ಗೃಹಲಕ್ಷ್ಮಿ ಯೋಜನೆಯ 2000 ಹಣ ಯಾಕೆ ಇನ್ನು ಬಿಡುಗಡೆಯಾಗಿಲ್ಲ ಎನ್ನುವುದಕ್ಕೆ ಕಾರಣ ತಿಳಿಸಿದ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್.! ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದವರು ತಪ್ಪದೆ ಇದನ್ನು ನೋಡಿ

 

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು (Karnataka government Guarantee Scheme) ಒಂದಾದ ಮೇಲೆ ಒಂದರಂತೆ ಬಹುತೇಕ ಜಾರಿಯಾಗಿವೆ. ಈಗ ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಯರು ಕಾಯುತ್ತಿರುವ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಬಿಡುಗಡೆ ಮಾಡುವ ಕಾರ್ಯಕ್ರಮಕ್ಕೆ ಸದ್ಯದಲ್ಲೇ ದಿನಾಂಕ ಕೂಡ ನಿಗದಿ ಆಗುತ್ತಿದೆ.

ಕೊಟ್ಟ ಮಾತಿನಂತೆಯೇ ಆಗಸ್ಟ್ ತಿಂಗಳಿನಲ್ಲಿಯೇ (August month) ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಪ್ರಯತ್ನ ಮಾಡುತ್ತಿದೆ. ಈಗಿನ್ನು ಅರ್ಜಿ ಸ್ವೀಕಾರ ಪ್ರಕ್ರಿಯೆ ಹಂತದಲ್ಲಿರುವ ಈ ಯೋಜನೆ ಕುರಿತು ಜನಸಾಮಾನ್ಯರಿಗೆ ಇದ್ದ ಪ್ರಶ್ನೆಗಳಿಗೆ ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ಸುದ್ದಿಗೋಷ್ಠಿಯೊಂದರಲ್ಲಿ ಉತ್ತರಿಸಿದ್ದಾರೆ.

ಅಂಚೆ ಇಲಾಖೆಯಲ್ಲಿ ಡ್ರೈವರ್ ಹುದ್ದೆಗಳ ನೇಮಕಾತಿ,10ನೇ ತರಗತಿ ಪಾಸ್ ಆಗಿದ್ರೆ ಸಾಕು, ಆಸಕ್ತರು ಅರ್ಜಿ ಸಲ್ಲಿಸಿ ವೇತನ 63,200/-

ಗೃಹಲಕ್ಷ್ಮಿ ಯೋಜನೆ ಕುರಿತು ಅವರಿಗೆ ಎದುರಾದ ಪ್ರಶ್ನೆಗಳಿಗೆ ಅವರು ಕೊಟ್ಟಿರುವ ಉತ್ತರ ಈ ರೀತಿ ಇದೆ. ಗೃಹಲಕ್ಷ್ಮಿ ಯೋಜನೆಗೆ ಚುನಾವಣೆ ಪೂರ್ವವಾಗಿ ಭರವಸೆ ನೀಡಿದಾಗ ಕರ್ನಾಟಕದಾದ್ಯಂತ ಎಲ್ಲಾ ಕುಟುಂಬದ ಯಜಮಾನಿ ಮಹಿಳೆಯರಿಗೂ ಕೂಡ ಪ್ರತಿ ತಿಂಗಳು 2000 ಸಹಾಯಧನ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಪಂಜಾಬ್ ರಾಜ್ಯದಲ್ಲಿ (Panjab state) APL, BPL ಕಾರ್ಡ್, GST ಪೇಯರ್ಸ್ ಈ ರೀತಿ ಯಾವುದೇ ಬೇಧ ಮಾಡದೆ ಕೊಟ್ಟ ಮಾತಿನಂತೆ ಆ ರಾಜ್ಯದಲ್ಲಿರುವ ಎಲ್ಲಾ ಮಹಿಳೆಯರ ಖಾತೆಗೂ ಕೂಡ 1000 ರೂ. ಸಹಾಯಧನವನ್ನು ನೀಡುತ್ತಿದ್ದಾರೆ.

ಆದರೆ ನಮ್ಮ ರಾಜ್ಯದಲ್ಲಿ ಆದೇಶ ಪತ್ರ ಹೊರಬೀಳುವ ವೇಳೆಗೆ ಸಾಕಷ್ಟು ಮಾರ್ಪಾಡು ಮಾಡಲಾಗಿದೆ. ರೇಷನ್ ಕಾರ್ಡ್ ಇರುವ (Ration card compulsory) ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟು ಅದರಲ್ಲೂ ಆದಾಯ ತೆರಿಗೆ ಕಟ್ಟುವವರು, GST ಪೇಯರ್ಸ್ ಮತ್ತು ಸರ್ಕಾರಿ ಹುದ್ದೆಯಲ್ಲಿ ಇರುವ ಕುಟುಂಬಗಳನ್ನು ಈ ವ್ಯಾಪ್ತಿಯಿಂದ ಹೊರಗಡಲಾಗಿದೆ.

ಅನ್ನಭಾಗ್ಯ ಫಲಾನುಭವಿಗಳಿಗೆ ಆಹಾರ ಇಲಾಖೆಯಿಂದ ಶಾ’ಕ್ ಈ 6 ಮಾನದಂಡಗಳನ್ನಿಟ್ಟುಕೊಂಡು ಆಹಾರ ಇಲಾಖೆ ಸರ್ವೆ ಮಾಡುತ್ತಿದೆ. ಇಂಥವರಿಗೆ ದಂಡದ ಜೊತೆಗೆ ರೇಷನ್ ಕಾರ್ಡ್ ರದ್ದು ಆಗಲಿದೆ.!

ಯಾಕೆ ಈ ರೀತಿ ಬದಲಾವಣೆ ಮಾಡಲಾಗಿದೆ ಎಂದು ಪ್ರಶ್ನೆ ಕೇಳಲಾಗಿತ್ತು ಇದಕ್ಕೆ ಉತ್ತರಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಮ್ಮ ಸರ್ಕಾರ ಮಹಿಳೆಯರ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತದೆ. ಯೋಜನೆ ಬಗ್ಗೆ ಪ್ಲಾನ್ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಗೂ ಕೂಡ 2000ರೂ. ಸಹಾಯಧನವನ್ನು ನೀಡಬೇಕು ಎಂದು ಅಂದುಕೊಂಡಿದ್ದರು.

ಆದರೆ ರಾಜ್ಯದ ಆದಾಯಕ್ಕೆ ಬಾರಿ ಹೊಡೆತ ಬೀಳಲಿದೆ ಎನ್ನುವುದನ್ನು ನಿರೀಕ್ಷೆ ಮಾಡಿ ಈಗ ಸರ್ಕಾರಿ ಹುದ್ದೆಯಲ್ಲಿರುವ ಕುಟುಂಬ ಮತ್ತು ಆದಾಯ ತೆರಿಗೆ, GST ಕಟ್ಟುವ ಕುಟುಂಬಗಳನ್ನು ಪರಿಗಣಿಸಿಲ್ಲ. ಸದ್ಯಕ್ಕಿನ್ನು ಯೋಜನೆ ಅರ್ಜಿ ಸ್ವೀಕಾರ ಮಾಡುವ ಹಂತದಲ್ಲಿ ಇದೆ, ಜಾರಿಯಾಗಿ ಹಣ ವರ್ಗಾವಣೆ ಆದಮೇಲೆ ಅದರ ವಿವರ ನೋಡಿಕೊಂಡು ಮುಂದಿನ ದಿನಗಳಲ್ಲಿ ಸಾಧ್ಯವಾದರೆ ಇದನ್ನು ಇನ್ನಷ್ಟು ಜನರಿಗೆ ವಿಸ್ತರಿಸುವ ಪ್ರಯತ್ನವನ್ನು ಖಂಡಿತ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಗೃಹಲಕ್ಷ್ಮೀ ಯೋಜನೆಯ ಅನರ್ಹರ ಪಟ್ಟಿ ಬಿಡುಗಡೆ, ಈ ಪಟ್ಟಿಯಲ್ಲಿ ಇರುವವರಿಗೆ 2000 ಸಿಗಲ್ಲ, ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಸದ್ಯಕ್ಕಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿರುವ 1.53 ಕೋಟಿ ಕುಟುಂಬಗಳಿದ್ದು ಇದರಲ್ಲಿ 1.23 ಕೋಟಿ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ ಎನ್ನುವ ಮಾಹಿತಿ ಇದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕಡೆಯ ದಿನಾಂಕ ಇಲ್ಲ ದಾಖಲೆಗಳ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗದಿರುವವರು ಮುಂದಿನ ದಿನಗಳಲ್ಲಿ ಅದನ್ನು ತಿದ್ದುಪಡಿ ಮಾಡಿಸಿಕೊಂಡು ನಂತರ ಕೂಡ ಅರ್ಜಿ ಸಲ್ಲಿಸಿ, ಈ ಯೋಜನೆಯ ಫಲಾನುಭವಿಗಳಾಗಬಹುದು ಎನ್ನುವ ಮಾಹಿತಿಯನ್ನು ಸಚಿವೆ ತಿಳಿಸಿದ್ದಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now