ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ. ಆದರೆ ಈ ಈ ವರ್ಗದ ಜನರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ಸಿಗಲ್ಲ. ಅರ್ಜಿ ಸಲ್ಲಿಸುವವರು ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

 

WhatsApp Group Join Now
Telegram Group Join Now

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನೀತಿ ಸಂಹಿತೆ (Code of Conduct) ಜಾರಿಯಾಗಿದ್ದ ಕಾರಣದಿಂದಾಗಿ ರೇಷನ್ ಕಾರ್ಡ್ ವಿತರಣೆ (New Ration Card distribution) ಸ್ಥಗಿತಗೊಂಡಿತ್ತು, ಈಗ ಹೊಸ ಸರ್ಕಾರ ಸ್ಥಾಪನೆಯಾದ ಮೇಲೆ ಸರ್ಕಾರದ ಗ್ಯಾರಂಟಿ ಯೋಜನೆಗಳ (Guarantee Scheme) ಫಲಾನುಭವಿಗಳಾಲು ರೇಷನ್ ಕಾರ್ಡ್ (Ration Card compulsory) ಕಡ್ಡಾಯವಾದ ಕಾರಣ ಶೀಘ್ರವೇ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ (Ration Card correction) ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ (application for new Ration Card) ಸಲ್ಲಿಸಲು ಮತ್ತು ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಕಾರ್ಡ್ ವಿತರಣೆ ಮಾಡಲು ಅನುಮತಿ ನೀಡಲಿದೆ.

ಈ ಬಗ್ಗೆ ಕಳೆದ ವಾರವಷ್ಟೇ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದರು ಕೆ.ಎಚ್ ಮುನಿಯಪ್ಪ (Food and Civil Supply Minister K.H Muniyappa) ಅವರು ಸುದ್ದಿಗೋಷ್ಠಿಯೊಂದರಲ್ಲಿ ವಿಷಯ ತಿಳಿಸಿದರು. ಹಾಗೆಯೇ BPL ಕಾರ್ಡ್ ಪಡೆಯುವವರಿಗೆ ಸರ್ಕಾರ ರೂಪಿಸಿರುವ ಹೊಸ ಮನದಂಡಗಳ ಬಗ್ಗೆ ಕೂಡ ತಿಳಿಸಿದರು.

ರೇಷನ್ ಕಾರ್ಡ್ ಇಲ್ಲದವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಏನು ಮಾಡಬೇಕು.? ಈ ಬಗ್ಗೆ ಸಚಿವೆ ಹೇಳಿದ್ದೇನು.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಬಲವಾದ ಮೂಲಗಳ ಮಾಹಿತಿ ಪ್ರಕಾರ ಆಗಸ್ಟ್ 15 ರಂದು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದು ಮತ್ತು ತಿದ್ದುಪಡಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈಗಾಗಲೇ ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಗ್ರಾಮ ಒನ್ ಸೇವಾಸಿಂಧು ಪೋರ್ಟಲ್ ಅಲ್ಲಿ ಅರ್ಜಿ ಸ್ವೀಕೃತಿ ಪ್ರಕ್ರಿಯೆಗೆ ಫಾರಂ ಓಪನ್ ಆಗುತ್ತಿದೆ, ಆದರೆ ಕೊನೆಯ ಹಂತದಲ್ಲಿ ಸಲ್ಲಿಕೆ ಮಾಡಲು ಆಗುತ್ತಿಲ್ಲ.

ಆಗಸ್ಟ್ 15ರ ನಂತರ ಇದು ಸಾಧ್ಯವಾಗಲಿದೆ ಎಂದು ನಿರೀಕ್ಷಿಸಬಹುದು ಮತ್ತು ಸಿಟಿಜನ್ ಲಾಗಿನ್ (Citizen login) ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿಲ್ಲ. ಸರ್ಕಾರದ ಸೇವಾಸಿಂಧು ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಸಿಗಲಿದೆ. ಹಾಗಾದರೆ ರೇಷನ್ ಕಾರ್ಡ್ ಪಡೆಯಲು ಏನೆಲ್ಲಾ ದಾಖಲೆಗಳನ್ನು ಹೊಂದಿರಬೇಕು, ಹೊಸ ರೂಲ್ಸ್ ಪ್ರಕಾರ ಯಾರೆಲ್ಲಾ BPL ರೇಷನ್ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

10ನೇ ತರಗತಿ ಆದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ, ಪರೀಕ್ಷೆ ಇಲ್ಲದೆ 1714 ಹುದ್ದೆಗಳಿಗೆ ನೇರ ನೇಮಕಾತಿ.! ವೇತನ 29,380/-

BPL ಕಾರ್ಡ್ ಪಡೆಯಲು ಮಾನದಂಡಗಳು:-

● ಸರ್ಕಾರಿ ಅರೆ ಸರ್ಕಾರಿ ಹಾಗೂ ಖಾಯಂ ನೌಕರರ ಕುಟುಂಬವಾಗಿರಬಾರದು.
● ವೃತ್ತಿ ತೆರಿಗೆ, GST, ಆದಾಯ ತೆರಿಗೆ ಪಾವತಿದಾರರ ಕುಟುಂಬವಾಗಿರಬಾರದು.
● ಗ್ರಾಮೀಣ ಭಾಗದಲ್ಲಿ 3 ಹೆಕ್ಟೆರ್‌ ಗಿಂತ ಹೆಚ್ಚು ಭೂಮಿ ಹೊಂದಿರಬಾರದು.

● ನಗರದಲ್ಲಿ 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮೆನೆ ಹೊಂದಿರಬಾರದು.
● ವೈಟ್‌ ಬೋರ್ಡ್ ಕಾರು ಇರಬಾರದು. (ವ್ಯಾಪಾರದ ಉದ್ದೇಶಕ್ಕಾಗಿ ಹೊಂದಿರುವ ಎಲ್ಲೋ ಬೋರ್ಡ್ ಟ್ಯಾಕ್ಸಿ, ಕ್ಯಾಬ್‌ ಟ್ಯಾಕ್ಟರ್‌ ಹೊಂದಿರುವವರಿಗೆ ಸಮಸ್ಯೆಯಿಲ್ಲ).
● ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚಿರುವ ಕುಟುಂಬ ಆಗಿರಬಾರದು.

ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದವರಿಗೆ ಸರ್ಕಾರದಿಂದ ಹೊಸ ರೂಲ್ಸ್, ಮನೆ ಮಾಲೀಕರು ಇದನ್ನು ತಿಳಿದುಕೊಳ್ಳಿ ಇಲ್ಲದಿದ್ರೆ ನಿಮ್ಮ ಮನೆ ಕೈ ತಪ್ಪಿ ಹೋಗುತ್ತೆ.!

ಬೇಕಾಗುವ ದಾಖಲೆಗಳು:-

● ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
● ಐದು ವರ್ಷದ ಕೆಳಗಿನ ಮಕ್ಕಳನ್ನು ಹೊರತುಪಡಿಸಿ ಕುಟುಂಬದ ಎಲ್ಲರ ಬಯೋಮೆಟ್ರಿಕ್ ಮಾಹಿತಿ
● ಕುಟುಂಬದಲ್ಲಿ ಯಾರಾದರೂ ಒಬ್ಬರ ಹೆಸರಿನಲ್ಲಿ ಆದಾಯ ಪ್ರಮಾಣ ಪತ್ರ
● ಮನೆಯಲ್ಲಿ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದಲ್ಲಿ ಅವರ ಜನನ ಪ್ರಮಾಣ ಪತ್ರ,
● ಕುಟುಂಬದ ಒಬ್ಬ ಸದಸ್ಯರ ಮೊಬೈಲ್ ಸಂಖ್ಯೆ / ಇ-ಮೇಲ್ ಐಡಿ

ಈ ಮೇಲಿನ ದಾಖಲೆಗಳು ಇರದೇ ಇದ್ದಲ್ಲಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸ್ವೀಕಾರ ಮಾಡುವುದರಿಂದ ಈ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now