ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಹಣ ಬರದೆ ಇದ್ದವರು ಹೀಗೆ ಮಾಡಿ ಒಟ್ಟಿಗೆ ಎಲ್ಲಾ ಹಣ ಜಮೆ‌ ಆಗುತ್ತೆ.!

ಗೃಹಲಕ್ಷ್ಮಿ ಹಣ, ಅಕ್ಕಿ ಹಣ, ಯುವನಿಧಿ ಹಣ ಅಥವಾ ಇನ್ಯಾವುದೇ ಸರ್ಕಾರಿ ಯೋಜನೆಗಳ ಹಣ ಜಮೆ ಆಗಿದೆಯೇ ಇಲ್ಲವೇ ಎನ್ನುವುದನ್ನು ಬ್ಯಾಂಕ್ ಗೆ ಹೋಗದೆ ಮೊಬೈಲ್ ಮೂಲಕವೇ ನಿಮಿಷಗಳಲ್ಲಿ ತಿಳಿದುಕೊಳ್ಳಬಹುದು ಹೇಗೆ ಅಂತ ನೋಡಿ.!

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಾದ (Karnataka Government Gyaranty Schemes) ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆ ಹಣವು ನೇರವಾಗಿ DBT ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ.

ಆದರೆ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ ಹೊಂದಿದ್ದವರಿಗೆ ಒಂದೊಂದು ತಿಂಗಳು ಒಂದೊಂದು ಅಕೌಂಟಿಗೆ ಹಣ ಜಮೆ ಆಗಿ, ಇದರಲ್ಲಿ ಆಕ್ಟಿವ್ ಇಲ್ಲದ ಅಥವಾ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಕಳೆದು ಹೋಗಿರುವ ಬ್ಯಾಂಕ್ ಖಾತೆಗೂ ಹಣ ಜಮೆ ಆಗಿರುವ ಸಾಧ್ಯತೆ ಇದೆ. ಹಾಗಾಗಿ ನಿಮಗೆ ಈ ಯೋಜನೆಗಳ ಹಣ ಬಂದಿದೆಯೇ? ಇಲ್ಲವೇ? ಎನ್ನುವ ಕನ್ಫ್ಯೂಷನ್ ಆಗುತ್ತದೆ.

ಈ ಸುದ್ದಿ ಓದಿ:- ಖಾಸಗಿ ಶಾಲೆಯಲ್ಲಿ ಉಚಿತ ಅಡ್ಮಿಷನ್’ಗೆ ಅರ್ಜಿ ಆಹ್ವಾನ.! ಯಾವುದೇ ಫೀಸ್ ಇಲ್ಲದೆ ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಉಚಿತವಾಗಿ ಕೊಡಿಸಿ.!

ಈ ಯೋಜನೆಗಳು ಮಾತ್ರವಲ್ಲದೇ ಸರ್ಕಾರದಿಂದ ಯಾವುದೇ ಯೋಜನೆಯ ಅನುದಾನ ನಿಮಗೆ ದೊರೆತಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಕರ್ನಾಟಕ ಸರ್ಕಾರ ಡಿಬಿಟಿ ಕರ್ನಾಟಕ (DBT Karnataka app) ಎನ್ನುವ ಆಪ್ ಪರಿಚಯಿಸಿದೆ.

ನಿಮ್ಮ ಆಧಾರ್ ಕಾರ್ಡ್ (Aadhar No.) ದಾಖಲೆಯನ್ನು ಒಂದನ್ನು ನೀಡಿ ನೀವು ನಿಮ್ಮ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಗೆ ಯಾವ ಯೋಜನೆಗಳಿಗಿಂತ ಹಣ ಜಮೆ ಆಗಿದೆ ಎಷ್ಟು ತಿಂಗಳ ಹಣ ಜಮೆ ಆಗಿದೆ ಇತ್ಯಾದಿ ಸಂಪೂರ್ಣ ಮಾಹಿತಿ ಪಡೆಯಬಹುದು ಇದು ಹೇಗೆ ಎನ್ನುವ ವಿವರ ಹೇಗಿದೆ ನೋಡಿ.

* ಮೊದಲಿಗೆ ಪ್ಲೇಸ್ಟೋರ್ ಗೆ ಹೋಗಿ DBT ಕರ್ನಾಟಕ ಆಪ್ ಡೌನ್ಲೋಡ್ ಮಾಡಿಕೊಳ್ಳಿ
* ಯಾರ ಬ್ಯಾಂಕ್ ಡೀಟೇಲ್ಸ್ ಚೆಕ್ ಮಾಡಬೇಕು ಅವರ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ
* ನಂತರ ನಿಮ್ಮ ಮೊಬೈಲ್ ಗೆ ಬರುವ OTP ನಮೂದಿಸಿ, verify OTP ಮೇಲೆ ಕ್ಲಿಕ್ ಮಾಡಿ ತಕ್ಷಣ ನಿಮ್ಮ ಆಧಾರ್ ಕಾರ್ಡ್ ಡೀಟೇಲ್ಸ್ ಕಾಣಿಸುತ್ತದೆ.

ಈ ಸುದ್ದಿ ಓದಿ:- ಹೊಸ ವೋಟರ್ ಐಡಿ ಗೆ ಅರ್ಜಿ ಸಲ್ಲಿಸಲು ತಿದ್ದುಪಡಿ ಮಾಡಿಸಲು ಕಡೇ ಅವಕಾಶ, ಮೊಬೈಲ್ ನಲ್ಲೇ ಅಪ್ಲೈ ಮಾಡವ ವಿಧಾನ ಇಲ್ಲಿದೆ ನೋಡಿ.!

* ಇಲ್ಲಿ ನೀವು ಪಾಸ್ವರ್ಡ್ ನ್ನು ಸೆಟ್ (Set Password) ಮಾಡಬೇಕಾಗುತ್ತದೆ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ, Confirm mPIN ಹಾಕಿ, Submit ಮೇಲೆ ಕ್ಲಿಕ್ ಮಾಡಿ
* ಈಗ ಹೋಂ ಪೇಜ್ ನಲ್ಲಿ ನೀವು Payment status ಎಂದು ಇರುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

* ಗೃಹಲಕ್ಷ್ಮಿ, ಅನ್ನಭಾಗ್ಯ, ಯುವ ನಿಧಿ ಅಥವಾ ಪಿಂಚಣಿ ಯೋಜನೆಗಳು ಇತ್ಯಾದಿ ಆಪ್ಷನ್ ಗಳು ಇರುತ್ತವೆ. ಇದರಲ್ಲಿ ಯಾವುದಾದರೂ ಸೆಲೆಕ್ಟ್ ಮಾಡಿ ಆ ಯೋಜನೆ ಮೂಲಕ ಹಣ ಜಮೆ ಆಗಿರುವ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು. ಮತ್ತು ಪಕ್ಕದಲ್ಲಿರುವ Seeding status of Adhaar in bank account ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಆಧಾರ್ ಸೀಡಿಂಗ್ ಸ್ಟೇಟಸ್ ಅನ್ನು ಮತ್ತು ಯಾವ ಬ್ಯಾಂಕಿಗೆ ಆಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

* ನಿಮಗೆ ಸರ್ಕಾರದಿಂದ ಇದುವರೆಗೂ ಬಂದಿರುವ ಯಾವುದೇ ನೇರ ನಗದು ವರ್ಗಾವಣೆಯ ಸ್ಥಿತಿ ಕಾಣಿಸಿಕೊಳ್ಳುತ್ತದೆ
ಈ ರೀತಿ ಆಪ್ ನಲ್ಲಿ ನಿಮ್ಮ ಬ್ಯಾಂಕ್ ಡೀಟೇಲ್ಸ್ ನೋಡಬೇಕು ಎಂದರೆ ಮೊದಲಿಗೆ ನಿಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು ಮತ್ತು ಅದೇ ಮೊಬೈಲ್ ಸಂಖ್ಯೆಯು ನಿಮ್ಮ ಬ್ಯಾಂಕ್ ಖಾತೆಗೆ ಗೂ ಲಿಂಕ್ ಆಗಿ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿರಬೇಕು.

https://youtu.be/wCz3gTJ5avk?si=Ne1Ahv7iGMCkrsdm

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now