ದೇಶದಲ್ಲಿ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ಇದೆ ಆದರೆ ಕೃಷಿಕ ಇನ್ನೂ ಸಹ ತನ್ನ ಸಾಂಪ್ರದಾಯಿಕ ಪದ್ಧತಿಯಲ್ಲಿ ಅವಲಂಬಿಸಿ ಕೃಷಿ ಮಾಡುತ್ತಾ ಬದುಕುತ್ತಿದ್ದೇನೆ ಹೀಗಾಗಿ ನಷ್ಟದಲ್ಲಿದ್ದಾನೆ ಆದರೆ ಕಾಲಕ್ಕೆ ತಕ್ಕ ಹಾಗೆ ಹೊಸ ವಿಧಾನಗಳನ್ನು ಅನುಸರಿಸಿಕೊಂಡು ಇದಕ್ಕೆ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಬಳಸಿಕೊಂಡು.
ವಿಜ್ಞಾನ ಮತ್ತು ಕಮರ್ಷಿಯಲ್ ಆಗಿ ಕೂಡ ಥಿಂಕ್ ಮಾಡಿ ತನಗೆ ಇರುವ ಸಂಪನ್ಮೂಲವನ್ನೇ ಹೆಚ್ಚು ಆದಾಯ ತರುವಂತೆ ಹೇಗೆ ಬದಲಾಯಿಸಿಕೊಳ್ಳಬಹುದು ಎನ್ನುವುದನ್ನು ಕೂಲಂಕುಶವಾಗಿ ಯೋಚಿಸಿ ನಿರ್ಧಾರ ಮಾಡಿದರೆ ಯಾವ ರೈತನು ಕೂಡ ಬಡವನಾಗಿ ಇರಲಾರ.
ಈ ಸುದ್ದಿ ಓದಿ:- ರೈಲ್ವೆ ಇಲಾಖೆ ಬೃಹತ್ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 35,400/-
ಆತನು ಕೂಡ ಎಲ್ಲರಂತೆ ವರ್ಷಕ್ಕೆ ಲಕ್ಷಾಂತರ ಆದಾಯ ಕಾಣಬಹುದು ಅದಕ್ಕೆ ಅನುಕೂಲ ವಾಗುವಂತಹ ಕೆಲ ಸಲಹೆಗಳನ್ನು ಈ ಲೇಖನದಲ್ಲಿ ಕೊಡಲು ಬಯಸುತ್ತಿದ್ದೇವೆ. ಬೇಲದ ಕೃಷಿ ಉದಾಹರಣೆಯೊಂದಿಗೆ ನಾನು ಈ ಮಾಹಿತಿಯನ್ನು ಮುಂದುವರಿಸಲು ಇಚ್ಛಿಸುತ್ತಿದ್ದೇನೆ. ಯಾಕೆಂದರೆ ನೀವು ಎಲ್ಲೇ ಹೋಗಿ ನೋಡಿ ಬೇಲದ ಮರ ಒಂದು, ಎರಡು ಸಿಗುತ್ತದೆ.
ಇದು ಮನೆ ಬಳಕೆಗೆ, ಮಕ್ಕಳಿಗೆ ನೆಂಟರಿಗೆ, ಕಳ್ಳರಿಗೆ ಮುಗಿಯುತ್ತದೆ. ಒಂದು ಎಕರೆ ಕೃಷಿ ಭೂಮಿಗೆ ಬೇಲ ಹಾಕಿದ ರೈತರ ಸಂಖ್ಯೆ ಬಹಳ ವಿರಳ ಒಂದು ವೇಳೆ ಹಾಗೇನಾದರೂ ರೈತ ತನ್ನ ಕೃಷಿ ಭೂಮಿಗೆ ಒಂದು ಎಕರೆ ಬೇಲ ಹಾಕಿದರೆ ಆತ ಲಕ್ಷಾಧಿಪತಿ ಅಲ್ಲ ಅದನ್ನು ಮೀರಿ ಬೆಳೆದಿರುತ್ತಾನೆ ಯಾಕೆಂದರೆ ಬೇಲ ವರ್ಷ ಪೂರ್ತಿ ಇಳುವರಿ ನೀಡುವಂತಹ ಫಲವಾಗಿದೆ.
ಈ ಸುದ್ದಿ ಓದಿ:- ಅಂಚೆ ಕಛೇರಿಯ ಈ ಯೋಜನೆಯಲ್ಲಿ, 10 ಲಕ್ಷ ಹೂಡಿಕೆ ಮಾಡಿದ್ರೆ 20 ಲಕ್ಷ ಸಿಗಲಿದೆ.! ಡಬಲ್ ಲಾಭ
ಸೀಸನ್ ನಲ್ಲಿ ಇದರ ಇಳುವರಿ ಹೆಚ್ಚಾಗಿರುತ್ತದೆ ಇಳುವರಿ ಕಡಿಮೆ ಆದರೂ ರೈತನಿಗಂತೂ ಮೋ’ಸವಿಲ್ಲ, ನಿರ್ವಹಣೆ ಕೂಡ ಬಹಳ ಸುಲಭ ಯಾವುದೇ ರಾಸಾಯನಿಕಗಳನ್ನು ಬಳಸಬೇಕಾದ ಅಗತ್ಯ ಇಲ್ಲ ಕೃಷಿ ಕಾರ್ಮಿಕರ ಕೊರತೆ ಇಲ್ಲ ಎನ್ನುವ ಕಂಪ್ಲೇಂಟ್ ಹೇಳದೆ, ನೀರು ಸಾಕಾಗುವುದಿಲ್ಲ ಎನ್ನುವ ದೂರು ಹೇಳದೆ, ಬೇಲವನ್ನು ಬೆಳೆಯಬಹುದು.
ಎಂತಹ ಬರಗಾಲ ಆದರೂ ಬೇಲದ ಮರಗಳು ರೈತನಿಗೆ ಮೋ’ಸ ಮಾಡುವುದಿಲ್ಲ. ಮಳೆ ಕೊರತೆ ಆದಾಗ ಬೇಲದ ಗಾತ್ರ ಕಡಿಮೆ ಆಗಬಹುದು ಆದರೆ ಇಳುವರಿಯಂತೂ ಇದ್ದೇ ಇರುತ್ತದೆ. ಒಂದು ಎಕರೆ ಜಾಗದಲ್ಲಿ ಮೊದಲ ವರ್ಷ ಗಿಡ ಹಾಕಿದ್ದಾಗ ಅದು ಬಹಳ ಚಿಕ್ಕ ಗಿಡ ಆದ್ದರಿಂದ ಗಿಡಕ್ಕೆ ತೊಂದರೆ ಮಾಡಿದಂತೆ ಬೇರೆ ಏನಾದರೂ ಮಿಶ್ರ ಕೃಷಿ ಮಾಡಬಹುದು.
ಈ ಸುದ್ದಿ ಓದಿ:- ಬರ ಪರಿಹಾರದ ಹಣ ಜಮೆ ಆಗದವರು.? ಈ ಕೆಲಸ ಮಾಡಿ ಸಾಕು ಹಣ ಅಕೌಂಟ್ ಗೆ ಬರುತ್ತೆ.!
ಹೀಗೆ ಐದಾರು ವರ್ಷ ಆಗುವವರೆಗೂ ಕೂಡ ಬೇಲದ ಗಿಡವನ್ನು ಹುಷಾರಾಗಿ ನೋಡಿಕೊಂಡು ಬೆಳೆಸಿ. ಒಮ್ಮೆ ಅವು ಮರಗಳಾದ ಮೇಲೆ ಅವುಗಳಿಂದ ಬರುವ ಆದಾಯ ಹೆಚ್ಚಿರುವಾಗ ರೈತ ಮಿಶ್ರ ಬೆಳೆ ಬೆಳೆಯಲು ಸಾಧ್ಯವಾಗದೆ ಹೋದ ಬೇಸರ ಇರುವುದಿಲ್ಲ ಹಬ್ಬ ಹರಿದಿನಗಳ ಸೀಜನ್ ಗಳಲ್ಲಿ ಬೇಲದ ಹಣ್ಣುಗಳಿಗೆ ಬಹಳ ಬೇಡಿಕೆ ಇರುತ್ತದೆ.
ಬೇಲ ಒಂದು ಅತ್ಯುತ್ತಮ ಆಹಾರ ಈಗಂತೂ ಆಯುರ್ವೇದಿಕ್ ಪ್ರಾಡಕ್ಟ್ ಗಳಲ್ಲಿ ಬೇಲದ ಬಳಕೆ ಹೆಚ್ಚಾಗುತ್ತಿದ್ದು ಕಂಪನಿಗಳು ನಿಮ್ಮ ಜಮೀನಿನ ಸ್ಥಳಕ್ಕೆ ಬಂದು ಖರೀದಿಸಿ ಹೋಗುತ್ತಾರೆ ಅಷ್ಟು ಬೇಡಿಕೆ ಇದೆ. ನಿಂಬೆಯ ತಾಯಿ ಬೇಲ ಎನ್ನುವ ಮಾತು ಕೂಡ ಇದೆ ಇದು ಬೇಲದ ಉಪಯೋಗ ಎಷ್ಟಿದೆ ಎನ್ನುವುದನ್ನು ಸಾರಿ ಹೇಳುತ್ತದೆ.
ಈ ಸುದ್ದಿ ಓದಿ:- ವರ್ಷಕ್ಕೆ 50 ಲಕ್ಷ ಗಳಿಸಬಹುದಾದ ಬಿಸಿನೆಸ್, ಹಳ್ಳಿಯಲ್ಲಿ ಇರುವವರು ಹೆಣ್ಣು ಮಕ್ಕಳು ಯಾರು ಬೇಕಾದರೂ ಇದರ ಫ್ರಾಂಚೈಸಿ ಪಡೆಯಬಹುದು.!
ಹಾಗಾಗಿ ರೈತರು ಒಂದು ಎಕರೆ ಪೂರ್ತಿ ಹಾಕಲು ಸಾಧ್ಯವಾಗದೇ ಇದ್ದರೂ ಸ್ವಲ್ಪ ಪ್ರಮಾಣದಲ್ಲಾದರೂ ಇದನ್ನು ಕೃಷಿ ಮಾಡಲಿ ಎನ್ನುವುದು ನಮ್ಮ ಸಲಹೆ. ಬೇಲ ಮಾತ್ರವಲ್ಲದೆ ಈ ರೀತಿಯಾಗಿ ಇರುವ ಇನ್ನೂ ಸಾಕಷ್ಟು ಮರಗಳು ಇವೆ. ಕೃಷಿ ಇಲಾಖೆ ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮಾಹಿತಿ ಪಡೆಯಿರಿ ಅಥವಾ ಕೃಷಿಯಲ್ಲಿ ಪಳಗಿರುವ ಅನುಭವಸ್ಥರ ಮಾತು ಕೇಳಿ ಕೃಷಿ ಮಾಡಿ ಯಶಸ್ವಿಯಾಗಿ ಈ ವಿಚಾರದ ಕುರಿತು ಇನ್ನಷ್ಟು ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.