ರಾಜ್ಯದಾದ್ಯಂತ ಇರುವ ಎಲ್ಲ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ KPSC ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವಂತಹ 300ಕ್ಕೂ ಹೆಚ್ಚು ವಿವಿಧ ಬಗೆಯ ಹುದ್ದೆಗಳಿಗೆ ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಕೂಡ ಹೊರಡಿಸಲಾಗಿದ್ದು, ನೇಮಕಾತಿ ಕುರಿತಂತೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ನಾವು ಸಹ ಈ ಅಂಕಣದಲ್ಲಿ ಅರ್ಜಿ ಸಲ್ಲಿಸಲು ಆಸಕ್ತರಾಗಿರುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ನೇಮಕಾತಿ ಸಂಬಂಧಿಸಿದಂತೆ ನೋಟಿಫಿಕೇಶನ್ ನಲ್ಲಿ ತಿಳಿಸಿರುವ.
ಈ ಸುದ್ದಿ ಓದಿ:- ಒಂದು ಎಕರೆಗೆ 45 ಲಕ್ಷ ಲಾಭ ತಂದು ಕೊಟ್ಟ ಕೃಷಿ.! ಸಖತ್ ಲಾಭ ತಂದು ಕೊಡುವ ಸದಾಕಾಲವೂ ಬೇಡಿಕೆ ಇರುವ ಬೆಳೆ ಇದು.!
ಪ್ರಮುಖ ಸಂಗತಿಗಳಾದ ಹುದ್ದೆ, ಹುದ್ದೆಗಳ ವಿವರ, ವೇತನ ಶ್ರೇಣಿ, ಉದ್ಯೋಗ ಸ್ಥಳ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ವಿಧಾನ, ವಯೋಮಿತಿ, ವಯೋಮಿತಿ ಸಡಿಲಿಕೆ, ಪ್ರಮುಖ ದಿನಾಂಕಗಳು ಇತ್ಯಾದಿ ಮಾಹಿತಿ ನೀಡುತ್ತಿದ್ದೇವೆ. ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ನೇಮಕಾತಿ ಸಂಸ್ಥೆ:- ಜಲಸಂಪನ್ಮೂಲ ಇಲಾಖೆ
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಹುದ್ದೆ ವಿವರ:-
* ಕಿರಿಯ ಇಂಜಿನಿಯರ್ (ಸಿವಿಲ್)
* ಕಿರಿಯ ಇಂಜಿನಿಯರ್ (ಮೆಕಾನಿಕಲ್)
* ಗ್ರಂಥ ಪಾಲಕರು
ಒಟ್ಟು ಹುದ್ದೆಗಳ ಸಂಖ್ಯೆ:- 313 ಹುದ್ದೆಗಳು
ಉದ್ಯೋಗ ಸ್ಥಳ:- ಕರ್ನಾಟಕದ ವಿವಿಧ ಕಡೆ…
ಈ ಸುದ್ದಿ ಓದಿ:- ಗೋಮಾಳ ಜಮೀನನ್ನು ಸಕ್ರಮ ಮಾಡಿಕೊಳ್ಳುವುದು ಹೇಗೆ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!
ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಆಯಾ ಪೋಸ್ಟ್ ಗಳಿಗೆ ಅನುಗುಣವಾಗಿ ವೇತನ ನಿಗದಿ ಮಾಡಲಾಗಿದೆ. ಆ ಪ್ರಕಾರವಾಗಿ
* ಕಿರಿಯ ಇಂಜಿನಿಯರ್ (ಸಿವಿಲ್) – ರೂ.33,450 ರಿಂದ ರೂ.62,600
* ಕಿರಿಯ ಇಂಜಿನಿಯರ್ (ಮೆಕಾನಿಕಲ್) – ರೂ.33,450 ರಿಂದ ರೂ.62,600
* ಗ್ರಂಥ ಪಾಲಕರು – ರೂ.30,350 ರಿಂದ ರೂ.58,250
ಶೈಕ್ಷಣಿಕ ವಿದ್ಯಾರ್ಹತೆ:-
* ಕಿರಿಯ ಇಂಜಿನಿಯರ್ (ಸಿವಿಲ್) – ಸಿವಿಲ್ ಇಂಜಿನಿಯರಿಂಗ್ ಅಥವಾ ಡಿಪ್ಲೋಮೋ ಇನ್ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು
* ಕಿರಿಯ ಇಂಜಿನಿಯರ್ (ಮೆಕಾನಿಕಲ್) – ಮೆಕಾನಿಕಲ್ ಇಂಜಿನಿಯರಿಂಗ್ ಅಥವಾ ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದಿರಬೇಕು
* ಗ್ರಂಥ ಪಾಲಕರು – ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೋಮೋ ಪಾಸ್ ಆಗಿರಬೇಕು
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* SC / ST, ಪ್ರವರ್ಗ – 1ರ ಅಭ್ಯರ್ಥಿಗಳಿಗೆ 05 ವರ್ಷಗಳು
* OBC ಅಭ್ಯರ್ಥಿಗಳಿಗೆ 03 ವರ್ಷಗಳು
* ಮಾಜಿ ಸೈನಿಕ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ.
ಈ ಸುದ್ದಿ ಓದಿ:- ಮಹಿಳೆಯರಿಗಾಗಿ ಮೋದಿ ಹೊಸ ಯೋಜನೆ 5000 ಸಹಾಯಧನ ಸಿಗಲಿದೆ.!
ಅರ್ಜಿ ಶುಲ್ಕ:-
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600
* OBC ಅಭ್ಯರ್ಥಿಗಳಿಗೆ ರೂ.300
* ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50
* SC / ST, ಪ್ರವರ್ಗ -1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
* KPSC / WRDR ಅಧಿಕೃತ ವೆಬ್ ಸೈಟ್ ಗಳಿಗೆ ಭೇಟಿ ಕೊಟ್ಟು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಿರಿ.
ಈ ಸುದ್ದಿ ಓದಿ:- ಜಮೀನಿನಲ್ಲಿ ಲೈಟ್ ಕಂಬ ಅಥವಾ TC ಇದ್ದರವರಿಗೆ ಹೊಸ ರೂಲ್ಸ್.!
ಆಯ್ಕೆ ವಿಧಾನ:-
* ಸ್ಪರ್ಧಾತ್ಮಕ ಪರೀಕ್ಷೆ
* ನೇರ ಸಂದರ್ಶನ
* ದಾಖಲೆಗಳ ಪರಿಶೀಲನೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 29 ಏಪ್ರಿಲ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 28 ಮೇ, 2024.