ಸಂಚಾರಿ ನಿಯಮದ ಪ್ರಕಾರ 18 ವರ್ಷ ತುಂಬಿದ ಮೇಲೆಯೇ ವಾಹನ ಚಾಲನೆ (Driving) ಮಾಡಬೇಕು ಜೊತೆಗೆ ಅವರು ಕಡ್ಡಾಯವಾಗಿ ಡ್ರೈವಿಂಗ್ ಲೈಸೆನ್ಸ್ (DL) ಹೊಂದಿರಬೇಕು. ಕೆಲವೊಮ್ಮೆ ಸಂಚಾರಿ ಪೊಲೀಸರು (traffic Police) ವಾಹನ ಸವಾರರನ್ನು ತಡೆದು ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾರೆಯೇ ಎಂದು ತಪಾಸಣೆ ಕೂಡ ಮಾಡುತ್ತಾರೆ.
ಈ ವೇಳೆ DL ಇಲ್ಲದೆ ಸಿಕ್ಕಿ ಬಿದ್ದರೆ ದಂಡ ಅಥವಾ ಶಿಕ್ಷೆ ಕೂಡ ಆಗುತ್ತದೆ ಈಗಾಗಲೇ RTO ನಿಂದ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದರೂ ಕೂಡ ಅದು ಕಳ್ಳತನವಾಗಿರುತ್ತದೆ ಅಥವಾ ಕಳೆದುಕೊಂಡಿರುತ್ತೇವೆ ಅಥವಾ ಹರಿದಿರುತ್ತದೆ ಇಲ್ಲವೇ ಇನ್ನೂ ಯಾವುದೋ ಕಾರಣದಿಂದಾಗಿ ನಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇರುವುದಿಲ್ಲ.
ಈ ಸುದ್ದಿ ಓದಿ:- RTC ಪಹಣಿಯಲ್ಲಿ ಹೆಸರು ತಪ್ಪಾಗಿದ್ದರೆ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳುವ ಸುಲಭ ವಿಧಾನ ಇಲ್ಲಿದೆ ನೋಡಿ.!
ಆದರೆ ಡ್ರೈವಿಂಗ್ ಲೈಸೆನ್ಸ್ ಭೌತಿಕ ರೂಪದಲ್ಲಿ ಅಥವಾ ಡಿಜಿ ಲಾಕರ್ ಆಪ್ ಮೂಲಕ ತೋರಿಸದೆ ಇದ್ದಲ್ಲಿ ದಂಡ ತಪ್ಪುವುದಿಲ್ಲ. ಇದಿಷ್ಟು ಮಾತ್ರವಲ್ಲದೆ ಡ್ರೈವಿಂಗ್ ಲೈಸೆನ್ಸ್ ಒಂದು ಗುರುತಿನ ಚೀಟಿಯಾಗಿ ನಮಗೆ ಅನೇಕ ಕಡೆಯಲ್ಲಿ ಬಳಕೆಗೂ ಬರುತ್ತದೆ ಹಾಗಾಗಿ ಪ್ರತಿಯೊಬ್ಬರೂ DL ಪಡೆಯುವುದು ಒಳ್ಳೆಯದು.
ಒಂದು ವೇಳೆ ಅದು ಕಳೆದು ಹೋಗಿದ್ದರೆ ತಪ್ಪದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು (FIR). ನಂತರ ನಕಲಿ ಡ್ರೈವಿಂಗ್ ಲೈಸೆನ್ಸ್ (Duplicate Driving License) ಪಡೆಯಲು ಅರ್ಜಿ ಸಲ್ಲಿಸಬೇಕು ಈಗ ಆನ್ಲೈನ್ ನಲ್ಲಿ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ.
ಈ ಸುದ್ದಿ ಓದಿ:- ಸ್ವಂತ ವಾಹನ ಖರೀದಿ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 4 ಲಕ್ಷ ಸಹಾಯಧನ
ಈ ವಿಧಾನಗಳನ್ನು ಅನುಸರಿಸಿ ಮನೆಯಲ್ಲಿ ಕುಳಿತು ಆನ್ಲೈನಲ್ಲಿ ಡ್ಯೂಪ್ಲಿಕೇಟ್ ಡ್ರೈವಿಂಗ್ ಲೈಸನ್ಸ್ ಪಡೆಯಲು ಅರ್ಜಿ ಸಲ್ಲಿಸಿ.
* ಮೊದಲಿಗೆ ಪರಿವಾಹನ್ (https://Parivahan.gov.in) ಸೇವಾ ಪೋರ್ಟಲ್‌ಗೆ ಭೇಟಿ ನೀಡಿ
* ನಂತರ ಡ್ರೈವಿಂಗ್ ಲೈಸೆನ್ಸ್ ಸೇವೆಗಳು (Driving License Services) ಆಯ್ಕೆಮಾಡಿ ಕ್ಲಿಕ್ ಮಾಡಿ, ಹೊಸ ಇಂಟರ್ ಫೇಸ್ ಓಪನ್ ಆಗುತ್ತದೆ.
* ನಕಲಿ ಪರವಾನಗಿಗಾಗಿ ಅರ್ಜಿ (Duplicate License application) ಆಯ್ಕೆಮಾಡಿ ಹೊಸ ಪುಟದಲ್ಲಿ ನಕಲಿ ಪರವಾನಗಿಗಾಗಿ ಅನ್ವಯಿಸು (apply) ಆಯ್ಕೆಯನ್ನು ಕ್ಲಿಕ್ ಮಾಡಿ.
* ಅರ್ಜಿ ನಮೂನೆಯನ್ನು ನೀಡಲಾಗುತ್ತದೆ, ಅದರಲ್ಲಿ ಅಗತ್ಯವಿರುವ ವಿವರಗಳನ್ನು ನಿಖರವಾಗಿ ಮತ್ತು ಸಂಪೂರ್ಣವಾಗಿ ಭರ್ತಿ ಮಾಡಿ, ಮತ್ತು ಸರಿಯಾದ ಸಂಪರ್ಕ ಸಂಖ್ಯೆಯನ್ನು ನಮೂದಿಸಿ.
* ನಿಮ್ಮ FIR ಪ್ರತಿ, ಗುರುತಿನ ಪುರಾವೆ, ವಿಳಾಸದ ಪುರಾವೆ ಮತ್ತು ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರಗಳಂತಹ ಅಗತ್ಯ ಪೋಷಕ ದಾಖಲೆಗಳನ್ನು ಸೂಚಿಸಿರುವ ನಿರ್ದಿಷ್ಟಪಡಿಸಿದ ಫೈಲ್ ಗಾತ್ರ ಮತ್ತು ಫಾರ್ಮ್ಯಾಟ್ ಗೆ ಕನ್ವರ್ಟ್ ಮಾಡಿ ಅಪ್ಲೋಡ್ ಮಾಡಿ.
ಈ ಸುದ್ದಿ ಓದಿ:- ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ RBI ನಿಂದ ಗುಡ್ ನ್ಯೂಸ್.! ಇಂದಿನಿಂದ ಹೊಸ ರೂಲ್ಸ್.!
* ನಿಗದಿ ಪಡಿಸಿರುವ ಶುಲ್ಕವನ್ನು ಪಾವತಿಸಬೇಕು, ಪೋರ್ಟಲ್ ನಲ್ಲಿರುವ ಆನ್‌ಲೈನ್ ಪಾವತಿ ವಿಧಾನಗಳನ್ನು ಬಳಸಿಕೊಂಡು ನಿಗದಿತ ಶುಲ್ಕವನ್ನು ಪಾವತಿಸಿ. ಶುಲ್ಕದ ಮೊತ್ತವು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವನ್ನು ಅವಲಂಬಿಸಿ ಬದಲಾಗಬಹುದು.
* ಡಾಕ್ಯುಮೆಂಟ್ ಪರಿಶೀಲನೆ ಅಥವಾ ಬಯೋಮೆಟ್ರಿಕ್ ಡೇಟಾ ಕ್ಯಾಪ್ಚರ್‌ಗಾಗಿ ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಲು ಕೆಲವು RTO ಗಳು ನಿಮಗೆ ಸಹಾಯಕವಾಗಬಹುದು. ಅಪಾಯಿಂಟ್‌ಮೆಂಟ್ ಅಗತ್ಯವಿದ್ದರೆ ಅನುಕೂಲಕರ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲು ಪೋರ್ಟಲ್‌ನಲ್ಲಿರುವ ಸೂಚನೆಗಳನ್ನು ಅನುಸರಿಸಿ.
ಈ ಸುದ್ದಿ ಓದಿ:- ಗ್ರಾಮ ಪಂಚಾಯಿತಿಯಲ್ಲಿ ಭರ್ಜರಿ ನೇಮಕಾತಿ, ಬರೋಬ್ಬರಿ 25,000 ಜನ ಮಿತ್ರ ಹುದ್ದೆಗಳು.! ಆಸಕ್ತರು ಅರ್ಜಿ ಸಲ್ಲಿಸಿ.!
* ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಿದ ನಂತರ ಇದೇ ಪೋರ್ಟಲ್‌ನಲ್ಲಿ ನಿಮಗೆ ನೀಡಿರುವ ರೆಫರೆನ್ಸ್ ನಂಬರ್ ಸಹಾಯದಿಂದ ನಿಮ್ಮ ನಕಲಿ DL ಅಪ್ಲಿಕೇಶನ್‌ನ ಸ್ಟೇಟಸ್ ನೀವು ಟ್ರ್ಯಾಕ್ ಮಾಡಬಹುದು. ಅರ್ಜಿ ಸಲ್ಲಿಕೆಯಿಂದ ಅನುಮೋದನೆ ಮತ್ತು ರವಾನೆಯವರೆಗೆ ನಿಮ್ಮ ಅಪ್ಲಿಕೇಶನ್‌ನ ಪ್ರಗತಿಯನ್ನು ಪೋರ್ಟಲ್ ಪ್ರದರ್ಶಿಸುತ್ತದೆ.
* ಅರ್ಜಿ ಪರಿಶೀಲನೆಯಾಗಿ ಅನುಮೋದನೆಯಾದ ನಂತರ RTO ನಿಮ್ಮ ನಕಲು DL ಅನ್ನು ನಿಮ್ಮ ನೋಂದಾಯಿತ ವಿಳಾಸಕ್ಕೆ ಕಳುಹಿಸುತ್ತದೆ. ನಿಗದಿತ ಸಮಯದೊಳಗೆ ನೀವು ಅದನ್ನು ಪೋಸ್ಟ್ ಮೂಲಕ ಸ್ವೀಕರಿಸಬಹುದು. ಅಥವಾ ನಿಮ್ಮ ಸ್ಥಳೀಯ RTO ಕಛೇರಿಗೆ ಭೇಟಿ ಕೊಟ್ಟು ನೇರವಾಗಿಯು ಪಡೆಯಬಹುದು.
* ಆನ್ಲೈನ್ನಲ್ಲಿ ಈ ಮೇಲೆ ತಿಳಿಸಿದ ವಿಧಾನದ ಪ್ರಕಾರ ಸುಲಭವಾಗಿ ಪಡೆಯಬಹುದು ಅಥವಾ ಆಫ್ಲೈನ್ ನಲ್ಲಿ ನೇರವಾಗಿ RTO ಕಚೇರಿಗೆ ಭೇಟಿ ಕೊಟ್ಟು ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ.
ಈ ಸುದ್ದಿ ಓದಿ:- ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ.? ಕೇವಲ 2 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಿ.!