ಕೇಂದ್ರ ಸರ್ಕಾರವು (Central Government) ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲೂ ಕೃಷಿ ಕ್ಷೇತ್ರ ಹಾಗೂ ಮಹಿಳೆಯರ ಪಾಲಿಗೆ ಹೆಚ್ಚಿನ ವರದಾನ ಇದೆ ಈಗ ಇಂತಹದೇ ಒಂದು ವಿಶೇಷವಾದ ಯೋಜನೆಯನ್ನು ಸರ್ಕಾರ ಘೋಷಿಸಿದೆ. ಈ ಬಾರಿ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಅನುಕೂಲವಾಗುವಂತಹ ಯೋಜನೆಯನ್ನು ಪರಿಚಯಿಸಿದ್ದು ಮಹಿಳೆಯರಿಗೆ ರೂ.15,000 ದವರೆಗೆ ಲಾಭ ತರುತ್ತಿರುವ ಯೋಜನೆಯಾಗಿದೆ.
ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು ಈ ಯೋಜನೆಗೆ ಅನುಮೋದನೆ ನೀಡಿದ್ದು ದೇಶದ ಲಕ್ಷಾಂತರ ಮಹಿಳೆಯರಿಗೆ ಇದರ ಪ್ರಯೋಜನ ಸಿಗಲಿದೆ ಯಾವ ಯೋಜನೆ ಇದರ ಪ್ರಯೋಜನ ಪಡೆಯುವುದು ಹೇಗೆ ಇತ್ಯಾದಿ ವಿವರ ಹೀಗಿದೆ ನೋಡಿ. ಕೇಂದ್ರ ಸರ್ಕಾರದ ವತಿಯಿಂದ ದೇಶಾದ್ಯಂತ 15,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಮಹಿಳಾ ಸ್ವಸಹಾಯ ಗುಂಪುಗಳಿಗೆ (SHG) ಡ್ರೋನ್ಗಳನ್ನು (Drone) ನೀಡುವ ಯೋಜನೆ ಇದಾಗಿದೆ.
ಈ ಸುದ್ದಿ ಓದಿ:- ಮಾರ್ಚ್ ತಿಂಗಳ ಗೃಹಲಕ್ಷ್ಮಿ & ಅನ್ನಭಾಗ್ಯ ಹಣ ನಿಮ್ಮ ಖಾತೆಗೆ ಜಮೆ ಆಗುತ್ತದೆಯೇ.? ಆಗುವುದಿಲ್ಲವೇ? ಅರ್ಜಿ ಕ್ಯಾನ್ಸಲ್ ಆಗಿದೆಯೇ? ಹೀಗೆ ಚೆಕ್ ಮಾಡಿ ತಿಳಿದುಕೊಳ್ಳಿ.!
ಈ ಯೋಜನೆಯ ಅಸಲಿ ಹೆಸರು ಡ್ರೋನ್ ದೀದಿ ಯೋಜನೆ (Drone Didi Scheme). ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡುವುದರಿಂದ ಇದನ್ನು ಮಹಿಳಾ ಸ್ವಸಹಾಯ ಗುಂಪು ಡ್ರೋನ್ ಯೋಜನೆ ಎಂದು ಕೂಡ ಕರೆಯುತ್ತಾರೆ. ಕೇಂದ್ರದಿಂದ ನೀಡಲಾಗುತ್ತಿರುವ ಈ ಡ್ರೋನ್ಗಳ ಪ್ರಯೋಜನವೇನೆಂದರೆ ರೈತ ಮಹಿಳೆಯರು (Farmer) ಇವುಗಳನ್ನೇ ಬಳಸಿ ಕೃಷಿ ಭೂಮಿಗೆ ಗೊಬ್ಬರ ಸಿಂಪಡಣೆ ಮಾಡಬಹುದು.
ಈ ಡ್ರೋನ್ ದೀದಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) 28 ನವೆಂಬರ್ 2023 ರಂದು ಪ್ರಾರಂಭಿಸಿದರು. ಈ ಯೋಜನೆಯಡಿ ಮುಂದಿನ 4 ವರ್ಷಗಳಲ್ಲಿ ಕೇಂದ್ರವು ಡ್ರೋನ್ಗಳನ್ನು ಬಾಡಿಗೆಗೆ ನೀಡಲಿದೆ. ಅಂದರೆ 2023-24ನೇ ಹಣಕಾಸು ವರ್ಷದಿಂದ ಈ ಯೋಜನೆ ಜಾರಿಯಲ್ಲಿ ಇದ್ದು 2025-26ನೇ ಹಣಕಾಸು ವರ್ಷದವರೆಗೆ ಯೋಜನೆಯಡಿ ಡ್ರೋನ್ಗಳನ್ನು ಒದಗಿಸಲಿದೆ.
ಈ ಸುದ್ದಿ ಓದಿ:-ಕೇವಲ 10 ಲಕ್ಷದಲ್ಲಿ ನಿರ್ಮಾಣವಾಗಿರುವ 2BHK ಮನೆ ಹೇಗಿದೆ ನೋಡಿ.! ಕಡಿಮೆ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಬೇಕು ಅನ್ನುವವರು ನೋಡಿ.!
ಡ್ರೋನ್ ವಿತರಣೆ ಜೊತೆಗೆ ಇದರ ಅನುಕೂಲತೆ ಹೇಗೆ ಪಡೆಯಬೇಕು ಹೇಗೆ ಇದನ್ನು ಆಪರೇಟ್ ಮಾಡಬೇಕು ಎನ್ನುವುದನ್ನು ತಿಳಿಸಿಕೊಡಲು ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಮಹಿಳಾ ಡ್ರೋನ್ ಪೈಲಟ್ಗಳು ತರಬೇತಿ ಕೂಡ ಕೊಡುತ್ತಾರೆ ಸರ್ಕಾರವೇ ಇದರ ವೆಚ್ಚ ಭರಿಸುತ್ತದೆ ಮತ್ತು ಪೈಲೆಟ್ ಗಳಿಗೆ ಗೌರವಧನ ನೀಡುತ್ತದೆ.
ಇದರ ಪ್ರಯೋಜನವನ್ನು ಮಹಿಳೆಯರು ಹೇಗೆ ಪಡೆಯುತ್ತಾರೆ ಎಂದರೆ ಡ್ರೋನ್ಗಳಿಂದ ಬಹಳ ಸಲೀಸಾಗಿ ಮತ್ತು ಸರಾಗವಾಗಿ ಕೃಷಿ ಕೆಲಸ ನಡೆಯುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಒಂದು ಡ್ರೋನ್ ಒಂದೇ ಸಮಯದಲ್ಲಿ 10 ರೈತರ ಕೆಲಸವನ್ನು ಮಾಡಬಹುದು. ಇದಲ್ಲದೆ, ಡ್ರೋನ್ನೊಂದಿಗೆ ಗೊಬ್ಬರ ಸಿಂಪಡಿಸುವಿಕೆಯು ಅತ್ಯಂತ ತ್ವರಿತ ಮತ್ತು ಪರಿಣಾಮಕಾರಿಯಾಗಿದೆ.
ಈ ಸುದ್ದಿ ಓದಿ:-ಕೃಷಿ ಹೊಂಡದಲ್ಲಿ ಮುತ್ತು ಬೆಳೆದು 20 ಲಕ್ಷ ಆದಾಯ ಮಾಡಿದ ರೈತ.!
ಜಮೀನಿಗೆ ಹೋಗುವ ಅಗತ್ಯವಿಲ್ಲದೆ ಕೂಡ ಕೃಷಿ ಕೆಲಸ ಮಾಡಬಹುದಾದಂತಹ ಅಡ್ವಾನ್ಸ್ ತಂತ್ರಜ್ಞಾನ ಇದರದ್ದು ಈ ಡ್ರೋನ್ ಗಳನ್ನು ಬಾಡಿಗೆಗೆ ಪಡೆಯಲು ಮಹಿಳೆಯರು ಸರ್ಕಾರವು ಸೂಚಿಸುವ ಆನ್ಲೈನ್ ಪೋರ್ಟಲ್ ನಲ್ಲಿ ಅರ್ಜಿ ಹಾಕಬೇಕು ಬಳಿಕ ಸರ್ಕಾರ ಡ್ರೋನ್ ಒದಗಿಸಿ ಸ್ವಸಹಾಯ ಗುಂಪಿನ ಒಬ್ಬ ರೈತ ಮಹಿಳೆಗೆ ಡ್ರೋನ್ ಬಳಸಲು ತರಬೇತಿ ನೀಡಲಿದೆ ಮತ್ತು ಮಾಸಿಕ ರೂ.15 ಸಾವಿರ ವೇತನ ಕೂಡ ನೀಡುತ್ತದೆ.
ಆಕೆ ಆ ಸ್ವಸಹಾಯ ಗುಂಪಿನಲ್ಲಿ ಎಲ್ಲ ರೈತರ ಜಮೀನುಗಳಿಗೆ ಡ್ರೋನ್ ಸಹಾಯದಿಂದ ಔಷಧಿ ಹಾಗೂ ಗೊಬ್ಬರ ಸಿಂಪಡಿಸಬೇಕು ಇದರಿಂದ ಕೃಷಿ ಕೆಲಸ ಸರಾಗ ಮತ್ತು ಒಬ್ಬ ಮಹಿಳೆಗೆ ಉದ್ಯೋಗ ಸಿಕ್ಕಿದಂತಾಗುತ್ತದೆ. ಈ ಯೋಜನೆಯಡಿಯಲ್ಲಿ, ಡ್ರೋನ್ ಖರೀದಿಗೆ, ಕೇಂದ್ರವು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಡ್ರೋನ್ನ ವೆಚ್ಚದ ಶೇಕಡಾ 80 ರಷ್ಟು ಆರ್ಥಿಕ ನೆರವು ಕೂಡ ನೀಡುತ್ತದೆ.
ಈ ಸುದ್ದಿ ಓದಿ:-ಹೈ ಟೆಕ್ ರೆಡಿಮೇಡ್ ಮನೆಗಳು ಕಡಿಮೆ ಬೆಲೆಗೆ ಲಭ್ಯ ಸ್ವಂತ ಮನೆ ನಿರ್ಮಿಸುವ ಆಸೆ ಇದ್ದವರು ನೋಡಿ
ಪರಿಕರಗಳು ಅಥವಾ ಪರಿಕರಗಳ ಶುಲ್ಕಗಳಿಗಾಗಿ ಗರಿಷ್ಠ 8 ಲಕ್ಷ ರೂ. ನೆರವು ಪಡೆಯಬಹುದು ಉಳಿದ ಮೊತ್ತವನ್ನು ಅಗ್ರಿಕಲ್ಚರಲ್ ಇನ್ಫ್ರಾ ಫೈನಾನ್ಸಿಂಗ್ ಫೆಸಿಲಿಟಿ ಅಡಿಯಲ್ಲಿ ಸಾಲವನ್ನು ಶೇಕಡಾ 3 ರ ಬಡ್ಡಿ ಸಬ್ಸಿಡಿಯನ್ನು ಪಡೆಯಬಹುದಾಗಿದೆ ಇದು ರೈತ ಮಹಿಳೆಯರಿಗೆ ಬಹಳ ಲಾಭದಾಯಕವಾಗಿದೆ.