ಈ ಹೆಸರಿನ ವ್ಯಕ್ತಿಗಳು ಹುಟ್ಟಿದಾಗಲೇ ರಾಜಯೋಗ ಪಡೆದು ಹುಟ್ಟಿರುತ್ತಾರಂತೆ.

ಈ ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗಿಂತಲೂ ಮನುಷ್ಯ ಹೆಚ್ಚು ಬುದ್ಧಿವಂತ ಹಾಗೂ ಈ ಮನುಷ್ಯ ಮಾತ್ರ ಈ ಪ್ರಪಂಚದ ಎಲ್ಲರ ಜೊತೆ ತುಂಬಾ ಕಾಂಪಿಟೇಶನ್ ಅಲ್ಲಿ ಇರುತ್ತಾನೆ ಎನ್ನಬಹುದು. ಈ ಕಾಂಪಿಟೇಶನ್ ಮನುಷ್ಯರ ಮನುಷ್ಯರ ನಡುವೆ ಹೆಚ್ಚಾಗಿ ಇರುತ್ತದೆ. ನಾನು ನನ್ನ ಪರಿವಾರದಲ್ಲಿ ಹೆಚ್ಚು ಶ್ರೀಮಂತ ಆಗಬೇಕು ಎನ್ನುವುದರಿಂದ ಶುರುವಾಗುವ ಈ ಕಾಂಪಿಟೇಶನ್ ನಂತರ ನಾನು ಸಮಾಜದಲ್ಲಿ ಒಳ್ಳೆ ಎತ್ತರಕ್ಕೆ ಬೆಳೆದು ಎಲ್ಲರೂ ಗುರುತಿಸುವಂತಹ ವ್ಯಕ್ತಿ ಆಗಬೇಕು, ಈ ಜಗತ್ತಿನಾದ್ಯಂತ ನಾನು ವಿಖ್ಯಾತಿ ಹೊಂದಬೇಕು ಹೀಗೆ ಹತ್ತು ಹಲವು ಹಂಬಲಗಳು ಬೆಳೆಯುತ್ತಾ ಹುಟ್ಟಿಕೊಳ್ಳುತ್ತದೆ. ಹಾಗೂ ಈ ರೀತಿ ಕನಸು ಇರುವುದು ತಪ್ಪೇನು ಅಲ್ಲ ಮನುಷ್ಯ ಜೀವನವನ್ನು ಸಂತೋಷವಾಗಿ ಹಾಗೂ ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುವುದೇ ಈ ಕನಸುಗಳು. ಈ ಕನಸುಗಳನ್ನು ಬೆನ್ನತ್ತಿ ನಾವು ಬದುಕು ಸವೆಸಬೇಕು. ಆದರೆ ಕನಸುಗಳಿಂದ ನಿರಾಸೆ ಹೊಂದಬಾರದು ಕನಸುಗಳನ್ನು ದಕ್ಕಿಸಿಕೊಂಡು ನಾವು ಅಂದುಕೊಂಡಿದ್ದನ್ನು ಪಡೆದುಕೊಳ್ಳುವುದೇ ಸಾಧನೆ ಎನ್ನುತ್ತಾರೆ.

WhatsApp Group Join Now
Telegram Group Join Now

ಅಂತಹ ಸಾಧನೆ ಮಾಡಲು ಹುಟ್ಟಿದ ಪ್ರತಿಯೊಬ್ಬರು ಮನುಷ್ಯರು ಕೂಡ ಪ್ರಯತ್ನ ಪಡುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಈ ರೀತಿ ಸಾಧನೆ ಹೆಸರು ಹಾಗೂ ಐಶ್ವರ್ಯ ಎನ್ನುವುದು ಕೆಲವರಿಗೆ ಪರಿಶ್ರಮದಿಂದ ಸಿಕ್ಕರೆ ಕೆಲವರು ಏನನ್ನು ಮಾಡದೆ ಇದನ್ನೆಲ್ಲ ಗಳಿಸುತ್ತಾರೆ ಅಂತವರನ್ನು ಅದೃಷ್ಟವಂತರು, ರಾಜಯೋಗದಲ್ಲಿ ಹುಟ್ಟಿದವರು ಹೀಗೆಲ್ಲ ಜನರು ಕರೆಯುತ್ತಾರೆ. ಇಂತಹವರು ಉಳಿದವರಿಗಿಂತ ಹೆಚ್ಚು ಶ್ರಮ ಇಲ್ಲದೆ ತಾವು ಅಂದುಕೊಂಡಿದ್ದನ್ನು ಪಡೆದುಕೊಳ್ಳುತ್ತಾರೆ ಹಾಗೂ ಇವರಿಗೆ ಜೀವನದಲ್ಲಿ ಅಷ್ಟೇನೂ ಕಷ್ಟಗಳು ಬರುವುದಿಲ್ಲ ತುಂಬಾ ಸಹಜ ಜೀವನವನ್ನು ನಡೆಸುತ್ತಾರೆ ಹಾಗೂ ಒಳ್ಳೆಯ ಕುಟುಂಬದ ನಡುವೆ ಹಾಗೂ ಹಣವಂತರಾಗಿಯೇ ಇವರು ಜೀವನಪೂರ್ತಿಗೊಳಿಸುತ್ತಾರೆ. ಇವರು ಬಯಸಿದ್ದಕ್ಕಿಂತ ಹೆಚ್ಚಾಗಿ ಇವರಿಗೆ ಎಲ್ಲವೂ ಒಲಿದು ಬಂದಿರುತ್ತದೆ. ಹಾಗಾಗಿ ಇವರನ್ನು ಅದೃಷ್ಟ ಶಾಲಿಗಳು ಎಂದು ಕರೆಯುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂಗ್ಲಿಷ್ ಮೊದಲನೆಯ ಅಕ್ಷರವಾದ ಸಿ, ಎಚ್, ಎಲ್ ಮತ್ತು ವಿ ಅಕ್ಷರದವರು ತುಂಬಾ ವಿಶೇಷ ಲಕ್ಷಣಗಳನ್ನು ಹೊಂದಿರುತ್ತಾರೆ.

ಅದರಲ್ಲೂ ಸಿ ಅಕ್ಷರದಿಂದ ಹೆಸರು ಹೊಂದಿರುವವರು ಜೀವನದಲ್ಲಿ ಎಲ್ಲಾ ಯಶಸ್ಸುಗಳನ್ನು ನಿರಾತಂಕವಾಗಿ ಪಡೆಯುತ್ತಾರೆ. ಯಾಕೆಂದರೆ ಇವರಿಗೆ ಹೆಚ್ಚು ಶ್ರಮ ಇಲ್ಲದೆ ತಾವು ಅಂದುಕೊಂಡಿದ್ದನ್ನು ಪಡೆದುಕೊಳ್ಳುವ ಅದೃಷ್ಟ ಇರುತ್ತದೆ. ಸಹಜವಾಗಿಯೇ ಜೀವನದಲ್ಲಿ ಎಲ್ಲವೂ ಸರಾಗವಾಗಿ ಇವರ ಪಾಲಿಗೆ ಒಲಿದು ಬರುತ್ತದೆ ಮತ್ತು ತುಂಬಾ ಖುಷಿಖುಷಿಯಾಗಿ ಜೀವನ ನಡೆಸುತ್ತಾರೆ ಹಣಕಾಸಿನ ಸಮಸ್ಯೆ ಕೂಡ ಹೆಚ್ಚಾಗಿ ಇವರಿಗೆ ಬಾಧಿಸುವುದಿಲ್ಲ ಆರೋಗ್ಯದ ವಿಷಯದಲ್ಲಿ ಕೂಡ ಇವರು ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ. ಮತ್ತು ಜೀವನದಲ್ಲಿ ಉದ್ಯೋಗವಾಗಲಿ ಕುಟುಂಬ ವಾಗಲಿ ಅಥವಾ ಮಕ್ಕಳ ವಿಚಾರವಾಗಲಿ ಆರೋಗ್ಯ ವಿಚಾರವಾಗಲಿ, ಹಣಕಾಸಿನ ವಿಚಾರವೇ ಆಗಲಿ ಇವರಿಗೆ ಯಾವುದೇ ರೀತಿಯ ಗೊಂದಲ ಹಾಗೂ ಸಮಸ್ಯೆಗಳು ಕಾಡುವುದಿಲ್ಲ. ಈ ಅಕ್ಷರದವರು ತುಂಬಾ ಅದ್ಭುತವಾದ ಜೀವನವನ್ನು ಸಾಗಿಸುತ್ತಾರೆ. ಅದೇ ರೀತಿ ಎಚ್ ಅಕ್ಷರದಿಂದ ಹೆಸರನ್ನು ಹೊಂದಿರುವವರು ತುಂಬಾ ಹಠವಂತರಾಗಿ ಇರುತ್ತಾರೆ. ಹಾಗೂ ಯಾವುದೇ ಕೆಲಸವನ್ನು ಮಾಡಬೇಕು ಎಂದು ಮನಸ್ಸು ಮಾಡಿದರೆ ಅದನ್ನು ಪೂರ್ತಿಗೊಳಿಸುವವರೆಗೂ ಇವರಿಗೆ ನೆಮ್ಮದಿ ಬರುವುದಿಲ್ಲ.

ಇವರು ತುಂಬಾ ಪ್ರಾಮಾಣಿಕತೆಯಿಂದ ಸಂಬಂಧಗಳನ್ನು ಕಾಯ್ದುಕೊಳ್ಳುತ್ತಾರೆ ಹಾಗೂ ತುಂಬಾ ನಿಷ್ಠೆ ಸಹ ಹೊಂದಿರುತ್ತಾರೆ. ತುಂಬಾ ಪ್ರಯತ್ನ ಪಟ್ಟು ಇವರು ತಾವು ಆಸೆ ಪಟ್ಟಿದ್ದನ್ನು ಪಡೆದುಕೊಳ್ಳುತ್ತಾರೆ. ಸಮಾಜದಲ್ಲಿ ತಮಗೊಂದು ಸ್ಥಾನ ಗಿಟ್ಟಿಸಿಕೊಳ್ಳುವುದಕ್ಕೆ ಹಾಗೂ ತಾವು ಸಮಾಜದಲ್ಲಿ ಗುರುತಿಸಿಕೊಳ್ಳುವುದಕ್ಕೆ ಇವರು ಬಹಳ ಶ್ರಮ ವಹಿಸುತ್ತಾರೆ ಮತ್ತು ಹಣಕಾಸಿನ ವಿಷಯದಲ್ಲೂ ಕೂಡ ಇವರು ತುಂಬಾ ಶಕ್ತಿಶಾಲಿ ಆಗಿರುತ್ತಾರೆ. ಇವರಿಗೂ ಅಷ್ಟೇ ಉದ್ಯೋಗ ಆರೋಗ್ಯ ಮುಂತಾದ ವಿಷಯದಲ್ಲಿ ಹೆಚ್ಚಿನ ಸಮಸ್ಯೆಗಳು ಇರುವುದಿಲ್ಲ ಇವರು ಜೀವನಪೂರ್ತಿ ಎಲ್ಲರಿಗೂ ಮಾದರಿಯಾಗುವಂತಹ ಜೀವನವನ್ನು ನಡೆಸುತ್ತಾರೆ. ಹಾಗೆ ಎಲ್ ಅಕ್ಷರ ಹೊಂದಿರುವವರು ಸಹ ತುಂಬಾ ಅದೃಷ್ಟಶಾಲಿಗಳಾಗಿರುತ್ತಾರೆ. ಎಲ್ ಅಕ್ಷರ ಹೊಂದಿರುವ ಮಹಿಳೆಯರು ಕುಟುಂಬದಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿ ಪಾತ್ರರಾಗುತ್ತಾರೆ ಹಾಗೂ ಕುಟುಂಬ ನಿರ್ವಹಣೆ ಸಹ ತುಂಬಾ ಸರಾಗವಾಗಿ ನಡೆಸಿಕೊಂಡು ಹೋಗುತ್ತಾರೆ.

ಎಲ್ಲರಿಗೂ ಹೊಂದಿಕೊಳ್ಳುವ ಸ್ವಭಾವ ಇವರಿಗೆ ಇರುತ್ತದೆ ಹಾಗೂ ಎಲ್ಲರ ಕಷ್ಟ ನಷ್ಟಗಳನ್ನು ತಿಳಿದುಕೊಂಡು ಎಲ್ಲರಿಗೂ ಮೆಚ್ಚುಗೆ ಆಗುವ ರೀತಿ ಬದುಕುತ್ತಾರೆ. ಇವರಿರುವ ಮನೆಯಲ್ಲಿ ಅದೃಷ್ಟದ ಹೊಳೆಯೇ ಹರಿಯುತ್ತದೆ ಎನ್ನಬಹುದು. ಇವರಿರುವ ಕಡೆ ಹೆಚ್ಚಿನ ಸಮಸ್ಯೆಗಳು ಆಗಲಿ ಮನಸ್ತಾಪಗಳು ಆಗಲಿ ಇರುವುದಿಲ್ಲ ಮತ್ತು ಎಲ್ ಅಕ್ಷರದಿಂದ ಹೆಸರು ಶುರುವಾಗುವ ಪುರುಷರು ಕೂಡ ತುಂಬಾ ಅದೃಷ್ಟವಂತರಾಗಿರುತ್ತಾರೆ. ಇವರಿಗೆ ಇವರು ಆಸೆಪಡುವ ರೀತಿಯ ಉದ್ಯೋಗಗಳು ಸಿಗುತ್ತದೆ ಹಾಗೂ ಸಮಾಜದಲ್ಲಿ ಉತ್ತಮವಾದ ಸ್ಥಾನಮಾನಗಳು ಕೂಡ ಇವರಿಗೆ ದೊರಕುತ್ತದೆ ಇವರು ಸಹ ತಮ್ಮ ಪ್ರಯತ್ನದಿಂದ ಉತ್ತಮವಾದ ಜೀವನ ನಿರ್ವಹಣೆಯನ್ನು ನಡೆಸಿಕೊಂಡು ಹೋಗುತ್ತಾರೆ. ಒಂದು ರೀತಿಯಲ್ಲಿ ಇವರಿಗೂ ಸಹ ಅದೃಷ್ಟ ಎನ್ನುವುದು ಹುಟ್ಟಿನಿಂದಲೇ ಬರುತ್ತದೆ ಎನ್ನಬಹುದು. ಇವರು ಅಂದುಕೊಂಡಿದ್ದನ್ನೆಲ್ಲಾ ಸುಲಭವಾಗಿ ಪಡೆಯುವ ಶಕ್ತಿಯನ್ನು ದೇವರೇ ಇವರಿಗೆ ನೀಡಿರುತ್ತಾರೆ.

ಹಾಗೂ ಕೊನೆಯದಾಗಿ ವಿ ಅಕ್ಷರದ ಹೆಸರು ಹೊಂದಿರುವವರು ತುಂಬಾ ಸ್ಟ್ರಗಲ್ ಮಾಡಿ ವಿಜಯವನ್ನು ಸಾಧಿಸಿಕೊಳ್ಳುತ್ತಾರೆ. ಇವರಿಗೂ ಅಷ್ಟೇ ತಾವು ಅಂದುಕೊಂಡಿದ್ದನ್ನು ಸಾಧಿಸುವ ಛಲ ಹೆಚ್ಚಾಗಿರುತ್ತದೆ. ಜೀವನದಲ್ಲಿ ಎಷ್ಟೇ ಅಡೆತಡೆಗಳು ಬಂದರೂ ಎಷ್ಟೇ ಸೋತರೂ ಕೂಡ ತಮ್ಮ ಕನಸನ್ನು ಬಿಟ್ಟುಕೊಡುವ ಮನಸ್ಸು ಇವರು ಮಾಡುವುದಿಲ್ಲ. ಇವರ ಗುರಿಯೆಲ್ಲವೂ ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳುವ ಕಡೆಗೆ ಇರುತ್ತದೆ. ಹೆಚ್ಚಿನ ಸಮಯದಲ್ಲಿ ಇವರಿಗೆ ಅದೃಷ್ಟ ಸಹಕಾರ ಮಾಡುತ್ತದೆ ಹಾಗೂ ಅದು ಸಾಧ್ಯವಾಗದ ಸಮಯದಲ್ಲಿ ತಮ್ಮ ಕಠಿಣ ಶ್ರಮದಿಂದ ಆದರೂ ಕನಸನ್ನು ನನಸು ಮಾಡಿಕೊಳ್ಳುವ ಶಕ್ತಿ ಭಗವಂತ ಇವರಿಗೆ ನೀಡಿರುತ್ತಾನೆ. ಮತ್ತು ಇಬ್ಬರು ಸಹ ಜೀವನದಲ್ಲಿ ತುಂಬಾ ಒಳ್ಳೆಯ ಜೀವನ ನಿರ್ವಹಣೆ ಮಾಡುತ್ತಾರೆ ತುಂಬಾ ಸಂತೃಪ್ತಿಯಿಂದ ತಮ್ಮ ಜೀವನವನ್ನು ನಡೆಸುತ್ತಾರೆ. ಇವರು ಅಷ್ಟೇ ತುಂಬಾ ಬದ್ಧತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ ಹಾಗೂ ಹಾಗೆ ಬದುಕಿ ತೋರಿಸುತ್ತಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now