ಆಗಸ್ಟ್ 30 ರಂದು ಗೃಹಲಕ್ಷ್ಮಿ ಯೋಜನೆಗೆ (Gruhalakshmi) ನೋಂದಾಯಿಸಿಕೊಂಡಿದ್ದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಸರ್ಕಾರ ಈಗಾಗಲೇ ಎರಡು ತಿಂಗಳುಗಳ ಗೃಹಲಕ್ಷ್ಮಿ ಯೋಜನೆಗೆ ಬೇಕಾದ ಬಜೆಟ್ ಮೊತ್ತವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ (Women and Wellfare department) ಮಂಜೂರು ಮಾಡಿದೆ.
ಗೃಹಲಕ್ಷ್ಮಿ ಯೋಜನೆಗೆ ರಾಜ್ಯದ 1.10 ಕೋಟಿ ಮಹಿಳೆಯರು ಅರ್ಹರಾಗಿದ್ದರು ಆದರೆ ಎಲ್ಲರ ಖಾತೆಗೂ ಹಣ ವರ್ಗಾವಣೆಯಾಗಿಲ್ಲ. 7-8 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳು ಆಕ್ಟಿವ್ ಆಗಿಲ್ಲ ಮತ್ತು ಅವರ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲ ಈ ಕಾರಣಕ್ಕಾಗಿ ಅವರ ಖಾತೆಗೆ ಹಣ ತುಂಬಿಸಲು ಸಾಧ್ಯವಾಗಿಲ್ಲ.
ಈ ಸಮಸ್ಯೆಗಳನ್ನು ಸರಿಪಡಿಸಿಕೊಂಡ ನಂತರ ಅವರ ಖಾತೆಗೆ ಹಣ ಹೋಗುತ್ತದೆ ಎನ್ನುವ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನೀಡಿದ್ದಾರೆ. ಇದನ್ನು ಹೊರತುಪಡಿಸಿ ಎಲ್ಲಾ ಸರಿ ಇದ್ದರೂ ನಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎಂದು ದೂರುವ ಮಹಿಳೆಯರ ಸಂಖ್ಯೆ 20% ರಷ್ಟಿದೆ, ಇವರಿಗೆಲ್ಲ ಪ್ರಮುಖ ಮಾಹಿತಿಯನ್ನು ತಿಳಿಸುತ್ತಿದ್ದೇವೆ.
ಈಗ ನಾವು ಹೇಳುವ ಈ ಎಲ್ಲ ಮಾಹಿತಿಗಳನ್ನು ಸರಿ ಇದೆಯೇ ಎಂದು ಮತ್ತೊಮ್ಮೆ ಚೆಕ್ ಮಾಡಿಕೊಳ್ಳಿ
● ಗೃಹಲಕ್ಷ್ಮಿ ಯೋಜನೆಗೆ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆ ಅರ್ಹವಾಗಿರುತ್ತಾರೆ. ಮ ಸರ್ಕಾರ DBT ಮೂಲಕ ನೇರವಾಗಿ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹಣ ವರ್ಗಾವಣೆ ಮಾಡುತ್ತಿರುವುದರಿಂದ ಆ ಮಹಿಳೆಯ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ (Aadhar Seeding NPCI Mapping) ಆಗಿದಿಯೇ ಎನ್ನುವುದನ್ನು ಧೃಡಪಡಿಸಿಕೊಳ್ಳಿ.
ಸಹಕಾರಿ ಸಂಘಗಳಲ್ಲಿ ಸಾಲ ಮಾಡಿದ್ದೀರಾ.? ಆಗಿದ್ರೆ ಒಮ್ಮೆ ಈ ವರದಿ ನೋಡಿ.!
ನೀವು UIDAI ನ ಅಧಿಕೃತ ವೆಬ್ ಸೈಟ್ ಭೇಟಿ ಕೊಡುವ ಮೂಲಕ ನಿಮ್ಮ ಬ್ಯಾಂಕ್ ಸೀಡಿಂಗ್ ಸ್ಟೇಟಸ್ (bank seeding status) ಚೆಕ್ ಮಾಡಿಕೊಳ್ಳಬಹುದು. ಒಂದು ವೇಳೆ ಇದು ಪೂರ್ತಿ ಹಾಕಿಲ್ಲ ಎಂದರೆ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿಕೊಟ್ಟು ದಾಖಲೆಗಳ ಜೊತೆ ಅರ್ಜಿ ಸಲ್ಲಿಸಿ ಪ್ರಕ್ರಿಯೆ ಪೂರ್ತಿಗೊಳಿಸಿ. ಈಗಾಗಲೇ ನಿಮ್ಮ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿದ್ದರೆ ಆ ಖಾತೆ ಆಕ್ಟಿವ್ (account active) ಆಗಿದೆಯೇ ಎಂದು ಚೆಕ್ ಮಾಡಿಕೊಳ್ಳಿ.
● ಕೆಲವು ಮಹಿಳೆಯರ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ನಲ್ಲಿರುವ ಹೆಸರಿನಲ್ಲಿ ವ್ಯತ್ಯಾಸವಾಗಿದೆ. ಯಾವುದೇ ರೀತಿ ಸ್ಪೆಲ್ಲಿಂಗ್ ಅಥವಾ ಇನ್ಯಾವುದೇ ದೋಷ ಇರದೆ ಭಾವಚಿತ್ರ ಸಮೇತ ಯಥವತ್ತಾಗಿ ದಾಖಲೆಗಳಲ್ಲಿರುವ ಮಾಹಿತಿಗಳು (documents mismatch) ಹೊಂದಾಣಿಕೆಯಾಗಬೇಕು.
ಪ್ರೈಸ್ ಮನಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.! ಅರ್ಜಿ ಸಲ್ಲಿಸುವುದು ಹೇಗೆ.? ಬೇಕಾಗುವ ದಾಖಲೆಗಳೇನು ನೋಡಿ.!
ಹಣ ವರ್ಗಾವಣೆ ಮಾಡಲು ಖಾತೆ ಪರಿಶೀಲನೆ ಮಾಡಿದಾಗ ಈ ವ್ಯತ್ಯಾಸಗಳಿದ್ದರೆ ಅರ್ಜಿಗಳು ರಿಜೆಕ್ಟ್ ಆಗುತ್ತದೆ ಅಥವಾ ಹಣ ವರ್ಗಾವಣೆ ಸಕ್ಸಸ್ ಆಗದೆ ಇರುವ ಸಾಧ್ಯತೆಗಳು ಇವೆ ಹಾಗಾಗಿ ಈ ರೀತಿ ಸಮಸ್ಯೆಗಳು ಆಗಿದ್ದರೆ ನಿಮ್ಮ ಯಾವ ದಾಖಲೆಯಲ್ಲಿ ಹೆಸರು ತಪ್ಪಾಗಿದೆ ಇದನ್ನು ಕೂಡಲೆ ತಿದ್ದುಪಡಿ ಮಾಡಿಸಿಕೊಳ್ಳಿ.
● ರೇಷನ್ ಕಾರ್ಡ್ ಇ-ಕೆವೈಸಿ ಅಪ್ಡೇಟ್ (e-kyc update) ಆಗಿರದ ಕಾರಣದಿಂದ ಕೂಡ ಅನೇಕರಿಗೆ ಹಣ ವರ್ಗಾವಣೆಯಾಗಿಲ್ಲ. ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಮಾಹಿತಿಗಳನ್ನು ಕೊಡುವ ಮೂಲಕ ಇ-ಕೆವೈಸಿ ಅಪ್ಡೇಟ್ ಮಾಡಿಸಿ.
ಇಂಥವರಿಗೆ ಗೃಹಲಕ್ಷ್ಮಿ ಹಣ ಬರಲ್ಲ.! 1 ಲಕ್ಷ APL, BPL, ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿಗಳು ತಿರಸ್ಕೃತ.!
ಈ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು ಮತ್ತೊಮ್ಮೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಆಗ ಖಂಡಿತವಾಗಿಯೂ ಕೂಡ ನಿಮಗೆ ಎರಡು ಕಂತಿನ ಹಣ ಕೂಡ ಬರುತ್ತದೆ. ಸೆಪ್ಟೆಂಬರ್ 26 ಕ್ಕೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ ಆಗುತ್ತದೆ ಎಂದು ಹೇಳಲಾಗುತ್ತಿತ್ತು, ಅದೇ ಪ್ರಕಾರವಾಗಿ ಸೆಪ್ಟೆಂಬರ್ 30ರ ಒಳಗೆ ಎಲ್ಲಾ ಫಲಾನುಭವಿಗಳ ಖಾತೆಗೂ ಎರಡನೇ ಕಂತಿನ ಹಣ ವರ್ಗಾವಣೆಯಾಗಲಿದೆ ಎಂದು ತಿಳಿದುಬಂದಿದೆ.