ಸ್ವಲ್ಪ ತಲೆನೋವು ಅಂತ ನಿರ್ಲಕ್ಷ್ಯ ಮಾಡ್ಬೇಡಿ ಈ ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ.!

 

WhatsApp Group Join Now
Telegram Group Join Now

ತಲೆನೋವು ಎನ್ನುವುದು ಕೇಳುವವರಿಗೆ ಸಾಮಾನ್ಯವಾದ ಖಾಯಿಲೆ ಎನಿಸಿದರೂ ಕೂಡ ತಲೆನೋವಿನಿಂದ ಬಳಲುತ್ತಿರುವವರಿಗೆ ಜೀವನವೇ ಬೇಡ ಎನ್ನುವಷ್ಟು ಹಿಂಸೆ ಕೊಡುವ ಕಾಯಿಲೆ. ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ಬಾರಿ ತಲೆನೋವು ಬಂದೇ ಬರುತ್ತದೆ. ಕೆಲವರಿಗೆ ಪ್ರಯಾಣ ಮಾಡಿದಾಗ ತಲೆನೋವು ಬಂದರೆ, ಕೆಲವರಿಗೆ ಪರ್ಫ್ಯೂಮ್ ವಾಸನೆ ಅಥವಾ ದುರ್ವಾಸನೆಗಳು ಬಿದ್ದಾಗ ತಲೆನೋವು ಬರುತ್ತದೆ.

ಇನ್ನು ಕೆಲವರಿಗೆ ಮಾನಸಿಕ ಒತ್ತಡದಿಂದ ನಿದ್ರಾಹೀನತೆಯಿಂದ ಅಥವಾ ಶೀತದಿಂದ ತಲೆನೋವು ಬಂದರೆ ಇನ್ನು ಅನೇಕರಿಗೆ ಅವರದ್ದೇ ಆದ ಕಾರಣಗಳು ಇರುತ್ತವೆ. ಹೀಗಾಗಿ ಬಹುತೇಕ ಕಾಯಿಲೆಯಿಂದ ಬಳಲುವವರಿಗೆ ಯಾವ ಯಾವ ಸಮಯದಲ್ಲಿ ಅವರಿಗೆ ತಲೆ ನೋವು ಬರುತ್ತದೆ ಎನ್ನುವುದು ಚೆನ್ನಾಗಿ ಗೊತ್ತಿರುತ್ತದೆ.

ಇನ್ಮುಂದೆ ಎಲ್ಲಾ ಬ್ಯಾಂಕ್ ಗಳಲ್ಲೂ ಕನ್ನಡ ಕಡ್ಡಾಯ.! ಬ್ಯಾಂಕ್ ಸಿಬ್ಬಂದಿ ಕನ್ನಡ ಗೊತ್ತಿಲ್ಲ ಎನ್ನುವಾಗಿಲ್ಲ.! ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್

ತಲೆನೋವಿನಲ್ಲಿ ಕೂಡ ಹಲವು ವಿಧವಾದ ತಲೆನೋವು ಇದೆ. ಕೆಲವರಿಗೆ ಒಂದು ಕಡೆ ಮಾತ್ರ ತಲೆನೋವು ಬರುತ್ತದೆ, ಇದು ವಿಪರೀತವಾಗಿ ಹಿಂಸೆ ಕೊಡುತ್ತದೆ. ಕೆಲವರಿಗೆ ಎರಡು ಕಡೆ ತಲೆನೋವು ಬರುತ್ತದೆ. ಇನ್ನು ಕೆಲವರಿಗೆ ತಲೆ ಬುರುಡೆಯ ಹಿಂಭಾಗ ಮಾತ್ರ ಅಥವಾ ಮುಂಭಾಗ ಮಾತ್ರ ಅಥವಾ ತಲೆ ಮೇಲೆ ಮಾತ್ರ ಭಾರ ಬಿದ್ದ ಹಾಗೆ ತಲೆನೋವು ಬರುತ್ತದೆ.

ಈ ರೀತಿ ಯಾವುದೇ ತಲೆನೋವು ಬಂದರೂ ಕೂಡ ನಿಮಗೆ ಯಾವ ಹಂತದಲ್ಲಿ ವೈದ್ಯರನ್ನು ಭೇಟಿ ಮಾಡಲೇಬೇಕು ಎನ್ನುವುದರ ಬಗ್ಗೆ ಎಚ್ಚರ ಇರಬೇಕು. ಇಲ್ಲವಾದಲ್ಲಿ ತೀವ್ರವಾದ ಅಪಾಯವನ್ನು ಅನುಭವಿಸಬೇಕಾಗುತ್ತದೆ. ನಿಮಗೆ ಯಾವಾಗಲೂ ತಲೆನೋವು ಬರುತ್ತಿದ್ದರೆ ಔಷಧಿ ಅಂಗಡಿಗಳನ್ನು ಸಿಗುವ ಮಾತ್ರೆಗಳನ್ನು ಸೇವಿಸುತ್ತೀರಿ ಸೇವಿಸಿದ ನಂತರ ಅದು ಸರಿ ಹೋಗುವುದಾದರೆ ಇದರ ಬಗ್ಗೆ ಗಾಬರಿಕೊಳ್ಳುವ ಅಗತ್ಯ ಇಲ್ಲ.

ಸ್ಮಾರ್ಟ್ ರೇಷನ್ ಕಾರ್ಡ್ ಇದ್ದರೆ ಮಾತ್ರ ಇನ್ಮುಂದೆ ರೇಷನ್ ಸಿಗೋದು, ಹೊಸ ರೂಲ್ಸ್ ತರಲು ಮುಂದಾದ ಸರ್ಕಾರ.!

ಆದರೆ ಇದುವರೆಗೂ ಎಂದು ಕೂಡ ಕಾಡದ ರೀತಿ ವಿಪರೀತವಾದ ತಲೆನೋವು ಒಂದೇ ಬಾರಿ ಕಾಣಿಸಿಕೊಂಡರೆ ನೀವು ನಿರ್ಲಕ್ಷ ಮಾಡದೆ ವೈದ್ಯರ ಬಳಿ ಹೋಗಲೇಬೇಕು. ಜೊತೆಗೆ ನಿಮಗೆ ಪ್ರತಿನಿತ್ಯವೂ ಕೂಡ ತಲೆ ನೋವು ಬರುತ್ತಿದೆ ಒಂದು ವಾರಕ್ಕಿಂತ ಹೆಚ್ಚು ಸಮಯ ಕಂಟಿನ್ಯೂ ಆಗಿ ತಲೆನೋವು ಇದೆ ಎಂದರೆ ನೀವು ಆ ಸಮಯದಲ್ಲೂ ಕೂಡ ವೈದ್ಯರನ್ನು ಭೇಟಿ ಆಗಬೇಕು.

ಸಾಮಾನ್ಯವಾಗಿ ಬರುವ ತಲೆನೋವಿನ ಜೊತೆ ಕಣ್ಣು ಮಂಜಾಗುವುದು, ಎರಡೆರಡಾಗಿ ಕಾಣುವುದು, ವಿಪರೀತವಾಗಿ ಮೈಕೈ ನೋವಾಗುವುದು, ಮಾತು ತೊದಲಾಗುವುದು, ಒಂದು ಕಡೆ ಅಂಗಂಗಗಳು ಬಲಹೀನವಾಗುವುದು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ ಎಂದರೆ ಆಗಲು ಕೂಡ ನಿರ್ಲಕ್ಷ ಮಾಡದೆ ವೈದ್ಯರನ್ನು ಭೇಟಿ ಆಗಬೇಕು. ನಿಮ್ಮ ಬಳಿ ಸಾಧ್ಯವಾದರೆ ನರರೋಗ ತಜ್ಞರನ್ನೇ ಭೇಟಿಯಾಗುವುದು ಇನ್ನೂ ಉತ್ತಮ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಇದನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು.

ಈ ಮೂರು ವಿಷಯ ಗೊತ್ತಿದ್ರೆ ನಿಮಗೆ ಯಾವತ್ತೂ ಸ್ಟ್ರೋಕ್ ಹೊಡೆಯುವುದಿಲ್ಲ.! ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು.!

ಒಂದು ಸಾಮಾನ್ಯ ವೈದ್ಯಕೀಯ ಚಿಕಿತ್ಸೆಗೆ ಗುಣವಾಗುವ ತಲೆನೋವು, ಮತ್ತೊಂದು ಶಸ್ತ್ರ ಚಿಕಿತ್ಸೆಗೆ ಒಳಪಡಬೇಕಾಗಬಹುದಾದ ತಲೆನೋವು. ಈ ಎರಡನೇ ವಿಧಾನದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಪಡಬೇಕಾಗುತ್ತದೆ ಎಂದು ಏಕೆ ಹೇಳಲಾಗುತ್ತದೆ ಎಂದರೆ ಇದು ಮೆದುಳಿಗೆ ಸಂಬಂಧಿಸಿದಂತೆ ಬಂದಿರುವ ಸಮಸ್ಯೆ ಆಗಿರುತ್ತದೆ.

ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿರಬಹುದು ಅಥವಾ ಮೆದುಳು ಜ್ವರ ಬಂದಿರಬಹುದು, ಟ್ಯೂಮರ್ ಆಗಿರಬಹುದು ಮೆದುಳಿಗೆ ಇನ್ಫೆಕ್ಷನ್ ಆಗಿರಬಹುದು ಅಥವಾ ಸ್ಟ್ರೋಕ್ ಆಗುವ ಲಕ್ಷಣಗಳು ಇರಬಹುದು. ಆದ್ದರಿಂದ ತಪ್ಪದೇ ವೈದ್ಯರನ್ನು ಕಾಣಿ, ಇದನ್ನು ಪರಿಶೀಲಿಸಿ CT ಸ್ಕ್ಯಾನ್, MRI ಅಥವಾ ರಕ್ತ ಪರೀಕ್ಷೆಗಳನ್ನು ಮಾಡಿಸಿ ಅದಕ್ಕೆ ಸರಿಯಾದ ಚಿಕಿತ್ಸೆ ಕೊಟ್ಟು ನಿಮ್ಮನ್ನು ಗುಣಪಡಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now