ಫೆಬ್ರವರಿ 29 ರೊಳಗೆ ಈ ಕೆಲಸ ಮಾಡದೇ ಇದ್ರೆ ನಿಮ್ಮ ರೇಷನ್ ಕಾರ್ಡ್ ಬಂದ್ ಆಗಲಿದೆ.!

 

WhatsApp Group Join Now
Telegram Group Join Now

APL, BPL ಅಥವಾ AAY ಇದರಲ್ಲಿ ಯಾವುದೇ ರೇಷನ್ ಕಾರ್ಡ್ ಹೊಂದಿದ್ದರು ತಪ್ಪದೇ ಪ್ರತಿಯೊಬ್ಬರು ಈ ಸುದ್ದಿಯನ್ನು ನೋಡಿ. ಯಾಕೆಂದರೆ ನೀವೇನಾದರೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿರುವ ಈ ಸೂಚನೆಯಂತೆ ನಡೆದುಕೊಳ್ಳದೆ ಇದ್ದಲ್ಲಿ ಇದೇ ತಿಂಗಳು ನಿಮ್ಮ ರೇಷನ್ ಕಾರ್ಡ್ (Ration card suspend) ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ವಿಷಯ ಏನೆಂದರೆ.

ರೇಷನ್ ಕಾರ್ಡ್ ಈಗ ಅತ್ಯಗತ್ಯ ದಾಖಲೆಯಾಗಿ‌‌‌‌ದೆ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಅದರಲ್ಲೂ ಹೊಸ ಸರ್ಕಾರದ ದೆಸೆಯಿಂದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳಿಗೆ (Guarantee Schemes) ಸಂಬಂಧಿಸಿದಂತೆ ಮತ್ತು ಇತ್ತೀಚಿಗೆ ಜಾರಿಗೆ ತಂದ ಆಯುಷ್ಮಾನ್ ಕಾರ್ಡ್ ಯೋಜನೆ (Ayushman Health Card) ಮತ್ತು ಇನ್ನು ಅನೇಕ ಯೋಜನೆಗಳಿಗೆ ರೇಷನ್ ಕಾರ್ಡ್ ಮುಖ್ಯ ದಾಖಲೆಯಾಗಿ ಬೇಕೇ ಬೇಕು.

ಈ ಸುದ್ದಿ ಓದಿ:- ಸೈಟ್ ಖರೀದಿಗೆ ಸಿಗಲಿದೆ ಸಾಲ.! ಬಡ್ಡಿ ಎಷ್ಟು.? ಎಷ್ಟು ಸಾಲ ಸಿಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ವಿಶೇಷ ಏನೆಂದರೆ APL ರೇಷನ್ ಕಾರ್ಡ್ ಕಾರ್ಡ್ ಹೊಂದಿದವರಿಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಹಾಗೂ ಆಯುಷ್ಮಾನ್ ಕಾರ್ಡ್ ಮೂಲಕ ವೈದ್ಯಕೀಯ ಶುಲ್ಕಗಳಿಗೆ ರಿಯಾಯಿತಿ ಸಿಗಲಿದೆ. ಇತ್ಯಾದಿ ಕಾರಣಗಳಿಂದ ರೇಷನ್ ಕಾರ್ಡ್ ಇಲ್ಲದವರು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುತ್ತಿದ್ದಾರೆ ಈ ರೀತಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇದೇ ಸಂದರ್ಭದಲ್ಲಿ ನಕಲಿ ರೇಷನ್ ಕಾರ್ಡ್ ಗಳನ್ನು ಗುರುತಿಸಿ ಅಂತಹ ಪಲಾನುಭವಿಗಳನ್ನು ಯೋಜನೆಗಳಿಂದ ತೆಗೆದು ಹಾಕದೆ ಇದ್ದಲ್ಲಿ ಅಸಲಿ ಫಲಾನುಭವಿಗಳಿಗೆ ಅನ್ಯಾಯವಾಗಲಿದೆ. ಹಾಗಾಗಿ ಒಂದೆಡೆ ಆಹಾರ ಇಲಾಖೆ ವತಿಯಿಂದ ರೇಷನ್ ಕಾರ್ಡ್ ಗಳ ಪರಿಶೀಲನೆ ಮತ್ತು ಸ್ಥಗಿತಗೊಳಿಸುವ ಹಾಗೂ ರದ್ದುಪಡಿಸುವ ಕಾರ್ಯ ನಡೆಯುತ್ತಿದೆ.

ಈ ಸುದ್ದಿ ಓದಿ:- ಕೇವಲ 24 ಸಾವಿರಕ್ಕೆ ಸಿಗಲಿದೆ ಯಮಹಾ ಸ್ಕೂಟಿ.!

ನಕಲಿ ದಾಖಲೆ ತೋರಿಸಿ ರೇಷನ್ ಕಾರ್ಡ್ ಪಡೆದಿದ್ದರೆ ಅಥವಾ ಸತ್ಯ ಮರೆ ಮಾಚಿ 2016ರಲ್ಲಿ BPL ರೇಷನ್ ಕಾರ್ಡ್ ಗಳನ್ನು ಪಡೆಯಲು ವಿಧಿಸಿರುವ ಮಾನದಂಡಗಳನ್ನು ಮೀರಿ ರೇಷನ್ ಕಾರ್ಡ್ ಗಳನ್ನು ಪಡೆದಿದ್ದರೆ ಅಂತಹ ಕಾರ್ಡ್ ಗಳನ್ನು ರದ್ದುಪಡಿಸುವ (Card Cancelation) ಪ್ರಕ್ರಿಯ ನಡೆಯುತ್ತಿದೆ. ಈ ಸಂಬಂಧ ಅಧಿಸೂಚನೆ ಕೂಡ ಹೊರಡಿಸಿ ಸೂಚನೆ ಕೊಡಲಾಗಿದೆ.

ಯಾವುದೇ ರೇಷನ್ ಕಾರ್ಡ್ ಹೊಂದಿದ್ದರು ಆ ಫಲಾನುಭವಿಗಳು ತಪ್ಪದೆ ತಮ್ಮ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಫೆಬ್ರವರಿ 29ರ ಒಳಗೆ ಪೂರೈಸಬೇಕು ಮತ್ತು ತಮ್ಮ ಮೊಬೈಲ್ ಸಂಖ್ಯೆಗಳು ಬದಲಾಗಿದ್ದರೆ ಅದನ್ನು ನವೀಕರಿಸಬೇಕು. BPL ರೇಷನ್ ಕಾರ್ಡ್ ಪಡೆಯಲು ವಿಧಿಸಿರುವ ಮನದಂಡಗಳನ್ನು ಮೀರಿ ಯಾರಾದರೂ BPL ಕಾರ್ಡ್ ಪಡೆದಿದ್ದರೆ ಕೂಡಲೇ ಅದನ್ನು APL ಗೆ ಬದಲಾಯಿಸಿಕೊಳ್ಳಬೇಕು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಓದಿ:- ಡ್ರೈವಿಂಗ್ ಲೈಸೆನ್ಸ್ ಕಳೆದು ಹೋಗಿದ್ರೆ ಡುಪ್ಲಿಕೇಟ್ DL ಪಡೆಯಲು ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!

ಇದನ್ನು ಮೀರಿ ಯಾರಾದರೂ ಈ ಪ್ರಕ್ರಿಯೆ ಪೂರ್ತಿಗೊಳಿಸದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಗಳು ತಾತ್ಕಾಲಿಕವಾಗಿ ರದ್ದಾಗಲಿದೆ, ಒಂದು ವೇಳೆ ಅನರ್ಹರು BPL ರೇಷನ್ ಕಾರ್ಡ್ ಗಳನ್ನು ಹೊಂದಿದ್ದರೆ ರೇಷನ್ ಕಾರ್ಡ್ ಗಳೇ ರದ್ದಾಗುತ್ತವೆ. ಆಗ ಗೃಹಲಕ್ಷ್ಮಿಯು ಸೇರಿದಂತೆ APL ರೇಷನ್ ಕಾರ್ಡ್ ಹೊಂದಿರುವವರಿಗೂ ಸರ್ಕಾರದಿಂದ ಸಿಗುವ ಯಾವುದೇ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಕೂಡ ಪಡೆಯಲು ಸಾಧ್ಯವಾಗುವುದಿಲ್ಲ.

ಹಾಗಾಗಿ ಸರ್ಕಾರ ನೀಡಿರುವ ಸೂಚನೆಯಂತೆ ಈ ಕೂಡಲೇ ನೀವು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ (Fair price shop ir Grama one) ಅಥವಾ ಗ್ರಾಮವನ್ನು ಕೇಂದ್ರಗಳಿಗೆ ಹೋಗಿ ರೇಷನ್ ಕಾರ್ಡ್ ಇ-ಕೆವೈಸಿ ಪ್ರಕ್ರಿಯೆ ಪೂರ್ತಿಗೊಳಿಸಿ ಮತ್ತು ಈ ಉಪಯುಕ್ತ ಮಾಹಿತಿ ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಈ ಸುದ್ದಿ ಓದಿ:- RTC ಪಹಣಿಯಲ್ಲಿ ಹೆಸರು ತಪ್ಪಾಗಿದ್ದರೆ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳುವ ಸುಲಭ ವಿಧಾನ ಇಲ್ಲಿದೆ ನೋಡಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now