ಗ್ರಾಮದಲ್ಲಿರುವ ಆಸ್ತಿಗೆ ಫಾರ್ಮ್ 9 & ಫಾರ್ಮ್ 11 ಹೇಗೆ ಮಾಡುತ್ತಾರೆ ನೋಡಿ.! ಮನೆ, ಸೈಟ್ ಜಮೀನು ಇರುವವರು ತಪ್ಪದೆ ತಿಳಿದುಕೊಳ್ಳಿ.!

 

WhatsApp Group Join Now
Telegram Group Join Now

ಗ್ರಾಮೀಣ ಭಾಗದಲ್ಲಿ ಮನೆ ಅಥವಾ ಸೈಟು ಖರೀದಿ ಮಾಡಿದ್ದರೆ ಅಥವಾ ಈಗಾಗಲೇ ಆಸ್ತಿ ಇದ್ದರೂ ಕೂಡ ಇದಕ್ಕೆ ಫಾರ್ಮ್ 9 & ಫಾರ್ಮ್ 11 ಮಾಡಿಸಬೇಕು, ಈ ರೀತಿ ಫಾರಂ 9 ಮತ್ತು ಫಾರ್ಮ್ 11 ಆಗಿರುವ ಆಸ್ತಿಗಳಿಗೆ ಮಾತ್ರ ಬೆಲೆ ಇರುತ್ತದೆ. ಇ-ಸ್ವತ್ತು ಪ್ರಕ್ರಿಯೆ ಮಾಡಿಸುವಾಗ ಈ ಫಾರಂ 9 & ಫಾರಂ 11 ಕೂಡ ಒಂದು ಅಗತ್ಯ ದಾಖಲೆಯಾಗಿ ಕೇಳುತ್ತಾರೆ.

ಈ ಫಾರಂ 9 & ಫಾರಂ 11 ಪಡೆಯಲು ಹೇಗೆ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಏನೆಲ್ಲಾ ದಾಖಲೆಗಳು ಬೇಕು ಮತ್ತು ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಗ್ರಾಮಠಾಣ ವ್ಯಾಪ್ತಿಯಲ್ಲಿ ಬರುವ ಕೃಷಿಯೇತರ ಆಸ್ತಿಗಳಿಗೆ ನೀಡುವ ದಾಖಲೆಯನ್ನು ಫಾರಂ 9 ಎನ್ನುತ್ತಾರೆ. ಈ ಪ್ರಮಾಣ ಪತ್ರವನ್ನು ಗ್ರಾಮದ PDO ಅಧಿಕಾರಿಗಳು ನೀಡುತ್ತಾರೆ.

ಈ ಸುದ್ದಿ ಓದಿ:- USA Technology ಬಳಸಿ ಬೋರ್ವೆಲ್ ಪಾಯಿಂಟ್ ಮಾಡಿಕೊಡುತ್ತಾರೆ ಇವರು, ಒಂದೂವರೆ ವರ್ಷದಿಂದ 1500 ಪಾಯಿಂಟ್ ಮಾರ್ಕ್, ಎಲ್ಲವೂ ಸಕ್ಸಸ್.!

ಮಾಲಿಕನ ಹೆಸರು, ಭಾವಚಿತ್ರ, ಆಸ್ತಿಯ ಸರ್ವೆ ನಂಬರ್, ವಿಸ್ತೀರ್ಣ, ಆಸ್ತಿಯ ಚಿತ್ರ, ಯಾವ ವಿಧದ ಆಸ್ತಿ ಸೇರಿದಂತೆ ಎಲ್ಲ ಮಾಹಿತಿಯೂ ಇರುತ್ತದೆ. ಇದೆಲ್ಲ ಮಾಹಿತಿಯನ್ನು PDO ಅಧಿಕಾರಿಗಳು ಇ-ತಂತ್ರಾಂಶದಲ್ಲಿ ಭರ್ತಿ ಮಾಡಿ ನಂತರ ನೀಡುತ್ತಾರೆ. ಅಂತೆಯೇ ಫಾರಂ 11 ಕೂಡ ಗ್ರಾಮ ಪಂಚಾಯಿತಿಯು ಕೃಷಿಯೇತರ ಆಸ್ತಿಗಳಿಗೆ ನೀಡುತ್ತದೆ.

ಈ ಸುದ್ದಿ ಓದಿ:- ಪ್ರತಿ ತಿಂಗಳು ನಿಮ್ಮ PF ಖಾತೆಗೆ ಹಣ ಜಮಾ ಆಗುತ್ತಿದಿಯೋ ಇಲ್ಲವೋ.? ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!

ಇದರಲ್ಲಿ ಮುಖ್ಯವಾಗಿ ತೆರಿಗೆ ವಿವರ, ತೆರಿಗೆ ಪಾವತಿ ಮಾಡಿರುವ ವಿವರ, ಆಸ್ತಿಯ ವಿವರ ಆಸ್ತಿಯ ಛಾಯಚಿತ್ರ, ಮಾಲೀಕನ ವಿವರ ಮಾಲೀಕನ ಭಾವಚಿತ್ರ ಸೇರಿದಂತೆ ಸಂಪೂರ್ಣ ಮಾಹಿತಿ ಇರುತ್ತದೆ. ಇದರಲ್ಲೂ ಸಹ PDO ಗಳ ಡಿಜಿಟಲ್ ರೂಪದ ಸಹಿ ಇರುತ್ತದೆ. ಸಾಮಾನ್ಯವಾಗಿ ಎಲ್ಲಾ ಅಸ್ತಿಗೂ ಫಾರಂ 9 ಇರುತ್ತದೆ, ಆದರೆ ಫಾರಂ 11 ಮೋಜಣಿ ಮಾಡಿಸಿದ ನಂತರವೇ ಇ-ತಂತ್ರಾಂಶದಲ್ಲಿ ಸೇರಿಸಲು ಸಾಧ್ಯ.

ಪ್ರಾಮುಖ್ಯತೆ:-

* ನೀವೇನಾದರೂ ಹಳ್ಳಿ ಭಾಗದಲ್ಲಿ ಸೈಟ್ ಅಥವಾ ಆಸ್ತಿ ಹೊಂದಿದ್ದರೆ ಅದಕ್ಕೆ ಫಾರಂ 9 ಮತ್ತು ಫಾರಂ 11 ಇದ್ದರೆ ಮಾತ್ರ ಕಾನೂನಿನ ಮಾನ್ಯತೆ.
* ಆಸ್ತಿ ಮಾರಾಟ ಪ್ರಕ್ರಿಯೆ ಸರಳವಾಗುತ್ತದೆ
* ಇ-ತಂತ್ರಾಶದಲ್ಲಿ ನೋಂದಾಯಿಸಿ ಫಾರಂ 9 & ಫಾರಂ 11 ಪಡೆದು ಇ-ಸ್ವತ್ತು ಮಾಡಿಸಿದ್ದರೆ ಮಾತ್ರ ರಿಜಿಸ್ಟರ್ ಮಾಡಿಸಲು ಸಾಧ್ಯ.
* ಈ ಫಾರಂಗಳನ್ನು ಡಿಜಿಟಲ್ ರೂಪದಲ್ಲಿ ನೀಡುವುದರಿಂದ ಅಕ್ರಮಗಳಾಗುವ ಸಾಧ್ಯತೆ ಕಡಿಮೆ, ಈ ಫಾರಂಗಳನ್ನು ಪಡೆದಿದ್ದರೆ ನಿಮ್ಮ ಹೆಸರಿನಲ್ಲಿ ಈ ದಾಖಲೆಗಳು ಇರುವುದರಿಂದ ಬೇರೆಯವರು ಕೂಡ ಆಕ್ರಮಿಸುವುದಕ್ಕೆ ಆಗುವುದಿಲ್ಲ.

ಬೇಕಾಗುವ ದಾಖಲೆಗಳು:-

* ಗ್ರಾಮಠಾಣ ವ್ಯಾಪ್ತಿಯಲ್ಲಿನ ಮನೆಯ ಹಕ್ಕು ಪತ್ರ (ಕ್ರಯಪತ್ರ / ಗ್ರಾಮದ ಹೊರಭಾಗದಲ್ಲಿರುವ NA ಫ್ಲಾಟ್ ಆಗಿದ್ದರೆ ನೋಂದಣಿ ಪತ್ರ)
* ಅರ್ಜಿದಾರರ ಆಧಾರ್ ಕಾರ್ಡ್
* ಅರ್ಜಿದಾರರ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
* ಮನೆ ನಕ್ಷೆ
* ನಿಗದಿತ ಅರ್ಜಿ ನಮೂನೆ
* ತೆರಿಗೆ ರಸೀದಿ / ವಿದ್ಯುತ್ ಬಿಲ್

ಪ್ರಕ್ರಿಯೆ ಹೇಗೆ ನಡೆಯುತ್ತದೆ?

* ಭರ್ತಿ ಮಾಡಿದ ಅರ್ಜಿಯೊಂದಿಗೆ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಗ್ರಾಮ ಪಂಚಾಯಿತಿಗೆ ಸಲ್ಲಿಸಬೇಕು, ತಪ್ಪದೇ ರಸೀದಿ ಪಡೆದುಕೊಳ್ಳಬೇಕು
* ಗ್ರಾಮ ಪಂಚಾಯತಿಯ ಡಾಟಾ ಎಂಟ್ರಿ ಆಪರೇಟರ್ ಇ-ಸ್ವತ್ತು ವೆಬ್ಸೈಟ್ ತಂತ್ರಾಶದಲ್ಲಿ ಮಾಹಿತಿಯನ್ನು ದಾಖಲಿಸುತ್ತಾರೆ
* PDO ದಾಖಲೆಗಳ ಪರಿಶೀಲನೆ ಹಾಗೂ ಸ್ಥಳ ಪರಿಶೀಲನೆ ಮಾಡುತ್ತಾರೆ.

ಈ ಸುದ್ದಿ ಓದಿ:-ಇಂದು ಮತ್ತು ನಾಳೆ ರಾಜ್ಯದ ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.!

* ಆಸ್ತಿ ನಕ್ಷೆ ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿದ್ದರೆ ನಿಮ್ಮ ಆಸ್ತಿಗೆ ಹೊಸ ಸಂಖ್ಯೆ ಸಮೇತ ಫಾರಂ11 ಪ್ರಮಾಣ ಪತ್ರ ಕೊಡುತ್ತಾರೆ ಒಂದು ವೇಳೆ ಆಸ್ತಿ ನಕ್ಷೆ ಗ್ರಾಮ ಪಂಚಾಯಿತಿ ಇಲ್ಲದೆ ಇದ್ದರೆ ಅಳತೆ ಮಾಡಿ ನಕ್ಷೆ ರಚಿಸಲು ಕಡತವನ್ನು ನಿಮ್ಮ ತಾಲೂಕಿನ ಕಂದಾಯ ಇಲಾಖೆಗೆ ವರ್ಗಾಯಿಸುತ್ತಾರೆ. (ಗೊತ್ತುಪಡಿಸಿದ ದಿನಾಂಕದಂದು ಸರ್ವೆಯರ್ ಬಂದು ಅಳತೆ ಮಾಡಿದ ನಕ್ಷೆ ತಯಾರಿಸಿ ಗ್ರಾಮ ಪಂಚಾಯಿತಿಗೆ ಕಳುಹಿಸಿಕೊಡುತ್ತಾರೆ), ಕೊನೆಯಲ್ಲಿ ಗ್ರಾಮದ PDO ಆ ದಾಖಲೆಗಳನ್ನು ಪರಿಶೀಲಿಸಿ ಅನುಮೋದಿಸಿದರೆ ನಿಮ್ಮ ಆಸ್ತಿಗೆ ಫಾರಂ 11 ಸಿಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now