ಸ್ವಂತ ದ್ವಿಚಕ್ರ ಹಾಗು ನಾಲ್ಕು ಚಕ್ರದ ವಾಹನಗಳನ್ನು (Vehicle owners) ಹೊಂದಿರುವವರಿಗೆ ಸಾರಿಗೆ ಸಚಿವಾಲಯವು (transport department) ಪದೇ ಪದೇ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಟ್ರಾಫಿಕ್ ನಿಯಂತ್ರಣ, ವಾಹನ ಸವಾರರ ಸುರಕ್ಷತೆ, ಪರಿಸರ ಸಂರಕ್ಷಣೆ ಈ ರೀತಿ ನಾನಾ ಕಾರಣಗಳಿಂದಾಗಿ ಈ ರೀತಿಯ ಕಟ್ಟುನಿಟ್ಟಾದ ನಿಯಮಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಸೃಷ್ಟಿ ಆಗಿರುತ್ತದೆ.
ಈಗಾಗಲೇ ಸಾಕಷ್ಟು ನೀತಿ ನಿಯಮಗಳಿಂದ ಬೇಸತ್ತು ಹೋಗಿರುವ ವಾಹನ ಸವಾರರು ಈಗ ಮತ್ತೊಂದು ಆದೇಶವನ್ನು ಪಾಲಿಸಲೇಬೇಕಾಗಿದೆ. ಸಾರಿಗೆ ಇಲಾಖೆಯ ಆದೇಶದ ಪ್ರಕಾರ 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾಗಿರುವ ವಾಹನಗಳ ಮಾಲೀಕರು ನವೆಂಬರ್ 17 ರೊಳಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ತೆರಿಗೆ ಕಟ್ಟುವವರಿಗೆ ಅಕ್ಟೋಬರ್ ನಿಂದ ಹೊಸ ರೂಲ್ಸ್ ಜಾರಿ.!
ನಿಗದಿತ ಅವಧಿಯೊಳಗೆ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯವಾಗಿದೆ, ಇಲ್ಲವಾದಲ್ಲಿ ಆ ಗಡುವು ಮುಗಿದ ಬಳಿಕ HSRP ನಂಬರ್ ಪ್ಲೇಟ್ ಇಲ್ಲದೇ ವಾಹನಗಳನ್ನು ರಸ್ತೆಗಳಿಸಿದರೆ ಗರಿಷ್ಠ 1000ರೂ. ವರೆಗೂ ಕೂಡ ದಂಡ (Fine) ತೆರಬೇಕಾಗುತ್ತದೆ. ಈ ರೀತಿ ಹೊಸದಾಗಿ ಸೂಚಿಸಿರುವ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸಿಕೊಳ್ಳುವುದರಿಂದ ವಾಹನ ಸವಾರರಿಗೆ ಸಾಕಷ್ಟು ಅನುಕೂಲತೆ ಆಗುತ್ತದೆ.
ವಾಹನ ಕಳವಾದ ಸಂದರ್ಭದಲ್ಲಿ ಅದನ್ನು ಸುಲಭವಾಗಿ ಟ್ರಾಕ್ ಮಾಡುವುದರಿಂದ ಹಿಡಿದು ಕಾನೂನು ಬಾಹಿರ ಅಪರಾಧ ಕೃತ್ಯಗಳಿಗೆ ತಮ್ಮ ವಾಹನ ಬಳಕೆ ಆಗದಂತೆ ತಡೆಯಲು ಬಹುದಾಗಿದೆ. ಪರೋಕ್ಷವಾಗಿ ರಾಷ್ಟ್ರೀಯ ಭದ್ರತೆಯಲ್ಲೂ ಕೂಡ ಇದು ಪ್ರಮುಖ ಪಾತ್ರ ವಹಿಸುತ್ತದೆ. ರಾಷ್ಟ್ರೀಯ ಡೇಟಾಬೇಸಲ್ಲೂ ಕೂಡ ವಾಹನದ ಮಾಹಿತಿ ನೋಂದಣಿ ಆಗುವುದರಿಂದ ಇದು ಸ್ವಾಗತಾರ್ಹ ಕ್ರಮವೇ ಆಗಿದೆ ಎಂದು ಒಪ್ಪಿಕೊಳ್ಳಬಹುದಾಗಿದೆ.
ಇನ್ಮುಂದೆ ಈ ಮೊತ್ತಕ್ಕಿಂತ ಹೆಚ್ಚು ನಗದು ಹಣದ ವ್ಯವಹಾರ ಮಾಡುವಂತಿಲ್ಲ RBI ಎಚ್ಚರಿಕೆ.!
ಈಗಾಗಲೇ ಸಾಕಷ್ಟು ರಾಜ್ಯಗಳು ಈ ನಿಯಮವನ್ನು ಅಳವಡಿಸಿಕೊಂಡಿದ್ದು ಕರ್ನಾಟಕ ಸಾರಿಗೆ ಇಲಾಖೆ (Karnataka transport department) ಕೂಡ ಆಗಸ್ಟ್ ತಿಂಗಳಿನಿಂದ ಇದನ್ನು ಒಪ್ಪಿಕೊಂಡು ಅಧಿಕೃತವಾಗಿ ಆದೇಶ ನೀಡಿದೆ. ಸರ್ಕಾರವು ಅಧಿಸೂಚನೆ ಹೊರಡಿಸಿದಾಗಲೇ ಈ ಹೊಸ ಮಾದರಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಬಗ್ಗೆ ಮಾರ್ಗಸೂಚಿ ಕೂಡ ಹೊರಡಿಸಿತ್ತು.
ಆ ಪ್ರಕಾರವಾಗಿ ಕನಿಷ್ಠ 400 ರೂ. ಖರ್ಚಿನ ಒಳಗಡೆ ವಾಹನ ಮಾಲೀಕರು ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. ನೀವಿನ್ನು ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಬದಲಾಯಿಸಿಲ್ಲ ಎಂದರೆ ನಾವು ಹೇಳುವ ಈ ವಿಧಾನದ ಮೂಲಕ ಅದನ್ನು ಪೂರ್ತಿಗೊಳಿಸಿ.
● ಮೊದಲಿಗೆ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ, ಬಳಿಕ ಬುಕ್ HSRP ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
● ನಿಮ್ಮ ವಾಹನದ ಮೂಲ ವಿವರವನ್ನು ಸರಿಯಾಗಿ ಭರ್ತಿ ಮಾಡಬೇಕು ಆನಂತರ ನಿಮಗೆ ಅನುಕೂಲವಾಗುವ ಡೀಲರ್ಸ್ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು.
● ಶುಲ್ಕ ವನ್ನು ಆನ್ಲೈನ್ ಮೂಲಕವೇ ಪಾವತಿ ಮಾಡಬೇಕು. ಇದಾದ ಮೇಲೆ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ನಮೂದಿಸಿ ಮುಂದಿನ ಆಯ್ಕೆಗಳಲ್ಲಿ ನಿಮಗೆ ಬೇಕಾದ ದಿನಾಂಕ, ಸ್ಥಳ, ಸಮಯವನ್ನು ಆಯ್ಕೆ ಮಾಡಿಕೊಂಡು ಅದೇ ನಿಗದಿತ ಸಮಯದಲ್ಲಿ ಹೋಗುವ ಮೂಲಕ ನಿಮ್ಮ ನಂಬರ್ ಪ್ಲೇಟ್ ಅನ್ನು HSRP ನಂಬರ್ ಪ್ಲೇಟ್ ಗೆ ಬದಲಾಯಿಸಿಕೊಳ್ಳಬಹುದು.
ನಿಮ್ಮ ಊರಿನಲ್ಲಿ ಸರ್ಕಾರಿ ಭೂಮಿ ಗುರುತಿಸುವುದು ಹೇಗೆ.? ನಿಮ್ಮ ಜಮೀನು ಸರಕಾರದ್ದೇ ಆಗುತ್ತೆ ಹೇಗೆ ಗೊತ್ತಾ.?
● ನಿಮ್ಮ ಶೋರೂಮ್ ಗಳು ಅಥವಾ ಡೀಲರ್ಸ್ ಬಳಿ ಬದಲಾಯಿಸಿಕೊಳ್ಳಲು ಅವಕಾಶ ಇದೆ, ಆ ಲಿಸ್ಟ್ ಕೂಡ ಈ ಮೇಲೆ ತಿಳಿಸಿದ ವೆಬ್ಸೈಟ್ ಅಲ್ಲಿಯೇ ಇರುತ್ತದೆ ನಿಮಗೆ ಸೂಕ್ತವಾದದ್ದನ್ನು ನೀವು ಸೆಲೆಕ್ಟ್ ಮಾಡಿಕೊಳ್ಳಬಹುದು.
● ಈಗ ನೀವು ಇದನ್ನು ಬದಲಾಯಿಸಿಕೊಳ್ಳದಿದ್ದರೆ ಮುಂದೆ ನಿಮ್ಮ ವಾಹನವನ್ನು ಮಾರಾಟ ಮಾಡುವಾಗ ಅಥವಾ ಮಾಲೀಕರ ವಿಳಾಸ ಬದಲಾಯಿಸುವಾಗ ಸಂದರ್ಭಗಳಲ್ಲಿ ಕಾನೂನು ತೊಡಕುಗಳು ಉಂಟಾಗುತ್ತವೆ. ಆದ್ದರಿಂದ ತಪ್ಪದೇ ಎಲ್ಲಾ ದ್ವಿಚಕ್ರ ಹಾಗು ನಾಲ್ಕು ಚಕ್ರ ವಾಹನ ಮಾಲೀಕರು ಈ ಪ್ರಕ್ರಿಯೆಯನ್ನು ನವೆಂಬರ್ 17ರ ಒಳಗೆ ಪೂರ್ತಿಗೊಳಿಸಿ.