ಗ್ರಾಮೀಣ ಭಾಗದ ಜನರಿಗೆ ಆನ್ಲೈನಲ್ಲಿ ಉತ್ತಮ ಆಡಳಿತ ಸೇವೆಗಳನ್ನು ನೀಡುವ ಸಲುವಾಗಿ ಡಿಜಿಟಲ್ ಸೇವಾ ಕೇಂದ್ರ (Digital Seva Kendra) ಯೋಜನೆಯನ್ನು ಪರಿಚಯಿಸಲಾಗಿದೆ. ಕಾಮನ್ ಸರ್ವೀಸ್ ಸೆಂಟರ್ (CSC)ಗಳಿಂದ ಹಲವು ರೀತಿಯ ಅನುಕೂಲಗಳಿವೆ. ಈ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗುತ್ತಿರುವುದು ಮಾತ್ರವಲ್ಲದೇ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೇವೆಗಳು, ವೈದ್ಯಕೀಯ ಸೇವೆಗಳು ಶೈಕ್ಷಣಿಕ ಸೇವೆಗಳು ಬ್ಯಾಂಕಿಂಗ್ ಸೇವೆಗಳು ಸೇರಿದಂತೆ ಎಲ್ಲ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಅವುಗಳ ಸ್ಟೇಟಸ್ ಚೆಕ್ ಮಾಡುವುದು ಇತ್ಯಾದಿ ಸೇವೆಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಪಡೆಯಬಹುದು.
ಈ ಸುದ್ದಿ ಓದಿ:- IDBI ಬ್ಯಾಂಕ್ನಲ್ಲಿ ಉದ್ಯೋಗವಕಾಶ, 500 ಹುದ್ದೆಗಳ ನೇಮಕಾತಿ ಡಿಗ್ರಿ ಪಾಸಾದವರು ಅರ್ಜಿ ಹಾಕಿ.! ವೇತನ 65,000
ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಈ ಅಂಕಣದಲ್ಲಿ ಯಾರು ಸೇವಾಸಿಂಧು ಕೇಂದ್ರಗಳನ್ನು ತೆರೆಯಬಹುದು? ಏನೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು? ಅರ್ಜಿ ಸಲ್ಲಿಸುವುದು ಹೇಗೆ? ಎನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.
ಡಿಜಿಟಲ್ ಸೇವಾ ಕೇಂದ್ರ (CSC) ತೆರೆಯಲು ಮಾನದಂಡಗಳು:-
* ಡಿಜಿಟಲ್ ಸೇವಾ CSC ಕೇಂದ್ರವನ್ನು ತೆರೆಯಲು ಅರ್ಜಿ ಹಾಕಲು ಬಯಸುವ ಅರ್ಜಿದಾರರು ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
* ಅರ್ಜಿದಾರರು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವ ವಿದ್ಯಾಲಯದಲ್ಲಿ 10ನೇ ತರಗತಿ ಪರೀಕ್ಷೆ ಅಥವಾ ಅದಕ್ಕೆ ತತ್ಸಮಾನ ಪರೀಕ್ಷೆ ಉತ್ತೀರ್ಣರಾಗಿರಬೇಕು.
* ಸಾಮಾನ್ಯ ಸೇವಾ ಕೇಂದ್ರ ಸ್ಥಾಪಿಸಲು ಇಚ್ಚಿಸುವ ಅರ್ಜಿದಾರರು ಸ್ಥಳೀಯ ಉಪ ಭಾಷೆಯನ್ನು ಚೆನ್ನಾಗಿ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು.
ಈ ಸುದ್ದಿ ಓದಿ:-ಮನೆ ಕಟ್ಟಿಸುವಾಗ ಯಾವ ಯಾವ ಪರ್ಮಿಷನ್ ತೆಗೆದುಕೊಳ್ಳಬೇಕು ಗೊತ್ತಾ.?
* ಇಂಗ್ಲಿಷ್ ಭಾಷೆಯ ಬಗ್ಗೆ ಜ್ಞಾನ ಹೊಂದಿರಬೇಕು.
* ಅರ್ಜಿದಾರರು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
* CSC ಡಿಜಿಟಲ್ ಸೇವೆಯಲ್ಲಿ ನೋಂದಣಿಗಾಗಿ TEC ಸರ್ಟಿಫಿಕೇಟ್ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆದಿರಬೇಕು ಆದ್ದರಿಂದ ನೀವು ಡಿಜಿಟಲ್ ಸೇವಾ ಕೇಂದ್ರಕ್ಕೆ ನೋಂದಾಯಿಸುವ ಮೊದಲು ಈ TEC ಕೋರ್ಸ್ ಸರ್ಟಿಫಿಕೇಟ್ ಪಡೆಯಬೇಕು.
CSC ಡಿಜಿಟಲ್ ಸೇವಾ ಕೇಂದ್ರ ನೋಂದಣಿಗೆ ಅರ್ಜಿ ಸಲ್ಲಿಸುವುದಕ್ಕೆ ಬೇಕಾಗುವ ಅಗತ್ಯ ದಾಖಲೆಗಳು:-
* ಗುರುತಿನ ಪುರಾವೆಯಾಗಿ ಅರ್ಜಿದಾರರ ಮತದಾರರ ಗುರುತಿನ ಚೀಟಿಯ ಪ್ರತಿ
* ವಿಳಾಸ ಪುರಾವೆಯಾಗಿ ಅರ್ಜಿದಾರರ ಆಧಾರ್ ಕಾರ್ಡ್ ನಕಲು
* ಅರ್ಜಿದಾರರ ಬ್ಯಾಂಕ್ ಪಾಸ್ಬುಕ್ ವಿವರ ಅಥವಾ ರದ್ದುಪಡಿಸಿದ ಚೆಕ್
* ಅರ್ಜಿದಾರರ ಪ್ಯಾನ್ ಕಾರ್ಡ್ ಪ್ರತಿ
CSC ಕೇಂದ್ರ ತೆರೆಯಲು ಬೇಕಾಗುವ ಸಾಮಗ್ರಿಗಳು:-
* ಮೂಲಸೌಕರ್ಯವಾಗಿ 100 ರಿಂದ 150 ಚದರ ಅಡಿ ಕೇಂದ್ರ ತೆರೆಯುವ ಸ್ಥಳ
* ಹೊಸ ತಂತ್ರಜ್ಞಾನದ ಕಂಪ್ಯೂಟರ್
* ಪ್ರಿಂಟರ್
* ಸ್ಕ್ಯಾನರ್
* ವೆಬ್ ಕ್ಯಾಮರಾ
* ಬಯೋ-ಮ್ಯಾಟ್ರಿಕ್ಸ್ ಸ್ಕ್ಯಾನರ್
* UPS
* ಪವರ್ ಬ್ಯಾಕಪ್
* ಗ್ರಾಹಕರು ಕುಳಿತುಕೊಳ್ಳಲು ವ್ಯವಸ್ಥೆ
* ಇತ್ಯಾದಿ.
ನೋಂದಣಿಗಾಗಿ TEC ಸರ್ಟಿಫಿಕೇಟ್ ಪಡೆಯುವ ವಿಧಾನ:-
* ಮೊದಲಿಗೆ ಆಚರಣೆ ಮೊಬೈಲ್ ನಲ್ಲಿ TEC ಎಂದು ಟೈಪ್ ಮಾಡಿ ಸರ್ಚ್ ಮಾಡಬೇಕು ಅಥವಾ https://cscregister.csccloud.in/web/register or https://cscentrepreneur.in/register ಈ ಲಿಂಕ್ ಕ್ಲಿಕ್ ಮಾಡಿ
* Telecentre Entrepreneur Cource (TEC/CCE) ಮುಖಪುಟ ಓಪನ್ ಆಗುತ್ತದೆ.
* ಬಲ ಭಾಗದಲ್ಲಿ login With Us ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
* ನಂತರ ಹಂತ ಹಂತವಾಗಿ ಸೂಚನೆಯಂತೆ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಕೆ ಪೂರ್ತಿಗೊಳಿಸಿ.