ಕ್ಯಾನ್ಸರ್ (Cancer) ಮನುಕುಲವನ್ನೇ ನಡುಗಿಸುತ್ತಿರುವ ರಾಕ್ಷಸ. ಎಷ್ಟೇ ಆರೋಗ್ಯವಾಗಿರುವ ವ್ಯಕ್ತಿಯು ಕೂಡ ಈ ಹೆಸರು ಕೇಳಿದರೆ ಭಯ ಬೀಳುತ್ತಾನೆ. ಯಾಕೆಂದರೆ ಕ್ಯಾನ್ಸರ್ ಬಗ್ಗೆ ನಾವು ಕಂಡಿರುವ ಉದಾಹರಣೆಗಳು ಇದಕ್ಕೆ ಕಾರಣ, ನಮ್ಮ ಕಣ್ಣೆದುರೇ ಎಷ್ಟು ಜನರು ಇದರಿಂದ ತೀರಿಕೊಂಡಿದ್ದಾರೆ.
ಬೆರಳೆಣಿಕೆಯಷ್ಟು ಜನ ಬದುಕಿದ್ದರೂ ಅವರ ಟ್ರೀಟ್ಮೆಂಟ್ ಗೆ ಎಷ್ಟು ಖರ್ಚಾಗಿದೆ? ಬಡವರಿಗೆ ಬಂದು ಬಿಟ್ಟರೆ ಕತೆ ಏನು? ಕ್ಯಾನ್ಸರ್ ಗೆ ಔಷಧಿ ದುಬಾರಿ ಆದರೆ ಅದು ವರ್ಕ್ ಆಗುವುದು ಕೆಲವು ಪರ್ಸೆಂಟ್ ಮಾತ್ರ ಇದೆಲ್ಲವೂ ನಮಗೆ ಕ್ಯಾನ್ಸರ್ ಭೂತದ ಬಗ್ಗೆ ಭಯ ಹೆಚ್ಚಿಸಿದೆ.
ಆದರೆ ಕ್ಯಾನ್ಸರ್ ಕುರಿತಾಗಿ ವೈದ್ಯ ಲೋಕದಲ್ಲಿ ಸಂಚಲನ ಸೃಷ್ಟಿಸುವಂತಹ ಮತ್ತೊಂದು ವಿಚಾರ ನಡೆಯುತ್ತಿದೆ ಇನ್ನು ಮುಂದೆ ಭಾರತದ ಹೆಮ್ಮೆಯ ಟಾಟಾ ಕಂಪನಿಯೇ (TATA Company Introduces Medicine to Cancer) ಕ್ಯಾನ್ಸರ್ ಗೆ ಔಷಧಿ ನೀಡಲಿದೆಯಂತೆ ಅದು ಕೂಡ ನೂರು ರೂಪಾಯಿಗೆ ಇದರ ಕುರಿತ ವಿವರ ಹೇಗಿದೆ ನೋಡಿ.
ಈ ಸುದ್ದಿ ಓದಿ:- ಕೇವಲ 10 ಲಕ್ಷದಲ್ಲಿ ನಿರ್ಮಾಣವಾಗಿರುವ 2BHK ಮನೆ ಹೇಗಿದೆ ನೋಡಿ.! ಕಡಿಮೆ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಬೇಕು ಅನ್ನುವವರು ನೋಡಿ.!
ಕ್ಯಾನ್ಸರ್ ಬರಲು ಕಾರಣದ ಬಗ್ಗೆ ಹೇಳುವುದಾದರೆ ಪ್ರತಿದಿನವೂ ಕೂಡ ನಮ್ಮ ದೇಹದಲ್ಲಿ 30,000 ಕೋಟಿಗೂ ಹೆಚ್ಚು ಜೀವಕೋಶಗಳು (Cells) ಹುಟ್ಟುತ್ತವೆ, ಸಾಯುತ್ತಿರುತ್ತವೆ. ಇದು ಮನುಷ್ಯನಿಗೆ ಎಲ್ಲಾ ಕ್ರಿಯೆಗಳಿಗೂ ಸಹಕಾರಿಯಾಗಿರುತ್ತವೆ. ಒಂದು ಜೀವಕೋಶವು ಎರಡಾಗಿ ನಾಲ್ಕಾಗಿ ಎಂಟಾಗಿ ಈ ರೀತಿ ವಿಘಟನೆ ಹೊಂದುತ್ತದೆ.
ಕೆಲವುಗಳ ಆಯಸ್ಸು ತಾಸಿನ ಲೆಕ್ಕದಲ್ಲಿ ಇದ್ದರೆ ಕೆಲವು ವಾರಗಟ್ಟಲೆ ಬದುಕುತ್ತವೆ. ಇದೆಲ್ಲವೂ ಕೂಡ ನಮ್ಮ DNAನಲ್ಲಿ ಇರುವ ಜೀನ್ಸ್ ಗಳ (Genes) ಮೂಲಕ ಕಂಟ್ರೋಲ್ ನಲ್ಲಿ ಇರುತ್ತವೆ. ಜೀನ್ಸ್ ಹಾಳಾದಾಗ ಈ ಮ್ಯುಟೇಶನ್ ಕ್ಯಾಲುಕೇಶನ್ ತಪ್ಪಾಗಿ ಜೀವಕೋಶಗಳ ಉತ್ಪಾದನೆ ಹೆಚ್ಚಾಗಿ ಕ್ಯಾನ್ಸರ್ ಸಂಭವಿಸುತ್ತದೆ.
ಯಾವ ಭಾಗದಲ್ಲಿ ಕ್ಯಾನ್ಸರ್ ಆಗಿದೆ ಎನ್ನುವುದರ ಆಧಾರದ ಮೇಲೆ ಕ್ಯಾನ್ಸರ್ ಗೆ ಹೆಸರಿಡಲಾಗುತ್ತದೆ. ಈ ಮ್ಯೂಟೇಶನ್ ಫಾರ್ಮುಲ ಹಾಳಾಗಲು ಕಾರಣ ಏನೆಂದರೆ ಕಾರ್ಸಿನೋಜೆನ್ಸ್ (Carcinogens). ಕಾರ್ಸಿನೋಜೆನ್ಸ್ ಎಂದರೆ ಕ್ಯಾನ್ಸರ್ ಕಾರಕ ಅಂಶಗಳಿರುವ ವಸ್ತುಗಳು. ಇದು ದೇಹ ಸೇರುವುದರಿಂದ ಕ್ಯಾನ್ಸರ್ ಬರುತ್ತದೆ.
ಈ ಸುದ್ದಿ ಓದಿ:-ಕೃಷಿ ಉಪಕರಣ ಖರೀದಿಸಲು ಸರ್ಕಾರದಿಂದ ಶೇಕಡಾ 90% ಸಬ್ಸಿಡಿ.!
ತಂಬಾಕು, ತಂಬಾಕಿನ ಹೊಗೆ, ಸೂರ್ಯನಿಂದ ಬರುವ ಅಲ್ಟ್ರಾ ವೈಲೇಟ್ ರೇಡಿಯೇಷನ್ ಕೆಮಿಕಲ್ ಗಳು ಆರ್ಟಿಫಿಶಿಯಲ್ ಕಲರ್ ಗಳು ಇದರಲ್ಲಿ ಈ ಅಂಶವಿರುತ್ತದೆ. ಅನುವಂಶೀಯವಾಗಿಯೂ ಬರುವ ಸಾಧ್ಯತೆ ಇರುತ್ತದೆ. ನಮ್ಮ ದೇಹದ ಒಳ್ಳೆ ಜೀವಕೋಶಗಳು ಬೆಳೆಯುವ ಹಾಗೆ ಈ ಕೆಟ್ಟ ಕ್ಯಾನ್ಸರ್ ಜೀವಕೋಶಗಳು ಕೂಡ ಬೆಳೆದು ಗಂಟುಗಳಾಗುತ್ತವೆ.
ಇದನ್ನು ಬಿನೈನ್ ಟ್ಯೂಮರ್ (Benign Tumor) ಮತ್ತು ಮ್ಯಾಲಿಗ್ನಂಟ್ ಟ್ಯೂಮರ್ (Malignant) ಎಂದು ಕರೆಯಲಾಗುತ್ತದೆ. ಬಿನೈನ್ ಗಂಟು ಒಮ್ಮೆ ತೆಗೆದರೆ ಆಗುವುದಿಲ್ಲ ಮ್ಯಾಲಿಗ್ನಂಟ್ ಡೇಂಜರ್ ಕ್ಯಾನ್ಸರ್ ಸೆಲ್ ಗಳು ನಮ್ಮ ಸೆಲ್ ಗಳ ಜೊತೆ ಬೆರೆತಿರುವುದರಿಂದ DNA ಫೇಲ್ ಆಗಿರುವುದರಿಂದ ದೇಹವು ಗುರುತಿಸಲು ವಿಫಲವಾಗುತ್ತದೆ.
ರೋಗನಿರೋಧಕ ಶಕ್ತಿ ಇದರ ಮುಂದೆ ಸೋಲುತ್ತದೆ. ಇದು DNA ಸಿಸ್ಟಮ್ ಮೇಲೆ ಕೂಡ ಪ್ರಭಾವ ಬೀರುವುದರಿಂದ ದೇಹದಲ್ಲಿ ಯಾವ ರೂಪ ಬೇಕಾದರೂ ಪಡೆದುಕೊಳ್ಳುತ್ತದೆ. ಇನ್ನು ಸುಲಭವಾಗಿ ಅರ್ಥೈಸಬೇಕು ಎಂದರೆ ನಮ್ಮ ರಕ್ಷಣಾ ಪಡೆಯನ್ನೇ ನಾವು ಶತ್ರುಗಳ ಕೈಗೆ ಕೊಟ್ಟಂತೆ.
ಈ ಸುದ್ದಿ ಓದಿ:-ಒಂದು ಹೆಕ್ಟರ್ ಹೊಲದಲ್ಲಿ ಒಂದು ಗುಂಟೆ ಜಾಗ ನೀಡಿದರೆ ರೈತನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ.!
ಮೊದಲೇ ಹೇಳಿದಂತೆ ದೇಹವೇ ಇದರ ಕಂಟ್ರೋಲ್ ನಲ್ಲಿ ಇರುವುದರಿಂದ ನಾವು ತೆಗೆದುಕೊಳ್ಳುವ ಔಷಧಿ ಇತರೆ ಸೆಲ್ ಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ದೇಹದ ಒಳ್ಳೆ ಸೆಲ್ ಗಳು ಕೂಡ ಹಾಳಾಗಿ ಆರೋಗ್ಯ ಮತ್ತೊಂದು ರೀತಿಯಲ್ಲಿ ಹದಗೆಡುತ್ತದೆ ಬಹಳ ರಿಸರ್ಚ್ ಮಾಡಿ ಔಷಧಿ ತಯಾರಿಸಬೇಕಾದ ರಿಸ್ಕ್ ಇರುವುದರಿಂದ ತಯಾರಿಸುವ ಕಡಿಮೆ ಔಷಧಿಯ ಎಲ್ಲಾ ಮ್ಯಾನುಫ್ಯಾಕ್ಚರಿಂಗ್ ಚಾರ್ಜಸ್ ಕ್ಯಾನ್ಸರ್ ಪೇಶೆಂಟ್ ಗಳ ಮೇಲೆ ಬೀಳುವುದರಿಂದ ಬಹಳ ದುಬಾರಿಯಾಗುತ್ತದೆ.
ಈಗ ಸುದ್ದಿಯಲ್ಲಿರುವ ಟಾಟಾ ಕಂಪನಿ ಮಾತ್ರೆ ಹೇಗಿದೆ ಎಂದರೆ, ಮುಂಬೈನಲ್ಲಿರುವ ಟಾಟಾ ಇನ್ಸ್ಟಿಟ್ಯೂಟ್ ನಿರಂತರ 10 ವರ್ಷಗಳ ಆವಿಷ್ಕಾರ ನಡೆಸಿ ಕ್ಯಾನ್ಸರ್ ಮಾತ್ರೆ ಕಂಡುಹಿಡಿದಿದ್ದೇವೆ ಎಂದು ಹೇಳಿದೆ. ಈ ಮಾತ್ರೆ ಕ್ಯಾನ್ಸರ್ ರಿಪೀಟ್ ಆಗುವುದನ್ನು ತಡೆಯುತ್ತದೆ ಮತ್ತು ರೇಡಿಯೇಷನ್, ಕೀಮೋಥೆರಪಿ ಟ್ರೀಟ್ ಮೆಂಟ್ ಸೈಡ್ ಎಫೆಕ್ಟ್ ನೂ 50% ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ.
ಈ ಔಷಧಿಯ ಹೆಸರು TATA R+CU, ಈ ಮಾತ್ರೆಯನ್ನು ತಿಂದಾಗ ಉಂಟಾಗುವ ಆಕ್ಸಿಜನ್ ರಾಡಿಕಲ್ಸ್ ಕ್ಯಾನ್ಸರ್ ಮಾತ್ರೆಗಳನ್ನು ತಿಂದಾಗ ಉಂಟಾಗುತ್ತಿದ್ದ ಕ್ರೋಮಾಟಿನ್ ಪಾರ್ಟಿಕಲ್ಸ್ ನಾಶ ಮಾಡುತ್ತದೆ ಇದರಿಂದ ಕ್ಯಾನ್ಸರ್ ಸ್ಪ್ರೆಡ್ ಆಗುವುದು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಔಷಧಿಗಳನ್ನು ಈಗಾಗಲೇ ಇಲಿಗಳ ಮೇಲೆ ಪ್ರಯೋಗ ಮಾಡಲಾಗಿದೆ ಮತ್ತು ಸಕಾರಾತ್ಮಕವಾದ ರಿಸಲ್ಟ್ ಬಂದಿದೆ ಎಂದು ಟಾಟಾ ಮೆಮೋರಿಯಲ್ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ಸರ್ಜನ್ ಹೇಳಿದ್ದಾರೆ.