ಕನ್ಸ್ಟ್ರಕ್ಷನ್ ಆದ ಕೆಲವೇ ದಿನಗಳಲ್ಲಿ ಸಣ್ಣ ಪುಟ್ಟ ಬಿರುಕುಗಳು ಬಂದವು ಎನ್ನುವುದು ಅನೇಕರ ದೂರು, ನೂರು ಮನೆಗಳಲ್ಲಿ 80 ರಿಂದ 90 ಮನೆಗಳಿಗೆ ಈ ಸಮಸ್ಯೆ ಬರುತ್ತದೆ ಹೀಗಾಗಿ ಕಾಂಟ್ರಾಕ್ಟರ್ ಕೂಡ ಇದೆಲ್ಲಾ ಕಾಮನ್ ಎಂದು ಬಿಡುತ್ತಾರೆ ನೋಡೋದಕ್ಕೆ ಸಣ್ಣ ಸಣ್ಣ ಬಿರುಕುಗಳಾಗಿರುತ್ತವೆ ಇದನ್ನು ಹೇರ್ ಲೈನ್ ಕರೆಯುತ್ತಾರೆ.
ಈ ರೀತಿ ಹೊಸ ಬಿಲ್ಡಿಂಗ್ ಗೆ ಕೆಲವೇ ದಿನಗಳಲ್ಲಿ ಕ್ರ್ಯಾಕ್ ಕಾಣಿಸಿಕೊಂಡರೂ ಕೂಡ ಅದು ಬೇಸರದ ಸಂಗತಿಯೇ. ಇದರಿಂದ ಕಾಂಟ್ರಾಕ್ಟರ್ ಹಾಗೂ ಕ್ಲೈಂಟ್ ಗಳ ಮಧ್ಯೆ ಮನಸ್ತಾಪ, ಜ’ಗ’ಳ’ಗಳು ಆಗುತ್ತವೆ. ಮನೆ ಕಟ್ಟುವ ಸಮಯದಲ್ಲಿ ಕೆಲವು ಸಿಂಪಲ್ ಟ್ರಿಕ್ ಗಳನ್ನು ಫಾಲೋ ಮಾಡುವುದರಿಂದ ಈ ರೀತಿ ಕ್ರ್ಯಾಕ್ ಬರುವ ಸಮಸ್ಯೆಯನ್ನು ತಪ್ಪಿಸಬಹುದು, ಅದರ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಕರ್ನಾಟಕ ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.!
* ಪ್ಲಾಸ್ಟರಿಂಗ್ ಮಾಡುವ ಮುಂಚೆಯೇ ಗೋಡೆಗಳ ಕ್ಯೂರಿಂಗ್ ಚೆನ್ನಾಗಿ ಆಗಿರಬೇಕು, ಕನಿಷ್ಠ ಎರಡು ವಾರಗಳವರೆಗಾದರು ಕಡ್ಡಾಯವಾಗಿ ಕ್ಯೂರಿಂಗ್ ಮಾಡಲೇಬೇಕು. ನಿಮ್ಮ ಅರ್ಜೆಂಟಿಗೆ ಕ್ಯೂರಿಂಗ್ ಸರಿಯಾಗಿ ಮಾಡದೆ ಗೋಡೆ ಆದ ತಕ್ಷಣವೇ ಪ್ಲಾಸ್ಟರಿಂಗ್ ಮಾಡಿದರೆ ಪ್ಲಾಸ್ಟರಿಂಗ್ ಆದ ಮೇಲೆ 24 ಕಂಡೆ ಕ್ಯೂರಿಂಗ್ ಮಾಡುವ ರೀತಿ ಇರುವುದಿಲ್ಲ ಆ ಸಮಯದಲ್ಲಿ ಪ್ಲಾಸ್ಟರಿಂಗ್ ನೀರನ್ನು ಗೋಡೆ ಹೀರಿಕೊಳ್ಳುತ್ತದೆ, ಪ್ಲಾಸ್ಟರಿಂಗ್ ನೀರು ಆಚೆ ಹೋದ ಕಾರಣ ಕ್ರ್ಯಾಕ್ ಬೀಳುತ್ತದೆ.
* ಡ್ರೈ ವಾಲ್ ಗಳಿಗೆ ಪ್ಲಾಸ್ಟರಿಂಗ್ ಮಾಡಬಾರದು, ಪ್ಲಾಸ್ಟರಿಂಗ್ ಮಾಡುವ ಮುಂಚೆ ಗೋಡೆಗೆ ತಿಳಿ ಹೊಡೆಯುತ್ತಾರೆ ಅದಕ್ಕೂ ಮುನ್ನ ಗೋಡೆಗಳನ್ನು ಒದ್ದೆ ಮಾಡಿ ಮಾಡುವುದರಿಂದ ಕ್ರ್ಯಾಕ್ ಬಿಡುವುದನ್ನು ತಪ್ಪಿಸಬಹುದು.
* ಗೋಡೆಗಳು ಜಾಯಿಂಟ್ ಆಗುವ ಜಾಗಗಳಾದ ಕಾಲಮ್, ಭೀಮ್ ಗೋಡೆಗೆ ಸೇರುವ ಜಾಗ ಮತ್ತು ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ಲೈನ್ ಗಳು ಹೋಗಿರುವ ಜಾಗ ಇಲ್ಲಿ ಚಿಕನ್ ಮೆಷ್ ಗಳನ್ನು ಹೊಡೆಯಬೇಕು. ಕಾಲಮ್ ಹಾಗೂ ಭೀಮ್ ಕನೆಕ್ಟ್ ಆಗುವ ಜಾಗದಲ್ಲಿ 6-8 ಇಂಚಿನ ಚಿಕನ್ ಮ್ಯಾಶ್ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ಲೈನ್ಗಳು ಹೋದ ಜಾಗಗಳಲ್ಲಿ 4 ಇಂಚಿನ ಮೆಷ್ ಗಳನ್ನು ಹಾಕಿ ನಂತರ ಪ್ಲಾಸ್ಟರಿಂಗ್ ಮಾಡಿಸಬೇಕು.
ಈ ಸುದ್ದಿ ಓದಿ:-ಇನ್ಮುಂದೆ ಬಡವರಿಗೆ 6 ತಿಂಗಳಲ್ಲಿ ನ್ಯಾಯ ಸಿಗುತ್ತೆ, ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ವಿಂಡೋ ಹಾಗೂ ಡೋರ್ ಗಳನ್ನು ಫಿಕ್ಸ್ ಮಾಡುವ ಜಾಗದಲ್ಲೂ ಕೂಡ ಈ ರೀತಿ ಮೆಷ್ ಹಾಕಿಸುವುದು ಬೆಸ್ಟ್. ಯಾಕೆಂದರೆ ಅಲ್ಲಿಯೂ ಕೂಡ ಕ್ರಾಕ್ ಬೀಳುವ ಸಾಧ್ಯತೆ ಇರುತ್ತದೆ ಈ ರೀತಿ ಮಾಡುವುದರಿಂದ ಜಾಯಿಂಟ್ ಗಳು ನೀಟಾಗಿ ಫಿನಿಶ್ ಆಗುತ್ತದೆ.
* ಪ್ಲಾಸ್ಟರಿಂಗ್ ಥಿಕ್ ನೆಸ್ ಕೂಡ ಮುಖ್ಯವಾಗುತ್ತದೆ. ಇಂಟರ್ನಲ್ ವಾಲ್ ಗಳಿಗೆ 12mm, ಸೀಲಿಂಗ್ ಗೆ 6mm, ಹೊರಗಿನ ಗೋಡೆಗಳಿಗೆ 15-20mm ಪ್ಲಾಸ್ಟರಿಂಗ್ ಮಾಡಿಸಬೇಕು, ಈ ರೀತಿ ಇದ್ದಾಗ ಕ್ರಾಕ್ ಬಿಡುವ ಚಾನ್ಸಸ್ ಕಡಿಮೆ. ನೀವು ಡಬಲ್ ಮಾಡುವುದಾದರೂ ಮೊದಲಿಗೆ ಇದೇ ಥಿಕ್ ನೆಸ್ ನಲ್ಲಿ ಪ್ಲಾಸ್ಟರಿಂಗ್ ಮಾಡಿ ಮತ್ತೆ ಇದೇ ಅಳತೆಗೆ ಮತ್ತೊಮ್ಮೆ ಇದೇ ಥಿಕ್ ನೆಸ್ ಗೆ ಪ್ಲಾಸ್ಟರಿಂಗ್ ಮಾಡಬೇಕು.
ಈ ಸುದ್ದಿ ಓದಿ:-ರೈತರಿಗೆ ಕೇವಲ 5 ದಿನಗಳಲ್ಲಿ ಬಾವಿ ಕೊರೆಸಿ ಕೊಡುತ್ತಾರೆ, ಬೋರ್ವೆಲ್ ಗಿಂತಲೂ ರೈತರಿಗೆ ಜಮೀನಿನಲ್ಲಿ ಬಾವಿ ಉತ್ತಮ.!
* ಪ್ಲಾಸ್ಟರಿಂಗ್ ಗೆ ಪಿ ಸ್ಯಾಂಡ್ ಬಳಸಬೇಕು, ಮತ್ತು ಒಂದೇ ಬಾರಿಗೆ ಮನೆಗೆ ಪೂರ್ತಿ ಆಗುವಷ್ಟು ಲೆಕ್ಕ ಹಾಕಿ ತರುವುದರಿಂದ ಎಲ್ಲಾ ಕಡೆ ಒಂದೇ ರೀತಿಯಾಗಿ ಬರುತ್ತದೆ.
* PPC or 43 ಗ್ರೇಡ್ ಸಿಮೆಂಟ್ ಬಳಸಿದರೆ ಉತ್ತಮ (ಜುವಾರಿ ಸಿಮೆಂಟ್, ಪ್ರಿಯಾ ಸಿಮೆಂಟ್, ಮಹಾ ಸಿಮೆಂಟ್) ಮತ್ತು ಈ ಸಿಮೆಂಟ್ ಮೂರು ತಿಂಗಳಿಗಿಂತ ಹಳೆಯದಾಗಿರಬಾರದು, ಸಿಮೆಂಟ್ ಹಳೆಯದಾದಷ್ಟು ಕ್ರಾಕ್ ಬೀಳುವ ಸಾಧ್ಯತೆ ಇರುತ್ತದೆ.