ಜಮೀನು ಇಲ್ಲದೆ ಸರ್ಕಾರಿ ಜಮೀನನ್ನು ಕೃಷಿ ಚಟುವಟಿಕೆಗಾಗಿ ಅವಲಂಬಿಸಿದ್ದ ರೈತರಿಗೆ ಅವರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ರೈತರ ಹೆಸರಿಗೆ ಮಾಡಿಕೊಡಲು
ಅಕ್ರಮ ಸಕ್ರಮ ಯೋಜನೆ ಹಾಗೂ ಬಗರ್ ಹುಕುಂ ಯೋಜನೆಯಡಿಯಲ್ಲಿ ನಮೂನೆ 50, ನಮೂನೆ 53 ಮತ್ತು ನಮೂನೆ 57ರ ಪ್ರಕಾರ ಹಕ್ಕು ಪತ್ರ (Hakku Patra) ನೀಡಲು ಸರ್ಕಾರ ನಿರ್ಧರಿಸಿ ಅದಕ್ಕಾಗಿ ಅರ್ಜಿ ಆಹ್ವಾನಿಸಿರುವ ವಿಚಾರ ಈಗ ಮತ್ತೊಮ್ಮೆ ಚರ್ಚೆಯಲ್ಲಿದೆ.
ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಸಾವಿರಾರು ಬಡ ರೈತರಿಗೆ ಅನುಕೂಲವಾಗುತ್ತಿದೆ ಎನ್ನುವುದು ಸುಳ್ಳಲ್ಲ. ಇದರ ಕುರಿತಾದ ಒಂದು ಪ್ರಮುಖ ಅಪ್ಡೇಟ್ ಅನ್ನು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Minister Krishna Bairegowda) ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಈ ಸುದ್ದಿ ಓದಿ:- ಒಂದು ವರ್ಷಕ್ಕೆ 20 ಲಕ್ಷ ಆದಾಯ ತಂದು ಕೊಡುತ್ತದೆ ಈ ಮರ, ತಳಿ ನೀಡುವ ಕಂಪನಿಯೇ ಬೈ ಬ್ಯಾಕ್ ಕೂಡ ಮಾಡುತ್ತೆ.!
ಅದೇನೆಂದರೆ, ಹಕ್ಕುಪತ್ರ ವಿತರಣೆಯ ಸಂದರ್ಭದಲ್ಲಿ ನಿಜವಾದ ಫಲಾನುಭವಿಗೆ ಮಾತ್ರ ಈ ಯೋಜನೆಯ ಪ್ರಯೋಜನ ದೊರೆಯಬೇಕು ಮತ್ತು ಈ ಬಾರಿ ಇದುವರೆಗೂ ಆಗುತ್ತಿದ್ದ ರೀತಿ ಅಕ್ರಮವಾಗಿ ಸರ್ಕಾರಿ ಜಮೀನು ಉಳ್ಳವರ ಪಾಲು ಆಗಬಾರದು ಎಂದು ಅತ್ಯಂತ ಕಠಿಣ ನಿಯಮ ಕೈಗೊಂಡು ಹೊಸ ವಿಧಾನವನ್ನು ಜಾರಿಗೆ ತಂದಿದ್ದಾರೆ.
ಈಗಾಗಲೇ ಜಮೀನು ಇದ್ದವರು ಅರ್ಜಿ ಸಲ್ಲಿಸಿರುವುದು ಮತ್ತು ಒಬ್ಬನೇ ಫಲಾನುಭವಿ ವಿವಿಧ ಜಿಲ್ಲೆಗಳಲ್ಲಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವುದು ಈ ರೀತಿ ನಿಯಮ ಮೀರಿಯು ಅರ್ಜಿ ಸಲ್ಲಿಸಿರುವ ಫಲಾನುಭವಿಗಳನ್ನು ಗುರುತಿಸಿ ಪತ್ತೆ ಹಚ್ಚಿ ಅಸಲಿ ಫಲಾನುಭವಿಗೆ ಅನ್ಯಾಯವಾಗುವದಂತೆ ತಡೆದು ಯೋಜನೆಗೆ ಪಾರದರ್ಶಕತೆ ತರಲು ಡಿಜಿಟಲ್ ರೂಪದ ಹಕ್ಕು ಪತ್ರ ವಿತರಣೆ ಮಾಡಲು ನಿರ್ಧಾರ ಮಾಡಲಾಗಿದೆ ಎನ್ನುವ ವಿಚಾರವನ್ನು ತಿಳಿಸಿದ್ದಾರೆ.
ಈ ಸುದ್ದಿ ಓದಿ:- 2024 ರಲ್ಲಿ ಜಮೀನು ಅಥವಾ ಮನೆಯಲ್ಲಿ ಬೋರ್ ವೆಲ್ ಕೊರೆಸಿದರೆ ಎಷ್ಟು ಖರ್ಚಾಗಲಿದೆ ಗೊತ್ತಾ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!,
ಈ ಬಾರಿ ಹಕ್ಕು ಪತ್ರ ವಿತರಣೆ ಮಾಡುವ ಮುನ್ನವೇ ಜಮೀನಿನ ಮಾಹಿತಿ ಹಾಗೂ ರೈತನ ಮಾಹಿತಿಯನ್ನು ಜಂಟಿ ಮಾಡಿ ಸಂಪೂರ್ಣ ಡಿಜಿಟಲ್ ಹಕ್ಕು ಪತ್ರ ತಯಾರಿಸಿ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ ಮತ್ತು ಅತಿ ಪ್ರಮುಖವಾಗಿ ಈ ಬಾರಿ ಅರ್ಹ ಫಲಾನುಭವಿ ರೈತರಿಗೆ ಹಕ್ಕು ಪತ್ರ ಸಿಗುವಂತೆ ಈ ರೀತಿ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳಲಾಗಿದೆ ಎನ್ನುವುದು ವಿಶೇಷ.
ಇದಕ್ಕೆ ಸಂಬಂಧಪಟ್ಟ ಹಾಗೆ ಅಧೀನ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಯಾವುದೇ ಪ್ರಭಾವಿ ವ್ಯಕ್ತಿಗಳ ಬೆದರಿಕೆಗೆ ಹೆದರಿ ಅಥವಾ ಇನ್ಯಾವುದೋ ಕಾರಣಕ್ಕೆ ರೈತರಿಗೆ ಮೋ’ಸ ಆಗದೆ ಇರಲು ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಕಾರಣಕ್ಕೆ ಅರ್ಜಿಗಳನ್ನು ಅನುಮೋದನೆ ಮಾಡದೆ ಸ್ಥಳಕ್ಕೆ ಭೇಟಿ ನೀಡಿ ನಿಜಕ್ಕೂ ಆ ರೈತ ಹಕ್ಕು ಪತ್ರ ಪಡೆದುಕೊಳ್ಳಲು ಅರ್ಹನೆ ಎಂಬುದನ್ನು ಪರಿಶೀಲಿಸಬೇಕು.
ಈ ಸುದ್ದಿ ಓದಿ:- IDBI ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ವೇತನ 65,000/- ಆಸಕ್ತರು ಅರ್ಜಿ ಸಲ್ಲಿಸಿ.!
ಬಳಿಕ, ಆನ್ಲೈನ್ ಮೂಲಕ ಮತ್ತು ಒಂದಿಷ್ಟು ಮಾಹಿತಿಯನ್ನು ಕಲೆ ಹಾಕಬೇಕು ಬಳಿಕವಷ್ಟೇ ಅರ್ಹ ಅನುಭವಿ ರೈತರಿಗೆ, ಭೂರಹಿತ ರೈತರಿಗೆ ಸಾಗುವಳಿ ಭೂಮಿಯ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ತಿಳಿಸಿದ್ದಾರೆ. ಈ ಬಾರಿ ಅಕ್ರಮ ಸಕ್ರಮ ಯೋಜನೆಯಡಿ ಭೂಮಿ ಮಂಜೂರು ಮಾಡಲು ಸಾಕಷ್ಟು ದಾಖಲೆಗಳನ್ನು ಕೇಳಲಾಗಿತ್ತು.
ಸ್ಯಾಟಲೈಟ್ ಸಹಾಯದಿಂದ ನಿಜಾಂಶ ಪತ್ತೆ ಹಚ್ಚಿ ನಂತರವಷ್ಟೇ ಹಕ್ಕು ಪತ್ರ ವಿತರಣೆ ಮಾಡಲಿದ್ದಾರೆ ಎನ್ನುವ ಮಾಹಿತಿಯು ಕೂಡ ಕೇಳಿ ಬಂದಿದೆ. ಅರ್ಜಿ ಸಲ್ಲಿಸುವ ರೈತರು ಸರಿಯಾದ ದಾಖಲೆಗಳನ್ನು ನೀಡಿದ್ದರೆ ಮತ್ತು ಸ್ಥಳ ಪರಿಶೀಲದ ವೇಳೆ ಹಾಗೂ ಇನ್ನಿತರ ಕ್ರಮಗಳಿಂದ ಅರ್ಜಿ ಪರಿಶೀಲನೆ ಮಾಡುವ ವೇಳೆ ಎಲ್ಲಾ ಮಾಹಿತಿಗಳು ಹೊಂದಾಣಿಕೆ ಆದರೆ ಮಾತ್ರ ಶೀಘ್ರದಲ್ಲಿಯೇ ಅಂತಹ ರೈತನಿಗೆ ಡಿಜಿಟಲ್ ರೂಪದ ಹಕ್ಕುಪತ್ರ ಸಿಗಲಿದೆ.