ಹಣವನ್ನು ಉಳಿತಾಯ ಮಾಡಲು ಅಥವಾ ಉಳಿತಾಯ ಮಾಡಿದ ಹಣವನ್ನು ಹೂಡಿಕೆ ಮಾಡಲು ಲಾಭದ ಲೆಕ್ಕಾಚಾರದ ಜೊತೆಗೆ ನಮ್ಮ ಹಣಕ್ಕೆ ಭದ್ರತೆ ಎಷ್ಟಿದೆ ಎನ್ನುವುದು ಕೂಡ ಅಷ್ಟೇ ಮುಖ್ಯವಾದ ವಿಷಯವಾಗುತ್ತದೆ. ಬಡ ಹಾಗೂ ಸಾಮಾನ್ಯ ವರ್ಗದವರೇ ಹೆಚ್ಚಿರುವ ನಮ್ಮ ದೇಶದಲ್ಲಿ ಜನರ ಈ ಮನಸ್ಥಿತಿಯನ್ನು ಅರಿತು ಅಂಚೆ ಕಚೇರಿಗಳು ಈಗ ಅಂಚೆ ಸೇವೆ ಮಾತ್ರವಲ್ಲ ಈ ರೀತಿಯ ಬ್ಯಾಕಿಂಗ್ ಸೇವೆಗಳನ್ನು ಕೂಡ ಪರಿಚಯಿಸಿದೆ.
ಈವರೆಗೆ ಅಂಚೆ ಕಚೇರಿಯಲ್ಲಿ (Post Office) ಈ ರೀತಿ 13ಕ್ಕೂ ಹೆಚ್ಚು ವಿಧದ ಯೋಜನೆಗಳು ಇವೆ. ಇವುಗಳಲ್ಲಿ ಅತ್ಯಂತ ಜನಪ್ರಿಯವಾದ ಯೋಜನೆಯಾದ ಅಂಚೆ ಕಚೇರಿ ಮರುಕಳಿಸುವ ಠೇವಣಿ (PORD) ಅಥವಾ ರೆಕ್ಯುರಿಂಗ್ ಡೆಪಾಸಿಟ್ (Recurring Deposit) ಎನ್ನುವ ಯೋಜನೆಯ ಕೆಲ ಪ್ರಮುಖ ಮಾಹಿತಿಯನ್ನು ಇನ್ನು ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ರೈತರನ್ನು ಮದುವೆಯಾಗುವ ಯುವತಿಯರಿಗೆ 5 ಲಕ್ಷ ನಗದು.! ಕನ್ಯಾ ಭಾಗ್ಯದ ಬಗ್ಗೆ ಸರ್ಕಾರದ ನಿರ್ಧಾರ.!
* ಅಂಚೆ ಕಚೇರಿ ಯಾವುದೇ ಉಳಿತಾಯ ಅಥವಾ ಹೂಡಿಕೆ ಯೋಜನೆ ಆದರೂ ಭಾರತೀಯ ಪ್ರಜೆಗಳಿಗೆ ಮಾತ್ರ ಆ ಖಾತೆ ತೆರೆಯಲು ಅವಕಾಶ
* ಅಪ್ರಾಪ್ತ ವಯಸ್ಕ ಅಥವಾ ಅಸ್ವಸ್ಥ ಮನಸ್ಸಿನ ವ್ಯಕ್ತಿಯ ಪರವಾಗಿ ಅವರ ಪೋಷಕರು PORD ಖಾತೆಯನ್ನು ತೆರೆಯಬಹುದು.
* 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕನು ತನ್ನ ಸ್ವಂತ ಹೆಸರಿನಲ್ಲಿ PORD ಖಾತೆಯನ್ನು ಹೊಂದಬಹುದು.
* ಕನಿಷ್ಠ ರೂ.100 ನಿಂದ ಕೂಡ ಯೋಜನೆ ಆರಂಭಿಸಬಹುದು, ಗರಿಷ್ಠ ಯಾವುದೇ ಮಿತಿಯಿಲ್ಲ
* ಈ ಯೋಜನೆಯ ವೈಶಿಷ್ಟವೇನೆಂದರೆ, ಈ ಯೋಜನೆಯ ಮೆಚುರಿಟಿ ಅವಧಿ 5 ವರ್ಷಗಳು. 5 ವರ್ಷಗಳವರೆಗೆ ನೀವು ಪ್ರತಿ ತಿಂಗಳು ನಿಗದಿಪಡಿಸಿಕೊಂಡ ಠೇವಣಿ ಮೊತ್ತವನ್ನು ಕಟ್ಟಬೇಕು.
* ಠೇವಣಿಗಳನ್ನು ನಗದು ಅಥವಾ ಚೆಕ್ ರೂಪದಲ್ಲಿ ಕಟ್ಟಬಹುದು.
ಈ ಸುದ್ದಿ ಓದಿ:- ಇನ್ಮುಂದೆ ಈ ನಗರಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು.!
* ನಾಮಿನಿ ಫೆಸಿಲಿಟಿ ಕೂಡ ಲಭ್ಯವಿರುತ್ತದೆ, ಒಂದು ವೇಳೆ ಖಾತೆದಾರರು ಮೃ’ತ ಪಟ್ಟಲ್ಲಿ ಕಾನೂನಾತ್ಮಕವಾಗಿ ಸೇರಬೇಕಾದ ಮೊತ್ತವು ನಾಮಿನಿಗೆ ಹೋಗುತ್ತದೆ.
* 6 ಅಥವಾ ಹೆಚ್ಚಿನ RD ಕಂತುಗಳ ಮುಂಗಡ ಪಾವತಿಗೆ ಅವಕಾಶವು ಇದೆ.
* ನೀವೇನಾದರೂ 1 – 15ನೇ ತಾರೀಖಿನ ಒಳಗೆ ಖಾತೆ ತೆರೆದಿದ್ದರೆ ಪ್ರತಿ ತಿಂಗಳು 15ನೇ ತಾರೀಖಿನ ಒಳಗೆ ಠೇವಣಿ ಹಣ ಪಾವತಿ ಮಾಡಬೇಕು. ಒಂದು ವೇಳೆ 15 ರಿಂದ 30ನೇ ತಾರೀಖಿನ ಒಳಗಡೆ ಖಾತೆ ತೆರೆದಿದ್ದರೆ ಆ ತಿಂಗಳ ಕೊನೆ ದಿನದ ಒಳಗೆ ಠೇವಣಿ ಮೊತ್ತ ಕಟ್ಟಬೇಕು.
ಈ ಸುದ್ದಿ ಓದಿ:- ಕೇವಲ 5 ನಿಮಿಷದಲ್ಲಿ ಮೊಬೈಲ್ ಮೂಲಕವೇ ಅಪ್ಲೈ ಮಾಡಿ ನಿಮ್ಮ ವಾಹನದ HSRP ನಂಬರ್ ಪ್ಲೇಟ್ ಪಡೆಯಬಹುದು.!
* ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರವು ಪರಿಷ್ಕೃತಗೊಳ್ಳುತ್ತಿರುತ್ತದೆ. ಪ್ರಸ್ತುತವಾಗಿ 6.7% ಬಡ್ಡಿದರವಿದೆ.
ಉದಾಹರಣೆಯೊಂದಿಗೆ ಹೇಳುವುದಾದರೆ ರೂ.10,000 ಹೋಳಿಗೆ ಮಾಡಿದರೆ 60 ತಿಂಗಳು ಅಂದರೆ ಐದು ವರ್ಷಕ್ಕೆ ರೂ.6,00,000 ಹಣ ಆಗಿರುತ್ತದೆ. ಈ ಹಣಕ್ಕೆ ಈಗಿರುವ ಬಡ್ಡಿದರದ ಅನ್ವಯ 1,10,000 ಹಣ ಲಾಭವಾಗಿ ಸಿಗುತ್ತದೆ. ಒಟ್ಟಾರೆಯಾಗಿ ಮೆಚುರಿಟಿ ಸಮಯದಲ್ಲಿ ನೀವು ರೂ.7,10,000 ಹಣ ಪಡೆಯುತ್ತೀರಿ.
* ಒಬ್ಬ ವ್ಯಕ್ತಿ ಎಷ್ಟು RD ಖಾತೆ ಬೇಕಾದರೂ ತೆರೆಯಬಹುದು
* ಯಾವುದೇ ಎಮರ್ಜೆನ್ಸಿ ಕಾರಣವಿದ್ದರೆ ಐದು ವರ್ಷಕ್ಕಿಂತ ಮುಂಚೆ ಮೂರು ವರ್ಷಗಳಾದ ನಂತರ ಅಕಾಲಿಕ ಮುಚ್ಚುವಿಕೆಯನ್ನು ಅನುಮತಿಸಲಾಗಿದೆ, ಆದರೆ ಆ ಸಮಯದಲ್ಲಿ ಉಳಿತಾಯ ಖಾತೆಗೆ ನೀಡಿದ್ದಷ್ಟು ಬಡ್ಡಿ ದರವನ್ನು (4%) ನೀಡಲಾಗುತ್ತದೆ.
* ಒಂದು ಅಂಚೆ ಕಛೇರಿಯಿಂದ ಇನ್ನೊಂದಕ್ಕೆ ಸುಲಭವಾಗಿ ವರ್ಗಾಯಿಸಬಹುದು.
ಈ ಸುದ್ದಿ ಓದಿ:- ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ, 9000 ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ.!
* RD ಖಾತೆಗೆ ಒಂದು ವರ್ಷ ತುಂಬಿದ ಬಳಿಕ ನಿಮ್ಮ ಉಳಿತಾಯದ ಅರ್ಧದಷ್ಟು ಸಾಲ ಪಡೆದುಕೊಳ್ಳಲು ವ್ಯವಸ್ಥೆ ಇದೆ.
* ಆನ್ಲೈನಲ್ಲಿ ಕೂಡ RD ಖಾತೆ ತೆರೆಯಬಹುದು ಆಫ್ ಲೈನ್ ನಲ್ಲಿ ಕೂಡ ಖಾತೆ ತೆರೆಯಲು ಅವಕಾಶವಿದೆ.
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* ಮೊಬೈಲ್ ಸಂಖ್ಯೆ
* e-KYC
* ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಗೆ ಭೇಟಿ ಕೊಡಿ ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ ಗಳಲ್ಲಿ ಮಾಹಿತಿ ಪಡೆಯಿರಿ.