Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಜಮೀನು (land) ಹೊಂದಿರುವ ರೈತನು ಆ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ಹೊಂದಿರಬೇಕು. ಸಾಧ್ಯವಾದರೆ ರೈತನು ತಾನು ಕೃಷಿ ಮಾಡುವ ಭೂಮಿಯ ದಾಖಲೆಗಳನ್ನು ತನ್ನ ಹೆಸರಿನಲ್ಲಿ ಹೊಂದಿದ್ದರೆ ಬಹಳ ಅನುಕೂಲ, ಆಗ ಸರ್ಕಾರದಿಂದ ಸಿಗುವ ಅನೇಕ ಪ್ರಯೋಜನಗಳು ನೇರವಾಗಿ ರೈತರಿಗೆ ಸಿಗುತ್ತದೆ.
ಕೆಲವೊಮ್ಮೆ ಪಿತ್ರಾರ್ಜಿತ ಆಸ್ತಿಗಳು ಇನ್ನೂ ಸಹ ಮಕ್ಕಳ ಹೆಸರಿಗೆ ವರ್ಗಾವಣೆ ಆಗಿರುವುದಿಲ್ಲ, ಆದರೂ ಮಕ್ಕಳು ಅದೇ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಬದುಕಿರುತ್ತಾರೆ. ಮತ್ತು ಅವಿಭಕ್ತ ಕುಟುಂಬದಲ್ಲೂ ಕೂಡ ಸಹೋದರರು ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳದೆ ಹಿರಿಯರ ಹೆಸರಿನಲ್ಲಿ ಇಟ್ಟುಕೊಂಡೇ ಎಲ್ಲರೂ ತಮ್ಮ ಪಾಲಿಗೆ ಸೂಚಿಸುತ್ತಿದ್ದನ್ನು ಅನುಭೋಗ ಮಾಡಿಕೊಂಡು ಬರುತ್ತಿರುತ್ತಾರೆ.
ಈ ಸುದ್ದಿ ನೋಡಿ :- ಫೆಬ್ರವರಿ 29 ರೊಳಗೆ ಈ ಕೆಲಸ ಮಾಡದೇ ಇದ್ರೆ ನಿಮ್ಮ ರೇಷನ್ ಕಾರ್ಡ್ ಬಂದ್ ಆಗಲಿದೆ.!
ಈ ರೀತಿ ಇದ್ದರೂ ಕೂಡ ಆ ಆಸ್ತಿಗೆ ಸಂಬಂಧಪಟ್ಟ ಹಾಗೆ ಕೆಲವು ಪುರಾವೆಗಳನ್ನು ಅವರು ಹೊಂದಿರಲೇಬೇಕು, ಇಲ್ಲದಿದ್ದರೆ ಆ ಜಮೀನನ್ನು ಯಾರೂ ಬೇಕಾದರೂ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ ಅಥವಾ ನಿಮ್ಮ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಸಾಧ್ಯತೆಯೂ ಇರುತ್ತದೆ.
ಒಂದು ವೇಳೆ ನಿಮ್ಮ ಜಮೀನಿನ ದಾಖಲೆಗಳು (Property Documents) ನಿಮ್ಮ ಬಳಿ ಇಲ್ಲದೆ ಇದ್ದರೆ ಅಥವಾ ಕಳೆದು ಹೋಗಿದ್ದರೆ ನೀವು ಕಂದಾಯ ಇಲಾಖೆ ಕಚೇರಿಗೆ (revenue department) ಹೋಗಿ ಪಡೆದುಕೊಳ್ಳಬಹುದು. ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಪಡೆಯುವುದು ಬಹಳ ಸಮಯ ತೆಗೆದುಕೊಳ್ಳುತ್ತದೆ.
ಈ ಸುದ್ದಿ ನೋಡಿ :- ಸೈಟ್ ಖರೀದಿಗೆ ಸಿಗಲಿದೆ ಸಾಲ.! ಬಡ್ಡಿ ಎಷ್ಟು.? ಎಷ್ಟು ಸಾಲ ಸಿಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಮತ್ತು ತಮ್ಮ ಪ್ರದೇಶಗಳಿಂದ ತಮ್ಮ ತಾಲೂಕು ವ್ಯಾಪ್ತಿ ಕಚೇರಿಗಳಿಗೆ ರೈತರು ಅಲೆದಾಡುವುದು ಸಮಯ ಮತ್ತು ಹಣದ ವ್ಯರ್ಥ ಖರ್ಚು. ಹೀಗಾಗಿ ರೈತರಿಗೆ ಅನುಕೂಲತೆ ಮಾಡಿಕೊಡಲು ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಯಾವೆಲ್ಲ ದಾಖಲೆಗಳನ್ನು ಪಡೆಯಬಹುದು? ಹೇಗೆ ಪಡೆಯಬೇಕು ಎನ್ನುವ ವಿವರ ಹೀಗಿದೆ ನೋಡಿ.
ಕಂದಾಯ ಇಲಾಖೆ ಕಚೇರಿಯಲ್ಲಿ ಜನರಿಗೆ ಸಂಬಂಧಿಸಿದ ಈ ದಾಖಲೆಗಳು ಸಿಗುತ್ತವೆ
* ಭೂ ದಾಖಲೆಗಳಿಗೆ ಸಂಬಂಧಪಟ್ಟ ಮೂಲ ದಾಖಲಾತಿಗಳಾದ ದರಖಾಸ್ತು,
* ಅಲಿನೇಶನ್,
* ಭೂ ಸ್ವಾಧೀನ ಹಾಗೂ ಪೋಡಿ ದಾಖಲೆಗಳು
* ಭೂ ಮಾಪಕರು ಅಳತೆ ಮಾಡಿದ ನಂತರ ತಹಶೀಲ್ದಾರರು ದೃಢೀಕರಿಸಿದ ನಕ್ಷೆಗಳು
* ಹದ್ದು ಬಸ್ತು ಪ್ರಕರಣಗಳಲ್ಲಿ ಸರ್ವೇ ಅಧಿಕಾರಿಗಳು ತಯಾರಿಸಿದ ನಕ್ಷೆಗಳು,
ಈ ಸುದ್ದಿ ನೋಡಿ :- ಕೇವಲ 24 ಸಾವಿರಕ್ಕೆ ಸಿಗಲಿದೆ ಯಮಹಾ ಸ್ಕೂಟಿ.!
* ಮರುಭೂಮಾಪನ, ಮೊದಲನೇ ಹಾಗೂ ಎರಡನೇ ಮರು ವರ್ಗಿಕರಣದ ದಾಖಲಾತಿಗಳು,
* ಸರ್ವೇ ನಂಬರ್ ಗಳಿಗೆ ಸಂಬಂಧಪಟ್ಟ ಉತಾರಗಳು
* ಸಾರ್ವಜನಿಕರು ಇಲಾಖೆಗೆ ಸಲ್ಲಿಸಿದ ಅರ್ಜಿಗಳು
* ಇಲಾಖಾ ಅಧಿಕಾರಿಗಳು ಜನರಿಗೆ ನೀಡಿದ ಉತ್ತರ ಟಿಪ್ಪಣಿಗಳು * ಮರು ಭೂಮಾಪನ ಪ್ರತಿಗಳು
* ಹದ್ದು ಬಸ್ತು ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳಲ್ಲಿ ಜಮೀನಿನಲ್ಲಿ ಸೂಚಿಸಿರುವ ಮರಗಳು, ಬಾವಿ, ಕಟ್ಟೆ ಇತರೆ ಚಿಹ್ನೆ ಮೂಡಿಸಿದ ನಕ್ಷೆಗಳು.
* ಮರುಭೂಮಾಪನ ನಕ್ಷೆಯ ಮೂಲಪ್ರತಿ,
* ಹಿಸ್ಸಾ ಸರ್ವೇ
* ಮ್ಯೂಟೇಶನ್ ಪೊಡಿಯ ಅಳತೆಯ ಸಂದರ್ಭದಲ್ಲಿ ದಾಖಲಾದ ಹೆಸರುಗಳೊಂದಿಗೆ ಹಿಸ್ಸಾ ಸರ್ವೇಯ ಟಿಪ್ಪಣಿ.
* ಹಿಸ್ಸಾ ಸರ್ವೇಯ ದಾಖಲಾತಿಗಳಾದ ದರಖಾಸ್ತು,
* ಟಿಪ್ಪಣಿ,
* ಪಕ್ಕಾ ಮತ್ತು ಅಟ್ಲಾಸುಗಳು,
* ಅಲಿನೇಶನ್,
ಈ ಸುದ್ದಿ ನೋಡಿ :- ಡ್ರೈವಿಂಗ್ ಲೈಸೆನ್ಸ್ ಕಳೆದು ಹೋಗಿದ್ರೆ ಡುಪ್ಲಿಕೇಟ್ DL ಪಡೆಯಲು ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!
* ಭೂ ಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದ ಟಿಪ್ಪಣಿಗಳು.
* ನಗರ ಮಾಪನ ದಾಖಲಾತಿಗಳಾದ P.R ಕಾರ್ಡ್ ಗಳು, P.T ಶೀಟ್ ಗಳು,
* ನಗರ ಮಾಪನ ವಿಚಾರಣಾಧಿಕಾರಿಗಳು ವಿಚಾರಣೆ ನಂತರ ನೀಡಿದ ಹಿಂಬರಹ,
* ವಿಚಾರಣಾ ವಹಿಯ ನಕಲು,
* ಸ್ಥಳೀಯ ಕ್ಷೇತ್ರದ ನಕಾಶೆ,
* ಕ್ಷೇತ್ರ ಅಳತೆ ಪುಸ್ತಕ,
* ಭೂಮಾಪನಾ ಸಮಯದಲ್ಲಿ ನೀಡಿದ ಹೇಳಿಕೆಗಳು,
* ವಿಚಾರಣಾಧಿಕಾರಿಗಳ ಆದೇಶದ ನಕಲು,
* ವಿಚಾರಣಾಧಿಕಾರಿಗಳು ನೀಡಿರುವ ತೀರ್ಪುಗಳು.
ದಾಖಲೆಗಳನ್ನು ಪಡೆಯುವ ವಿಧಾನ:-
* ರೈತರು (farmers ) ತಮ್ಮ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ಈಗ ಆನ್ಲೈನ್ ಮೂಲಕವೂ ಪಡೆದುಕೊಳ್ಳಬಹುದು.
* ರೈತರು ತಮ್ಮ ದಾಖಲೆಗಳನ್ನು ಪಡೆದುಕೊಳ್ಳಲು ಭೂ ಕಂದಾಯ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಹೋಗಿ ಡೌನ್ಲೋಡ್ ಸರ್ವೇ ಡಾಕ್ಯೂಮೆಂಟ್ (download Survey document) ಈ ಲಿಂಕ್ ಕ್ಲಿಕ್ ನೀಡಬೇಕು.
* ನಿಮ್ಮ ಜಮೀನಿನ ಸರ್ವೇ ನಂಬರ್, ಹಾಗೂ ಅಲ್ಲಿ ಕೇಳಲಾಗುವ ಮಾಹಿತಿ ಭರ್ತಿ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.