ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್, ಮೇ ತಿಂಗಳಲ್ಲಿ ಸಿಗಲಿದೆ ಎರಡು ಬಾರಿ ರೇಷನ್.

 

WhatsApp Group Join Now
Telegram Group Join Now

ಪಡಿತಾ ಚೀಟಿದಾರರಿಗೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳು ಸಿಗುತ್ತವೆ. ಅದರಲ್ಲೂ ಉಚಿತ ಪಡಿತರದಂತಹ ಜನಪ್ರಿಯ ಯೋಜನೆ ದೇಶದಾದ್ಯಂತ ಪ್ರಚಲಿತವಾಗಿದ್ದು, ಒನ್ ನೇಶನ್, ಒನ್ ರೇಶನ್ ಈ ಯೋಜನೆ ಕೂಡ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ. ಯಾಕೆಂದರೆ ಉದ್ಯೋಗ, ವಿದ್ಯಾಭ್ಯಾಸ ಈ ರೀತಿ ಕಾರಣಗಳಿಂದಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗಿದ್ದವರಿಗೆ ಅವರ ಸ್ವಗ್ರಾಮಕ್ಕೆ ತೆರಳಿ ಪಡಿತರ ಪಡೆಯಲು ಕಷ್ಟವಾಗುತ್ತಿತ್ತು.

ಈ ಯೋಜನೆ ಜಾರಿಗೆ ತಂದಿರುವುದರಿಂದ ಯಾರು ಎಲ್ಲಿ ಬೇಕಾದರೂ ಅವರ ಪಾಲಿನ ಪಡಿತರವನ್ನು ಉಚಿತವಾಗಿ ಸ್ವೀಕರಿಸಬಹುದಾಗಿದೆ. ಇದಾದ ಬಳಿಕ ಉಚಿತ ಪಡಿತರ ಯೋಜನೆ ಮೂಲಕ ನೀಡುತ್ತಿರುವ ಸಾಮಗ್ರಿಗಳ ಕೂಡ ಪರಿಷ್ಕರಣೆಯಾಗಿದೆ. ಕೇಂದ್ರವೇ ಆಶೀರ್ವಾದ ಕಿಟ್ ಎನ್ನುವ ಕಿಟ್ ಮೂಲಕ ಸಿರಿಧಾನ್ಯ, ಬೇಳೆ ಕಾಳುಗಳು, ಅಡುಗೆ ಎಣ್ಣೆ, ಉಪ್ಪು ಜೊತೆ ಅಕ್ಕಿ ಹಾಗೂ ರಾಗಿಯನ್ನು ಕೂಡ ಕೊಡಲು ಚಿಂತನೆ ನಡೆಸಿದೆ.

ಒಂದು ಕಿಟ್ ಬೆಲೆ 350 ವೆಚ್ಚದ ಲೆಕ್ಕಾಚಾರದಲ್ಲಿ ಕುಟುಂಬ ಪಡಿತರ ಚೀಟಿಯಲ್ಲಿರುವ ಕುಟುಂಬದ ಪ್ರತಿಸದಸ್ಯರಿಗೂ ತಲಾ ಒಂದೊಂದು ಕಿಟ್ ನೀಡಲು ನಿರ್ಧರಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದ ಒಂದು ವೇಳೆ ಈ ಯೋಜನೆ ಜಾರಿಗೆ ಬಂದ ಪಕ್ಷದಲ್ಲಿ ಎಲ್ಲಾ ರಾಜ್ಯಕ್ಕೂ ಇದೆ ನಿಯಮ ಅನುಸರಣೆ ಆಗಲಿದೆ ದೇಶದ ಎಲ್ಲಾ ರಾಜ್ಯದ ಜನತೆಗೂ ಕೂಡ ಇದೇ ಮಾದರಿಯಲ್ಲಿ ಉಚಿತ ಪಡಿತರವನ್ನು ಹಂಚಲಾಗುತ್ತದೆ.

ಸದ್ಯಕ್ಕೆ ಇದು ಕೇಂದ್ರ ಸರ್ಕಾರದ ಯೋಜನಾ ಪಟ್ಟಿಯಲ್ಲಿದ್ದು ಕಾರ್ಯರೂಪಕ್ಕೆ ಯಾವಾಗ ಬರುತ್ತದೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಶೀಘ್ರದಲ್ಲೇ ಜಾರಿಗೆ ತರಲು ಭಾರತದ ಆಹಾರ ಇಲಾಖೆ ಪ್ರಯತ್ನಿಸುತ್ತಿದೆ. ಸದ್ಯಕ್ಕೀಗ ಎಲ್ಲಡೆ ಹೆಚ್ಚು ಕೇಳಿ ಬರುತ್ತಿರುವ ಮಾತುಗಳು ಏನು ಎಂದರೆ, ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯಾದ ಮೇಲೆ ರಾಜಕೀಯ ಪಕ್ಷಗಳು ಪಡಿತರ ಚೀಟಿ ಉಚಿತ ಪಡಿತರದ ಪ್ರಮಾಣವನ್ನು ಹೆಚ್ಚಿಸುವುದರ ಬಗ್ಗೆ.

ಆದರೆ ಗೆದ್ದ ಸರ್ಕಾರ ರಚನೆ ಆದ ಬಳಿಕವೇ ಅದವನ್ನು ಸ್ಪಷ್ಟವಾಗಿ ಹೇಳಬಹುದು. ಅಲ್ಲಿಯತನಕ ಸದ್ಯದಲ್ಲಿ ಯಾವ ರೀತಿ ಅನ್ನ ಭಾಗ್ಯ ಯೋಜನೆ ಮೂಲಕ ಎಲ್ಲರಿಗೂ ಉಚಿತ ಪಡಿತರ ನೀಡಲಾಗುತ್ತಿದೆಯೋ ಅದೇ ಮುಂದುವರೆಯಲಿದೆ. ಈ ರಾಜ್ಯದ ಜನರಿಗೆ ಮಾತ್ರ ಎರಡು ಬಾರಿ ಮೇ ತಿಂಗಳಲ್ಲಿ ಪಡಿತರ ಸಿಗಲಿದೆ. ಹರಿಯಾಣ ರಾಜ್ಯದ BPL ಮತ್ತು AY ಕಾರ್ಡು ಹೊಂದಿರುವ ಪಡಿತರ ಚೀಟಿದಾರರು ಈ ಪ್ರಯೋಜನ ಪಡೆಯಲಿದ್ದಾರೆ.

ಯಾಕೆಂದರೆ ಹರಿಯಾಣದಲ್ಲಿ ಕಾರಣಾಂತರಗಳಿಂದ ಏಪ್ರಿಲ್ ತಿಂಗಳಿನಲ್ಲಿ ಪಡಿತರ ಹಂಚುವ ಕೆಲಸ ವಿಳಂಬವಾಗಿತ್ತು, ಇದರಿಂದ ಪಡಿತರ ಹಂಚುವ ಡಿಪೋದಾರರು ಹಾಗೂ ನಾಗರಿಕರು ಇಬ್ಬರು ಗಾಬರಿಗೊಂಡಿದ್ದರು. ಆದರೆ ಈಗ ಮೇ 8ರ ಒಳಗೆ ಹರಿಯಾಣ ರಾಜ್ಯದ ಎಲ್ಲಾ BPL ಮತ್ತು AY ಪಡಿತರ ಚೀಟಿದಾರರಿಗೆ ಏಪ್ರಿಲ್ ತಿಂಗಳ ದಾಸ್ತಾನು ಹಂಚಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಿದೆ.

ಅದಕ್ಕಾಗಿ ದಾಸ್ತಾನುಗಳ ಸರಬರಾಜು ಕೂಡ ಆಗಿದೆ. ಇದಾದ ಬಳಿಕ ಕೆಲವೇ ದಿನಗಳಲ್ಲಿ ಮೇ ತಿಂಗಳ ಪಡಿತರ ಕೂಡ ಸಿಗಲಿದೆ. ಇದರಿಂದ ಹರಿಯಾಣ ರಾಜ್ಯದ BPL ಮತ್ತು AY ಪಡಿತರಚೀಟಿದಾರರಿಗೆ ಎರಡೆರಡು ಬಾರಿ ಮೇ ತಿಂಗಳಲ್ಲಿ ಪಡಿತರ ಸಿಕ್ಕಿದ ಹಾಗೆ ಆಯಿತು. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ…

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now