ಪೆಟ್ರೋಲ್ ಬಂಕ್ ಎಷ್ಟು ಲಾಭದಾಯಕ ಬಿಸಿನೆಸ್ ಗೊತ್ತಾ.? ಬಂಡವಾಳ ಎಷ್ಟು ಬೇಕು, ಎಷ್ಟು ಲಾಭ ಸಿಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

WhatsApp Group Join Now
Telegram Group Join Now

ಪೆಟ್ರೋಲ್ ಬಂಕ್ ಬಿಸಿನೆಸ್ ನಿಜವಾಗಿ ಒಂದು ಉತ್ತಮ ಆದಾಯ ಕೊಡುವ ಬಿಸಿನೆಸ್ ಆಗಿದೆ. ನಮ್ಮ ದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದಿಂದ ಒಟ್ಟು 4,000 ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ ಗಳು ಇವೆ. ದೇಶದ ಪ್ರತಿಷ್ಠಿತ ಕಂಪನಿಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ ಗ್ಯಾಸ್, ಭಾರತ್ ಪೆಟ್ರೋಲಿಯಂ ರಿಲೈನ್ಸ್ ಇಂಡಸ್ಟ್ರೀಸ್, ನಯಾರ ಎನರ್ಜಿ, ಶೆಲ್ ಇವುಗಳಿಂದ ಒಂದು ದಿನಕ್ಕೆ 30-31 ಲಕ್ಷ ಬ್ಯಾರಲ್ ಪೆಟ್ರೋಲಿಯಂ ಉತ್ಪನ್ನಗಳು ಮಾರಾಟವಾಗುತ್ತದೆ ಎಂದು ಅಂದಾಜಿಸಲಾಗಿದೆ.

ಈಗ ನೋಡಿ ಪ್ರತಿ ಮನೆ ಮನೆಯಲ್ಲೂ ಕೂಡ ಕನಿಷ್ಠ ಒಂದಾದರೂ ದ್ವಿ ಚಕ್ರ ವಾಹನ ಇರುತ್ತದೆ. ಹೀಗಾಗಿ ದಿನ ಬೆಳಗಾಗಿ ಹಾಲು ತರಲು ತಪ್ಪದೇ ಡೈರಿಗೆ ಹೋಗುವ ಹಾಗೆ ಗಾಡಿಗೆ ಪೆಟ್ರೋಲ್ ತುಂಬಿಸಲು ಬಂಕ್ ಗೆ ಹೋಗಲೇಬೇಕು. ಇಷ್ಟು ಅಗತ್ಯತೆ ಆಗಿರುವ ಇದರ ಸಂಬಂಧಿತ ಬಿಸಿನೆಸ್ ಮಾಡುವುದರಿಂದ ನಿಶ್ಚಿತ ಲಾಭ ಸಿಗುತ್ತದೆ. ಒಂದು ಪೆಟ್ರೋಲ್ ಬಂಕ್ ಒಂದು ದಿನಕ್ಕೆ ಕನಿಷ್ಠ 7,000 ಲೀಟರ್ ಪೆಟ್ರೋಲ್ ಮಾರಾಟ ಮಾಡುತ್ತದೆ.

ರಾಜ್ಯದ ಜನತೆಗೆ ಸಿಹಿ ಸುದ್ದಿ, 10 ನಿಗಮಗಳಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಿರಿ‌.!

ಒಂದು ಲೀಟರ್ ಪೆಟ್ರೋಲ್ ಗೆ 2.90ರೂ. ಹಾಗೂ 1 ಲೀ. ಡೀಸಲ್ ಗೆ 1.85ರೂ. ಮಿನಿಮಮ್ ಕಮಿಷನ್ ಇರುವುದರಿಂದ ಒಂದು ದಿನಕ್ಕೆ 3-5 ಸಾವಿರಲೀಟರ್ ಮಾರಾಟವಾದರೂ ಸಾಕು ಬಹಳ ದೊಡ್ಡ ಲಾಭವಾಗುತ್ತದೆ. ಹಾಗಾದರೆ ಈ ಉದ್ಯಮ ಆರಂಭಿಸುವುದು ಹೇಗೆ? ಏನೆಲ್ಲಾ ಅರ್ಹತೆಗಳು ಇರಬೇಕು? ದಾಖಲೆಗಳು ಏನು ಬೇಕು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಪೆಟ್ರೋಲ್ ಬಂಕ್ ಬಿಸಿನೆಸ್ ಆರಂಭಿಸುವುದಾದರೆ ಇರಬೇಕಾದ ಅರ್ಹತೆಗಳು:-

● ಭಾರತದ ಪ್ರಜೆಯಾಗಿರಬೇಕು
● NRI ಗಳಾಗಿದ್ದರೆ ಕನಿಷ್ಠ ಒಂದೂವರೆ ವರ್ಷ ಭಾರತದಲ್ಲಿ ನೆಲೆಸಿರಬೇಕು.
● 21 ರಿಂದ 55 ವರ್ಷದ ಒಳಗಿನ ವಯೋಮಾನದವರಾಗಿರಬೇಕು.
● ಹಿಂದುಳಿದ ವರ್ಗದವರು ಕನಿಷ್ಠ 10ನೇ ತರಗತಿ ವಿದ್ಯಾಭ್ಯಾಸ ಪಡೆದಿರಲೇಬೇಕು, ಅವರನ್ನು ಹೊರತುಪಡಿಸಿ ಉಳಿದ ವರ್ಗದವರು ಕನಿಷ್ಠ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಇರಬೇಕು.

● 800-1,200 sq.ft ಜಾಗ ಹೊಂದಿರಬೇಕು, ನ್ಯಾಷನಲ್ ಹೈವೇ ಸ್ಥಳಗಳಲ್ಲಿ 1,200-1,500 sq.ft ಹೊಂದಿರಬೇಕು.
● ಒಂದು ವೇಳೆ ನಿಮ್ಮ ಸ್ವಂತ ಜಾಗ ಆಗಿರದೆ ಇದ್ದಲ್ಲಿ ನೀವು ಅದನ್ನು 15 ರಿಂದ 20 ವರ್ಷದವರೆಗೆ ಬೋಗ್ಯಕ್ಕಾದರೂ ಪಡೆದಿರಬೇಕು, ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಒದಗಿಸಬೇಕಾಗುತ್ತದೆ. ಜಾಗದ ಮಾಲೀಕರಿಂದ NOC ಪಡೆದಿರಬೇಕು.

ಗೃಹಲಕ್ಷ್ಮೀ ಯೋಜನೆ 2ನೇ ಕಂತಿನ ಹಣ ಯಾವಾಗ ಬಿಡುಗಡೆ.? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಿಖರ ಮಾಹಿತಿ.!

ಬೇಕಾಗುವ ದಾಖಲೆಗಳು:-

● ಆಧಾರ್ ಕಾರ್ಡ್
● ಪ್ಯಾನ್ ಕಾರ್ಡ್
● ವೋಟರ್ ಐಡಿ
● ಜಾಗಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು ಮತ್ತು ಅಗ್ರಿಮೆಂಟ್ ದಾಖಲೆಗಳು
● ಅಪ್ರುವಲ್ ಪಡೆದಿರುವ ಬಿಸಿನೆಸ್ ಬ್ಲೂ ಪ್ರಿಂಟ್
● ಪೆಟ್ರೋಲ್ ಬಂಕ್ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಕ್ರಿಯೇಟ್ ಮಾಡಿಸಬೇಕು ಮತ್ತು GST ನಂಬರ್ ಪಡೆದಿರಬೇಕು.
● ಹಳ್ಳಿಗಳಲ್ಲಾಗಿದ್ದರೆ ಪಂಚಾಯಿತಿ ಕಡೆಯಿಂದ ಅಥವಾ ನಗರ ಪ್ರದೇಶಗಳ ಡಿಸಿ ಕಡೆಯಿಂದ ಪರ್ಮಿಷನ್
● ಫಯರ್ ಹಾಗೂ ಸೇಫ್ಟಿ ಡಿಪಾರ್ಟ್ಮೆಂಟ್ ನಿಂದ NOC

ಬೇಕಾಗಬಹುದಾದ ಅಂದಾಜು ಬಂಡವಾಳ:-
● ಹಳ್ಳಿ ಪ್ರದೇಶಗಳಿಗೆ 12 ಲಕ್ಷ
● ನಗರ ಪ್ರದೇಶಗಳಾದರೆ 25 ಲಕ್ಷ
● ರನ್ನಿಂಗ್ ಕ್ಯಾಪಿಟಲ್ ಆಗಿ 60,000-80,000 ಹಣ ಬೇಕಾಗುತ್ತದೆ.

ಲೀಸ್ (ಬೋಗ್ಯಕ್ಕೆ) ತೆಗೆದುಕೊಂಡಿರುವ ಮನೆ ಅಂಗಡಿ ಅಥಾವ ಜಮೀನಿನ ಮೇಲೆ ಲೋನ್ ( ಸಾಲ ) ಪಡೆಯಬಹುದಾ.? ಹೊಸ ರೂಲ್ಸ್.!

ಆರಂಭಿಸುವುದು ಹೇಗೆ :-

● ಕಂಪನಿಗಳು ವೆಬ್ಸೈಟ್ಗಳ ಮೂಲಕ ಮತ್ತು ಜಾಹೀರಾತುಗಳ ಮೂಲಕ ಹೊಸದಾಗಿ ಬ್ರಾಂಚೆಸ್ ಶುರು ಮಾಡುವಾಗ ಅಂತಹ ಸಮಯಗಳಲ್ಲಿ ಸೂಕ್ತ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಿ ಈ ಅವಕಾಶ ಗಿಟ್ಟಿಸಿಕೊಳ್ಳಬಹುದು.
● ಲಾಟರಿ ಮೂಲಕ ಅಪ್ಲಿಕೇಶನ್ ಸೆಲೆಕ್ಟ್ ಮಾಡಿಕೊಳ್ಳಲಾಗುತ್ತದೆ ನಂತರ ಅವರ ಜೊತೆಗೆ ಒಂದು ಸಂದರ್ಶನ ಕೂಡ ನಡೆಯುತ್ತದೆ
● ಎಲ್ಲವು ಸರಿ ಹೋದರೆ ನೀವು ಹಾಕಿಕೊಂಡ ಯೋಜನೆ ಪ್ರಕಾರ ಪೆಟ್ರೋಲ್ ಬಂಕ್ ಶುರು ಮಾಡಿ ನಡೆಸಿಕೊಂಡು ಹೋಗಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now