ಹೊಸ ಬೈಕ್ ಅಥವಾ ಕಾರು ಖರೀದಿ ಮಾಡುವವರಿಗೆ ಬೇಸರದ ಸುದ್ದಿ, ವಾಹನಗಳ ಮೇಲೆ ತೆರಿಗೆ ಇನ್ನಷ್ಟು ಹೆಚ್ಚಳ.!

ಈಗಾಗಲೇ ಜನರು ಬೆಲೆ ಏರಿಕೆಯಿಂದಾಗಿ ಬಹಳ ಸಂಕಷ್ಟದಲ್ಲಿ ಇದ್ದಾರೆ. ಪ್ರತಿನಿತ್ಯ ವ್ಯತ್ಯಾಸವಾಗುತ್ತಿರುವ ನಿತ್ಯ ಅಗತ್ಯತೆ ವಸ್ತುಗಳ ಬೆಲೆ ಬಡ ಹಾಗೂ ಮಧ್ಯಮ ವರ್ಗದವರ ತಲೆ ಬಿಸಿಗೆ ಕಾರಣವಾಗಿದೆ. ಇದರ ನಡುವೆ ಸರಕಾರದಿಂದ ವಿಧಿಸಲಾಗುತ್ತಿರುವ ತೆರಿಗೆ ಕೂಡ ಹೆಚ್ಚಳವಾಗುತ್ತಿರುವುದು ಬಹಳ ಬೇಸರದ ಸಂಗತಿಯಾಗಿದೆ.

WhatsApp Group Join Now
Telegram Group Join Now

ಈ ಬಾರಿ ಸರ್ಕಾರ ಮತ್ತೊಮ್ಮೆ ವಾಹನಗಳ ಮೇಲಿನ ತೆರಿಗೆ ಹೆಚ್ಚಿಸಿ ವಾಹನ ಖರೀದಿ ಮಾಡುವವರಿಗೆ ಬಿಗ್ ಶಾಕ್ ನೀಡಿದೆ. ಈ ಕುರಿತಾದ ವರದಿಯೊಂದನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಹೊಸದಾಗಿ ಬೈಕ್ ಅಥವಾ ಕಾರು ಕೊಂಡುಕೊಳ್ಳಬೇಕು ಎಂದು ಯೋಚಿಸುತ್ತಿದ್ದರೆ ಸರ್ಕಾರದ ಹೊಸ ನಿಯಮದ ಪ್ರಕಾರ ನಿಮಗೆ ಈ ಹಿಂದಿನ ಬಜೆಟ್ ಗಿಂತ ಸ್ವಲ್ಪ ದುಬಾರಿಯಾಗಬಹುದು.

ದೇಶದಲ್ಲಿನ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕದಲ್ಲಿ ಹೆಚ್ಚು ರಸ್ತೆ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಈಗಾಗಲೇ ವಾಹನ ಮಾಲೀಕರು ಸಾಕಷ್ಟು ನ’ಷ್ಟ ಅನುಭವಿಸುತ್ತಿದ್ದಾರೆ. ಇದರ ಮಧ್ಯೆ ರಾಜ್ಯ ಸರ್ಕಾರ ಮತ್ತೊಮ್ಮೆ ಹೊಸ ವಾಹನ ಖರೀದಿ ಮಾಡುತ್ತಿರುವವರಿಗೆ ಅಪ್ಡೇಟ್ ಬಿಡುಗಡೆ ಮಾಡಿ ಬಿಗ್ ಶಾ’ಕ್ ನೀಡಿದೆ.

ಈ ಸುದ್ದಿ ಓದಿ:- ಹೊಸ ಮನೆ ಕಟ್ಟುವವರಿಗೆ ಸಿಹಿ ಸುದ್ದಿ.! ಈ ಬ್ಯಾಂಕ್’ಗಳಲ್ಲಿ ಸಿಗಲಿದೆ ಅತೀ ಕಡಿಮೆ ಬಡ್ಡಿಗೆ ಸಾಲ.!

ಈ ವರ್ಷದಲ್ಲಿ ಬೈಕ್ ಅಥವಾ ಕಾರು ಖರೀದಿ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿದ್ದರೂ ಸರ್ಕಾರದ ನೂತನ ನಿಯಮದ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ. ಪ್ರಸ್ತುತವಾಗಿ ಕರ್ನಾಟಕ ಸರ್ಕಾರವು ಹೊಸ ವಾಹನ ನೋಂದಣಿಗೆ ಹೆಚ್ಚುವರಿ 3% ಸೆಸ್ ವಿಧಿಸಿದೆ. ಇದಲ್ಲದೇ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿ ನಮ್ಮ ನೆರೆಹೊರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ದುಬಾರಿಯಾಗಿದೆ.

ರಾಜ್ಯ ಸರ್ಕಾರದ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ಕಾಯಿದೆ, 2024ಕ್ಕೆ ರಾಜ್ಯಪಾಲರು ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ. ಹೊಸ ಕಾಯ್ದೆಯ ಪ್ರಕಾರ, ಹೊಸ ವಾಣಿಜ್ಯ ವಾಹನ ನೋಂದಣಿಗೆ ಹೆಚ್ಚುವರಿ 3% ಸೆಸ್ ಮತ್ತು ವಾಹನದ ಒಟ್ಟು ಮೌಲ್ಯದ 10% ಜೀವಿತಾವಧಿಯಲ್ಲಿ ಪಾವತಿಸಲಾಗುತ್ತದೆ. 25 ಲಕ್ಷಕ್ಕಿಂತ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳ ಮೇಲೆ ವಾಹನದ ಒಟ್ಟು ಮೌಲ್ಯದ 10% ಜೀವಮಾನ ತೆರಿಗೆಯಾಗಿ ಪಾವತಿಸಬೇಕಾಗುತ್ತದೆ.

ಈ ಸುದ್ದಿ ಓದಿ:- ರೈಲ್ವೆ ಇಲಾಖೆಯಿಂದ ಮಹಿಳೆಯರಿಗೆ ಬಂಪರ್ ಗಿಫ್ಟ್.! ಇನ್ಮುಂದೆ ಈ ಸೇವೆಗಳು ಉಚಿತವಾಗಿ ಸಿಗಲಿದೆ.!

ಈಗಾಗಲೇ ರಾಜ್ಯದಲ್ಲಿ ಶೇ.10ರಷ್ಟು ಮೂಲಸೌಕರ್ಯ ಸೆಸ್, ಶೇ.1ರಷ್ಟು ನಗರ ಸಾರಿಗೆ ಸೆಸ್ ವಿಧಿಸಲಾಗುತ್ತಿದೆ, ಒಟ್ಟು ಶೇ.11ರಷ್ಟು ಸೆಸ್ ವಿಧಿಸಲಾಗುತ್ತಿದೆ, ಈಗ ಹೆಚ್ಚುವರಿ ಸೆಸ್ ಕೂಡ ಜಾರಿಗೆ ಬಂದಿದೆ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವಾಹನ ಖರೀದಿ ದುಬಾರಿಯಾಗುತ್ತಿದೆ.

ತೆರಿಗೆ ಹೆಚ್ಚಾದರೆ ಕಾರು ಖರೀದಿದಾರರು ಇನ್ನಷ್ಟು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎನ್ನುವುದು ವಾಹನ ಖರೀದಿ ನಿರೀಕ್ಷೆಯಲ್ಲಿದ್ದವರ ಬೇಸರ. ಸರ್ಕಾರದ ಈ ನಿಯಮವನ್ನು ಬದಲಾಯಿಸಿ ಅಥವಾ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡಿ ಗ್ರಾಹಕರಿಗೆ ಅನುಕೂಲತೆ ಮಾಡಿಕೊಳ್ಳಲಿ ಎನ್ನುವುದು ಹಲವರ ಆಶಯ ಮತ್ತು ಕೋರಿಕೆ ಕೂಡ.

ಈ ಸುದ್ದಿ ಓದಿ:- KSRLPS ನೇಮಕಾತಿ 2024, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ

ಎಲೆಕ್ಟ್ರಿಕಲ್ ವಾಹನ ಬಳಕೆ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ ಅನೇಕರು ವಾಹನ ಖರೀದಿಗೆ ಮುಂದಾಗಿದ್ದಾರೆ ಮತ್ತು ಜನರ ಜೀವನ ಮಟ್ಟವು ಸುಧಾರಿಸುತ್ತಿದ್ದು ಬೈಕ್ ಕಾರು ಖರೀದಿಗೆ ಪ್ಲಾನ್ ಹಾಕಿಕೊಂಡಿದ್ದವರಿಗೆ ಸರ್ಕಾರ ಈ ನಿಯಮ ಚಿಂತೆಗೀಡು ಮಾಡಿದೆ.

ಇದೆಲ್ಲವನ್ನು ಅರಿತು ಸರ್ಕಾರವು ಜನಸಾಮಾನ್ಯನ ಸಮಸ್ಯೆಗೆ ಸ್ಪಂದಿಸಿ ಈ ನಿಟ್ಟಿನಲ್ಲಿ ಯಾವುದಾದರೂ ಮಹತ್ವದ ತೀರ್ಮಾನಕ್ಕೆ ಬರುತ್ತದೆಯೇ ಎಂದು ನಾವು ಕೂಡ ಕಾದು ನೋಡಬೇಕಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ಈ ಸುದ್ದಿ ಓದಿ:- ಸ್ಕೂಟರ್ ಖರೀದಿಗೆ ಸರ್ಕಾರದಿಂದ ಸಿಗಲಿದೆ 40,000 ಸಹಾಯಧನ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now