ಪಡಿತರ ಚೀಟಿ (Ration Card) ಎನ್ನುವುದು ಈಗ ಒಂದು ಅತ್ಯಮೂಲ್ಯ ದಾಖಲೆಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (Below Poverty Line) BPL ಹಾಗೂ AAY ಮತ್ತು ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ APL ರೇಷನ್ ಕಾರ್ಡ್ ನೀಡಲಾಗುತ್ತಿದೆ. APL ಅಥವಾ BPL ಯಾವುದೇ ಇರಲಿ ಕುಟುಂಬವೊಂದು ಗುರುತಿನ ಚೀಟಿಯಾಗಿ ರೇಷನ್ ಕಾರ್ಡ್ ಹೊಂದಿರಲೇಬೇಕು.
ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ BPL ರೇಷನ್ ಕಾರ್ಡ್ ಹೊಂದಿರುವವರಿಗೆ ಶೈಕ್ಷಣಿಕ ಖರ್ಚು ವೆಚ್ಚಗಳಲ್ಲಿ ಮತ್ತು ಇತ್ತೀಚಿಗೆ ಜಾರಿಗೆ ತಂದ ಆಯುಷ್ಮಾನ್ ಕಾರ್ಡ್ ಯೋಜನೆ ಮೂಲಕ ವೈದ್ಯಕೀಯ ಖರ್ಚು ವೆಚ್ಚಗಳಲ್ಲಿ ರಿಯಾಯಿತಿ ಮತ್ತು ಉಚಿತ ಪಡಿತರ ಮತ್ತು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಂತಹ ಯೋಜನೆ ಮೂಲಕ ಉಚಿತ ಗ್ಯಾಸ್ ಕನೆಕ್ಷನ್ ಇನ್ನು ಮುಂತಾದ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ.
ಈ ಸುದ್ದಿ ಓದಿ:-ಆಡು, ಕುರಿ, ಕೋಳಿ, ಮೇಕೆ ಸಾಕಾಣಿಕೆಗೆ ರೈತರಿಗೆ PMEGP ಯೋಜನೆಯಡಿ 20 ದಿನಗಳಲ್ಲಿ ಸಿಗಲಿದೆ 20 ಲಕ್ಷ ಲೋನ್ 7 ಲಕ್ಷ ಸಬ್ಸಿಡಿ ಸಿಗುತ್ತೆ.!
ರೈತರುಗಳಾಗಲಿ, ವಿದ್ಯಾರ್ಥಿಗಳೇ ಆಗಲಿ ಸರ್ಕಾರಗಳು ರೂಪಿಸುವ ಈ ಕಲ್ಯಾಣ ಯೋಜನೆಗಳನ್ನು ಪಡೆಯಬೇಕು ಎಂದರು ಕೂಡ ಅವರು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬ ಎಂದು ಸಾಬೀತು ಪಡಿಸಿಕೊಳ್ಳಲು ರೇಷನ್ ಕಾರ್ಡ್ ನ್ನು ದಾಖಲೆಯಾಗಿ ನೀಡಲೇಬೇಕಾಗುತ್ತದೆ ಎನ್ನಬಹುದು.
ಸದ್ಯಕ್ಕೀಗ ರಾಜ್ಯದಲ್ಲಿ BPL ರೇಷನ್ ಕಾರ್ಡ್ ಹೊಂದಿರುವವರಿಗೆ ಉಚಿತ ಪಡಿತರ ಸಿಗುತ್ತಿದೆ 10 ಕೆಜಿ ಅಕ್ಕಿ ನೀಡಬೇಕಾಗಿರುವ ಪರಿಸ್ಥಿತಿಯಲ್ಲಿ ದಾಸ್ತಾನು ಕೊರತೆಯಿಂದ 5Kg ಅಕ್ಕಿ ಹಾಗೂ ಉಳಿದ 5Kg ಅಕ್ಕಿ ಬದಲಿಗೆ ಪ್ರತಿ Kgಗೆ 35 ರೂಪಾಯಿಯಂತೆ ಸದಸ್ಯನೊಬ್ಬರಿಗೆ 170 ರೂಪಾಯಿಯನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ DBT ಮೂಲಕ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ.
ಈ ಸುದ್ದಿ ಓದಿ:-1 ಫೆಬ್ರವರಿ 2024 ಬಜೆಟ್ ಮಂಡನೆ ದೇಶದ ಜನತೆಗೆ ಬಂಪರ್ ಗುಡ್ ನ್ಯೂಸ್.!
ಸದ್ಯಕ್ಕೆ ಈಗ ಕರ್ನಾಟಕದಲ್ಲಿ ರೇಷನ್ ಕಾರ್ಡ್ ಹೊಂದಿರುವವರಿಗೆ ಡಬಲ್ ಧಮಾಕ. ಯಾಕೆಂದರೆ, ಯಾವುದೇ ರೇಷನ್ ಕಾರ್ಡ್ ಹೊಂದಿದ್ದರು ಅದರಲ್ಲಿ ಕುಟುಂಬದ ಮುಖ್ಯಸ್ಥರಾಗಿರುವ ಮಹಿಳೆಗೆ ಗೃಹಲಕ್ಷ್ಮಿ ಯೋಜನೆ ಮೂಲಕ ಸಹಾಯಧನ ಪ್ರತಿ ತಿಂಗಳು ಸಿಗುತ್ತಿದೆ ಮತ್ತು BPL ರೇಷನ್ ಕಾರ್ಡ್ ಹೊಂದಿರುವ ಮಹಿಳೆಗೆ ಕುಟುಂಬದಲ್ಲಿರುವ ಎಲ್ಲಾ ಸದಸ್ಯರ ಹೆಚ್ಚುವರಿ ಅಕ್ಕಿಯ ಹಣವು ಸಿಗುತ್ತಿದೆ.
ಈಗ ಈ ಸೌಲಭ್ಯವನ್ನು ಪಡೆಯುತ್ತಿರುವವರಿಗೆ ಸರ್ಕಾರದ ವತಿಯಿಂದ ಮತ್ತೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಇನ್ನು ಮುಂದೆ ಬಡತನ ರೇಖೆಗಿಂತ ಕೆಳಗಿರುವ ರೇಷನ್ ಕಾರ್ಡ್ ಗಳಾದ ಅಂತ್ಯೋದಯ (AAY card) ಹಾಗೂ ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರು ಅಕ್ಕಿ ಮತ್ತು ಗೋಧಿಯ ಜೊತೆಗೆ ಇನ್ನು ಮುಂದೆ ಸಿರಿಧಾನ್ಯವನ್ನು ಕೂಡ ಪಡೆದುಕೊಳ್ಳಲಿದ್ದಾರೆ.
ಈ ಸುದ್ದಿ ಓದಿ:-1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿ, PUC ಪಾಸ್ ಆದವರು ಅರ್ಜಿ ಸಲ್ಲಿಸಬಹುದು.!
ಇದುವರೆಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಫಲಾನುಭವಿಗಳಿಗೆ, 21Kg ಅಕ್ಕಿ ಹಾಗೂ 14Kg ಗೋಧಿ ಉಚಿತವಾಗಿ ನೀಡಲಾಗುತ್ತಿತ್ತು. ಇನ್ನು ಮುಂದೆ 9Kg ಗೋಧಿ ಹಾಗೂ 5Kg ಸಿರಿಧಾನ್ಯ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಇತರ ಪಡಿತರ ವಸ್ತುಗಳ ಪ್ರಮಾಣವನ್ನು ಕಡಿಮೆ ಮಾಡಿ ಸಿರಿಧಾನ್ಯವನ್ನು ನೀಡಲು ಸರ್ಕಾರ ನಿರ್ಧಾರಕ್ಕೆ ಬಂದಿದೆ.
ಇದರಿಂದ ಬಡತನ ರೇಖೆಗಿಂತ ಕೆಳಗಿರುವ ರೇಷನ್ ಕಾರ್ಡ್ ಪಡೆದಿರುವ ಕುಟುಂಬಗಳ ಫಲಾನುಭವಿಗಳು ಪೌಷ್ಟಿಕ ಆಹಾರ (nutrient food) ಸೇವಿಸುವಂತಾಗಬೇಕು ಎನ್ನುವುದು ಸರ್ಕಾರದ ಆಶಯ. ಬಲವಾದ ಮೂಲಗಳ ಮಾಹಿತಿ ಪ್ರಕಾರ ಫೆಬ್ರವರಿ ತಿಂಗಳಿಂದಲೇ ಸಿರಿಧಾನ್ಯ ವಿತರಣೆ ಆರಂಭವಾಗುವುದು ಎನ್ನುವ ಮಾಹಿತಿ ಇದೆ. ಒಟ್ಟಿನಲ್ಲಿ ಸಿರಿಧಾನ್ಯ ಕೂಡ ನೀಡಿದರೆ ಸಾಕಷ್ಟು ಕುಟುಂಬಕ್ಕೆ ಇನ್ನಷ್ಟು ಪೌಷ್ಟಿಕತೆ ಸಿಗುವುದು ಗ್ಯಾರಂಟಿಯಾಗಿದೆ. ಶೀಘ್ರವಾಗಿ ಈ ಯೋಜನೆ ಜಾರಿಗೆ ಬರಲಿ ಎಂದು ನಾವು ಬಯಸೋಣ.