ಗ್ರಾಮೀಣ ಪ್ರದೇಶದಲ್ಲೇ ಇರಲಿ ಅಥವಾ ನಗರ ಪ್ರದೇಶದಲ್ಲಿಯೇ ಆಗಲಿ ವಾಸಿಸಲು ಸ್ವಂತ ಮನೆ ಇಲ್ಲದ ಕಾರಣದಿಂದಾಗಿ ಸರ್ಕಾರಿ ಜಾಗಗಳಲ್ಲಿ ಮನೆ ಕಟ್ಟುಕೊಂಡಿದ್ದವರಿಗೆ ಆ ಅಕ್ರಮ ಮನೆಯನ್ನು ಸಕ್ರಮ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದೆ.
ಅಕ್ರಮ ಸಕ್ರಮ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಕೇಳಲಾಗುವ ಪೂರಕ ಸಾಕ್ಷ್ಯಳನ್ನು ಒದಗಿಸಿ ನಿಮ್ಮ ಮನೆಯಲ್ಲಿ ಸಕ್ರಮ ಮಾಡಿಕೊಳ್ಳಬಹುದು. ಆದರೆ ಅನೇಕರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ, ಆದ್ದರಿಂದ ಈ ಲೇಖನದಲ್ಲಿ ಎಲ್ಲರಿಗೂ ಅನುಕೂಲತೆ ಆಗಲಿ ಎನ್ನುವ ಉದ್ದೇಶದಿಂದ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸುವುದು ಹೇಗೆ? ಈ ವಿಧಾನ ಹೇಗಿರುತ್ತದೆ.? ಇತ್ಯಾದಿ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ತಿಳಿಸಿಕೊಡುತ್ತಿದ್ದೇವೆ. ತಪ್ಪದೇ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ಸೈಟ್ ಖರೀದಿ ಮಾಡುವ ಮುನ್ನ ಈ ದಾಖಲೆ ಪರಿಶೀಲನೆ ಮಾಡುವುದು ಕಡ್ಡಾಯ.!
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ಮನೆ ನಕ್ಷೆ
* ಗ್ರಾಮ ಪಂಚಾಯಿತಿ ಅಥವಾ ಪುರಸಭೆ ಅಥವಾ ನಗರ ಸಭೆಯಲ್ಲಿ ಕಂದಾಯ ಕಟ್ಟಿರುವ ರಸೀದಿ
* ಮನೆಯ ಫೋಟೋ
* ಸ್ಥಳೀಯ ಪರಿಚಿತರಿಂದ ಪಂಚನಾಮೆ ಸಹಿ
ಅರ್ಜಿ ಸಲ್ಲಿಸುವ ವಿಧಾನ:-
* ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಜಿ ಫಾರಂ ಸಿಗುತ್ತದೆ. ಆ ಅರ್ಜಿ ಫಾರಂ ತೆಗೆದುಕೊಂಡು ಅದರಲ್ಲಿ ಕೇಳಲಾಗಿರುವ ಸ್ವ-ವಿವರಗಳನ್ನು ಸರಿಯಾಗಿ ತುಂಬಿಸಿ ಈ ಮೇಲೆ ತಿಳಿಸಿದಾಗ ಎಲ್ಲಾ ದಾಖಲೆ ಪ್ರತಿಗಳನ್ನು ಕೂಡ ಲಗತ್ತಿಸಬೇಕು.
* ನಿಮ್ಮ ತಾಲೂಕು ವ್ಯಾಪ್ತಿಗೆ ಬರುವ ಅಟಲ್ ಜಿ ಜನಸ್ನೇಹಿ ಕೇಂದ್ರ ಅಥವಾ ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು
* ಅರ್ಜಿ ಸಲ್ಲಿಸಿದ ಬಳಿಕ ಅವರು ಅರ್ಜಿ ಸ್ವೀಕರಿಸಿ ಒಂದು ಆಕ್ನಾಲಜಿಮೆಂಟ್ ಕೂಡ ಕೊಡುತ್ತಾರೆ. ಇದನ್ನು ತಪ್ಪದೆ ಪಡೆದುಕೊಳ್ಳಬೇಕು. ಯಾಕೆಂದರೆ ಇದರ ಮೂಲಕ ನೀವು ಕಚೇರಿಗೆ ಬರದೆ ಆನ್ಲೈನಲ್ಲಿ ನಿಮ್ಮ ಅಜ್ಜಿ ಸ್ಟೇಟಸ್ ಏನಾಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.
ಈ ಸುದ್ದಿ ಓದಿ:- ಜಮೀನು ಮತ್ತು ಸೈಟ್ ರಿಜಿಸ್ಟರ್ ಪ್ರಕ್ರಿಯೆ ಹೇಗಿರುತ್ತೆ.? ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕಾದ ಮಾಹಿತಿ.!
ಅರ್ಜಿ ಸಲ್ಲಿಸಿದ ಬಳಿಕ ಮುಂದಿನ ಪ್ರಕ್ರಿಯೆಗಳು ಹೀಗೆ ನಡೆಯುತ್ತವೆ:-
* ನೀವು ಸಲ್ಲಿಸಿದ ಅರ್ಜಿಯು ಅರ್ಜಿ ಪರಿಶೀಲನೆಗಾಗಿ ನಿಮ್ಮ ಗ್ರಾಮದ ವಿಲೇಜ್ ಅಕೌಂಟೆಂಟ್ ಅವರ ಕಚೇರಿಗೆ ಹೋಗುತ್ತದೆ.
* ರೆವೆನ್ಯೂ ಇನ್ಸ್ಪೆಕ್ಟರ್ (RI ) ಮತ್ತು ವಿಲೇಜ್ ಅಕೌಂಟೆಂಟ್ (VA) ಇಬ್ಬರು ವಿಳಾಸಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿ ಮತ್ತು ಈ ಮೇಲೆ ಸಹಿ ಮಾಡಿರುವ ಪಂಚನಾಮೆ ಸಾಕ್ಷಿಗಳ ಸಮ್ಮುಖದಲ್ಲಿ ಮತ್ತು ಸುತ್ತಮುತ್ತಲ ಮನೆ ಮಾಲೀಕರ ಸಮ್ಮುಖದಲ್ಲಿ ಅಳತೆ ಮಾಡಿಸುತ್ತಾರೆ.
ಈ ಸುದ್ದಿ ಓದಿ:- ಈ ಕಾಲೇಜ್ ನಲ್ಲಿ ಡೊನೇಷನ್ ಇಲ್ಲ, ಕೇವಲ ರೂ.3,700 ಕ್ಕೆ ಊಟ-ವಸತಿ, ಇಲ್ಲಿ ಮಕ್ಕಳು ಓದುತ್ತಲೇ ದುಡಿಯುತ್ತಾರೆ.! ಹೇಗೆ ಅಂತ ನೋಡಿ.!
* ವಾಸ್ತವಿಕವಾಗಿ ವಿವರ ಬರೆದು ತಯಾರಿಸಿ ಸಮಿತಿ ಎದುರು ಮಂಡಿಸುತ್ತಾರೆ. (ಸಮಿತಿಯಲ್ಲಿ ಸ್ಥಳೀಯ ಶಾಸಕರು ಅಧ್ಯಕ್ಷರಾಗಿರುತ್ತಾರೆ, ತಹಶೀಲ್ದಾರರ ಕಾರ್ಯದರ್ಶಿಗಳಾಗಿರುತ್ತಾರೆ ವಿಲೇಜ್ ಅಕೌಂಟೆಂಟ್ ಮತ್ತು ರೆಬೆಲ್ ಯು ಇನ್ಸ್ಪೆಕ್ಟರ್ ಕೂಡ ಇರುತ್ತಾರೆ)
* ಎಲ್ಲವೂ ಸರಿ ಇದ್ದಲ್ಲಿ ಮಂಡಳಿಯಿಂದ ನಿಮಗೆ ನಿಮ್ಮ ಆಸ್ತಿಯು ಅಕ್ರಮದಿಂದ ಸಕ್ರಮವಾಗಿ ಬದಲಾಗಿರುವ ಆಸ್ತಿ ಹಕ್ಕುಪತ್ರ ಸಿಗುತ್ತದೆ
* ಇದಾರಬಳಿಕ 15 ದಿನಗಳ ಒಳಗೆ ಯಾರದ್ದಾದರೂ ತಕರಾರು ಇದ್ದರೆ ಸೂಕ್ತ ದಾಖಲೆಗಳೊಂದಿಗೆ ತಕರಾರು ಅರ್ಜಿ ಸಲ್ಲಿಸಲು 15 ದಿನಗಳ ಕಾಲಾವಕಾಶ ಮಾಡಿಕೊಡಲಾಗಿರುತ್ತದೆ.
ಅಕ್ರಮ-ಸಕ್ರಮಕ್ಕೆ ಇರುವ ಕಂಡೀಷನ್ ಗಳು:-
* ಸಕ್ರಮವಾಗಿ ಬದಲಾದ ಮನೆ ಹಕ್ಕುಪತ್ರ ನಿಮ್ಮ ಹೆಸರಿನಲ್ಲಿ ಇದ್ದರು ನೀವು ಯಾರಿಗೂ ಮನೆಯನ್ನು ಮಾರುವವಂತಿಲ್ಲ * ಮನೆಯನ್ನು ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಬಳಸುವಂತಿಲ್ಲ
* ಕಟ್ಟಿರುವ ಮನೆಗೆ ಮಾತ್ರ ಈ ರೀತಿ ಅಕ್ರಮ ಸಕ್ರಮ ಯೋಜನೆಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.