ರೈತರಿಗೆ (farmer) ತಮ್ಮ ಕೃಷಿ ಚಟುವಟಿಕೆಗೆ (agriculture) ಹಲವಾರು ಬಗೆಯ ಯಂತ್ರೋಪಕರಣಗಳ ಅವಶ್ಯಕತೆ ಇರುತ್ತದೆ. ಇದರ ಜೊತೆಗೆ ಇನ್ನಿತರ ಕೃಷಿ ಸಾಮಗ್ರಿಗಳ ಮೇಲು ಕೂಡ ಆತ ಅವಲಂಬಿತನಾಗಿರುತ್ತಾನೆ. ಅವುಗಳ ಪೈಕಿ ಟಾರ್ಪಲಿನ್ (tarpaulin) ಕೂಡ ಒಂದು ಅವಶ್ಯಕ ಪರಿಕರವಾಗಿದೆ. ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹಣೆ ಮಾಡಲು ಅಥವಾ ಮಳೆ ಹಾಗೂ ಗಾಳಿಯಿಂದ ಬೆಳೆದ ಕಟಾವನ್ನು ರಕ್ಷಿಸಿಕೊಳ್ಳಲು.
ಹೀಗೆ ಕೃಷಿ ಚಟುವಟಿಕೆಯಲ್ಲಿ ಬಿತ್ತನೆ ಸಮಯದಿಂದ ಹಿಡಿದು ಬೆಳೆ ಸಾಗಣೆ ತನಕ ಎಲ್ಲಾ ಹಂತದಲ್ಲಿ ಕೂಡ ಒಂದಲ್ಲ ಒಂದು ರೂಪದಲ್ಲಿ ಟಾರ್ಪಲಿನ್ ಬಳಕೆಗೆ ಬರುತ್ತದೆ. ಇಷ್ಟೊಂದು ಅಗತ್ಯ ಪರಿಕರವಾಗಿರುವ ಟಾರ್ಪಲಿನ್ ಅನ್ನು ರೈತರಿಗೆ ಕಡಿಮೆ ಹಣಕ್ಕೆ ನೀಡಬೇಕು ಎನ್ನುವ ಉದ್ದೇಶದಿಂದ ಸರ್ಕಾರವು ಸಬ್ಸಿಡಿ (Subsidy) ರೂಪದಲ್ಲಿ ರೈತರಿಗೆ ಟಾರ್ಪಲಿಂಗ್ ವಿತರಣೆ ಮಾಡುತ್ತಿದೆ.
2023ರ ಈ ವರ್ಷದಲ್ಲಿ 2BHK ಮನೆ ಕಟ್ಟಿಸಲು ಎಷ್ಟು ಖರ್ಚಾಗುತ್ತೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಪ್ರತಿ ವರ್ಷವೂ ಕೂಡ ಸರ್ಕಾರ ಈ ರೀತಿ ಕ್ರಮ ಕೈಗೊಂಡು ಅರ್ಜಿ ಆಹ್ವಾನ ಮಾಡಿ ಅರ್ಹ ಫಲಾನುಭವಿಗಳಿಗೆ ಕಡಿಮೆ ದರದಲ್ಲಿ ಟಾರ್ಪಲಿನ್ ವಿತರಣೆ ಮಾಡುತ್ತದೆ. ಈಗ 2023-24ನೇ ಸಾಲಿನಲ್ಲಿ ಕೂಡ ರೈತರಿಗೆ ಸಬ್ಸಿಡಿ ರೂಪದಲ್ಲಿ ಟಾರ್ಪಲಿನ್ ವಿತರಣೆ ಮಾಡಲು ಅರ್ಜಿ ಆಹ್ವಾನ ಮಾಡಿದೆ. ಈ ಪ್ರಯೋಜನವನ್ನು ಪಡೆಯಲು ರೈತರು ಎಲ್ಲಿ ಅರ್ಜಿ ಸಲ್ಲಿಸಬೇಕು, ಬೇಕಾಗುವ ದಾಖಲೆಗಳೇನು ಮತ್ತು ಅರ್ಹತಾ ಮನದಂಡಗಳೇನು ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಈ ವಿಚಾರವನ್ನು ನಿಮ್ಮ ಎಲ್ಲಾ ಪರಿಚಿತ ರೈತರ ಜೊತೆ ಹಂಚಿಕೊಳ್ಳಿ.
ಪ್ರಯೋಜನಗಳು:-
● ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ರೈತ ಕೃಷಿ ಇಲಾಖೆಯಿಂದ 18×24 ಅಳತೆಯ ಅಂದರೆ 18ಅಡಿ ಉದ್ದ 24 ಅಡಿ ಅಗಲದ ಟಾರ್ಪಲಿನ್ ನ್ನು 50% ಸಬ್ಸಿಡಿಯಲ್ಲಿ ಪಡೆಯಬಹುದು.
● ಕಳೆದ ವರ್ಷ 1300 ರಿಂದ 1600 ರೂಪಾಯಿಗೆ ಈ ರೀತಿ ಟಾರ್ಪಲಿನ್ ವಿತರಣೆ ಮಾಡಲಾಗಿತ್ತು, ಈ ವರ್ಷವೂ ಕೂಡ ಅದೇ ದರ ನಿಗದಿಯಾಗಿದೆ.
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರಿಗೆ 90% ಸಬ್ಸಿಡಿ ಸಿಗಲಿದೆ
ಅರ್ಹತಾ ಮನದಂಡ:-
● ಕರ್ನಾಟಕ ರಾಜ್ಯಕ್ಕೆ ಸೇರಿದ ರೈತರಾಗಿರಬೇಕು
● ಎಲ್ಲ ವರ್ಗದ ರೈತರು ಕೂಡ ಅರ್ಜಿ ಸಲ್ಲಿಸಬಹುದು ಆದರೆ ಅರ್ಜಿ ಸಲ್ಲಿಸುವ ರೈತ ತನ್ನ ಹೆಸರಿನಲ್ಲಿ ಕೃಷಿ ಭೂಮಿ ಹೊಂದಿರಬೇಕು.
● ಕೇಳುವ ಎಲ್ಲ ದಾಖಲೆಗಳನ್ನು ಕೂಡ ಒದಗಿಸಬೇಕು.
● ಈಗಾಗಲೇ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗಿರುವ ರೈತರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಬೇಕಾಗುವ ದಾಖಲೆಗಳು:-
● ತುಂಬಿದ ಅರ್ಜಿ ಫಾರ್ಮ್ ಹಾಗೂ ಸರ್ಕಾರ ನಿಗದಿಪಡಿಸಿರುವ ಮೊತ್ತದ ನಗದು.
● ರೈತನ ಆಧಾರ್ ಕಾರ್ಡ್
● ಜಮೀನಿನ ಪಹಣಿ ಪತ್ರ
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
● ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ರೈತರುಗಳಿಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ:-
● ರೈತನಿಗೆ ಕೃಷಿ ಇಲಾಖೆಯಿಂದ ಯಾವುದೇ ಅನುಕೂಲತೆ ಲಭ್ಯವಿದ್ದರೂ ಕೂಡ ಅದನ್ನು ತಾಲೂಕಿನಲ್ಲಿರುವ ರೈತ ಸಂಪರ್ಕ ಕೇಂದ್ರದ ಮೂಲಕ ವಿತರಣೆ ಮಾಡಲಾಗುತ್ತದೆ, ಹಾಗಾಗಿ ರೈತರು ಸಬ್ಸಿಡಿಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪಡೆಯಲು ಹೇಗೆ ಅರ್ಜಿ ಸಲ್ಲಿಸುತ್ತಿದ್ದರು ಅದೇ ಮಾದರಿಯಲ್ಲಿ ಅರ್ಜಿ ಸಲ್ಲಿಸಬೇಕು.
● ರೈತರು ನೇರವಾಗಿ ತಮ್ಮ ಹತ್ತಿರದಲ್ಲಿರುವ ಯಾವುದೇ ರೈತ ಉತ್ಪಾದಕ ಕಂಪನಿಯ (FPO) ಕಚೇರಿಯನ್ನು ಭೇಟಿ ಮಾಡಿ ಕಡಿಮೆ ಬಡ್ಡಿದರದಲ್ಲಿ ಟಾರ್ಪಲಿನ್ ಪಡೆಯಬಹುದು.
ಸ್ಮಾರ್ಟ್ ರೇಷನ್ ಕಾರ್ಡ್ ಇದ್ದರೆ ಮಾತ್ರ ಇನ್ಮುಂದೆ ರೇಷನ್ ಸಿಗೋದು, ಹೊಸ ರೂಲ್ಸ್ ತರಲು ಮುಂದಾದ ಸರ್ಕಾರ.!