ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಕರ್ನಾಟಕ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ವಿಭಾಗದ (BMTC) ವತಿಯಿಂದ ಬೃಹತ್ ಉದ್ಯೋಗವಕಾಶದ ಸಿಹಿ ಸುದ್ದಿ ಇದೆ. ಈ ಸಂಬಂಧಿತ ಅಧಿಕೃತ ಅಧಿಸೂಚನೆಯನ್ನು ಇಲಾಖೆ ಪ್ರಕಟಿಸಿದೆ.
ಕಳೆದ ಹಲವು ದಿನಗಳಿಂದ ಬಾರಿ ನಿರೀಕ್ಷೆಯಲ್ಲಿದ್ದ BMTC ನೇಮಕಾತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನ ಮಾಡಲಾಗಿದ್ದು, ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಎಷ್ಟು ವೇತನ ಸಿಗುತ್ತದೆ? ಹುದ್ದೆಗಳ ವಿವರ? ಅರ್ಜಿ ಸಲ್ಲಿಸಲು ವಿಧಿಸಿರುವ ಮಾನದಂಡಗಳೇನು? ಇತ್ಯಾದಿ ವಿಚಾರಗಳನ್ನು ನೋಟಿಫಿಕೇಶನ್ ನಲ್ಲಿ ವಿಸ್ತಾರವಾಗಿ ತಿಳಿಸಲಾಗಿದೆ.
ನಾವು ಸಹ ಈ ಅಂಕಣದಲ್ಲಿ ನೇಮಕಾತಿ ಕುರಿತಂತೆ ಇರುವ ಕೆಲ ಪ್ರಮುಖ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದೇವೆ. ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ಒಂದು ಬಾರಿ ಹೂಡಿಕೆ ಮಾಡಿ ಸಾಕು, ಪ್ರತಿ ತಿಂಗಳು 1 ಲಕ್ಷ ಪಿಂಚಣಿ ಪಡೆಯಬಹುದು LIC ಜೀವನ್ ಉತ್ಸವ್ ಪ್ಲಾನ್
ನೇಮಕಾತಿ ಸಂಸ್ಥೆ:- ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಉದ್ಯೋಗ ಸಂಸ್ಥೆ:- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)
ಹುದ್ದೆ ಹೆಸರು:- ಬಸ್ ನಿರ್ವಾಹಕರು
ಒಟ್ಟು ಹುದ್ದೆಗಳ ಸಂಖ್ಯೆ:- 2500 ಹುದ್ದೆಗಳು
ಹುದ್ದೆ ವಿವರ:-
* ಮಿಕ್ಕುಳಿದ ವೃಂದ – 2286 ಹುದ್ದೆಗಳು
* ಸ್ಥಳೀಯ ವೃಂದ – 214 ಹುದ್ದೆಗಳು
ಉದ್ಯೋಗ ಸ್ಥಳ:- ಬೆಂಗಳೂರು…
ವೇತನ ಶ್ರೇಣಿ:-
* ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.18,660 ರಿಂದ ರೂ.25,300 ವೇತನ ಸಿಗುತ್ತದೆ
* ಇದರೊಂದಿಗೆ ಇನ್ನಿತರ ಸರ್ಕಾರಿ ಸೌಲಭ್ಯಗಳು ಕೂಡ ಸಿಗುತ್ತವೆ
ಈ ಸುದ್ದಿ ಓದಿ:-ಕಡಿಮೆ ಹಸುಗಳಿಂದ ದಿನಕ್ಕೆ 300 ಲೀಟರ್ ಹಾಲು, ಕನಿಷ್ಠ ಒಂದು ಲಕ್ಷ ಆದಾಯ ಗ್ಯಾರಂಟಿ.!
ಶೈಕ್ಷಣಿಕ ವಿದ್ಯಾರ್ಹತೆ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ಆರ್ಟ್ಸ್ / ಕಾಮರ್ಸ್ / ಸೈನ್ಸ್ ಯಾವುದೇ ವಿಭಾಗದಲ್ಲಿ ದ್ವಿತೀಯ PUC ಉತ್ತೀರ್ಣರಾಗಿರಬೇಕು
* CBSE / ICSE ನಲ್ಲಿ ದ್ವಿತೀಯ PUCಉತ್ತೀರ್ಣರಾಗಿದ್ದರು ಅರ್ಜಿ ಸಲ್ಲಿಸಲು ಅನುಮತಿ ಇದೆ
* PUC ಬದಲು SSLC ಆದ ನಂತರ 3 ವರ್ಷಗಳ ಡಿಪ್ಲೋಮೋ ಅಭ್ಯಾಸ ಮಾಡಿ ಪಾಸದವರೆಗೂ ಕೂಡ ಅರ್ಜಿ ಸಲ್ಲಿಸಲು ಅನುಮತಿ ಇದೆ
* ಆದರೆ ಮುಕ್ತ ವಿವಿಯಲ್ಲಿ ದ್ವಿತೀಯ PUC ಅಥವಾ JOC ಅಥವಾ JLC ವಿದ್ಯಾಭ್ಯಾಸ ಮಾಡಿದವರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
* ಅಭ್ಯರ್ಥಿಗಳು ಮಾನ್ಯತೆ ಪಡೆದ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್ ಕೂಡ ಹೊಂದಿರಬೇಕು.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಲಿಕೆ:-
* 2A, 2B, 3A, 3B ಅಭ್ಯರ್ಥಿಗಳಿಗೆ 3 ವರ್ಷಗಳು
* SC / ST, ಪ್ರವರ್ಗ -1ರ ಅಭ್ಯರ್ಥಿಗಳಿಗೆ 5 ವರ್ಷಗಳು
* ಮಾಜಿ ಸೈನಿಕ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಈ ಸುದ್ದಿ ಓದಿ:- LPG ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್ ಇನ್ಮುಂದೆ ಪ್ರತಿ ತಿಂಗಳು ಸಿಲಿಂಡರ್ ಮೇಲೆ 300 ರೂಪಾಯಿ ಉಚಿತವಾಗಿ ಪಡೆಯಬಹುದು
ಅರ್ಜಿ ಶುಲ್ಕ:-
* 2A, 2B, 3A, 3B ಅಭ್ಯರ್ಥಿಗಳಿಗೆ ರೂ.750
* SC / ST, ಪ್ರವರ್ಗ – 1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 500
ಅರ್ಜಿ ಸಲ್ಲಿಸುವ ವಿಧಾನ:–
* KEA ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
ವೆಬ್ಸೈಟ್ ವಿಳಾಸ:- https://cetonline.karnataka.gov.in/kea/kbknrk2023
* HK ಮತ್ತು NHK ಪ್ರತ್ಯೇಕ ಲಿಂಕ್ ಇರುತ್ತದೆ
* ನಿಮ್ಮ ವಿಭಾಗಕ್ಕೆ ಅನುಗುಣವಾಗಿ ಇರುವ ಲಿಂಕ್ ಕ್ಲಿಕ್ ಮಾಡಿ
* ಅರ್ಜಿ ಫಾರಂ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
* ಅರ್ಜಿ ಶುಲ್ಕ ಪಾವತಿ ಆದ ಮೇಲೆ ಇ-ರಶೀದಿ ಪಡೆದುಕೊಂಡು ಅರ್ಜಿ ಸಲ್ಲಿಕೆ ಯಶಸ್ವಿಯಾದ ಮೇಲೆ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 19.04.2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 18.05.2024