ್ಜಿದಾರರ ಆಧಾರ್ ಕಾರ್ಡ್
* ಅರ್ಜಿದಾರರ ಫೋಟೋ
* ಮನೆ ನಕ್ಷೆ (ಮನೆ ನಕ್ಷೆ ಇಲ್ಲದೆ ಇದ್ದರೆ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಕಚ್ಚಾ ನಕ್ಷೆ ಮಾಡಿಸಿ ಕೊಡಬೇಕು)
* ಇ-ಸ್ವತ್ತು ಅರ್ಜಿ ಸಲ್ಲಿಸಲು ಗ್ರಾಮ ಪಂಚಾಯಿತಿಯಲ್ಲಿ ಕೆಲವು ನಿಗದಿತ ನಮೂನೆಗಳನ್ನು ಕೊಡುತ್ತಾರೆ, ಅದರಲ್ಲಿ ಸರಿಯಾದ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು.
* ಕಟ್ಟಡದ ತೆರಿಗೆ ರಸೀತಿ ಅಥವಾ ವಿದ್ಯುತ್ ಬಿಲ್ (ಖಾಲಿ ನಿವೇಶನವಾಗಿದ್ದರೆ ಅವಶ್ಯಕತೆ ಇರುವುದಿಲ್ಲ)
ಈ ಸುದ್ದಿ ಓದಿ:- ವಿದ್ಯಾಸಿರಿ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ಸ್ಕಾಲರ್ಷಿಪ್ ಪಡೆಯಿರಿ.!
ಇ-ಸ್ವತ್ತು ಪ್ರಕ್ರಿಯೆ ನಡೆಯುವ ವಿಧಾನ…
* ಭರ್ತಿ ಮಾಡಿದ ನಮೂನೆ ಮತ್ತು ಅರ್ಜಿಯೊಂದಿಗೆ ಈ ಮೇಲೆ ತಿಳಿಸಿದ ಎಲ್ಲ ದಾಖಲೆಗಳನ್ನು ಲಗತ್ತಿಸಿ ಗ್ರಾಮ ಪಂಚಾಯಿತಿಗೆ ಸಲ್ಲಿಸಬೇಕು
* ಅರ್ಜಿ ಸಲ್ಲಿಕೆ ಆದ ಮೇಲೆ ರಸೀದಿ ನೀಡುತ್ತಾರೆ ತಪ್ಪದೇ ಅದನ್ನು ಪಡೆದುಕೊಳ್ಳಬೇಕು ಮುಂದೆ ಅದು ಅನುಕೂಲಕ್ಕೆ ಬರುತ್ತದೆ
* ಗ್ರಾಮ ಪಂಚಾಯಿತಿಯಲ್ಲಿರುವ ಡಾಟಾ ಎಂಟ್ರಿ ಆಪರೇಟರ್ ಇ- ಸ್ವತ್ತು ವೆಬ್ ತಂತ್ರಾಂಶದಲ್ಲಿ ಈ ಮಾಹಿತಿಗಳನ್ನು ನಮೂದಿಸುತ್ತಾರೆ.
* PDO ನೀವು ನೀಡಿರುವ ಅರ್ಜಿ ಮತ್ತು ಇದಕ್ಕೆ ನೀಡಿರುವ ಪೂರಕ ದಾಖಲೆಗಳನ್ನು ಪರಿಶೀಲಿಸಿ ಸ್ಥಳ ಪರಿಶೀಲನೆ ಕೂಡ ಮಾಡುತ್ತಾರೆ
* ನಿಮ್ಮ ಆಸ್ತಿಯ ನಕ್ಷೆ ಈಗಾಗಲೇ ಗ್ರಾಮ ಪಂಚಾಯಿತಿಯಲ್ಲಿ ಇದ್ದರೆ ಅದಕ್ಕೆ ಹೊಸ ಸಂಖ್ಯೆಯನ್ನು ನೀಡಿ ನಿಮಗೆ ಇ- ಸ್ವತ್ತು ಪ್ರಮಾಣ ಪತ್ರಗಳನ್ನು ಕೊಡುತ್ತಾರೆ.
ಈ ಸುದ್ದಿ ಓದಿ:- ಗೃಹ ಜ್ಯೋತಿ ಉಚಿತ ಕರೆಂಟ್ ಬಳಸುತ್ತಿರುವವರಿಗೆ ಬಿಗ್ ಅಪ್ಡೇಟ್.!
* ಒಂದು ವೇಳೆ ಸದರಿ ಆಸ್ತಿಗೆ ಗ್ರಾಮ ಪಂಚಾಯಿತಿಯಲ್ಲಿ ಆಸ್ತಿಯ ನಕ್ಷೆ ಇಲ್ಲದೆ ಇದ್ದರೆ ಆ ಆಸ್ತಿಯನ್ನು ಅಳತೆ ಮಾಡಿ ನಕ್ಷೆ ರಚಿಸಲು ಕಡತವನ್ನು ಸರ್ವೆ ಇಲಾಖೆಗೆ ವರ್ಗಾಯಿಸುತ್ತಾರೆ.
* ನಿಗದಿಪಡಿಸಿದ ದಿನಾಂಕದಂದು ಸರ್ವೆಯರ್ ಬಂದು ಸ್ಥಳದ ಅಳತೆ ಮಾಡಿ ಹೊಸ ನಕ್ಷೆ ತಯಾರಿಸಿ ಆ ಮಾಹಿತಿಯನ್ನು ಗ್ರಾಮ ಪಂಚಾಯಿತಿಗೆ ಕಳುಹಿಸಿ ಕೊಡುತ್ತಾರೆ
* ನಂತರ PDO ಆ ದಾಖಲೆಗಳನ್ನು ಪರಿಶೀಲಿಸಿ ಅನುಮೋದಿಸಿದರೆ ಈ ಕಾರ್ಯ ಮುಗಿಯುತ್ತದೆ.
* ಈ ಪ್ರಕ್ರಿಯೆಯನ್ನು ಸರಳವಾಗಿ ಫಾರಂ 9 ಮತ್ತು ಫಾರಂ 11 ಎಂದು ಕೂಡ ಕರೆಯುತ್ತಾರೆ. ಈ ಎರಡು ದಾಖಲೆಗಳು ನಿಮ್ಮ ಕೈ ಸೇರಿದರೆ ಇದು ಕಾನೂನು ಬದ್ಧ ಮನೆ ಪತ್ರ ಎಂದೆನಿಸಿಕೊಳ್ಳುತ್ತದೆ.
ಈ ಸುದ್ದಿ ಓದಿ:- ಕೋಳಿ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 25 ಲಕ್ಷ.! ಆಸಕ್ತರು ಅರ್ಜಿ ಸಲ್ಲಿಸಿ.!
ಇ-ಸ್ವತ್ತು ಕುರಿತಾದ ಕೆಲವು ಪ್ರಮುಖ ಮಾಹಿತಿ:-
* ಗ್ರಾಮ ಠಾಣಾ ವ್ಯಾಪ್ತಿಗೆ ಒಳಪಡುವ ಮನೆಗಳನ್ನು ಹೊರತುಪಡಿಸಿ ಬೇರೆ ಆಸ್ತಿಗಳಿಗೆ ಇ-ಸ್ವತ್ತು ಮಾಡಿಸಲು ಆಗುವುದಿಲ್ಲ. ಮತ್ತೊಂದು ಅರ್ಥದಲ್ಲಿ ಹಳ್ಳಿಗಳಲ್ಲಿ ಇರುವ ಆಸ್ತಿಗೆ ಮಾತ್ರ ಇ-ಸ್ವತ್ತು ಮಾಡಿಸಲು ಸಾಧ್ಯ ಎಂದು ಹೇಳಬಹುದು
* ಹಳ್ಳಿಯಲ್ಲಿರುವ ಪ್ರತಿಯೊಂದು ಸೈಟ್ ಹಾಗೂ ಮನೆಗೂ ಕೂಡ ಇ-ಸ್ವತ್ತು ಮಾಡಿಸಿಕೊಳ್ಳಬೇಕು, ಇಲ್ಲವಾದರೆ ಬ್ಯಾಂಕ್ ನಿಂದ ಸಾಲ ಸೌಲಭ್ಯ ಸಿಗುವುದಿಲ್ಲ
* ಇ-ಸ್ವತ್ತು ಮಾಡಿಸದೆ ಆಸ್ತಿ ಹಕ್ಕು ವರ್ಗಾವಣೆ ಮಾಡಿಸಲು ಸಾಧ್ಯವಿಲ್ಲ.
* ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸಿದ ಒಂದು ವಾರದ ಒಳಗೆ ಇ-ಸ್ವತ್ತು ಪ್ರಕ್ರಿಯೆ ಮುಗಿಯುತ್ತದೆ.