ಡಾಲಿ ಧನಂಜಯ್ ಅವರು ಅಭಿನಯ ರಾಕ್ಷಸ ಎಂದೇ ಖ್ಯಾತಿ ಗಳಿಸಿ ಕನ್ನಡಿಗರ ಮೆಚ್ಚಿನ ಡಾಲಿ ಆಗಿ ಪ್ರತಿಯೊಬ್ಬರ ಮನೆಗಳಲ್ಲೂ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ನಟ. ಡೈರೆಕ್ಟರ್ ಸ್ಪೆಷಲ್ ಎನ್ನುವ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗವನ್ನು ಪ್ರವೇಶ ಮಾಡಿದ ಇವರು ನಿರ್ದೇಶಕ ಗುರುಪ್ರಸಾದ್ ಅವರ ಗರಣಿಯಲ್ಲಿ ಪಳಗಿದವರು. ಡೈರೆಕ್ಟರ್ ಸ್ಪೆಷಲ್ ಸಿನಿಮಾ ಜರ ಮೆಚ್ಚಿಕೊಂಡರೂ ನಂತರ ದಿನಗಳಲ್ಲಿ ಧನಂಜಯ್ ಅವರ ಪಾಲಿಗೆ ಹೇಳಿಕೊಳ್ಳುವಂತಹ ಮಹತ್ವದ ಪಾತ್ರ ಇರುವ ಯಾವ ಸಿನಿಮಾಗಳು ಕೂಡ ಸಿಗಲಿಲ್ಲ. ಈ ಸಿನಿಮಾದ ನಂತರ ಬದ್ಮಾಶ್, ಭೈರವ ಗೀತಾ, ಬಾಕ್ಸರ್, ಎರಡನೇ ಸಲ, ಅಲ್ಲಮ ಇನ್ನು ಮುಂತಾದ ಸಿನಿಮಾಗಳಲ್ಲಿ ಹೀರೋ ಆಗಿ ಇವರು ಕಾಣಿಸಿಕೊಂಡರು ಕೂಡ ಯಾವ ಸಿನಿಮಾವು ಕೂಡ ಹಿಟ್ ಆಗಲಿಲ್ಲ. ಆ ನಡುವೆ ಕೆಲವೊಂದು ಶಾರ್ಟ್ ಮೂವಿಗಳಲ್ಲೂ ಕೂಡ ಅಭಿನಯಿಸಿದ ಇವರು ಜಯನಗರ ಫೋರ್ತ್ ಬ್ಲಾಕ್ ಎನ್ನುವ ಶಾರ್ಟ್ ಮೂವಿ ಇಂದ ಬಹಳಷ್ಟು ಜನರ ಗಮನ ಸೆಳೆದರು.
ನಂತರ ಜಸ್ಸಿ ಎನ್ನುವ ಸಿನಿಮಾದಲ್ಲಿ ಎರಡನೇ ಹೀರೋ ಆಗಿ ಕಾಣಿಸಿಕೊಂಡ ಇವರು ಸ್ವಲ್ಪ ನೆಗೆಟಿವ್ ಶೇಡ್ ಅಲ್ಲಿ ಕೂಡ ಅಬ್ಬರಿಸಿದರು. ಈ ಸಿನಿಮಾದಲ್ಲಿ ಅವರ ಅಭಿನಯ ನೋಡಿ ಬೆರಗಾದಾಗದವರೆ ಇಲ್ಲ. ನಂತರ ಒಂದೊಂದೇ ಅದೃಷ್ಟದ ಮೆಟ್ಟಿಲುಗಳನ್ನು ಡಾಲಿ ಧನಂಜಯ್ ಅವರು ಏರುತ್ತಾ ಬಂದರು ಎಂದರೆ ತಪ್ಪಾಗುವುದಿಲ್ಲ. ಅದರಲ್ಲೂ ಯಾವಾಗ ಶಿವಣ್ಣ ಅವರ ಟಗರು ಸಿನಿಮಾದಲ್ಲಿ ಡಾಲಿ ಎನ್ನುವ ಪಾತ್ರ ಮಾಡಿದರು ಅಂದಿನಿಂದ ಅವರ ಅದೃಷ್ಟವೇ ಬದಲಾಗಿ ಹೋಯಿತು ಎನ್ನಬಹುದು. ಅವರ ನಿರೀಕ್ಷೆ ಮಟ್ಟದ ಸಕ್ಸಸ್ ಆ ಸಿನಿಮಾದಿಂದ ಅವರಿಗೆ ಸಿಕ್ಕಿತು. ಆ ಸಿನಿಮಾದಿಂದ ಅವರು ಇಡೀ ಕರ್ನಾಟಕವನ್ನು ತಲುಪಿದರು ಹಾಗೂ ಎಲ್ಲಾ ಯುವಕರ ಫೇವರಿಟ್ ಹೀರೋ ಅಲ್ಲದಿದ್ದರೂ ಫೇವರೆಟ್ ವಿಲನ್ ಆದರು ಎನ್ನಬಹುದು.
ಈ ರೀತಿ ಮತ್ತೆ ಅವಕಾಶಗಳು ಸಿಗುತ್ತಿರುವಾಗ ಸಿಕ್ಕ ಒಂದೊಂದೇ ಅವಕಾಶಗಳನ್ನು ಬಹಳ ಪ್ರಬುದ್ಧತೆಯಿಂದ ಬಳಸಿಕೊಂಡು ತುಂಬಾ ಅದ್ಭುತವಾಗಿ ನಟಿಸಿ ಮೋಡಿ ಮಾಡಿದ ಇವರ ಅಭಿನಯ ನೋಡಿ ಮಾರುಹೋಗದವರೇ ಇಲ್ಲ ಎನ್ನಬಹುದು. ಟಗರು ಸಿನಿಮಾದ ನಂತರ ಸತತವಾಗಿ ಬಹಳಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಇವರು ಮತ್ತೊಮ್ಮೆ ಪಾಪ್ಕಾರ್ಟ್ ಮಂಕಿ ಟೈಗರ್ ಎನ್ನುವ ಸಿನಿಮಾದಲ್ಲಿ ಕೂಡ ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಂಡರು. ಇದರ ನಡುವೆಯೇ ದರ್ಶನ್ ಅವರ ಯಜಮಾನ ಸಿನಿಮಾದಲ್ಲಿ ಸಣ್ಣದೊಂದು ವಿಲನ್ ರೋಲ್ ಹಾಗೆಯೇ ಪುನೀತ್ ರಾಜಕುಮಾರ್ ಅವರ ಯುವರತ್ನ ಸಿನಿಮಾದಲ್ಲೂ ಕೂಡ ವಿಲನ್ ಆಗಿ ಕಾಣಿಸಿಕೊಂಡ ಇವರು ವಿಲನ್ ಪಾತ್ರಗಳಲ್ಲಿ ಹೆಚ್ಚು ಖ್ಯಾತಿ ಹೊಂದುತ್ತಿದ್ದಾರೆ. ಜನರು ಇವರನ್ನು ಹೀರೋ ಆಗಿ ಎಷ್ಟು ಇಷ್ಟಪಡುತ್ತಾರೋ ಅದಕ್ಕಿಂತಲೂ ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ನೋಡಲು ಇಷ್ಟಪಡುತ್ತಾರೆ ಎನ್ನಬಹುದು.
ಈಗ ಬಹಳಷ್ಟು ಸಿನಿಮಾಗಳನ್ನು ಮಾಡುತ್ತ ಬ್ಯುಸಿ ಆಗಿರುವ ಇವರು ಮಾಸ್ ಅಷ್ಟೇ ಸೀಮಿತವಲ್ಲ ಕ್ಲಾಸ್ ಸಿನಿಮಾಗಳನ್ನು ಕೂಡ ಅದ್ಭುತವಾಗಿ ಮಾಡುತ್ತೇನೆ ಎನ್ನುವುದನ್ನು ರತ್ನನ್ ಪ್ರಪಂಚ ಎನ್ನುವ ಸಿನಿಮಾದಲ್ಲಿ ಪ್ರೂವ್ ಮಾಡಿದ್ದಾರೆ. ಇದೊಂದು ಅದ್ಭುತವಾದ ಸಿನಿಮಾ ಆಗಿದ್ದು ಸಿನಿಮಾದ ಅದ್ಭುತವಾದ ಪಾತ್ರ ಹಾಗೂ ಅಭಿನಯದ ಮೂಲಕ ಪ್ರತಿಯೊಬ್ಬರ ಮನದ ಪ್ರಪಂಚವನ್ನು ಅಲುಗಾಡಿಸಿದ್ದಾರೆ ಎನ್ನಬಹುದು. ಅಲ್ಲದೆ ಕಳೆದ ಒಂದು ವರ್ಷದಿಂದ ತೆರೆಕಂಡ ಸಿನಿಮಾಗಳಲ್ಲಿ ಬಹು ಸಂಖ್ಯೆ ಸಿನಿಮಾಗಳಲ್ಲಿ ಇರುವ ನಟ ಎಂದು ಕೂಡ ಗುರುತಿಸಿಕೊಂಡಿರುವ ಇವರು ಈ ವರ್ಷ ತೆರೆಕಂಡ ಹಲವಾರು ಸಿನಿಮಾಗಳಲ್ಲಿ ಪಾತ್ರ ಮಾಡಿದ್ದಾರೆ. ರತ್ನನ್ ಪ್ರಪಂಚ, ಭೈರಾಗಿ, ಬಡವರಾಸ್ಕಲ್, ತೋತಾಪುರಿ, ಪುಷ್ಪ , 21 ಹವರ್ಸ್ ಇನ್ನು ಮುಂತಾದ ಹಲವಾರು ಸಿನಿಮಾಗಳಲ್ಲಿ ಇವು ಕಳೆದ ಒಂದು ವರ್ಷದಲ್ಲಿ ಅಭಿನಯಿಸಿದ್ದಾರೆ.
ಜೊತೆಗೆ ಈ ವರ್ಷ ಮುಗಿಯುವುದರ ಒಳಗೆ ಅವರ ಬಹು ನಿರೀಕ್ಷಿತ ಸಿನಿಮಾಗಳಾದ ಡಾಲಿ, ಸಲಗ, ಹೆಡ್ ಅಂಡ್ ಬುಷ್, ಹೊಯ್ಸಳ, ಮಾನ್ಸೂನ್ ರಾಗ ಇನ್ನು ಮುಂತಾದ ಸಿನಿಮಾಗಳು ತೆರೆ ಕಾಣಲಿವೆ. ಸದ್ಯಕ್ಕೆ ಮುಂದಿನ ತಿಂಗಳು ಅಂದರೆ ಆಗಸ್ಟ್ 19ರಂದು ಅವರ ಮಾನ್ಸೂನ್ ರಾಗ ಸಿನಿಮಾ ವು ತೆರೆ ಕಾಣಲಿದ್ದು ಇದೊಂದು 70 ಹಾಗೂ 80ರ ದಶಕದಲ್ಲಿ ಕರಾವಳಿ ಭಾಗದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿದ ಚಿತ್ರವಾಗಿದೆ. ಈಗಾಗಲೇ ಡಾಲಿ ಧನಂಜಯ್ ಅವರು ಎಂತಹ ಅದ್ಭುತ ನಟ ಎನ್ನುವುದನ್ನು ತಮ್ಮ ಮೇಲೆ ತಾವೇ ಪ್ರಯೋಗ ಮಾಡಿಕೊಳ್ಳುವಂತಹ ಹಲವಾರು ಪಾತ್ರಗಳನ್ನು ಅದ್ಭುತವಾಗಿ ಅಭಿನಯಿಸಿ ನಿರೂಪಿಸಿದ್ದಾರೆ. ಆದರೆ ವಿಶೇಷ ಎಂದರೆ ಈ ಬಾರಿ ಇವರಿಗೆ ನಾಯಕಿಯಾಗಿ ರಚಿತಾ ರಾಮ್ ಅವರು ಕಾಣಿಸಿಕೊಂಡಿದ್ದಾರೆ. ಅಲ್ಲದೆ ರಚಿತಾ ರಾಮ್ ಅವರ ಪಾತ್ರವೂ ಕೂಡ ತುಂಬ ವಿಭಿನ್ನವಾಗಿದ್ದು ಅಷ್ಟೇ ಚಾಲೆಂಜಿಂಗ್ ಆಗಿ ಕೂಡ ಇದೆಯಂತೆ.
ಇಂತಹ ಒಂದು ಪಾತ್ರವನ್ನು ಇದುವರೆಗೆ ರಚಿತಾ ರಾಮ್ ಅವರು ಅಭಿನಯಿಸಿಯೇ ಇಲ್ಲ ಹಾಗೂ ಬೇರೆಯವರು ಕೂಡ ಒಪ್ಪಿಕೊಳ್ಳಲು ನಿರಾಕರಿಸಿದ ಪಾತ್ರವನ್ನು ರಚಿತರಾಮ್ ಅವರು ಒಪ್ಪಿಕೊಂಡಿದ್ದಾರಂತೆ. ಈ ಎಲ್ಲಾ ಕಾರಣಗಳಿಂದ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಅನೂಪ್ ಸೀಳಿನ್ ಅವರ ಅದ್ಭುತವಾದ ಸಂಗೀತ ಕೂಡ ಸಿನಿಮಾಕ್ಕಿದೆ. ಸಿನಿಮಾದ ಹೆಸರೇ ರಾಗ ಎಂದು ಹೇಳುವುದರಿಂದ ಸಿನಿಮಾದ ಸಂಗೀತದ ಬಗ್ಗೆ ಜನರಿಗೆ ಬಹಳಷ್ಟು ನಿರೀಕ್ಷೆ ಈಗಲೇ ಶುರುವಾಗಿದೆ. ಸಿನಿಮಾ ಬಿಡುಗಡೆ ಆಗಲು ಇನ್ನೇನು 25 ದಿನಗಳು ಬಾಕಿ ಇದೆ ಅಷ್ಟೇ. ಆದರೆ ವಿಶೇಷ ಎನ್ನುವಂತೆ 25 ದಿನಗಳ ಮುಂಚಿತವಾಗಿಯೇ ಥಿಯೇಟರ್ ಗಳ ಮುಂದೆ ಡಾಲಿ ಧನಂಜಯ್ ಹಾಗೂ ರಚಿತಾರಾಮ್ ಅವರ ಪೋಸ್ಟರ್ಗಳು ಮತ್ತು ಕಟೌಟ್ಗಳನ್ನು ನಿಲ್ಲಿಸಲಾಗುತ್ತಿದೆ ಎನ್ನುವುದು ಬಹಳ ಗಮನ ಸೆಳೆಯುತ್ತಿದೆ.