ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಎದುರಾಗಿದೆ. ಮುಂಗಾರು ಹಾಗೂ ಹಿಂಗಾರು ಮಳೆ ಕೈ ಕೊಟ್ಟಿರುವುದರಿಂದ ಕೃಷಿ ಸಂಪೂರ್ಣ ನೆಲ ಕಚ್ಚಿದೆ ಇದರಿಂದ ರೈತರು ಸಾಕಷ್ಟು ಕ’ಷ್ಟ ನ’ಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರಗಳು ಕೂಡ ರಾಜ್ಯದ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದರ ಜೊತೆಗೆ ರೈತರಿಗೂ ಕೂಡ ಬೆಳೆ ಹಾನಿ ಪರಿಹಾರ ನೀಡಲು ಮುಂದಾಗಿದೆ.
ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ 210 ಕ್ಕೂ ತಾಲೂಕುಗಳು ಬರಪೀಡಿತ ಪ್ರದೇಶ ಎಂಬುದಾಗಿ ಘೋಷಿಸಲಾಗಿದ್ದು ಕೇಂದ್ರದಿಂದಲೂ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ. ಇದರ ಜೊತೆ ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಬ್ಯಾಂಕ್ ಹಾಗೂ ಬ್ಯಾಂಕೇತರವಾದ ಇತರ ಹಣಕಾಸು ಸಂಸ್ಥೆಗಳಿಗೆ ಈ ವರ್ಷ ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಒತ್ತಾಯಿಸಬಾರದು ಎಂದು ಸೂಚನೆ ಕೊಟ್ಟಿದ್ದಾರೆ.
ಈ ಸುದ್ದಿ ನೋಡಿ:- ಇನ್ಮುಂದೆ ಜಮೀನು, ಭೂ ದಾಖಲೆಗಳಿಗಾಗಿ ಅಲೆದಾಡುವ ಅವಶ್ಯಕತೆ ಇಲ್ಲ.! ರೈತರಿಗಾಗಿ ಹೊಸ ಸೇವೆ ಆರಂಭ…
ಇದರೊಂದಿಗೆ ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಮಾಡಿರುವಂತಹ ಕೆಲವು ರೈತರ ಸಾಲದ ಮೇಲಿನ ಬಡ್ಡಿಯನ್ನು ಕೂಡ ಸಂಪೂರ್ಣವಾಗಿ ಮನ್ನ ಮಾಡುವುದಾಗಿ ಡಿಸೆಂಬರ್ ತಿಂಗಳ 8ನೇ ತಾರೀಕಿನ ಸಚಿವ ಸಂಪುಟ ಸಭೆಯಲ್ಲಿ ಘೋಷಿಸಿದ್ಧ ಮುಖ್ಯಮಂತ್ರಿಗಳು 21 ಜನವರಿ 2024 ರಂದು ಅದಕ್ಕೆ ಅಧಿಕೃತ ಆದೇಶವನ್ನು ಕೂಡ ಹೊರಡಿಸಿದ್ದಾರೆ. ಆ ಪ್ರಕಾರವಾಗಿ 440.28 ಕೋಟಿ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನವಾಗುತ್ತಿದೆ. ಯಾವ ರೈತರಿಗೆಲ್ಲ ಈ ಅನುಕೂಲತೆ ಸಿಗುತ್ತಿದೆ ಗೊತ್ತಾ?…
ಕೃಷಿ ಸಹಕಾರಿ ಬ್ಯಾಂಕ್ ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಮಾಡಿರುವಂತಹ ರೈತರಿಗೆ ಈ ವರ್ಷದ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಅಲ್ಪಾವಧಿ ಸಾಲದ ಅವಧಿ 12 ತಿಂಗಳು ಇದ್ದು, ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಕೃಷಿ ಸಾಲ ನೀಡಲಾಗುತ್ತದೆ.
ಈ ಸುದ್ದಿ ನೋಡಿ:- ಫೆಬ್ರವರಿ 29 ರೊಳಗೆ ಈ ಕೆಲಸ ಮಾಡದೇ ಇದ್ರೆ ನಿಮ್ಮ ರೇಷನ್ ಕಾರ್ಡ್ ಬಂದ್ ಆಗಲಿದೆ.!
ಹಾಗೆಯೇ 10 ವರ್ಷಗಳ ಅವಧಿಗೆ ಮಧ್ಯಮಾವತಿ ಸಾಲವನ್ನು 3% ಬಡ್ಡಿದರದಲ್ಲಿ ನೀಡಲಾಗುತ್ತದೆ ಮತ್ತು 10 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ನೀಡುವ ಸಾಲವನ್ನು ದೀರ್ಘಾವಧಿ ಸಾಲ ಎನ್ನುತ್ತಾರೆ. ಈ ಸಾಲಗಳಲ್ಲಿ ಚಾಲ್ತಿ ಸಾಲ ಅಥವಾ ಸುಸ್ತಿ ಸಾಲದಾರರಾಗಿರುವವರು ಈಗ ಮುಖ್ಯಮಂತ್ರಿಗಳು ಘೋಷಿಸಿರುವ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ ಅನುಕೂಲತೆ ಪಡೆಯಬಹುದು ಆದರೆ ಅದಕ್ಕೆ ಕೆಲವು ಕಂಡಿಷನ್ ಗಳನ್ನು ಹೇರಲಾಗಿದೆ.
* 2023 ಡಿಸೆಂಬರ್ 31ಕ್ಕೆ ಸುಸ್ತಿಯಾಗುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲವನ್ನು ಕೃಷಿ ಚಟುವಟಿಕೆಗಳಿಗಾಗಿ ತೆಗೆದುಕೊಂಡಿದ್ದರೆ, ಅಂತಹ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಆಗಲಿದೆ, ಆದರೆ ಈ ರೈತರು ಪಡೆದಿರುವ ಸಾಲವನ್ನು ಸಂಪೂರ್ಣವಾಗಿ ಫೆಬ್ರವರಿ 29, 2024ರ ಒಳಗೆ ಅಸಲು ಮರು ಪಾವತಿ ಮಾಡಿರಬೇಕು.
ಈ ಸುದ್ದಿ ನೋಡಿ:- ಸೈಟ್ ಖರೀದಿಗೆ ಸಿಗಲಿದೆ ಸಾಲ.! ಬಡ್ಡಿ ಎಷ್ಟು.? ಎಷ್ಟು ಸಾಲ ಸಿಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
* ಕೃಷಿ ಸಂಬಂಧಿತ ಚಟುವಟಿಕೆಗಳಾದ ಪಶುಸಂಗೋಪನೆ, ಲಘು ನೀರಾವರಿ ಸಾಲ, ಭೂ ಅಭಿವೃದ್ಧಿ ಸಾಲ, ಸಾವಯವ ಕೃಷಿ ಸಾಲ, ಹೈನುಗಾರಿಕೆ, ಮೀನು ಸಾಕಾಣಿಕೆ, ರೇಷ್ಮೆ ಕೃಷಿ ಸಾಲ, ಕೃಷಿ ಯಂತೀಕರಣ ಮಾಡಲು ತೆಗೆದುಕೊಂಡ ಸಾಲ ಮತ್ತು ಪ್ಲಾಂಟೇಶನ್ ಸಾಲ. ತೋಟಗಾರಿಕೆ ಅಭಿವೃದ್ಧಿ ಪಡಿಸಲು ತೆಗೆದುಕೊಂಡ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ಮೇಲಿನ ಬಡ್ಡಿಯು ಮನ್ನವಾಗುತ್ತದೆ ಆದರೆ ಕೃಷಿಯೇತರ ಸಾಲಕ್ಕೆ ಇದು ಅನ್ವಯವಾಗುವುದಿಲ್ಲ.
* ಗರಿಷ್ಠ 10 ಲಕ್ಷದವರೆಗಿನ ಸಾಲದ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ.
* ಕಡ್ಡಾಯವಾಗಿ ಫೆಬ್ರುವರಿ 29, 2024ಕ್ಕೆ ಸಂಪೂರ್ಣ ಅಸಲು ಪಾವತಿ ಮಾಡಿದರೆ ಮಾತ್ರ ಬಡ್ಡಿ ಮನ್ನಾ ಆಗುತ್ತದೆ.