ಈಗಿನ ಕಾಲದಲ್ಲಿ ಸಕಲ ಸೌಕರ್ಯಗಳು ಇದ್ದರೂ ಕೂಡ ಬದುಕುವುದು ಕಷ್ಟ ಎಂದು ದೂರು ಹೇಳುವವರ ಸಂಖ್ಯೆಯೇ ಹೆಚ್ಚಾಗಿದೆ. ಅದರಲ್ಲೂ ಯುವ ಜನತೆಯಲ್ಲೇ ಈ ರೀತಿ ಬದುಕುವ ಉತ್ಸಾಹ ಕಡಿಮೆಯಾಗಿ ಹೋಗಿದೆ ಎನ್ನುವುದೇ ಬೇಸರದ ಸಂಗತಿ. ಆದರೆ ಒಮ್ಮೆ ನಮ್ಮ ಹಳ್ಳಿಗಳ ಕಡೆ ಹೋಗಿ ಜನ ಜೀವನವನ್ನು ಹತ್ತಿರದಿಂದ ಗಮನಿಸಿದರೆ ಬದುಕು ಎಷ್ಟು ಸುಂದರ ಹಾಗೂ ನಾವು ಎಷ್ಟು ಸಂಪನ್ಮೂಲ ಬರಿತವಾಗಿದ್ದೇವೆ.
ಇರುವ ಅನುಕೂಲತೆಗಳನ್ನು ಸರಿಯಾಗಿ ಬಳಸಿಕೊಳ್ಳದೆ ಸೋಂಬೇರಿಗಳಾಗಿದ್ದೇವೆ ಎನ್ನುವುದು ನಮ್ಮ ಮನಸ್ಸಿಗೆ ಅರ್ಥ ಆಗುತ್ತದೆ. ಇದೇ ಮಾತಿನೊಂದಿಗೆ ಎಲ್ಲರಿಗೂ ಕೂಡ ಬದುಕಿನ ಪಾಠವನ್ನು ಹೇಳುತ್ತಿದ್ದಾರೆ ತಮಗಿರುವ ಒಂದು ಎಕರೆ ಎರಡು ಗುಂಟೆ ಜೀವನದಲ್ಲಿಯೇ ತೆಂಗು ಅರಿಶಿಣ ಶುಂಠಿ ತರಕಾರಿ ಎಲ್ಲವನ್ನು ಬೆಳೆದು ಸಮೃದ್ಧಿಯಿಂದ ಬದುಕುತ್ತಿದ್ದೇನೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಿರುವ ಪ್ರಗತಿಪರ ರೈತರೊಬ್ಬರು.
ಈ ಸುದ್ದಿ ಓದಿ:- ಒಂದು ಎಕರೆಗೆ 45 ಲಕ್ಷ ಲಾಭ ತಂದು ಕೊಟ್ಟ ಕೃಷಿ.! ಸಖತ್ ಲಾಭ ತಂದು ಕೊಡುವ ಸದಾಕಾಲವೂ ಬೇಡಿಕೆ ಇರುವ ಬೆಳೆ ಇದು.!
ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ಕುಂಟೇನಹಳ್ಳಿ ಗ್ರಾಮದ ಲಕ್ಷ್ಮಿ ಗೌಡ ಎನ್ನುವ ಈ ರೈತರು ನನಗೆ ಒಂದು ಚೂರು ಜಾಗ ಕೂಡ ವೇಸ್ಟ್ ಆಗಿ ಬಿಡಲು ಮನಸ್ಸಿಲ್ಲ ಅಲ್ಲಿ ಕೂಡ ಏನಾದರೂ ಪದಾರ್ಥಗಳನ್ನು ಬೆಳೆಯಬೇಕು ಎನ್ನುವ ಮನಸ್ಸು ಬರುತ್ತದೆ ಹೀಗೆ ಪ್ರತಿಯೊಬ್ಬರೂ ಕೂಡ ತಮಗಿರುವ ಜಾಗವನ್ನು ಅಚ್ಚುಕಟ್ಟು ಮಾಡಿಕೊಂಡು ಎಲ್ಲವನ್ನು ಸಮರ್ಪಕವಾಗಿ ಬಳಸಿಕೊಂಡು ಸಂತೋಷವಾಗಿ ಬದುಕಬೇಕು ಎನ್ನುವುದೇ ನನ್ನ ಇಚ್ಛೆ.
ನನಗೆ ಮೊದಲಿನಿಂದಲೂ ಕೃಷಿ ಹೊಂಡ ಯೋಜನೆ ಬಗ್ಗೆ ಮನಸ್ಸಿತ್ತು ಆದರೆ ನಾವು ಮಣ್ಣಿನ ಕಟ್ಟೆಗಳಲ್ಲಿ ನೀರು ಶೇಖರಣೆ ಮಾಡುತ್ತಿದ್ದೆವು, ಮಣ್ಣಿನಲ್ಲಿ ನೀರು ಬೇಗ ಇಂಗಿ ಹೋಗುತ್ತಿತ್ತು ಹಾಗಾಗಿ ತೊಟ್ಟಿ ಮಾಡುವುದು ಅಥವಾ ಇನ್ನೇನು ಎಂದು ಪ್ಲಾನ್ ಮಾಡುತ್ತಿರುವಷ್ಟರಲ್ಲಿ ಆಗಿನ ಕೃಷಿ ಸಚಿವರಾಗಿದ್ದ ಕೃಷ್ಣ ಭೈರೇ ಗೌಡರವರು ರೈತರಿಗಾಗಿ ಈ ಯೋಜನೆ ಜಾರಿಗೆ ತಂದರು.
ಈ ಸುದ್ದಿ ಓದಿ:- ಗೋಮಾಳ ಜಮೀನನ್ನು ಸಕ್ರಮ ಮಾಡಿಕೊಳ್ಳುವುದು ಹೇಗೆ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!
ನಮಗೂ ಕೂಡ ಈ ಕೃಷಿ ಯೋಜನೆ ಮೂಲಕ ಬಹಳ ಅನುಕೂಲ ಸಿಕ್ಕಿದೆ ಇಂದು ಕೃಷಿ ಇಲಾಖೆಗೆ ಸಂಬಂಧಪಟ್ಟ ಸಾಕಷ್ಟು ಅಧಿಕಾರಿಗಳು ನನ್ನ ಜಮೀನಿಗೆ ಬಂದು ನೋಡಿಕೊಂಡು ಹೋಗಿ ಹೆಮ್ಮೆಯ ಮಾತನಾಡಿದ್ದಾರೆ. ಯಾಕೆಂದರೆ 2014ರಿಂದಲೂ ಕೂಡ ನನ್ನ ಜಮೀನಿನಲ್ಲಿ ಕೊಟ್ಟ ಸಾಮಗ್ರಿಗಳನ್ನು ಬಳಸಿಕೊಂಡು ಕೃಷಿ ಹೊಂಡ ನಿರ್ವಹಣೆ ಮಾಡುತ್ತಿದ್ದೇನೆ ಅದರ ಪ್ಲಾಸ್ಟಿಕ್ ಕೂಡ ಹಾಳಾಗಬಾರದು ಹಾಗೆ ಜೋಪಾನ ಮಾಡಿದ್ದೇನೆ.
ಎಲ್ಲರಿಗೂ ಇಂತಹ ಮನಸ್ಸು ಇರಬೇಕು ಆಮೇಲೆ ಮತ್ತೆ ಕೊಟ್ಟವರನ್ನೇ ದೂರುವುದಲ್ಲ. ನಾವು ಎಲ್ಲವನ್ನು ಕರೆಕ್ಟಾಗಿ ಮೇಂಟೈನ್ ಮಾಡುತ್ತಿದ್ದೇವೆ ಎನ್ನುವ ಅರಿವು ಹಾಗೂ ಮುಂಜಾಗ್ರತೆ ಇರಬೇಕು. ಈ ವಿಚಾರದಲ್ಲಿ ನಾನು ಎಷ್ಟು ಹುಷಾರು ಎಂದರೆ ಕೃಷಿ ಹೊಂಡಕ್ಕೆ ಯಾವುದಾದರೂ ಪ್ರಾಣಿಗಳು ಬಂದು ಬಿದ್ದುಬಿಡುತ್ತವೆ ಎಂದು ಸುತ್ತಲೂ ಪಿಂಚಿಂಗ್ ಮಾಡಿ ಅದನ್ನು ವೇಸ್ಟ್ ಮಾಡದೆ ಅದರಲ್ಲಿ ಅವರೆಕಾಯಿ ಗಿಡ ಹಬ್ಬಿಸಿದ್ದೇನೆ.
ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಇದ್ದವರ ಇಬ್ಬರು ಮಕ್ಕಳ ಮದುವೆಗೂ ಸಿಗುತ್ತೆ ತಲಾ 50,000 ಸಹಾಯಧನ.!
ಕೃಷಿ ಹೊಂಡದ ಒಳಗಡೆ ಜನ ಬಿದ್ದುಬಿಟ್ಟರೆ ಅನುಕೂಲ ಆಗಲಿ ಎಂದು ಪೈಪ್ಗಳನ್ನು ಬಿಟ್ಟು ಕಂಬಿಗೆ ಗ್ರಿಪ್ ಮಾಡಿದ್ದೇನೆ ಅದನ್ನು ಹಿಡಿದುಕೊಂಡು ಅವರು ಮೇಲೆ ಬರಬಹುದು. ಈ ರೀತಿ ಆಗಲೇಬಾರದು ನೀರು ಕೆಳಗೆ ಹೋದಂತೆ ನೀರನ್ನು ಬಳಸುವುದು ಕಷ್ಟವಾಗುತ್ತದೆ ಎನ್ನುವ ಉದ್ದೇಶಕ್ಕಾಗಿ ನಾನೇ ಐಡಿಯಾ ಉಪಯೋಗಿಸಿ ಒಂದು ಟ್ಯಾಂಕ್ ರೀತಿ ನೀರಿನ ಡ್ರಮ್ ಬಳಸಿ ವ್ಯವಸ್ಥೆ ಮಾಡಿಕೊಂಡಿದ್ದೇನೆ.
ಪ್ರತಿಯೊಬ್ಬ ರೈತನಿಗೂ ಕೂಡ ಇದನ್ನು ಅನುಸರಿಸಬೇಕು ಎನ್ನುವುದು ನನ್ನ ಸಲಹೆ. ಯಾಕೆಂದರೆ. ನಾವು ಈ ನೀರಿನ ಡ್ರಮ್ ನಲ್ಲಿ ನೀರನ್ನು ಲೋಡ್ ಮಾಡಿಕೊಂಡರೆ ಆಮೇಲೆ ನಾವು ಅದನ್ನು ಕ್ರಿಮಿ ಕೀಟನಾಶಕಗಳಿಗೆ ಬಳಸುವುದಕ್ಕೆ ಆಗಲಿ ಅಥವಾ ಸಣ್ಣ ಪುಟ್ಟ ಗಿಡಗಳಿಗೆ ಹಾಕುವುದಕ್ಕಾಗಲಿ ಅಥವಾ ದನ ಕರುಗಳಿಗೆ ಕುಡಿಸುವುದಕ್ಕೆ ಆಗಲಿ ಸುಲಭವಾಗಿ ಬಳಸಿಕೊಳ್ಳಬಹುದು.
ಈ ಸುದ್ದಿ ಓದಿ:- ಸರ್ಕಾರದಿಂದ ಸಿಗಲಿದೆ 3 ಲಕ್ಷದವರೆಗೆ ಬಡ್ಡಿ ಇಲ್ಲದೆ ಸಾಲ.!
ಎಲ್ಲಕ್ಕೂ ಕೂಡ ಕೃಷಿ ಹೊಂಡದ ಒಳಗೆ ಇಳಿದೆ ನೀರು ತರಲು ಸಾಧ್ಯವಿಲ್ಲ ಇದು ನೋಡುವುದಕ್ಕೆ ಸುಲಭ ಮತ್ತು ಅಪಾಯಗಳ ತಪ್ಪಿಸುವಿಕೆ ಹೆಚ್ಚು ಎನ್ನುತ್ತಾರೆ ಇವರು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಯಾವುದೇ ರೀತಿ ಸಲಹೆ ಬೇಕಿದ್ದರೂ ಈ ಕೆಳಕಂಡ ಸಂಖ್ಯೆಗೆ ಸಂಪರ್ಕಿಸಿ.
ಲಕ್ಷ್ಮಿ ಗೌಡ – 9844543335.