ಆಧಾರ್ ಕಾರ್ಡ್ ಅನ್ನು ಆಸ್ತಿ ದಾಖಲೆಗಳಿಗೆ ಲಿಂಕ್ ಮಾಡುವುದರ ಹಿಂದಿನ ಲಾಭವೇನು ನೋಡಿ.! ಸ್ಥಿರ ಮತ್ತು ಚರ ಆಸ್ತಿಗಳ ವಿವರವನ್ನು ಆಧಾರ್ ದಾಖಲೆಯೊಂದಿಗೆ ಜೋಡಿಸುವ ಮನವಿಗೆ ಪ್ರಾತಿನಿಧ್ಯವನ್ನು ಪರಿಗಣಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರವನ್ನು ಕೇಳಿದೆ. ಬ್ಯಾಂಕ್ ಖಾತೆಗಳು ಮತ್ತು ಪ್ಯಾನ್ ಕಾರ್ಡ್ಗಳ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಈಗ ಕಡ್ಡಾಯ ಎನ್ನುವುದು ಎಲ್ಲರಿಗೂ ಮನೆವರಿಕೆಯಾಗಿದೆ.
ಬಹುತೇಕ ಎಲ್ಲರೂ ಈ ಪ್ರಕ್ರಿಯ ಪೂರೈಸಿದ್ದಾರೆ. ಇದರ ನಂತರ ದೆಹಲಿ ಹೈಕೋರ್ಟ್ನಲ್ಲಿ ಆಸ್ತಿಯನ್ನು ಆಧಾರ್ಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸುವಂತೆ ಮನವಿ ಸಲ್ಲಿಕೆಯಾಗಿದೆ. ಕಳೆದ ಬುಧವಾರ ಇದರ ಸಂಬಂಧ ದೆಹಲಿ ಹೈಕೋರ್ಟ್ ಆಧಾರ್ ಮತ್ತು ಆಸ್ತಿಯನ್ನು ಲಿಂಕ್ ಮಾಡುವ ಮನವಿಗೆ ಪ್ರಾತಿನಿಧ್ಯವನ್ನು ಪರಿಗಣಿಸುವಂತೆ ಕೇಂದ್ರವನ್ನು ಕೇಳಿದೆ.
ಭ್ರ’ಷ್ಟಾ’ಚಾ’ರ, ಕಪ್ಪುಹಣ ಉತ್ಪಾದನೆ ಮತ್ತು ಬೇನಾಮಿ ವಹಿವಾಟುಗಳನ್ನು ತಡೆಯಲು ನಾಗರಿಕರ ಸ್ಥಿರ ಮತ್ತು ಚರಾಸ್ತಿ ದಾಖಲೆಗಳನ್ನು ಅವರ ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡುವಂತೆ ದೆಹಲಿ ಹೈಕೋರ್ಟ್ನಲ್ಲಿ ಇತ್ತೀಚೆಗೆ ಮನವಿ ಸಲ್ಲಿಕೆಯಾಗಿತ್ತು.
ಈ ಸುದ್ದಿ ಓದಿ:- ಮೊದಲನೇ ಬೆಳೆಗೆ ಒಂದು ಕೋಟಿ ಲಾಭ.! ಅಷ್ಟಕ್ಕೂ ರೈತ ಬೆಳೆದಿದ್ದಾದರೂ ಏನು ಗೊತ್ತಾ?…
ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೀವ್ ಶಕ್ಧೆರ್ ಮತ್ತು ಗಿರೀಶ್ ಕತ್ಪಾಲಿಯ ಇವರಿದ್ದ ದ್ವಿ ಸದನ ಪೀಠವು ಇವು ನೀತಿ ನಿರ್ಧಾರಗಳಾಗಿರುವುದರಿಂದ ಈ ನಿಯಮವನ್ನು ಜಾರಿಗೆ ತರಲು ನ್ಯಾಯಾಲಯವು ಸರ್ಕಾರವನ್ನು ಕೇಳಲು ಸಾಧ್ಯವಿಲ್ಲ ಎಂದು ಮತ್ತು ಈ ಪ್ರಾತಿನಿಧ್ಯವನ್ನು ಕೇಂದ್ರವು ಮೂರು ತಿಂಗಳಲ್ಲಿ ನಿರ್ಧರಿಸಬೇಕು ಎಂದು ನ್ಯಾಯಾಲಯವು ಆದೇಶಿಸಿದೆ.
ನ್ಯಾಯಮೂರ್ತಿ ಶಕ್ಧರ್ ಅವರು ಈ ಮನವಿಯ ವಿಚಾರಣೆ ಸಂದರ್ಭದಲ್ಲಿ, ನ್ಯಾಯಾಲಯಗಳು ಈ ಎಲ್ಲದರ ಬಗ್ಗೆ ಹೇಗೆ ಮಧ್ಯೆ ಪ್ರವೇಶಿಸಬಹುದು? ಇವು ನೀತಿ ನಿರ್ಧಾರಗಳು, ಇದನ್ನು ಮಾಡಲು ನ್ಯಾಯಾಲಯಗಳು ಹೇಗೆ ಕೇಂದ್ರವನ್ನು ಕೇಳಲು ಆಗುತ್ತದೆ? ಪ್ರಾಥಮಿಕವಾಗಿ, ನನಗೆ ಅರ್ಥವಾಗದ ವಿಷಯವೆಂದರೆ ಇವು ನಮ್ಮ ಕ್ಷೇತ್ರಗಳಲ್ಲ ಇದರ ಸಂಪೂರ್ಣ ಚಿತ್ರ ಅಥವಾ ಡೇಟಾವನ್ನು ಸರ್ಕಾರವೇ ಹೊಂದಿದೆ.
ಇದರ ಪ್ರಾತಿನಿಧ್ಯವನ್ನು ಪರಿಗಣಿಸಲು ಮತ್ತು ನಿರ್ಧರಿಸಲು ಸರ್ಕಾರಕ್ಕೆ ಅವಕಾಶ ನೀಡುವುದು ಉತ್ತಮ ಎಂದಿದ್ದಾರೆ. ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಈ ರೀತಿ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು ಅದಕ್ಕೆ ಉತ್ತರಿಸಿರುವ ಪೀಠವು ಕಪ್ಪುಹಣದ ಮೂಲಕ ಸಂಪಾದಿಸಿರುವ ಬೇನಾಮಿ ಆಸ್ತಿಗಳ ಮೂಲಕ ದೇಶದಲ್ಲಿ ಭ್ರ’ಷ್ಟಾ’ಚಾ’ರ ಹೆಚ್ಚಾಗದಂತೆ ನೋಡಿಕೊಳ್ಳುವುದು ಕೇಂದ್ರದ ಕರ್ತವ್ಯ ಎಂದು ಎತ್ತಿ ಹಿಡಿದಿದೆ.
ಈ ಸುದ್ದಿ ಓದಿ:- ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ.!
ಅರ್ಜಿಗಳ ಪ್ರಕಾರವಾಗಿ ಆಸ್ತಿಗಳ ಜೋಡಣೆಯನ್ನು ಆಧಾರ್ನೊಂದಿಗೆ ಕಡ್ಡಾಯಗೊಳಿಸಿದರೆ, ಕಪ್ಪುಹಣ ಮತ್ತು ಬೇನಾಮಿ ಆಸ್ತಿಗಳ ಮೇಲೆ ನಿಗಾ ಇಡುವುದು ಸುಲಭವಾಗುತ್ತದೆ ಮತ್ತು ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಸ್ವಚ್ಛಗೊಳಿಸುತ್ತದೆ ಇದರ ಮೂಲಕ ಪಾರದರ್ಶಕತೆ ತಂದ ರೀತಿ ಆಗುತ್ತದೆ ಎನ್ನುವುದು ಇದರ ಉದ್ದೇಶವಾಗಿತ್ತು.
ಸರ್ಕಾರವು ಆಸ್ತಿಯನ್ನು ಆಧಾರ್ನೊಂದಿಗೆ ಲಿಂಕ್ ಮಾಡಿದರೆ ವಾರ್ಷಿಕ ಬೆಳವಣಿಗೆಯಲ್ಲಿ ಆಸ್ತಿ ಬೆಳವಣಿಗೆಯಾದರೆ ಅದನ್ನು ಪ್ರಶ್ನೆ ಮಾಡಲು ಅನುಕೂಲವಾಗುತ್ತದೆ, ಸುಲಭವಾಗುತ್ತದೆ. ಬೇನಾಮಿ, ಭ್ರಷ್ಟಾಚಾರ ಈ ರೀತಿ ಕಾನೂನುಬಾಹಿರ ವಹಿವಾಟುಗಳ ಮೂಲಕ ಖರೀದಿಸಿದ ಆಸ್ತಿಗಳು ರಿಯಲ್ ಎಸ್ಟೇಟ್ ಇನ್ನಿತರ ಎಲ್ಲಾ ಮೂಲದ ಆಸ್ತಿಗಳ ವಿವರವು ಆಸ್ತಿಯೊಂದಿಗೆ ಆಧಾರ್ ಲಿಂಕ್ ಮಾಡುವುದರಿಂದ ಪತ್ತೆ ಹಚ್ಚುವುದಕ್ಕೆ ಕೇಂದ್ರಕ್ಕೆ ಸುಲಭವಾಗುತ್ತದೆ.
ಈ ಮೂಲಕ ಕಪ್ಪು ಹಣದ ಹರಿವನ್ನು ತಡೆಗಟ್ಟಿ ಭ’ಯೋ’ತ್ಪಾ’ದ’ನೆ, ನಕ್ಸಲಿಸಂ, ಜೂಜು, ಮನಿ ಲಾಂಡರಿಂಗ್ ಮುಂತಾದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಇವುಗಳು ಬಳಕೆಯಾಗದಂತೆ ತಡೆಗಟ್ಟಬಹುದು ಎನ್ನುವುದು ಮನವಿ ಪತ್ರದಲ್ಲಿದ್ದ ಮುಖ್ಯ ಅಂಶವಾಗಿತ್ತು. ಹೀಗಾಗಿ ಮುಂದೆ ಒಂದು ದಿನ ಕೇಂದ್ರದಿಂದ ಈ ರೀತಿ ಸ್ಥಿರಾಸ್ತಿ ಹಾಗೂ ಚರಾಸ್ತಿಗಳಿಗೆ ಆಧಾರ್ ಲಿಂಕ್ ಮಾಡುವಂತೆ ಘೋಷಣೆ ಆದರೂ ಅನುಮಾನವಿಲ್ಲ ಎಂದು ಊಹಿಸಬಹುದಾಗಿದೆ.