ರೈತರಿಗಿರುವ ನೂರಾರು ಸಮಸ್ಯೆಗಳ ಬಗ್ಗೆ ತಮ್ಮ ಜಮೀನನ್ನ ಕಾವಲು ಕಾಯುವುದು ಕೂಡ ಒಂದು ಬಹಳ ದೊಡ್ಡ ಸಮಸ್ಯೆ. ಇಲ್ಲವಾದರಗ ಕಷ್ಟಪಟ್ಟು ಬೆಳೆದ ಬೆಳೆ ಯಾವುದೇ ಕ್ಷಣದಲ್ಲಿ ಕಾಡುಪ್ರಾಣಿಗಳ ಹಾವಳಿಗೆ ಸಿಕ್ಕು ಹಾಳಾಗಬಹುದು ಅಥವಾ ಬೆಳೆ ಬಂದ ಸಮಯದಲ್ಲಿ ಯಾರದ್ದೋ ದ್ವೇ’ಷ ವೈ’ಶ’ಮ್ಯ’ದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ರೀತಿ ಆಗಿಬಿಡಬಹುದು ಅಥವಾ ಕಳ್ಳತನವು ಆಗಬಹುದು.
ಇದನ್ನೆಲ್ಲ ತಪ್ಪಿಸಲು ರೈತನು ತನ್ನ ಭೂಮಿಗೆ ರಕ್ಷಣೆ ಮಾಡಿಕೊಳ್ಳಲೇಬೇಕು ಸಾಮಾನ್ಯವಾಗಿ ರೈತರು ತಮ್ಮ ಜಮೀನುಗಳಿಗೆ ಮುಳ್ಳು ತಂತಿ ಹಾಕಿಸುತ್ತಾರೆ. ಇಂದು ನಾವು ಅದೇ ವಿಚಾರವಾಗಿ ನಿಮಗೆ ಕೆಲ ಮಾಹಿತಿಯನ್ನು ತಿಳಿಸಲು ಇಚ್ಛಿಸುತ್ತಿದ್ದೇವೆ ಯಾಕೆಂದರೆ ಬಹಳ ಬೆಸ್ಟ್ ಆದ ಮೂರು ರೀತಿಯ ಫಾರ್ಮ್ ಫೆನ್ಸಿಂಗ್ (Farm Fencing) ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಈ ರೈತನ 1-3-6 ಟೆಕ್ನಿಕ್ ಸಖತ್ ವೈರಲ್, 1 ಎಕರೆಯಲ್ಲಿ 10 ಲಕ್ಷ ಲಾಭ, ಆ ಸೂಪರ್ ಐಡಿಯಾ ಯಾವುದು ಗೊತ್ತಾ.?.
ಸಾಮಾನ್ಯವಾಗಿ ನ್ಯಾಚುರಲ್ ಆಗಿ ರೂಪುಗೊಳ್ಳುವ ಬೇಲಿಯು ಈಗ ಯಾವ ಲೆಕ್ಕವೂ ಅಲ್ಲ ಹಾಗಾಗಿ ರೈತರು ಹಣ ಖರ್ಚು ಮಾಡಿ ಮುಳ್ಳು ತಂತಿ ಹಾಕಿಸುತ್ತಾರೆ. ಮುಳ್ಳು ತಂತಿ ಅದು ಮಾತ್ರವಲ್ಲದೆ ಮೆಷ್ ಬೇಲಿ ಹಾಕಿಸುವ ವಿಧಾನ ಕೂಡ ಇದೆ, ಇನ್ನು ಕೆಲವರು ಸ್ಲಾಬ್ ಹಾಕಿ ಕಾಂಪೌಂಡ್ ಮಾಡಿಸಿ ಬಿಡುತ್ತಾರೆ.
ಈ ರೀತಿ ರೈತರಿಗೆ ಫಾರ್ಮ್ ಫೆನ್ಸಿಂಗ್ ಮಾಡಿಕೊಡುವ ಕೆಲಸ ಮಾಡುವ ವ್ಯಕ್ತಿ ಒಬ್ಬರು ಕೊಟ್ಟ ಸಲಹೆ ಬಗ್ಗೆ ತಿಳಿಸುತ್ತಿದ್ದೇನೆ ಮತ್ತು ಅವರ ಸಂಪರ್ಕ ವಿಳಾಸವನ್ನು ತಿಳಿಸುತ್ತಿದ್ದೇವೆ. ಈ ಮಾಹಿತಿ ಇಷ್ಟವಾದರೆ ನೀವು ಕೂಡ ಅವರನ್ನು ಕಾಂಟಾಕ್ಟ್ ಮಾಡಿ ನಿಮ್ಮ ಜಮೀನಿಗೂ ಈ ರೀತಿ ಕಾಂಪೌಂಡ್ ಹಾಕಿಸಿಕೊಳ್ಳಬಹುದು.
ಈ ಸುದ್ದಿ ಓದಿ:- ಈ ಕಾರಣಕ್ಕೆ BPL ಕಾರ್ಡ್ ಇದ್ದವರಿಗೂ ಸಿಗುತ್ತಿಲ್ಲ ಗೃಹಲಕ್ಷ್ಮಿ ಮತ್ತು ಅಕ್ಕಿ ಹಣ.! ಸ್ಪಷ್ಟನೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕಾರ್.!
ಮುಳ್ಳು ತಂತಿಯ ಬೇಲಿ ಹಾಕುವಾಗ 10 ಅಡಿಯ ಕಲ್ಲನ್ನು ಎರಡು ಅಡಿ ಆಳಕ್ಕೆ ಹಾಕಿ ಎಂಟು ಅಡಿ ಮೇಲೆ ನಿಲ್ಲಿಸಲಾಗಿರುತ್ತದೆ 6*4 ಅಳತೆಯ ಕಲ್ಲಾಗಿರುತ್ತದೆ, ಕಲ್ಲಿಗೆ ಲೈಫ್ ಟೈಮ್ ವಾರಂಟಿ ಇರುತ್ತದೆ. ಈ ಕಲ್ಲಿಗೆ ಎಂಟು ಲೈನ್ ಮುಳ್ಳುತಂತಿ ಹಾಕಿ ಇಂಟು ಲೈನ್ ಕೂಡ ಹಾಕಲಾಗುತ್ತದೆ. ಈ ಇಂಟು ಲೈನ್ ಎಳೆದು ಹಾಕುವುದರಿಂದ ಹೆಚ್ಚಿಗೆ ಸೆಕ್ಯೂರಿಟಿ ಮತ್ತು ಗ್ರಿಪ್ ಇರುತ್ತದೆ ಎನ್ನುತ್ತಾರೆ ಇವರು.
ಎರಡು ಕಲ್ಲುಗಳ ಮಧ್ಯೆ ಆರು ಅಡಿ ಡಿಸ್ಟಾನ್ಸ್ ಇರುತ್ತದೆ. ಮೂಲೆ ಕಲ್ಲುಗಳನ್ನು ಕ್ರಾಸ್ ಮಾಡಿ ಗ್ರಿಪ್ ಮಾಡಲಾಗಿರುತ್ತದೆ. ಗೇಟ್ ಇರುವ ಕಡೆ ಎರಡೆರಡು ಕಲ್ಲು ಕೊಟ್ಟು ಗ್ರಿಪ್ ಮಾಡಲಾಗಿರುತ್ತದೆ ಈ ರೀತಿ ಮಾಡದೆ ಇದ್ದರೆ ತಂತಿಗಳು ಲೂಸ್ ಆಗಿಬಿಡುತ್ತವೆ ಮತ್ತು ಬಹಳ ದಿನ ಬಾಳಿಕೆ ಬರುವುದಿಲ್ಲ ಹಾಗಾಗಿ ಬಹಳ ಎಚ್ಚರಿಕೆಯಿಂದ ತಂತಿಯನ್ನು ಕ್ರಾಸ್ ಮಾಡುವಾಗ ಮತ್ತು ಕಾರ್ನರ್ ಕಲ್ಲು ಕೊಡುವಾಗ ಎಚ್ಚರವಾಗಿ ಕೆಲಸ ಮಾಡಿಸುತ್ತೇವೆ.
ಈ ಸುದ್ದಿ ಓದಿ:- ಕಾರ್ ಬೈಕ್ ಇದ್ದವರಿಗೆ ಹೊಸ ರೂಲ್ಸ್.! ಈ ತಪ್ಪು ಮಾಡಿದರೆ ನಿಮ್ಮ ವಾಹನ ಸೀಜ್.!
ಕಲ್ಲು ಯಾವುದೇ ಕಾರಣಕ್ಕೂ ಏನು ಆಗುವುದಿಲ್ಲ ಆದರೆ ಒಂದು ವೇಳೆ ಬಿದ್ದು ಹೋದರೆ ಎನ್ನುವ ಕಾರಣದಿಂದ ಕಾರ್ನರ್ ಗಳಲ್ಲಿ ಲಾಕ್ ಸಿಸ್ಟಮ್ ಮಾಡಿರುತ್ತೇವೆ ತಂತಿಗಳನ್ನು ಜಿಂಕ್ ಕೋಟೆಡ್ ಇರುವ ಟಾಟಾ ತಂತಿಗಳನ್ನು ಬಳಸುತ್ತೇವೆ ಎನ್ನುತ್ತಾರೆ ಇವರು.
ಜಮೀನಿನ ಅಳತೆ ನೋಡಿ ಎಷ್ಟು ಕಲ್ಲು ಬೇಕಾಗುತ್ತದೆ ಎಷ್ಟು ತಂತಿ ಬೇಕಾಗುತ್ತದೆ ಎಂದು ಕಸ್ಟಮರ್ ಗೆ ಹೇಳುತ್ತೇವೆ ಮತ್ತು ಎಷ್ಟು ದಿನದಲ್ಲಿ ಕೆಲಸ ಮುಗಿಸುತ್ತೇವೆ ಎನ್ನುವುದನ್ನು ಹೇಳುತ್ತೇವೆ. ನಮ್ಮ ಕೆಲಸಗಾರರೇ ಬರುತ್ತಾರೆ ಅವರಿಗೆ ಎಕ್ಸ್ಪೀರಿಯನ್ಸ್ ಇರುವುದರಿಂದ ಚೆನ್ನಾಗಿ ಫಿನಿಶಿಂಗ್ ಮಾಡಿಕೊಡುತ್ತಾರೆ.
ಈ ಸುದ್ದಿ ಓದಿ:- ಕೇವಲ 14 ಲಕ್ಷದಲ್ಲಿ 2BHK ಸುಂದರವಾದ ಮನೆ ನಿರ್ಮಿಸಬಹುದು, ಡೀಟೇಲ್ಸ್ ಇಲ್ಲಿದೆ ನೋಡಿ.!
ಕರ್ನಾಟಕದ ಯಾವುದೇ ಭಾಗಕ್ಕೆ ಬೇಕಾದರೂ ಫೆನ್ಸಿಂಗ್ ಮಾಡಿಕೊಡುತ್ತೇವೆ ಎನ್ನುತ್ತಾರೆ ಇವರು. ಮತ್ತೊಂದು ಬಗೆಯ ಫೆನ್ಸಿಂಗ್ ಕೂಡ ಇದೆ ಇದು ಫುಲ್ ನೆಟೆಡ್ ಆಗಿ ಇದೆ ಇದು ಮಾಮೂಲಿ ತಂತಿಗಿಂತ ಹೆಚ್ಚು ಸೆಕ್ಯೂರ್ ಇದೆ ಮತ್ತು ಕಾಂಪೌಂಡ್ ರೀತಿಯ ವಾಲ್ ನಿರ್ಮಾಣ ಮಾಡುವುದು ಎಲ್ಲದಕ್ಕಿಂತಲೂ ಕೂಡ ಹೆಚ್ಚು ಸೇಫ್ಟಿ ಹೊಂದಿದೆ ಇದರ ಬಜೆಟ್ ಬಗ್ಗೆ ಇದರ ಕ್ವಾಲಿಟಿ ಬಗ್ಗೆ ಮತ್ತು ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವಿಡಿಯೋ ಪೂರ್ತಿಯಾಗಿ ನೋಡಿ ಮತ್ತು ಆಸಕ್ತಿ ಇರುವವರು ಈ ಸಂಖ್ಯೆ ಅಥವಾ ವಿಳಾಸಕ್ಕೆ ಸಂಪರ್ಕಿಸಿ.
ವಿಳಾಸ:-
ಅಪ್ಪು,
ಶ್ರೀ ವೆಂಕಟೇಶ್ವರ ಶ್ರೀ ಎಲ್ಲಮ್ಮ ದೇವಿ ಎಂಟರ್ಪ್ರೈಸಸ್, ಮದ್ದೂರು,
ಮಂಡ್ಯ ಜಿಲ್ಲೆ.
9741034728, 8951240415