18 ವರ್ಷ ತುಂಬಿದ ವ್ಯಕ್ತಿಯು ಮತದಾನದ ಹಕ್ಕನ್ನು (Voting rights) ಪಡೆಯುತ್ತಾನೆ. ಗ್ರಾಮ ಪಂಚಾಯಿತಿ, ವಿಧಾನಸಭಾ ಚುನಾವಣೆಗಳು ಹಾಗೂ ಲೋಕಸಭಾ ಚುನಾವಣೆಗಳಲ್ಲಿ ನಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದರೆ ಭಾರತೀಯ ಚುನಾವಣಾ ಆಯೋಗದ (ECI) ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡು ಮತದಾನದ ಚೀಟಿಯನ್ನು (Voter ID) ಪಡೆದಿರಬೇಕು.
ಇದರಲ್ಲಿ ಹೆಸರು, ವಯಸ್ಸು, ಹುಟ್ಟಿದ ದಿನಾಂಕ, ವಿಳಾಸ, ಮತಗಟ್ಟೆ ಕ್ಷೇತ್ರ ಇತ್ಯಾದಿ ವಿವರಗಳು ಇರುತ್ತವೆ. ಇದನ್ನು ಗುರುತಿನ ಚೀಟಿಯಾಗಿ (POI) ಮತ್ತು ವಿಳಾಸದ ಪುರಾವೆಯಾಗಿ (POA) ಬಳಸಬಹುದು. ಲೋಕಸಭಾ ಚುನಾವಣೆ ಇನ್ನೇನು ಹತ್ತಿರದಲ್ಲಿದೆ. ನೀವು 18 ವರ್ಷ ತುಂಬಿದ್ದು ಚುನಾವಣೆಯಲ್ಲಿ ಮತದಾನ ಮಾಡಬೇಕು ಎಂದರೆ ಮತ್ತೆ ಈ ಗುರುತಿನ ಚೀಟಿ ಪಡೆದಿರಬೇಕು.
ಹಾಗೆಯೇ ನೀವೇನಾದರೂ ವಿಳಾಸ ಬದಲಾಯಿಸಿದ್ದರೆ ಇನ್ನು ಮುಂದೆ ಅದೇ ನಿಮ್ಮ ಅಧಿಕೃತ ವಿಳಾಸವಾಗಿದ್ದರೆ ಅದನ್ನು ಕೂಡ ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಮುಖ್ಯವಾದ ವಿಷಯವೇನೆಂದರೆ, ಭಾರತೀಯ ಚುನಾವಣಾ ಆಯೋಗವು ನಾಗರಿಕರಿಗೆ ಕೆಲವು ಕಾರ್ಯಗಳನ್ನು ಆನ್ಲೈನ್ನಲ್ಲಿ ಮಾಡಲು ಅನುಮತಿಸುತ್ತದೆ.
ಈ ಸುದ್ದಿ ಓದಿ:- PDO ಹುದ್ದೆಗಳಿಗೆ ಅರ್ಜಿ ಆಹ್ವಾನ ವೇತನ 70,850 ಆಸಕ್ತರು ಅರ್ಜಿ ಸಲ್ಲಿಸಿ.!
ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಹೊಸ ಮತದಾರ ಚೀಟಿಯನ್ನು ಪಡೆಯಬಹುದು ಅಥವಾ ತಿದ್ದುಪಡಿ ಇದ್ದರೆ ಇದನ್ನು ಕೂಡ ಆನ್ಲೈನ್ ನಲ್ಲಿ ಮಾಡಬಹುದು. ಈ ವಿಚಾರವಾಗಿ ಮತ್ತೊಂದು ಪ್ಲಸ್ ಪಾಯಿಂಟ್ ಏನೆಂದರೆ ಮೊಬೈಲ್ ನಲ್ಲಿಯೇ ಸರಿ ಮಾಡಿಕೊಳ್ಳಲು ಕೂಡ ಅನುಮತಿಸಲಾಗಿದೆ. ಹೊಸದಾಗಿ ನೋಂದಾಯಿಸಿಕೊಳ್ಳಲು ಹಾಗೂ ತಿದ್ದುಪಡಿ ಇದ್ದರೆ ಸರಿ ಮಾಡಿಕೊಳ್ಳಲು ವಿವಿಧ ಆಪ್ಷನ್ ನೀಡಲಾಗಿದೆ ಇದರ ಕುರಿತ ವಿವರ ಸಂಪೂರ್ಣವಾಗಿ ತಿಳಿದುಕೊಳ್ಳಲು ಲೇಖನವನ್ನು ಪೂರ್ತಿಯಾಗಿ ಓದಿ.
1. ನೀವು ಇತ್ತೀಚೆಗೆ ನಿಮ್ಮ ನಿವಾಸವನ್ನು ಬದಲಾಯಿಸಿದ್ದರೆ ಅಥವಾ ಹೊಸ ನಗರಕ್ಕೆ ಸ್ಥಳಾಂತರಗೊಂಡಿದ್ದರೆ, ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ವೆಬ್ಸೈಟ್ನಲ್ಲಿ ಫಾರ್ಮ್ 8 (Form 8) ನ್ನು ಭರ್ತಿ ಮಾಡುವ ಮೂಲಕ ಮತದಾರರ ಗುರುತಿನ ಚೀಟಿಯಲ್ಲಿ ನಿಮ್ಮ ವಿಳಾಸವನ್ನು ನೀವು ಸುಲಭವಾಗಿ ಮಾರ್ಪಡಿಸಬಹುದು.
* ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ಗೆ www.nvsp.in ಭೇಟಿ ನೀಡಿ
* ಮುಖಪುಟದಲ್ಲಿ ಮತದಾರರ ಪಟ್ಟಿಯಲ್ಲಿನ ನಮೂದುಗಳ ಸಂಪಾದನೆ (Editing Entries in Voter List) ಆಪ್ಷನ್ ಕ್ಲಿಕ್ ಮಾಡಿ.
* ಫಾರ್ಮ್-8 ಆಯ್ಕೆ ಕ್ಲಿಕ್ ಮಾಡಿ, ಅಗತ್ಯ ವಿವರಗಳನ್ನು ಭರ್ತಿ ಮಾಡಿ ಮತ್ತು ಸ್ವಯಂ ಆಯ್ಕೆಮಾಡಿ ಸಲ್ಲಿಸು(Submit) ಕ್ಲಿಕ್ ಮಾಡಿ.
ಈ ಸುದ್ದಿ ಓದಿ:-ಮಹಿಳೆಯರಿಗೆ ಸಿಗಲಿದೆ ಬಡ್ಡಿ ಇಲ್ಲದೆ 5 ಲಕ್ಷ ರೂ ಸಾಲ.! ಆಸಕ್ತರು ಅರ್ಜಿ ಸಲ್ಲಿಸಿ.!
* ಶಿಫ್ಟಿಂಗ್ ಆಫ್ ರೆಸಿಡೆನ್ಸ್(Shifting of Resisdence ) ಎಂಬ ಆಪ್ಷನ್ ಸೆಲೆಕ್ಟ್ ಮಾಡಿ
* ನಿಮ್ಮ ವಿಳಾಸ ಬದಲಾವಣೆಯ ಪ್ರಕಾರವನ್ನು ಆರಿಸಿ ರಾಜ್ಯ, ಜಿಲ್ಲೆ, ಕ್ಷೇತ್ರಗಳ ಮಾಹಿತಿಯನ್ನು ಭರ್ತಿ ಮಾಡಿ.
* ಆಧಾರ್ ಸಂಖ್ಯೆ, ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ಇತ್ಯಾದಿ ದಾಖಲೆಗಳನ್ನು ಸಲ್ಲಿಸಿ.
2. ಚುನಾವಣಾ ಆಯೋಗದ ವೆಬ್ಸೈಟ್ ಮೂಲಕವು ಬದಲಾಯಿಸಬಹುದು :-
* ಮೊದಲಿಗೆ https://voterportal.eci.gov.in/ ಅಥವಾ ಮತದಾರರ ಸಹಾಯವಾಣಿ ಆಪ್ ಡೌನ್ಲೋಡ್ ಮಾಡಿಕೊಳ್ಳಿ
* ವೆಬ್ಸೈಟ್ ಅಥವಾ ಆಪ್ನಲ್ಲಿ, ನಿಮ್ಮ ರಾಜ್ಯವನ್ನು ಹುಡುಕಿ ಆರಿಸಿ
* ಫಾರ್ಮ್ 8A ನ್ನು ಆಯ್ಕೆಮಾಡಿ.
* ನಿಮ್ಮ ವೈಯಕ್ತಿಕ ಮತ್ತು ವಿಳಾಸದಂತಹ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಫಾರ್ಮ್ನಲ್ಲಿ ಭರ್ತಿ ಮಾಡಿ. ನೀವು ಮಾಡಲು ಬಯಸುವ ಬದಲಾವಣೆಗಳನ್ನು ಸೂಚಿಸಿ.
* ಪೂರಕ ದಾಖಲೆಗಳಾಗಿ ಆಧಾರ್ ಕಾರ್ಡ್(Aadhar card) ಅಥವಾ ಪಾಸ್ಪೋರ್ಟ್(Pass port)ನಂತಹ ಸಂಬಂಧಿತ ದಾಖಲೆಯನ್ನು ಅಪ್ಲೋಡ್ ಮಾಡಿ.
* ಫಾರ್ಮ್ ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಿ
* ಅರ್ಜಿ ಸಬ್ಮಿಟ್ ಆದ ನಂತರ, ಅರ್ಜಿ ಸ್ವೀಕೃತಿ ಸಂಖ್ಯೆ(Reference number) ಪಡೆಯಿರಿ. ಈ ಸಂಖ್ಯೆಯನ್ನು ಬಳಸಿಕೊಂಡು ನೀವು ನಿಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್(Track) ಮಾಡಬಹುದು.
ಈ ಸುದ್ದಿ ಓದಿ:-ಮಾರ್ಚ್ 25ರ ಒಳಗೆ ಎಲ್ಲಾ ಮಹಿಳೆಯರು ಪುರುಷರು ಈ ಕೆಲಸ ಮಾಡಿ, ಇಲ್ಲದಿದ್ರೆ ಗೃಹಲಕ್ಷ್ಮಿ, ಅಕ್ಕಿಹಣ, ಯುವನಿಧಿ ಸರ್ಕಾರದಿಂದ ಬರುವ ಎಲ್ಲಾ ಹಣ ಬಂದ್ ಆಗುತ್ತೆ.!
3. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ವಿಧಾನ:-
* https://voters.eci.gov.in ವೆಬ್ ಸೈಟ್ ಗೆ ಲಾಗಿನ್ ಆಗಿ ಆನ್ ಲೈನ್ ಮೂಲಕ ಸಲ್ಲಿಸಬಹುದು,
* ಅಥವಾ ಬೂತ್ ಮಟ್ಟದ ಅಧಿಕಾರಿ ಅಥವಾ ಮತದಾರರ ನೋಂದಣಾಧಿಕಾರಿ ಕಛೇರಿಗೆ ಭೇಟಿ ನೀಡಿಯೂ ಅರ್ಜಿ ಸಲ್ಲಿಸಬಹುದು.