SSLC ಪಾಸಾದವರಿಗೆ ಚಾಲಕ ಹಾಗೂ ಗ್ರೂಪ್ ಡಿ ಹುದ್ದೆಗಳು, ಸರ್ಕಾರಿ ಹುದ್ದೆ ಆಸೆ ಇದ್ದವರು ತಪ್ಪದೆ ಅರ್ಜಿ ಸಲ್ಲಿಸಿ.! ವೇತನ 42,000

 

WhatsApp Group Join Now
Telegram Group Join Now

ಕರ್ನಾಟಕ ವಿಧಾನಸಭಾ ಪರಿಷತ್ತಿನ (KLA) ಸಚಿವಾಲಯದಲ್ಲಿ ಉಳಿಕೆ ಮೂಲ ವೃಂದ ಮತ್ತು ಸ್ಥಳೀಯ ವೃಂದದಲ್ಲಿ (ಕಲ್ಯಾಣ ಕರ್ನಾಟಕ) ಖಾಲಿ ಇರುವ ಚಾಲಕ ಹಾಗೂ ಗ್ರೂಪ್ ಡಿ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. SSLV ಆಗಿದ್ದರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪ್ರಯತ್ನಿಸಬಹುದು ಎನ್ನುವುದು ಬಹಳ ದೊಡ್ಡ ವಿಷಯವಾಗಿದ್ದು ಬಹುತೇಕರಿಗೆ ಇದು ಅನುಕೂಲತೆ ಮಾಡಿ ಕೊಡುತ್ತಿದೆ.

ಕಡಿಮೆ ವಿದ್ಯಾಭ್ಯಾಸ ಹೊಂದಿದ್ದರು ಸರ್ಕಾರಿ ಹುದ್ದೆ ಪಡೆಯಬಹುದು ಎನ್ನುವುದಕ್ಕೆ ಇರುವ ಅವಕಾಶ ಇದಾಗಿದ್ದು ಎಲ್ಲಾ ಅರ್ಹರು ಕೂಡ ಪ್ರಯತ್ನಿಸಲಿ ಎನ್ನುವ ಸದುದ್ದೇಶದಿಂದ ಈ ಲೇಖನದಲ್ಲಿ ನೇಮಕಾತಿಗಳ ಕುರಿತಂತೆ ಏನಿದೆ ಎನ್ನುವ ಪ್ರಮುಖ ಸಂಗತಿಗಳ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ. ತಪ್ಪದೇ ಈ ಉದ್ಯೋಗ ಮಾಹಿತಿಯನ್ನು ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೂ ಹಂಚಿಕೊಳ್ಳಿ.

ಈ ಸುದ್ದಿ ಓದಿ:- RTO ಆಫೀಸಿಗೆ ಹೋಗದೆ ಆನ್ಲೈನ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಿಧಾನ.!

ನೇಮಕಾತಿ ಸಂಸ್ಥೆ:- ಕರ್ನಾಟಕ ವಿಧಾನ ಪರಿಷತ್ ಸಚಿವಾಲಯ
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 32 ಹುದ್ದೆಗಳು

ಹುದ್ದೆಗಳ ವಿವರ:-
* ಡ್ರೈವರ್ – 03 ಹುದ್ದೆಗಳು
* ಗ್ರೂಪ್ ಡಿ – 29 ಹುದ್ದೆಗಳು

ಉದ್ಯೋಗ ಸ್ಥಳ:- ಬೆಂಗಳೂರು

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆ 8ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ ಇಲ್ಲದಿದ್ರೆ ಹಣ ಬರಲ್ಲ.!

ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.21,400 ರಿಂದ ರೂ.42,000 ವೇತನ ಇರುತ್ತದೆ.

ಅರ್ಹತಾ ಮಾನದಂಡಗಳು:-

1. ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
2. ಚಾಲಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೋಟಾರು ಕಾರು / ಭಾರಿವಾಹನಗಳ ಚಾಲನೆಯ ಅಧಿಕೃತ ಚಾಲನಾ ಪರವಾನಗಿ ಹೊಂದಿರಬೇಕು. ಮೋಟಾರು ಕಾರು / ಭಾರಿ ವಾಹನಗಳ ಚಾಲನೆಯಲ್ಲಿ ಮೂರು ವರ್ಷಗಳಿಗಿಂತ ಕಡಿಮೆ ಇಲ್ಲದ ಅನುಭವ ಹೊಂದಿರಬೇಕು.

ಈ ಸುದ್ದಿ ಓದಿ:- ಗಂಡನ ಆಸ್ತಿಯಲ್ಲಿ ವಿಧವೆಗೆ ಪಾಲು ಸಿಗುತ್ತ.? ಕಾನೂನು ಏನು ಹೇಳುತ್ತೆ ಗೊತ್ತ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

3. ಪ್ರಥಮ ಚಿಕಿತ್ಸೆಯ ಪ್ರಮಾಣ ಪತ್ರವನ್ನು ಹೊಂದಿರಬೇಕು
4. ಕನಿಷ್ಠ 18 ವರ್ಷ ಪೂರೈಸಬೇಕು ಸಾಮಾನ್ಯ ವರ್ಗದವರು ಗರಿಷ್ಠ 32 ವರ್ಷ ಮೀರಿರಬಾರದು, ಕೆಲವು ವರ್ಗಗಳಿಗೆ ಮೀಸಲಾತಿ ಕೂಡ ಇದೆ. ಆ ಪ್ರಕಾರವಾಗಿ
* OBC ಅಭ್ಯರ್ಥಿಗಳಿಗೆ ಗರಿಷ್ಟ 38 ವರ್ಷಗಳು
* SC / ST, ಪ್ರವರ್ಗ – 1ರ ಅಭ್ಯರ್ಥಿಗಳಿಗೆ 40 ವರ್ಷಗಳು

ಅರ್ಜಿ ಸಲ್ಲಿಸುವ ವಿಧಾನ:-

* ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು
* ಸರ್ಕಾರಿ ಪುಸ್ತಕ ಮಳಿಗೆಗಳಿಂದ ಅರ್ಜಿ ನಮೂನೆ ಪಡೆದು ಈ ಕೆಳಗೆ ತಿಳಿಸಲಾಗುವ ದಾಖಲೆ ಪ್ರತಿಗಳನ್ನು ಲಗತ್ತಿಸಿ ಕಡೆಯ ದಿನಾಂಕದ ಒಳಗೆ ಈ ಕೆಳಕಂಡ ವಿಳಾಸಕ್ಕೆ ತಲುಪಿಸಬೇಕು.

* ವಿಳಾಸ:-

ಕಾರ್ಯದರ್ಶಿ,
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ,
ಅಂಚೆ ಪೆಟ್ಟಿಗೆ ಸಂಖ್ಯೆ – 5079,
ಮೊದಲನೇ ಮಹಡಿ,
ವಿಧಾನಸೌಧ,
ಬೆಂಗಳೂರು – 560001

* ಲಗತ್ತಿಸಬೇಕಾದ ದಾಖಲೆ ಪ್ರತಿಗಳು:-

* ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರವನ್ನು ಅರ್ಜಿ ಫಾರಂನಲ್ಲಿ ಅಂಟಿಸಿರಬೇಕು ಮತ್ತು ತಾನೆ ಖುದ್ದಾಗಿ ಸಹಿ ಕೂಡ ಮಾಡಿ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ನಮೂದಿಸಿರಬೇಕು
* ಆಧಾರ್ ಕಾರ್ಡ್ ಜೆರಾಕ್ಸ್
* ಶೈಕ್ಷಣಿಕ ಅಂಕಪಟ್ಟಿಗಳ ಜೆರಾಕ್ಸ್
* ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಜೆರಾಕ್ಸ್ ಗಳು
* ಚಾಲನ ಪರವಾನಗಿ ಮತ್ತು ಇನ್ನಿತರ ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವುದಾದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳ ಪ್ರತಿಗಳು

ಈ ಸುದ್ದಿ ಓದಿ:-  5 ಎಕರೆ ಒಳಗೆ ಭೂಮಿ ಇರುವ ಎಲ್ಲಾ ರೈತರಿಗೂ ಸರ್ಕಾರದಿಂದ ವರ್ಷಕ್ಕೆ 31,000 ಸಿಗಲಿದೆ.!

ಆಯ್ಕೆ ವಿಧಾನ:-
* ಚಾಲಕ ಹುದ್ದೆಗಳಿಗೆ ಡ್ರೈವಿಂಗ್ ಟೆಸ್ಟ್ ನಡೆಸಲಾಗುವುದು
* ಗ್ರೂಪ್ ಡಿ ಹುದ್ದೆಗಳಿಗೆ ಸಂದರ್ಶನದ ಮೂಲಕ ಅರ್ಜಿ ಸಲ್ಲಿಸಲಾಗುತ್ತದೆ.

ಅರ್ಜಿ ಶುಲ್ಕ:-

* ಅರ್ಜಿ ಸಲ್ಲಿಸುವ ವಿಳಾಸಕ್ಕೆ ಡಿಡಿ ಮೂಲಕ ಅಥವಾ ಇಂಡಿಯನ್ ಪೋಸ್ಟಲ್ ಆರ್ಡರ್ ಮೂಲಕ ಕಡೆ ದಿನಾಂಕದ ಒಳಗೆ ತಲುಪಿಸಬೇಕು
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ರೂ.600
* 2A, 2B, 3A, 3B ಅಭ್ಯರ್ಥಿಗಳಿಗೆ – ರೂ.300
* ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ರೂ.50
* SC / ST, ಪ್ರವರ್ಗ – 1ರ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ವಿನಾಯಿತಿ ಇದೆ.

‌ಪ್ರಮುಖ ದಿನಾಂಕಗಳು:-

* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 04 ಮಾರ್ಚ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 06 ಏಪ್ರಿಲ್, 2024.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now