ಅಂಚೆ ಕಚೇರಿಯಲ್ಲಿ ಅಂಚೆ ಸೌಲಭ್ಯಗಳು ಮಾತ್ರವಲ್ಲದೆ ಉತ್ತಮ ಆದಾಯ ಮೂಲ ಕಲ್ಪಿಸುವಂತಹ ಹೂಡಿಕೆ ಯೋಜನೆಗಳು ಹಾಗೂ ನಮ್ಮ ಹಣವನ್ನು ಬೆಳೆಸುವಂತಹ ಉಳಿತಾಯ ಯೋಜನೆಗಳು ಕೂಡ ಇವೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಈ ಅಂಚೆ ಯೋಜನೆಗಳಲ್ಲಿ ನಾವು ಉಳಿತಾಯ ಮಾಡುವ ಹಣಕ್ಕೆ 100% ಸುರಕ್ಷತೆ ಇರುತ್ತದೆ.
ಈಗಂತೂ ಅಂಚೆ ಕಚೇರಿಯಲ್ಲಿ ಆಕರ್ಷಕ ಬಡ್ಡಿ ದರಗಳು ಸಿಗುತ್ತಿದ್ದು, ಹೆಣ್ಣು ಮಕ್ಕಳಿಗೆ ಹಿರಿಯ ನಾಗರಿಕರಿಗೆ ಹಾಗೂ ಮಹಿಳೆಯರಿಗಾಗಿ ಕೆಲವು ವಿಶೇಷ ಸೌಲಭ್ಯಗಳನ್ನು ಕೊಡಲಾಗುತ್ತಿದೆ. ಇದರಲ್ಲಿ ಪ್ರತಿ ತಿಂಗಳು ರೂ.20,500 ನಿಶ್ಚಿತ ಆದಾಯ ನೀಡುವಂತಹ ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizen Saving Scheme) ಎನ್ನುವ ವಿಶೇಷ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲು ಬಯಸುತ್ತಿದ್ದೇನೆ.
ಈ ಸುದ್ದಿ ಓದಿ:-ಅಕ್ರಮ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಯೋಜನೆಯ ಹೆಸರು:- ಹಿರಿಯ ನಾಗರಿಕರ ಉಳಿತಾಯ ಯೋಜನೆ
ಯೋಜನೆ ಕುರಿತು ಕೆಲವು ಪ್ರಮುಖ ಅಂಶಗಳು:-
* 60 ವರ್ಷ ಮೇಲ್ಪಟ್ಟ ಭಾರತೀಯ ನಾಗರಿಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
* ಈ ಯೋಜನೆಯ ಮೆಚುರಿಟಿ ಅವಧಿ 05 ವರ್ಷಗಳು ಮತ್ತು ಈ ಅವಧಿ ಮುಗಿದ ನಂತರವೂ ನೀವು ಇಚ್ಛೆಪಟ್ಟಲ್ಲಿ ಇದನ್ನು ನಂತರದ ವರ್ಷಗಳಿಗೆ ಮತ್ತೊಮ್ಮೆ ವಿಸ್ತರಿಸಬಹುದು
* ಕನಿಷ್ಠ ರೂ.1000 ದಿಂದ ಗರಿಷ್ಠ 3 ಲಕ್ಷದವರೆಗೆ ಈ ಯೋಜನೆಯಡಿ ಹೂಡಿಕೆ ಮಾಡಬಹುದು.
* ನಿಮಗೆ 60 ವರ್ಷ ವಯಸ್ಸಾದ ಸಮಯದಲ್ಲಿ ಕೆಲಸದಿಂದ ನಿವೃತ್ತಿ ತೆಗೆದುಕೊಂಡಿರುತ್ತೀರಿ. ಈ ಸಮಯದಲ್ಲಿ ನಿಮಗೆ ಅನೇಕ ನೀವು ದುಡಿತ್ತಿದ್ದ ಸಮಯದಲ್ಲಿ ಹೂಡಿಕೆ ಮಾಡಿದ್ದ ಹಲವು ಮೂಲಗಳಿಂದ ದೊಡ್ಡ ಮೊತ್ತದ ಹಣ ಸಿಗಬಹುದು. ಈ ಹಣವನ್ನು ಎಲ್ಲಿ ಹೂಡಿಕೆ ಮಾಡಿದರೆ ಹಣಕ್ಕೆ ಭದ್ರತೆ ಹಾಗೂ ಹೆಚ್ಚು ಲಾಭ ಸಿಗುತ್ತದೆ ಎನ್ನುವ ಯೋಚನೆ ಬರುತ್ತದೆ.
ಈ ಸುದ್ದಿ ಓದಿ:-ಸೈಟ್ ಖರೀದಿ ಮಾಡುವ ಮುನ್ನ ಈ ದಾಖಲೆ ಪರಿಶೀಲನೆ ಮಾಡುವುದು ಕಡ್ಡಾಯ.!
ಉತ್ತಮ ಆದಾಯದ ಮೂಲದ ಜೊತೆಗೆ ಹಣದ ಸುರಕ್ಷತೆ ಕೂಡ ಮುಖ್ಯವಾಗಿರುವುದರಿಂದ ನೀವೇನಾದರೂ ಅಂಚೆ ಕಚೇರಿಯ ಈ ಹಿರಿಯ ನಾಗರಿಕರ ಯೋಜನೆಯನ್ನು ಹೋಲಿಕೆ ಮಾಡಿದರೆ ನಿಮಗೆ ಗರಿಷ್ಠ 8.2% ಬಡ್ಡಿ ದರದಲ್ಲಿ ಒಳ್ಳೆಯ ಆದಾಯ ಸಿಗುತ್ತದೆ. ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಈ ಬಡ್ಡಿದರವು ಪರಿಷ್ಕೃತವಾಗುತ್ತಿರುತ್ತದೆ
* ನೀವು ಮಾಸಿಕವಾಗಿ ಈ ಬಡ್ಡಿ ರೂಪದ ಆದಾಯದ ಹಣವನ್ನು ಪಡೆಯಲಾಗದೇ ಇದ್ದರೂ ತ್ರೈ ಮಾಸಿಕವಾಗಿ, ಅರ್ಧ ವಾರ್ಷಿಕವಾಗಿ ಅಥವಾ ವಾರ್ಷಿಕವಾಗಿ ಪಡೆಯಬಹುದು. ಮೂರು ತಿಂಗಳಿಗೊಮ್ಮೆ ಪಡೆಯುವುದಾದರೆ ಏಪ್ರಿಲ್, ಆಗಸ್ಟ್, ಅಕ್ಟೋಬರ್ ಮತ್ತು ಜನವರಿ ತಿಂಗಳಿನಲ್ಲಿ ನೀವು ಈ ಬಡ್ಡಿ ದರವನ್ನು ಪಡೆಯಬಹುದು ಇದು ನೇರವಾಗಿ ನಿಮ್ಮ ಉಳಿತಾಯ ಖಾತೆಗೆ ಜಮೆ ಆಗುತ್ತದೆ.
ಈ ಸುದ್ದಿ ಓದಿ:-ಈ ಕಾಲೇಜ್ ನಲ್ಲಿ ಡೊನೇಷನ್ ಇಲ್ಲ, ಕೇವಲ ರೂ.3,700 ಕ್ಕೆ ಊಟ-ವಸತಿ, ಇಲ್ಲಿ ಮಕ್ಕಳು ಓದುತ್ತಲೇ ದುಡಿಯುತ್ತಾರೆ.! ಹೇಗೆ ಅಂತ ನೋಡಿ.!
* ಉಳಿತಾಯ ಯೋಜನೆಗಳಂತೆ ಈ ಯೋಜನೆಗೂ ಕೂಡ ನಾಮಿನಿ ಫೆಸಿಲಿಟಿ ಲಭ್ಯವಿದ್ದು ಒಂದು ವೇಳೆ ಹೂಡಿಕೆದಾರರು ಅಕಾಲಿಕ ಮ’ರ’ಣ ಹೊಂದಿದರೆ ಆ ಸಂದರ್ಭದಲ್ಲಿ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಮೊತ್ತವು ನಾಮಿನಿಗೆ ಸೇರುತ್ತದೆ.
* ಆದಾಯ ತೆರಿಗೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ಪಡೆದುಕೊಳ್ಳಬಹುದು.
* ಲೆಕ್ಕಾಚಾರದ ಪ್ರಕಾರ ನೀವೇನಾದರೂ ಈ ಯೋಜನೆಯಲ್ಲಿ 15 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡುವುದಾದರೆ, ಪ್ರತಿ ತ್ರೈಮಾಸಿಕಕ್ಕೆ ರೂ.10,250 ಗಳನ್ನು ಪಡೆಯಬಹುದು. ಅಂದರೆ ಐದು ವರ್ಷಗಳಲ್ಲಿ 30 ಲಕ್ಷ ರೂಪಾಯಿಗಳ ಹೂಡಿಕೆಗೆ ಪ್ರತಿ ವರ್ಷ 2,46,000ಗಳನ್ನ ಬಡ್ಡಿಯಾಗಿ ಪಡೆಯಬಹುದು.
ಆಗ ಪ್ರತಿ ತಿಂಗಳು ರೂ.20,500 ಹಾಗೂ ಮೂರು ತಿಂಗಳಿಗೆ ರೂ.61,500 ಗಳನ್ನು ಪಡೆದಂತಾಗುತ್ತದೆ. ಯೋಜನೆ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಹತ್ತಿರದ ಅಂಚೆ ಕಚೇರಿಗೆ ಭೇಟಿ ಕೊಡಿ ಅಥವಾ ಅಂಚೆ ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.