ರಾಧಿಕಾ ಕುಮಾರಸ್ವಾಮಿ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವಂತಹ ರಾಧಿಕಾ ಕುಮಾರಸ್ವಾಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುತ್ತಾರೆ. ಒಂದು ಕಾಲದಲ್ಲಿ ಸ್ಟಾರ್ ಗಿರಿಯನ್ನು ಸೃಷ್ಟಿ ಮಾಡಿಕೊಂಡಂತಹ ಇವರು ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಹಾಗೆ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಸಹ ಸೃಷ್ಟಿ ಮಾಡಿಕೊಂಡಿದ್ದಾರೆ. ತಂಗಿಯ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ ಇವರು ಶಿವಣ್ಣ ಮತ್ತು ರಾಧಿಕಾ ಕುಮಾರಸ್ವಾಮಿ ಅವರ ಕಾಂಬಿನೇಷ್ ಅಣ್ಣ ತಂಗಿ ಸಿನಿಮಾಗಳು ಸಾಕಷ್ಟು ಹಿಟ್ ಕಂಡಿವೆ. ಇನ್ನು ನಮ್ಮ ನಿಮ್ಮೆಲ್ಲರ ಪರಮಾತ್ಮ ಪುನೀತ್ ರಾಜ್ಕುಮಾರ್ ಅವರ ಬಗ್ಗೆ ಹೇಳುವಂತಹ ವಿಷಯವೇನಿಲ್ಲ ಯಾಕೆಂದರೆ ದೇವರು ಎಂದೇ ಪ್ರತಿಯೊಬ್ಬ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆಸಿರುವಂತಹ ಅಪ್ಪು ಅವರು ನಟನೆಯಲ್ಲಾಗಲಿ ಅಥವಾ ಡಾನ್ಸ್ ನಲ್ಲಾಗಲಿ ಹಾಡುಗಾರಿಕೆಯಲ್ಲಾಗಲಿ ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವಂತೆ ತಮ್ಮ ಅಭಿರುಚಿಯನ್ನು ಈಗಾಗಲೇ ಪ್ರಪಂಚದ ಮುಂದೆ ತೋರಿಸಿಬಿಟ್ಟಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಹಾಗೂ ಪುನೀತ್ ರಾಜ್‌ಕುಮಾರ್ ಅವರು ಡಾನ್ಸ್ ಡಾನ್ಸ್ ವೇದಿಕೆಯಲ್ಲಿ ನೃತ್ಯ ಮಾಡಿರುವುದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ ಇವರ ವಿಡಿಯೋ ನೋಡಿ ಸಾಕಷ್ಟು ಜನರು ಉತ್ತಮವಾದಂತಹ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಎಲ್ಲವನ್ನೂ ಸಹ ಸ್ಪೋಟಿವ್ ಆಗಿ ತೆಗೆದುಕೊಳ್ಳುತ್ತಿದ್ದರು. ಉತ್ತಮವಾದಂತಹ ಅಭಿನಯ ಹಾಗೂ ತಮ್ಮ ಅಪ್ರತಿಮ ಸೌಂದರ್ಯದಿಂದ ಅಭಿಮಾನಿಗಳ ಬಳಗವನ್ನೇ ಸೃಷ್ಟಿ ಮಾಡಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ತಮ್ಮ ಬಹುದಿನದ ಕನಸನ್ನು ಈಡೇರಿಸಿಕೊಂಡಿದ್ದಾರೆ.
ಡ್ಯಾನ್ಸ್ ಡ್ಯಾನ್ಸ್ ಜೂನಿಯರ್, ಸ್ಟಾರ್ ಸುವರ್ಣ ವಾಹಿನಿಯ ರಿಯಾಲಿಟಿ ಶೋನಲ್ಲಿ ರಾಧಿಕಾ ಕುಮಾರಸ್ವಾಮಿಗೆ ಸರ್ಪ್ರೈಸ್ ಉಡುಗೊರೆಯೊಂದು ಕಾದಿತ್ತು ಅದೇನೆಂದರೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಪುನೀತ್ ರಾಜ್‌ಕುಮಾರ್ ಅವರು ಆಗಮಿಸಿದ್ದರು ಪುನೀತ್ ರಾಜ್ಕುಮಾರ್ ಅವರ ಜೊತೆಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಬಹುದಿನದ ಆಸೆಯನ್ನು ಈಡೇರಿಸಿಕೊಂಡಿದ್ದರು ಇದನ್ನು ನೋಡಿದಂತಹ ಪುನೀತ್ ರಾಜ್‌ಕುಮಾರ್ ಹಾಗೆಯೇ ರಾಧಿಕಾ ಕುಮಾರಸ್ವಾಮಿ ಇಬ್ಬರು ಅಭಿಮಾನಿಗಳು ಇಬ್ಬರ ಅತ್ಯದ್ಭುತ ಡ್ಯಾನ್ಸ್ ನೋಡಿ ಪುಳಕಿತಗೊಂಡಿದ್ದರು ಇವರಿಬ್ಬರು ಒಟ್ಟಿಗೆ ಒಂದು ಸಿನಿಮಾ ಮಾಡಬೇಕು ಎಂದು ಸಹ ಒತ್ತಾಯ ಮಾಡಿದರು. ಸ್ವತಹ ರಾಧಿಕಾ ಅವರೇ ಪುನೀತ್ ರಾಜ್ಕುಮಾರ್ ಅವರ ಜೊತೆಯಲ್ಲಿ ನಟಿಸುವುದು ನನ್ನ ಬಹುದಿನದ ಕನಸು ಎಂದು ಹೇಳಿಕೊಂಡಿದ್ದರು ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್ ನಲ್ಲಿ ಡಾನ್ಸ್ ಮಾಡುವ ಅವಕಾಶ ಸಿಕ್ಕಿದ್ದರಿಂದ ರಾಧಿಕಾ ಕುಮಾರಸ್ವಾಮಿ ಅವರು ತುಂಬಾ ಖುಷಿಪಟ್ಟಿದ್ದರು.
ಪವರ್ ಸ್ಟಾರ್ ಅವರ ಜೊತೆಯಲ್ಲಿ ನಟಿಸಬೇಕು ಎಂದುಕೊಂಡಿದ್ದ ರಾಧಿಕಾ ಕುಮಾರಸ್ವಾಮಿ ಅವರ ಆಸೆ ಆಸೆಯಾಗಿಯೇ ಉಳಿದುಬಿಟ್ಟಿತ್ತು, ಯಾಕೆಂದ್ರೆ ಅಪ್ಪು ಅವರು ನಮ್ಮನ್ನೆಲ್ಲ ಆಗಲಿ ಹೋಗಿದ್ದಾರೆ ಆದ್ದರಿಂದ ಅವರ ಜೊತೆಯಲ್ಲಿ ನಟಿಸಲು ಸಾಧ್ಯವಿಲ್ಲ ಅವರ ಜೊತೆ ಡ್ಯಾನ್ಸ್ ವೇದಿಕೆಯಲ್ಲಿ ಇಬ್ಬರೂ ಸಹ ಡಾನ್ಸ್ ಮಾಡಿರುವ ಸವಿ ನೆನಪಿನೊಂದಿಗೆ ರಾಧಿಕಾ ಕುಮಾರಸ್ವಾಮಿ ಅವರು ಉಳಿದುಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಜೊತೆಯಲ್ಲಿ ಡ್ಯಾನ್ಸ್ ಮಾಡುವುದು ತುಂಬಾ ಕಷ್ಟ ಆದರೂ ನನ್ನ ಪ್ರಯತ್ನಪಟ್ಟಿದ್ದೇನೆ ಎಂದು ಸ್ಟೇಜ್ ಮೇಲೆ ಹೇಳಿದ್ದರು. ಹೀಗೆ ಅಪ್ಪು ಅವರನ್ನು ಹೊಗಳಿದ್ದರು ಈ ಇಬ್ಬರು ಸಹ ಸಿನಿಮಾದಲ್ಲಿ ನಟಿಸಬೇಕು ಎಂದು ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು ಆದರೆ ಅವರ ಬಯಕೆ ಈಡೇರಲು ಸಾಧ್ಯವಿಲ್ಲ. ಪುನೀತ್ ರಾಜ್‌ಕುಮಾರ್ ಮತ್ತು ರಾಧಿಕಾ ಕುಮಾರಸ್ವಾಮಿ ಅವರ ನೃತ್ಯ ನಿಮಗೂ ಸಹ ಇಷ್ಟವಾದರೆ ತಪ್ಪದೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.