ಕರ್ನಾಟಕದ ಗ್ಯಾರಂಟಿ ಯೋಜನಗಳ (Guarantee Scheme) ಪೈಕಿ ಗೃಹಲಕ್ಷ್ಮಿ ಯೋಜನೆಯು (Gruhalakshmi) ಹೈ ಬಜೆಟ್ ಯೋಜನೆಯಾಗಿದೆ. ರಾಜ್ಯದಲ್ಲಿ 1.10 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳಿದ್ದಾರೆ ಎನ್ನುವುದನ್ನು ಸರ್ಕಾರಿ ಅಂಶಗಳು ಹೇಳುತ್ತಿದೆ. ಆಗಸ್ಟ್ 30ರಂದು ಫಲಾನುಭವಿಗಳ ಖಾತೆಗೆ DBT ಮೂಲಕ ಮೊದಲ ಕಂತಿನ ಹಣ ವರ್ಗಾವಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.
ಲಕ್ಷಾಂತರ ಫಲಾನುಭವಿಗಳು ಹಣ ಪಡೆದಿದ್ದರೆ ಇನ್ನು ಸಹ ಅನೇಕರು ಹಣ ಪಡೆಯಲು ಸಾಧ್ಯವಾಗಿಲ್ಲ, ಹಾಗಾಗಿ ಅರ್ಹ ಪಲಾನುಭವಿಗಳು ಈ ವಿಷಯದ ಕುರಿತು ಬಹಳಷ್ಟು ಗೊಂದಲಕ್ಕೊಳಗಾಗಿದ್ದಾರೆ. ನೀವು ಸಹ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ನಿಮ್ಮ ಖಾತೆಗೆ ಇನ್ನೂ ಹಣ ವರ್ಗಾವಣೆ ಆಗಿಲ್ಲ ಎಂದರೆ ಈ ರೀತಿ ಸಮಸ್ಯೆಗಳು ಆಗಿರಬಹುದು ಈಗ ನಾವು ತಿಳಿಸುವ ಈ ಸಂಗತಿಗಳು ಸರಿ ಇದೆಯೇ ಎಂದು ಪರಿಶೀಲಿಸಿಕೊಂಡು ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಿ ಆಗ ಖಂಡಿತವಾಗಿಯೂ ನಿಮಗೆ ಸಹಾಯಧನ ಸಿಗುತ್ತದೆ.
ರೇಷನ್ ಕಾರ್ಡ್ ಇದ್ದವರಿಗೆ ಕೇವಲ 428 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲೆಂಡರ್.!
● ರೇಷನ್ ಕಾರ್ಡಲ್ಲಿ ಮುಖ್ಯಸ್ಥದ ಮುಖ್ಯಸ್ಥೆಯಾಗಿರುವ ಮಹಿಳೆಯ ಬ್ಯಾಂಕ್ ಖಾತೆಯು (Bank account) ಸಕ್ರಿಯವಾಗಿರಬೇಕು, ಬ್ಯಾಂಕ್ ಖಾತೆಗೆ Aadhar ಸೀಡಿಂಗ್ NPCI ಮ್ಯಾಪಿಂಗ್ ಆಗಿರಬೇಕು. ಆಧಾರ್ ವೆಬ್ ಸೈಟ್ ಗೆ ಭೇಟಿ ಕೊಟ್ಟು ಇದನ್ನು ಪರಿಶೀಲಿಸಿಕೊಳ್ಳಿ, ಇದರಲ್ಲಿ ಸಮಸ್ಯೆಗಳಿದ್ದರೆ ಬ್ಯಾಂಕ್ ಶಾಖೆಗೆ ಸೂಕ್ತ ದಾಖಲೆಗಳ ಜೊತೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಿ.
● ಗೃಹಲಕ್ಷ್ಮಿ ಯೋಜನೆಯ ಸಹಾಯಧನವು ಆಧಾರ್ ಕಾರ್ಡ್ ಮಾಹಿತಿ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತದೆ. ಹಾಗಾಗಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮತ್ತು ರೇಷನ್ ಕಾರ್ಡ್ ಈ ಮೂರು ದಾಖಲೆಗಳಲ್ಲೂ ಕೂಡ ಹೆಸರಿನಲ್ಲಿ ಯಾವುದೇ ವ್ಯತ್ಯಾಸ ಇರಬಾರದು ಈ ರೀತಿ ತಪ್ಪುಗಳಾಗಿದ್ದರೆ ಕೂಡಲೇ ಇವುಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಿ.
ಕೋಟಿ ಕೋಟಿ ಬೆಲೆ ಬಾಳುವ ಫ್ಲಾಟ್ ಕೇವಲ 100 ರೂಪಾಯಿಗೆ ವಿತರಣೆ.!
● ರೇಷನ್ ಕಾರ್ಡ್ ನಲ್ಲಿ (Ration card) ಇ-ಕೆವೈಸಿ (e-kyc) ಅಪ್ಡೇಟ್ ಆಗಿರಬೇಕು. ಇದನ್ನು ಹತ್ತಿರದ ನ್ಯಾಯಬೆಲೆ ಅಂಗಡಿ ಅಥವಾ ನಿಮ್ಮ ತಾಲೂಕಿನ ಆಹಾರ ಇಲಾಖೆ ಕಚೇರಿಗೆ ಭೇಟಿ ಕೊಟ್ಟು ಮಾಡಿಸಬಹುದು. ನಿಮ್ಮ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ದಾಖಲೆಯೊಂದಿಗೆ ಹೋಗಿ ಇ-ಕೆವೈಸಿ ಅಪ್ಡೇಟ್ ಮಾಡಿಸಿ, ಈ ಕಾರಣದಿಂದ ಕೂಡ ಗೃಹಲಕ್ಷ್ಮಿ ಹಣ ಸ್ಥಗಿತಗೊಂಡಿರಬಹುದು.
● ಸರ್ಕಾರ ಹಲವು ಕಾರಣಗಳಿಂದ ಕೆಲ ಪಡಿತರ ಚೀಟಿಗಳನ್ನು ರದ್ದುಪಡಿಸಿದೆ. ರೇಷನ್ ಕಾರ್ಡ್ ಸ್ಥಿತಿ (Ration card status) ಸಕ್ರಿಯವಾಗಿದ್ದಾಗ ಮಾತ್ರ ನಿಮಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಿಗಲು ಸಾಧ್ಯ. ಹಾಗಾಗಿ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ ನಾವು ಹೇಳುವ ಈ ವಿಧಾನದ ಮೂಲಕ ಅದನ್ನು ಚೆಕ್ ಮಾಡಿಕೊಳ್ಳಿ.
ಸ್ವಂತ ಮನೆಯ ಕನಸಿದ್ದರೆ ಈ ಪ್ರಯೋಗ ಮಾಡಿ, 2 ತಿಂಗಳ ಒಳಗೆ ನಿಮ್ಮ ಕನಸು ನನಸಾಗುತ್ತದೆ.!
1. ಮೊದಲಿಗೆ ಗಮಾಹಿತಿ ಕಣಜ ವೆಬ್ಸೈಟ್ಗೆ ಭೇಟಿ ಕೊಡಿ, www.mahitikanaja.karntaka.gov.in ನೀ ಕ್ಲಿಕ್ ಮಾಡುವ ಮೂಲಕ ಭೇಟಿ ಕೊಡಬಹುದು
2. ಮುಖಪುಟದಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆ ಕೇಳಲಾಗುತ್ತದೆ ಅದನ್ನು ನಮೂದಿಸಿ ನಿಮ್ಮ ಜಿಲ್ಲೆಯಲ್ಲಿ ಸೆಲೆಕ್ಟ್ ಮಾಡಿ, ಇಷ್ಟಾದ ಕೂಡಲೇ ನಿಮ್ಮ ರೇಷನ್ ಕಾರ್ಡ್ ಕುರಿತ ಸಂಪೂರ್ಣ ಮಾಹಿತಿ ಬರುತ್ತದೆ.
3. ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ, ನ್ಯಾಯಬೆಲೆ ಅಂಗಡಿ ಮತ್ತು ರೇಷನ್ ಕಾರ್ಡ್ ಸ್ಥಿತಿ ಕೂಡ ಪೇಜ್ ಮೇಲೆ ಕಾಣಿಸುತ್ತದೆ. ಹಾಗೆ ಅದರ ಕೆಳಗಡೆ ನಿಮ್ಮ ಕುಟುಂಬದಲ್ಲಿರುವ ಎಲ್ಲಾ ಸದಸ್ಯ ಸಂಖ್ಯೆ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಹೆಸರು ಎಲ್ಲಾ ವಿವರ ಕೂಡ ಬರುತ್ತದೆ ಇದರಲ್ಲಿ ರೇಷನ್ ಕಾರ್ಡ್ ಸ್ಥಿತಿ ಸಕ್ರಿಯ ಎಂದು ಇದೆಯೇ ಧೃಡಪಡಿಸಿಕೊಳ್ಳಿ.