ಮನೆ (House) ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಇಂದಿನ ದುಬಾರಿ ದುನಿಯಾದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ, ಹಾಗಾಗಿ ಈ ರೀತಿ ಕನಸುಗಳಿಗೆ ಹಣ ಹೊಂದಿಸುವುದೇ ಸಾಹಸವಾಗಿದೆ ಕೆಲವರು ಜೀವನಪೂರ್ತಿ ಹಣ ಕೂಡಿಟ್ಟು ನಿವೃತ್ತಿ ನಂತರ ತಮ್ಮ ಉಳಿತಾಯದ ಹಣದಲ್ಲಿ ಮನೆ ಕಟ್ಟಿಕೊಳ್ಳಲು ಬಯಸಿದರೆ.
ಇನ್ನು ಕೆಲವರು ದುಡಿಯೋ ಸಮಯದಲ್ಲೇ ಸಾಲವಾದರು ಮಾಡಿ ಮನೆ ಕಟ್ಟಿ ನಿಧಾನವಾಗಿ ತೀರಿಸಿಕೊಳ್ಳೋಣ ಎಂದು ಯೋಚಿಸುವವರು ಇದ್ದಾರೆ. ಇಂಥವರಿಗೆ ಈಗ ಅನೇಕ ಬ್ಯಾಂಕ್ ಗಳು ಮನೆ ಕಟ್ಟಿಕೊಳ್ಳುವುದಕ್ಕೆ ಸಾಲ ನೀಡುತ್ತಿವೆ. ಬ್ಯಾಂಕ್ ಗಳು ನೀಡುತ್ತಿರುವ ಮನೆ ನಿರ್ಮಾಣದ ಸಾಲ, ವಾಹನ ಖರೀದಿಗೆ ಸಾಲ, ಕೃಷಿ ಸಾಲ, ಶೈಕ್ಷಣಿಕ ಸಾಲ ಅನೇಕರ ಪಾಲಿಗೆ ವರದಾನವಾಗಿದೆ.
ಈ ಸುದ್ದಿ ಓದಿ :- ಕೇವಲ 24 ಸಾವಿರಕ್ಕೆ ಸಿಗಲಿದೆ ಯಮಹಾ ಸ್ಕೂಟಿ.!
ಆದರೆ ಮನೆ ನಿರ್ಮಾಣ ಮಾಡಲು ಜಾಗ ಕೂಡ ಇಲ್ಲದಿದ್ದವರಿಗೆ ಇನ್ನೊಂದು ಬಗೆಯ ಸಮಸ್ಯೆ ಎದುರಾಗುತ್ತಿದ್ದು ಈಗ ಅದಕ್ಕೂ ಬ್ಯಾಂಕ್ ಗಳ ಸಹಕಾರದಿಂದ ಪರಿಹಾರ ಒದಗಿದೆ. ಈಗ ಬ್ಯಾಂಕ್ ಗಳಿಂದ ಸೈಟ್ ಖರೀದಿಗೂ ಕೂಡ ಸಾಲ ಸಿಗುತ್ತಿದೆ. ಪ್ರಮುಖವಾಗಿ HDFC ಸೇರಿದಂತೆ ಅನೇಕ ಬ್ಯಾಂಕ್ ಗಳು ಸಾಲ (Site Loan) ನೀಡುತ್ತಿವೆ.
ಯಾವ ರೀತಿ ಈ ಸಾಲವನ್ನು ಪಡೆದುಕೊಳ್ಳಬೇಕು? ಬಡ್ಡಿದರ ಎಷ್ಟಿದೆ? ಏನೆಲ್ಲಾ ದಾಖಲೆಗಳು ಬೇಕು? ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ ತಪ್ಪದೆ ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ :- ಡ್ರೈವಿಂಗ್ ಲೈಸೆನ್ಸ್ ಕಳೆದು ಹೋಗಿದ್ರೆ ಡುಪ್ಲಿಕೇಟ್ DL ಪಡೆಯಲು ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!
ಉದಾಹರಣೆಯೊಂದಿಗೆ ಹೇಳುವುದಾದರೆ ನೀವು ಪ್ರತಿ ತಿಂಗಳು 25,000 ಸಂಬಳ (salary) ಪಡೆದುಕೊಳ್ಳುವ ವ್ಯಕ್ತಿಯಾಗಿದ್ದರೆ ನಿಮ್ಮ ಉದ್ಯೋಗದ ಆಧಾರದ ಮೇಲೆ ಸಾಲ ಸಿಗುತ್ತದೆ. ನೀವು 15 ವರ್ಷಗಳ ಅವಧಿಗೆ ಮರುಪಾವತಿ ಮಾಡಬಹುದಾದ ಸಾಲ ತೆಗೆದುಕೊಳ್ಳಲು ಬಯಸಿದರೆ ರೂ.10,15,497 ರೂಪಾಯಿವರೆಗಿನ ಸಾಲ ಪಡೆದುಕೊಳ್ಳಬಹುದು.
ಇದಕ್ಕೆ ಪ್ರತಿ ತಿಂಗಳು 10,000 ರೂ. ಗಳ EMI ಪಾವತಿಸಬೇಕು ಮತ್ತು ಈ ಸಾಲಕ್ಕೆ 8.50% ನಿಂದ 9.15% ವರೆಗೆ ಬಡ್ಡಿದರ ಅನ್ವಯವಾಗುತ್ತದೆ. HDFC ಬ್ಯಾಂಕ್ ಮಾತ್ರವಲ್ಲದೆ ಇತರ ಖಾಸಗಿ ಬ್ಯಾಂಕುಗಳು ಹಾಗೂ ಫೈನಾನ್ಸ್ ಗಳು ಕೂಡ ಗೃಹ ಸಾಲದ ಜೊತೆಗೆ ಸೈಟ್ ಲೋನ್ ಕೂಡ ಒದಗಿಸುತ್ತವೆ.
ಈ ಸುದ್ದಿ ಓದಿ :- RTC ಪಹಣಿಯಲ್ಲಿ ಹೆಸರು ತಪ್ಪಾಗಿದ್ದರೆ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳುವ ಸುಲಭ ವಿಧಾನ ಇಲ್ಲಿದೆ ನೋಡಿ.!
ಈ ಸಾಲಗಳಿಗೆ ಪ್ರೋಸೆಸಿಂಗ್ ಫೀ ಜಾಸ್ತಿ ಇರುವುದಿಲ್ಲ. ಕೈಗೆಟಿಕುವ ಕಡಿಮೆ ಬಡ್ಡಿ ದರದಲ್ಲಿ, ಪ್ರಿ ಪೇಮೆಂಟ್ ಪೆನಾಲ್ಟಿ ಇಲ್ಲದೆ, ಕಡಿಮೆ ಕಾಗದ ಪತ್ರಗಳೊಂದಿಗೆ ಸೈಟ್ ಲೋನ್ ಪಡೆಯಬಹುದು. ಮರುಪಾವತಿ ಮಾಡಲು ಕೂಡ ದೀರ್ಘಾವಧಿಯ ಸಮಯವಕಾಶ ಇರುತ್ತದೆ.
ಸೈಟ್ ಲೋನ್ ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು:-
* ನಿಮ್ಮ ಆದಾಯದ ಬಗ್ಗೆ ಮಾಹಿತಿ
* ಖರೀದಿ ಮಾಡಲು ಬಯಸಿರುವ ಸೈಟ್ ಬಗ್ಗೆ ಮಾಹಿತಿ
* ವೇತನ ಪಡೆದುಕೊಳ್ಳುವ ಉದ್ಯೋಗಿಗಳು ಕಡ್ಡಾಯವಾಗಿ ಮೂರು ತಿಂಗಳ ಸ್ಯಾಲರಿ ಸ್ಲಿಪ್ (3 months salary slip) ಹಾಗೂ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ (6 months bank statement) ಒದಗಿಸಬೇಕು.
* ಇತ್ತೀಚಿನ ಫಾರ್ಮ್ ನಂಬರ್ 16 ಭರ್ತಿ ಮಾಡಬೇಕು.
* ಸ್ವಂತ ಉದ್ಯಮ ಮಾಡುತ್ತಿರುವವರು ಸೈಟ್ ಗಾಗಿ ಸಾಲ ತೆಗೆದುಕೊಳ್ಳುವುದಾದರೆ ಕಳೆದ ಎರಡು ವರ್ಷಗಳಿಂದ ಆದಾಯ ತೆರಿಗೆ ಪಾವತಿ (ITR) ರಿಟರ್ನ್ ಮಾಡಿರುವ ಮಾಹಿತಿ ನೀಡಬೇಕು. ಎರಡು ವರ್ಷಗಳ ಬ್ಯಾಲೆನ್ಸ್ ಶೀಟ್ ಹಾಗೂ ಒಂದು ವರ್ಷದ ಚಾಲ್ತಿ ಖಾತೆಯ ಸ್ಟೇಟ್ಮೆಂಟ್ ಒದಗಿಸಬೇಕು.
* ಇದರೊಂದಿಗೆ ಸಹಜವಾಗಿ ಕೇಳಲಾಗುವ ದಾಖಲೆಗಳಾದ ಆಧಾರ್ ಕಾರ್ಡ್, ವಾಸ ಸ್ಥಳ ದೃಢೀಕರಣ ಪತ್ರ, ಸ್ವಯಂ ದೃಢೀಕರಣ ಪತ್ರ, ಶ್ಯೂರಿಟಿ ಇತ್ಯಾದಿ ದಾಖಲೆಗಳನ್ನು ಒದಗಿಸಬೇಕು.
ಈ ಸುದ್ದಿ ಓದಿ :- ಸ್ವಂತ ವಾಹನ ಖರೀದಿ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 4 ಲಕ್ಷ ಸಹಾಯಧನ
ಸೈಟ್ ಲೋನ್ ಪಡೆದುಕೊಳ್ಳಲು ಇರುವ ನಿಬಂಧನೆಗಳು:-
* ಕನಿಷ್ಠ 18 ವರ್ಷ ಪೂರೈಸಿರಬೇಕು ಗರಿಷ್ಠ 65 ವರ್ಷ ವಯಸ್ಸಿನವರಾಗಿರಬೇಕು
* ಈ ಮೇಲೆ ತಿಳಿಸಲಾದ ಎಲ್ಲಾ ದಾಖಲೆಗಳನ್ನು ಒದಗಿಸಬೇಕು