ರೈತನಿಗೆ (Farmer) ಆತನ ಜಮೀನಿನ (land old records) ಹಳೆಯ ದಾಖಲೆಗಳಾದ ಪೋಡಿ, ಟಿಪ್ಪಣಿ, ಮೂಲ ಸರ್ವೆ, ಜಮೀನಿನ ಮೂಲ ಪುಸ್ತಕ, ಕಾಲೊಚಿತಗೊಳಿಸಿರುವ ಹಿಸ್ಸಾ ಸರ್ವೆ ಮುಂತಾದ ದಾಖಲೆಗಳ ಅವಶ್ಯಕತೆ ನಾನಾ ಕಾರಣಗಳಿಂದ ಇದ್ದೇ ಇರುತ್ತದೆ. ಜಮೀನಿನ ಹದ್ದುಬಸ್ತು ಗುರುತಿಸಲು, ಅಂದರೆ ಜಮೀನಿನ ಗಡಿ ವಿಸ್ತೀರ್ಣ ಜಮೀನ ಗುಡ್ಡಗಳು, ಅದರಲ್ಲಿದ್ದ ಮರಗಳು ಇತ್ಯಾದಿ ಹಾಳಾಗಿದ್ದಾಗ ಅವುಗಳನ್ನು ಗುರುತಿಸಿ ಸರ್ವೇ ಮಾಡಲು ಭೂಮಾಪನ ಇಲಾಖೆ ಸಿಬ್ಬಂದಿಗಳಿಗೆ ಜಮೀನಿನ ಹಳೆ ದಾಖಲೆಗಳು ಇದ್ದರೆ ಅನುಕೂಲವಾಗುತ್ತದೆ.
ಜಮೀನಿನ ಹಳೆಯ ಮಾಲೀಕರು ಯಾರು ಎಂದು ನೀವು ತಿಳಿದುಕೊಳ್ಳಲು ಅಥವಾ ನಿಮ್ಮ ಜಮೀನನ್ನು ಪರಭಾರೆ ಮಾಡುವ ಸಂದರ್ಭದಲ್ಲಿ, ಜಮೀನಿಗೆ ಸಂಬಂಧಪಟ್ಟ ಹಾಗೆ ನ್ಯಾಯಾಲಯಗಳಲ್ಲಿ ಕೇಸ್ ಇದ್ದರೆ ಆಗಲು ಕೂಡ ಹಳೆಯ ದಾಖಲೆಗಳ ಅವಶ್ಯಕತೆ ಬರುತ್ತದೆ. ಆದರೆ ಎಲ್ಲಾ ರೈತರು ಕೂಡ ಈ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಂಡು ಇರುವುದಿಲ್ಲ.
ಕೆಲವೊಮ್ಮೆ ಇವು ಕಳೆದು ಹೋಗಿರುತ್ತವೆ ಅಥವಾ ಹಾಳಾಗಿರುತ್ತವೆ ಮುಂದೆ ಒಂದು ದಿನ ಇದರ ಉಪಯೋಗ ಬಂದಾಗ ರೈತನ ಬಳಿ ಇಲ್ಲ ಎಂದರೆ ಸಮಸ್ಯೆ ಆಗುತ್ತದೆ ಆದರೆ ಈಗ ಇದಕ್ಕೊಂದು ಪರಿಹಾರ ಸಿಕ್ಕಿದೆ. ನೀವು ನಿಮ್ಮ ಮೊಬೈಲ್ (download through mobile) ಮೂಲಕ ನಿಮ್ಮ ಜಮೀನಿನ ಹಳೆ ದಾಖಲೆಗಳನ್ನು ಪರಿಶೀಲನೆ ಮಾಡಬಹುದು ಹಾಗೂ ಅದರ ಅಗತ್ಯ ನಿಮಗೆ ಇದ್ದರೆ ಇದರ ಪ್ರಿಂಟೌಟ್ ಕೂಡ ಪಡೆದುಕೊಳ್ಳಬಹುದು.
ಪ್ರತಿಯೊಬ್ಬ ರೈತನಿಗೂ ಕೂಡ ಈ ಮಾಹಿತಿ ತಿಳಿದಿರಬೇಕು. ಹಾಗಾಗಿ ಈ ಮಾಹಿತಿಯನ್ನು ಎಲ್ಲ ರೈತರ ಹಂಚಿಕೊಳ್ಳಿ ಹಾಗೂ ಯಾವ ರೀತಿ ನೀವು ನಿಮ್ಮ ಹಳೆ ದಾಖಲೆಗಳನ್ನು ಮೊಬೈಲ್ ನಲ್ಲಿ ನೋಡಬಹುದು ಮತ್ತು ಡೌನ್ಲೋಡ್ ಮಾಡಬಹುದು ಎನ್ನುವುದನ್ನು ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.
● ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಯಾವುದಾದರೂ ಬ್ರೌಸರ್ ಗೆ ಹೋಗಿ landrecords.karnataka.gov.in ಸರ್ಚ್ ಕೊಡಿ. ಇದು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ವೆಬ್ಸೈಟ್ ಆಗಿದೆ ಇದರಲ್ಲಿ ಕಂದಾಯ ಇಲಾಖೆ ಮತ್ತು ಮೋಜಣಿಗೆ ಸಂಬಂಧಪಟ್ಟ ದಾಖಲೆಗಳನ್ನು ನೋಡಬಹುದು.
● ನಿಮ್ಮ ಜಮೀನಿನ ಹಳೆಯ ಮತ್ತು ಈಗಿನ ದಾಖಲೆಗಳನ್ನು ನೋಡಲು View RTC And MR ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● Karnataka land records image Retrival system ಎನ್ನುವ ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮೂಲಕ Log in ಆಗಬೇಕು. Mobile num. ಹಾಕಿ Captcha ಎಂಟ್ರಿ ಮಾಡಿ, Send OTP ಮೇಲೆ ಕ್ಲಿಕ್ ಮಾಡಿ, ಬಂದಿರುವ OTP ಎಂಟ್ರಿ ಮಾಡಿ LOG IN ಆಗಿ.
3D ಪ್ರಿಂಟ್ ಕಟ್ಟಡ ಕ್ರಾಂತಿ, ಇನ್ನು ಮುಂದೆ ಕಟ್ಟಡ ಕೆಲಸ ಕೂಡ ಸುಲಭ, ಖರ್ಚು ಸಹಾ ಅರ್ಧಕರ್ಧ ಕಡಿಮೆ.!
● ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಎಲ್ಲವನ್ನು ಸೆಲೆಕ್ಟ್ ಮಾಡಿ ನಿಮ್ಮ ಜಮೀನಿನ ಸರ್ವೆ ನಂಬರ್ ಎಂಟ್ರಿ ಮಾಡಿ ಸರ್ಚ್ ಕೊಡಿ.
● ತಕ್ಷಣವೇ ನೀವು ಎಂಟ್ರಿ ಮಾಡಿದ ಸರ್ವೆ ನಂಬರ್ ನ ಹಳೆ ಕಾಲದ ದಾಖಲೆಗಳು ಮತ್ತು ಈಗಿನ ದಾಖಲೆಗಳನ್ನು ಆನ್ಲೈನ್ ನಲ್ಲಿ ಎಂಟ್ರಿ ಮಾಡಿರುವ ಲಿಸ್ಟ್ ಬರುತ್ತದೆ.
● ದಾಖಲೆಗಳ ಹೆಸರು, ಎಷ್ಟು ಪುಟ ಇದೆ ಎನ್ನುವ ವಿವರದ ಸಮೇತ ಲಿಸ್ಟ್ ಇರುತ್ತದೆ. ಅದರಲ್ಲಿ ಯಾವ ದಾಖಲೆ ಬೇಕು ಅದರ ಮುಂದೆ ವಿವ್ಯೂ ಸಿಂಬಲ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ PDF ಫಾರ್ಮ್ ಅಲ್ಲಿ ದಾಖಲೆ ಡೌನ್ಲೋಡ್ ಆಗುತ್ತದೆ. ನೀವು ನಿಮ್ಮ ಮೊಬೈಲ್ ಮೂಲಕ ನೋಡಬಹುದು, ಪ್ರಿಂಟ್ ಪಡೆದುಕೊಳ್ಳುವುದಾದರೆ ಅದಕ್ಕೂ ಕೂಡ ಆಪ್ಷನ್ ಇರುತ್ತದೆ ಪ್ರಿಂಟ್ ಔಟ್ ಪಡೆದುಕೊಳ್ಳಬಹುದು.