ಪೋಸ್ಟ್ ಆಫೀಸ್’ನಾ ಈ ಸ್ಕೀಮ್ ನಲ್ಲಿ 1,000 ಕಟ್ಟಿದ್ರೆ ಸಾಕು 3,25,457/- ಸಿಗುತ್ತೆ.! ಹೆಚ್ಚು ಲಾಭ ಕೊಡುವ ಸ್ಕೀಮ್ ಇದು.!

 

WhatsApp Group Join Now
Telegram Group Join Now

ಪೋಸ್ಟ್ ಆಫೀಸ್ ನಲ್ಲಿ (Post office) ಹಲವಾರು ಯೋಜನೆಗಳು ಇವೆ. ಕೇಂದ್ರ ಸರ್ಕಾರದಡಿಯಲ್ಲಿ (Central government) ಅಂಚೆ ಕಚೇರಿಗಳು ಕಾರ್ಯನಿರ್ವಹಿಸುವುದರಿಂದ ನೀವು ಉಳಿತಾಯ ಮಾಡುವ ಅಥವಾ ಹೂಡಿಕೆ ಮಾಡುವ ಹಣಕ್ಕೆ ನೂರಕ್ಕೆ ನೂರರಷ್ಟು ಭದ್ರತೆ ಇರುತ್ತದೆ. ಉಳಿತಾಯ ಮಾಡುವವರಿಗೆ ಬೆಸ್ಟ್ ಆಪ್ಷನ್ ಆಗಿ ಪೋಸ್ಟ್ ಆಫೀಸ್ ಯೋಜನೆಗಳು ರೂಪುಗೊಂಡಿದ್ದು ಪ್ರತಿಯೊಂದು ವರ್ಗಗಳಿಗೂ ಅನುಗುಣವಾಗುವಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಹೆಣ್ಣು ಮಕ್ಕಳು ಇರುವವರು 10 ವರ್ಷದ ಒಳಗೆ ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಹಾಗೂ ಹಿರಿಯ ನಾಗರಿಕರು ತಮ್ಮ ನಿವೃತ್ತಿ ಜೀವನದ ಸಲುವಾಗಿ ಹಿರಿಯ ನಾಗರಿಕರ ಪೆನ್ಷನ್ ಯೋಜನೆಗಳಲ್ಲಿ, ಮಾಸಿಕ ಆದಾಯ ಪಡೆಯಲು ಬಳಸುವವರು ಪ್ರಧಾನ ಮಂತ್ರಿ ಮಾಸಿಕ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಬಹುದು.

ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿಗೆ ಅರ್ಜಿ ಆಹ್ವಾನ, ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ವೇತನ 83,900

ಇದೇ ರೀತಿಯ ಪೋಸ್ಟ್ ಆಫೀಸ್ ನ ಮತ್ತೊಂದು ಯೋಜನೆ PPF (Public provident fund Scheme) ಯೋಜನೆ.
500ರೂ. ಸಣ್ಣ ಉಳಿತಾಯದಿಂದ ಆರಂಭ ಮಾಡಿ 40 ಲಕ್ಷ ದವರೆಗೆ ಅತಿ ಹೆಚ್ಚು ಲಾಭಗಳಿಸುವ ಯೋಜನೆ ಇದಾಗಿದ್ದು ಇದರ ಬಗ್ಗೆ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

PPF ಯೋಜನೆ ಕುರಿತ ಪ್ರಮುಖ ಮಾಹಿತಿಗಳು:-
● ಈ ಯೋಜನೆ ಭಾರತೀಯರ ನಾಗರಿಕರಿಗೆ ಮಾತ್ರ
● ಈ ಯೋಜನೆಯಲ್ಲಿ ಸಣ್ಣ ಉಳಿತಾಯವನ್ನು ಆರಂಭಿಸಬಹುದು. ವಾರ್ಷಿಕವಾಗಿ 500 ರಿಂದ 15,000 ವರೆಗೂ ಕೂಡ ಹೂಡಿಕೆ ಮಾಡಬಹುದು.

ಅನ್ನ ಭಾಗ್ಯ ಯೋಜನೆ ಆಗಸ್ಟ್ ಕಂತಿನ ಹಣ ಜಮೆ ಆಗಿದೆ.! ನಿಮ್ಗೆ ಇನ್ನೂ ಹಣ ಜಮೆ ಆಗಿಲ್ವಾ, ಈ ರೀತಿ ಚೆಕ್ ಮಾಡಿ ಹಣ ಯಾಕೆ ಜಮೆ ಆಗಿಲ್ಲ ಅನ್ನೋ ಕಾರಣ ತಿಳ್ಕೊಳ್ಳಿ.!

● ಇಂತಿಷ್ಟೇ ಹಣವನ್ನು ಪ್ರೀಮಿಯಂ ರೀತಿಯಲ್ಲಿ ಪ್ರತಿ ತಿಂಗಳು ಪಾವತಿಸಬೇಕು ಎನ್ನುವ ನಿಯಮ ಇಲ್ಲ. ನಿಮಗೆ ಹಣ ಸಿಕ್ಕಾಗ ಹೂಡಿಕೆ ಮಾಡಬಹುದು ಅಥವಾ ಕನಿಷ್ಠ ಮೊತ್ತದ ಹಣವನ್ನು ವಾರ್ಷಿಕವಾಗಿ ಹೂಡಿಕೆ ಮಾಡುವ ಮೂಲಕ ಯೋಜನೆಯನ್ನು ಜೀವಂತವಾಗಿರಿಸಿಕೊಳ್ಳಬಹುದು.

● 18 ವರ್ಷ ತುಂಬಿದ ಯಾರು ಬೇಕಾದರೂ ಇದಕ್ಕಾಗಿ ಪೂರಕ ದಾಖಲೆಗಳನ್ನು ಸಲ್ಲಿಸಿ PPF ಯೋಜನೆಯನ್ನು ಖರೀದಿಸಬಹುದು.
ಬೇಕಾಗುವ ದಾಖಲೆಗಳು:-
1. ಆಧಾರ್ ಕಾರ್ಡ್ (Aadhar card)
2. ಪಾನ್ ಕಾರ್ಡ್ (Pan card)
3. ಬ್ಯಾಂಕ್ ಖಾತೆ ವಿವರ (Passbook details)
4 .ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ (Passport size photo).

ಗೃಹಲಕ್ಷ್ಮೀ ಯೋಜನೆಯ ಹೊಸ ರೂಲ್ಸ್, ಆಗಸ್ಟ್ 30 ಕ್ಕೆ ಹಣ ಬರಬೇಕು ಎಂದರೆ ಈ ಕೆಲಸ ಕಡ್ಡಾಯ.!

5. ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ (Mobile num.)
● 18 ವರ್ಷದ ಒಳಗಿನ ಮಕ್ಕಳು ಖಾತೆಯನ್ನು ತೆರೆಯಬೇಕು ಎಂದರೆ ಅವರ ಜನನ ಪ್ರಮಾಣ ಪತ್ರದ ಅವಶ್ಯಕತೆ ಇರುತ್ತದೆ. ಜೊತೆಗೆ ಪೋಷಕರ ಆಧಾರ್ ಕಾರ್ಡ್, ಬ್ಯಾಂಕ್ ಮಾಹಿತಿ ದಾಖಲೆಗಳನ್ನು ಕೊಟ್ಟು ಯೋಜನೆಯನ್ನು ಖರೀದಿಸಬಹುದು.
● ಪ್ರತಿ ತ್ರೈಮಾಸಿಕವಾಗಿ ಇದರ ಬಡ್ಡಿದರ ಪರಿಷ್ಕೃತಗೊಳ್ಳುತ್ತದೆ. ಪ್ರಸ್ತುತವಾಗಿ 7.1% ಬಡ್ಡಿದರವನ್ನು ನೀಡಲಾಗುತ್ತಿದೆ.

● ಈ ಯೋಜನೆಯಡಿ ಹೂಡಿಕೆ ಮಾಡುವ ಹಣಕ್ಕೆ ಪಡೆದ ಬಡ್ಡಿದರ ಹಾಗೂ ಮೆಚುರಿಟಿ ಮೊತ್ತದ ಮೇಲೂ ಕೂಡ ತೆರಿಗೆ ವಿನಾಯಿತಿ ಲಭ್ಯವಿದೆ.
● ಈ ಯೋಜನೆಯ ಮೆಚುರಿಟಿ ಅವಧಿ 5 ವರ್ಷಗಳು, ನೀವು ಬಯಸಿದರೆ ಮುಂದಿನ 5 ವರ್ಷಗಳವರೆಗೂ ಕೂಡ ಮತ್ತೆ ಯೋಜನೆಯನ್ನು ವಿಸ್ತರಿಸಬಹುದು.

 ಆಸ್ತಿ ಖರೀದಿ & ಮಾರಾಟ ಮಾಡುವವರಿಗೆ ಇಂದಿನಿಂದ ಹೊಸ ರೂಲ್ಸ್‌ ಜಾರಿ.!

● ಉದಾಹರಣೆಯೊಂದಿಗೆ ಹೇಳುವುದಾದರೆ ಪ್ರತಿ ತಿಂಗಳು 1,000 ರೂಪಾಯಿಯಂತೆ 15 ವರ್ಷ ಹೂಡಿಕೆ ಮಾಡಿದರೆ ನಿಮ್ಮ ಮೊತ್ತ 15 ವರ್ಷದ ಬಳಿಕ 1.80 ಲಕ್ಷ ರೂ. ಆಗಿರುತ್ತದೆ 7.1% ಬಡ್ಡಿದರಲ್ಲಿ 1.45 ಲಕ್ಷ ರೂಪಾಯಿ ಬಡ್ಡಿಯನ್ನು ಪಡೆಯಲಿದ್ದೀರಿ. ಹೀಗಾಗಿ ಒಟ್ಟು ಮೊತ್ತ 3.25 ಲಕ್ಷ ರೂ. ನಿಮಗೆ ಸಿಗಲಿದೆ.
● 15 ವರ್ಷದ ಹೂಡಿಕೆ ಬಳಿಕ ಹಣ ಹಿಂಪಡೆಯದೆ ಮತ್ತೆ 5 ವರ್ಷಕ್ಕೆ ವಿಸ್ತರಿಸಿದರೆ ಮತ್ತೆಷ5 ವರ್ಷ ಪ್ರತಿ ತಿಂಗಳು 1,000 ರೂಪಾಯಿ ಹೂಡಿಕೆ ಮಾಡಿದರೆ, 3.25 ಲಕ್ಷ ರೂಪಾಯಿ ಹಣದ ಬಡ್ಡಿ ಸಹಿತ 5.32 ಲಕ್ಷ ರೂಪಾಯಿ ಸಿಗಲಿದೆ.

● ಅಂಚೆ ಕಚೇರಿಗಳು ಮಾತ್ರವಲ್ಲದೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕೂಡ ಈ ಯೋಜನೆಗಳನ್ನು ಖರೀದಿಸಬಹುದು.
● ಯೋಜನೆಯ ಕುರಿತು ಹೆಚ್ಚು ಮಾಹಿತಿ ಬೇಕಾಗಿದ್ದಲ್ಲಿ ಹತ್ತಿರದಲ್ಲಿರುವ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಬೇಟಿ ಕೊಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now