ಸಮುದ್ರದ ತೀರದಲ್ಲಿ ನಿಂತು ಭರ್ಜರಿ ಸ್ಟೆಪ್ ಹಾಕಿದ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋ ನೋಡಿ.

ಅಣ್ಣ ತಂಗಿ, ತವರಿಗೆ ಬಾ ತಂಗಿ ಎಂಬ ಸಿನಿಮಾಗಳು ಅಂದ ತಕ್ಷಣ ನಮಗೆ ನೆನಪಾಗುವುದು ಶಿವಣ್ಣ ಮತ್ತು ರಾಧಿಕಾ ಕುಮಾರಸ್ವಾಮಿ ಅವರು. ಇವರಿಬ್ಬರ ಕಾಂಬಿನೇಶನ್ ನಲ್ಲಿ ಅದ್ಭುತವಾಗಿ ಮೂಡಿ ಬಂದ ಅಣ್ಣ ತಂಗಿಯ ಸಂಬಂಧದ ಈ ಚಿತ್ರಗಳು ಸ್ಯಾಂಡಲ್ವುಡ್ ನಲ್ಲಿ ಬಾರಿ ಅಲೆಯನ್ನೇ ಎಬ್ಬಿಸಿ ಸದ್ದು ಮಾಡಿದ್ದವು. ರಾಧಿಕಾ ಕುಮಾರಸ್ವಾಮಿ ಅವರ ಬಗ್ಗೆ ಹೇಳುವುದಾದರೆ ಇವರು ಒಂದು ಕಾಲದಲ್ಲಿ ಕನ್ನಡದ ಬಹು ಬೇಡಿಕೆಯ ನಟಿಯಾಗಿದ್ದು ಸುಮಾರು ಚಿತ್ರಗಳಲ್ಲಿ ನಟಿಸಿದ್ದಾರೆ. 2000 ನೇ ವರ್ಷದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಧಿಕಾ ಅವರು ತಮ್ಮ ಸುಂದರವಾದ ಮನೋಜ್ಞ ಅಭಿನಯದ ಮೂಲಕ ಕನ್ನಡಿಗರ ಮನಸ್ಸನ್ನು ಗೆಲ್ಲುವುದಲ್ಲದೆ ತಮ್ಮ ಗ್ಲಾಮರ್ ಲುಕ್ ನಿಂದ ಪಡ್ಡೆ ಹುಡುಗರ ಹೃದಯ ಕೂಡ ಕದ್ದಿದ್ದ ಚೆಲುವೆ ಆಗಿದ್ದರು.

WhatsApp Group Join Now
Telegram Group Join Now

ತಾವು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಕನ್ನಡದ ನೀಲ ಮೇಘ ಶ್ಯಾಮ ಚಿತ್ರದ ಮೂಲಕ ತಮ್ಮ ಬಣ್ಣದ ಲೋಕಕ್ಕೆ ನಾಂದಿ ಹಾಡುತ್ತಾರೆ. ನ೦ತರ ವಿಜಯ್ ರಾಘವೇಂದ್ರ ಅವರ ಜೊತೆ “ನಿನಗಾಗಿ” ಎಂಬ ಮೊದಲ ಚಿತ್ರದಲ್ಲಿ ನಟಿಸಿ 2003 ರಲ್ಲಿ 5 ಚಿತ್ರದಲ್ಲಿ ಕಾಣಿಸಿಕೊಂಡರು. ಹೇಮಂತ್ ಹೆಗ್ಡೆಯ ನಿರ್ದೇಶನದಲ್ಲಿ “ಒಹ್ ಲಾ ಲಾ ಲಾ” ಎಂಬ ಚಿತ್ರವನ್ನು ಮಾಡಿದ ಇವರು ಎಸ್.ಪಿ.ಬಿ ಚರಣ್ ರವರ ಜೊತೆಗೆ “ಹುಡುಗಿಗಾಗಿ” ಚಿತ್ರ ಯೋಗರಾಜ್ ಭಟ್ ರವರ ಮೊದಲ ಚಿತ್ರ “ಮಣಿ” ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. “ಮನೆ ಮಗಳು” ಹಾಗೂ “ತಾಯಿ ಇಲ್ಲದ ತಬ್ಬಲಿ” ಚಿತ್ರಗಳಲ್ಲಿ ಅಭಿನಯಿಸಿ ತಾಯಿ ಇಲ್ಲದ ತಬ್ಬಲಿ ಚಿತ್ರದಲ್ಲಿ ಗೌರಿ ಪಾತ್ರಕ್ಕೆ “ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ” ಯನ್ನು ಪಡೆದಿದ್ದಾರೆ.

2007 ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ರವರ ಜೊತೆ “ಅನಾಥರು” ಚಿತ್ರವನ್ನು ಮಾಡಿ ನಂತರ ಶಿವರಾಜ್ ಕುಮಾರ್ ಅವರ  ಜೊತೆಯಲ್ಲಿ “ಅಣ್ಣ ತಂಗಿ” ಹಾಗೂ “ತವರಿಗೆ ಬಾ ತಂಗಿ” ಚಿತ್ರಗಳಲ್ಲಿ ಶಿವಣ್ಣ ಅವರ ತಂಗಿಯ ಪಾತ್ರವನ್ನು ನಿಭಾಯಿಸಿ ಇಂದಿಗೂ ಜನ ಮಾನಸಗಳಲ್ಲಿ ಉತ್ತಮ ನಟಿಯಾಗಿದ್ದಾರೆ. ಸುಮಾರು 20 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಇವರು ಪರ ಭಾಷೆಗಳ ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡು ತಮ್ಮ ನಟನೆಯ ಛಾಪನ್ನು ಮೂಡಿಸಿದ್ದಾರೆ ಅಲ್ಲದೇ ತಮಿಳುನಾಡಿನ ಚಿತ್ರರಂಗದಲ್ಲಿ ಕುಟ್ಟಿ ರಾಧಿಕಾ ಎಂದೇ ಪ್ರಸಿದ್ದಿಯಾಗಿದ್ದಾರೆ.

ಕೆಲವು ಚಿತ್ರಗಳ ಸಕ್ಸಸ್ ನಂತರ ಕನ್ನಡದಲ್ಲಿ ಸಾಲು ಸಾಲು ಪ್ಲಾಪ್ ಚಿತ್ರಗಳ ಸೋಲಿನ ರುಚಿಯನ್ನು ಕಂಡ ರಾಧಿಕಾ ಸುಮಾರು ವರ್ಷಗಳ ಕಾಲ ಚಿತ್ರರಂಗದಿಂದ ಮರೆಯಾಗಿ ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೆ ಹೋಗಿ ಅಲ್ಲಿಯೂ ಕೆಲವು ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿದ ಮೇಲೆ ಮತ್ತೆ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕಿ ಆಗುವ ಮೂಲಕ ಕಮ್ ಬ್ಯಾಕ್ ಆಗುತ್ತಾರೆ. ಮೊದಲು ರತನ್ ಕುಮಾರ್ ಎನ್ನುವವರ ಜೊತೆಗೆ ವಿವಾಹವಾಗಿ ವಿ.ಚ್ಚೇ.ದ.ನ.ದ ನಂತರ 2010 ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ವಿವಾಹವಾಗಿ ಶಮಿಕ ಎಂಬ ಹೆಣ್ಣು ಮಗು ಕೂಡ ಆಗುತ್ತದೆ.

ತನ್ನ ಮಗಳ ಹೆಸರನ್ನೇ ತನ್ನ ನಿರ್ಮಾಣದ ಹೆಸರನ್ನಾಗಿಸಿ ಶಮಿಕ ಬ್ಯಾನರ್ ಅಡಿಯಲ್ಲಿ ಲಕ್ಕಿ ಹಾಗೂ ಸ್ವೀಟಿ ನನ್ನ ಜೋಡಿ ಎಂಬ ಎರಡು ಚಿತ್ರಗಳನ್ನು ನಿರ್ಮಿಸುತ್ತಾರೆ. ಇವೆರಡು ಚಿತ್ರ ನಿರ್ಮಾಣದ ನಂತರ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳದ ರಾಧಿಕಾ ಅವರು ಸಮುದ್ರ ತೀರವೊಂದರಲ್ಲಿ ರೀಲ್ಸ್ ಸಾಂಗ್ ಒಂದಕ್ಕೆ ಭರ್ಜರಿ ಸ್ಟೆಪ್ಸ್ ಆಕುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now