ನಟಿ ಮೀನಾ ಮೂಲತಃ ತಮಿಳು ಭಾಷೆ ನಟಿಯಾದರೂ ಕೂಡ ಕನ್ನಡದವರೇ ಎನಿಸುವಷ್ಟು ಕನ್ನಡಿಗರಿಗೆ ಹತ್ತಿರವಾದ ನಟಿ ಮೀನ ಅವರು ಕನ್ನಡದಲ್ಲಿ ಬಹುತೇಕ ಕೌಟುಂಬಿಕ ಸಿನಿಮಾಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್ ಅವರ ಜೊತೆ ಚೆಲುವ ಎನ್ನುವ ಸಿನಿಮಾದಿಂದ ಕನ್ನಡಕ್ಕೆ ಬಂದ ಇವರು ನಂತರ ಪುಟ್ನಂಜ, ಮೊಮ್ಮಗ ಚಿತ್ರಗಳಲ್ಲಿ ಕಾಣಿಸಿಕೊಂಡರು. ವಿಷ್ಣುವರ್ಧನ್ ಅವರ ಜೊತೆ ಸಿಂಹಾದ್ರಿಯ ಸಿಂಹ, ಸುದೀಪ್ ಅವರ ಜೊತೆ ಮೈ ಆಟೋಗ್ರಾಫ್ ಮತ್ತು ಸ್ವಾತಿಮುತ್ತು,ಅರ್ಜುನ್ ಅವರ ಶ್ರೀ ಮಂಜುನಾಥ ಹೀಗೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ ಕನ್ನಡದವರಲ್ಲದಿದ್ದರೂ ಸಹ ಕನ್ನಡದ ನೇಟಿವಿಟಿಗೆ ತಕ್ಕಂತೆ ಅಭಿನಯ ಮಾಡಿ ಕನ್ನಡಿಗರ ಮನ ಗೆದ್ದ ಪ್ರತಿಭಾವಂತ ನಟಿ ಇವರು. ನಟಿ ಮೀನಾ ಅವರು ಕನ್ನಡ ಭಾಷೆ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಹಿಂದಿ ಮರಾಠಿ ಹೀಗೆ ದೇಶದ ಹಲವಾರು ಭಾಷೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ಆ ಎಲ್ಲಾ ಭಾಷೆಗಳನ್ನು ಬಲ್ಲವರು ಕೂಡ ಆಗಿದ್ದಾರೆ.
ಜೊತೆಗೆ ನಟಿ ಸೌಂದರ್ಯ ಅವರ ಜೊತೆ ಇವರು ಹೋಲಿಕೆ ಆಗುವುದರಿಂದ ಇವರಿಗೆ ಇನ್ನೂ ಹೆಚ್ಚಿನ ಸಿನಿಮಾ ಅವಕಾಶಗಳು ದೊರೆತವು ಎಂದೇ ಹೇಳಬಹುದು. ಅಲ್ಲದೆ ಮೀನ ಅವರು ಕೂಡ ಅಪ್ರತಿಮ ಸುಂದರಿ ಜೊತೆಗೆ ಅಷ್ಟೇ ಟ್ಯಾಲೆಂಟೆಡ್ ನಟಿ ಕೂಡ ಹೌದು. ಬಾಲ ಕಲಾವಿದೆಯಾಗಿ ಸಿನಿಮಾ ಇಂಡಸ್ಟ್ರಿಗೆ ಬಂದ ಇವರು ಇಂದಿಗೂ ಕೂಡ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಹತ್ತಿರ ಸುಮಾರು 45 ವರ್ಷ ವಯಸ್ಸಾಗಿದ್ದರೂ ಕೂಡ ಇನ್ನೂ ನಾಯಕಿಯ ಪಾತ್ರದಲ್ಲಿ ಗುರುತಿಸಿಕೊಳ್ಳುತ್ತಿರುವುದು ನಿಜವಾಗಲೂ ಮೆಚ್ಚುವ ವಿಷಯವೇ ಸರಿ. ಇತ್ತೀಚೆಗೆ ದೃಶ್ಯಂ ಎನ್ನುವ ಸಿನಿಮಾದಲ್ಲಿ ಇವರು ಕಾಣಿಸಿಕೊಂಡಿದ್ದರು. ಈವರೆಗೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದರೂ ಕೂಡ ಈ ನಟಿ ಇನ್ನೂ ಹೆಚ್ಚು ಜನರಿಗೆ ದೃಶ್ಯಂ ಎನ್ನುವ ಸಿನಿಮಾದ ಮೂಲಕ ತಲುಪಿದರು ಎಂದು ಹೇಳಬಹುದು.
ಈಗಾಗಲೇ ಸಿನಿಮಾ ಲೋಕದಲ್ಲಿ ಗೆದ್ದಿರುವ ನಟಿ ಮೀನಾ ಅವರ ಬದುಕು ಬಹಳ ಸುಂದರವಾಗಿತ್ತು. ವಿವಾಹ ಜೀವನ ಕೂಡ ಸೊಗಸಾಗಿ ಸಾಗುತ್ತಿತ್ತು. ಜೊತೆಗೆ ಮಗಳ ಬೆಳವಣಿಗೆ ಕಂಡು ಮೀನಾ ಬದುಕಿನಲ್ಲಿ ಸಂತೃಪ್ತಿ ಭಾವ ಹೊಂದಿದ್ದರು ಆದರೆ ಇದ್ದಕ್ಕಿದ್ದ ಹಾಗೆ ಅವರ ಬದುಕಲಿ ಬರೆಸಿಡಿಲು ಒಂದು ಬಡಿದಿದೆ ನಟಿ ಮೀನ ಅವರ ಪತಿ ವಿದ್ಯಾ ಸಾಗರ್ ಅವರು ಕೊರೋನ ಪೀಡಿತರಾಗಿ ಸಾ-ವ-ನ್ನ-ಪ್ಪಿದ್ದಾರೆ. ಕಳೆದ ತಿಂಗಳು ಈ ಘಟನೆ ಸಂಭವಿಸಿದ್ದು ಮೀನ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿ ವರ್ಗಕ್ಕೆ ಸಹಿಸಲಾಗದ ದುಃ-ಖ ನೀಡಿದೆ. ನಟಿ ಮೀನಾ ಅವರು ಈ ರೀತಿಯ ಒಂದು ಘಟನೆ ಅವರ ಜೀವನದಲ್ಲಿ ಇಷ್ಟು ಚಿಕ್ಕ ವಯಸ್ಸಿಗೆ ಘಟಿಸುತ್ತದೆ ಎಂದು ನಿರೀಕ್ಷಿಸಲಿಲ್ಲ ಎನಿಸುತ್ತದೆ. ಆದರೂ ಕೂಡ ವಿಧಿಯಾಟಕ್ಕೆ ಈಗ ಅವರು ತತ್ತರಿಸಿ ಹೋಗಿದ್ದಾರೆ. ಪ್ರೀತಿಸಿದ ಪತಿಯನ್ನು ಕಳೆದುಕೊಂಡು ದುಃ-ಖ-ದ ಮಡುವಿನಲ್ಲಿದ್ದಾರೆ.
ನಟಿ ಮೀನಾ ಅವರು ಸಿನಿಮಾಗಳಲ್ಲಿ ಬಹಳಷ್ಟು ಬ್ಯುಸಿ ಇದ್ದರೂ ಕೂಡ ವೈಯಕ್ತಿಕ ಜೀವನಕ್ಕೆ ಅಷ್ಟೇ ಸಮಯ ಮೀಸಲಿಟ್ಟಿದ್ದರು. ತನ್ನ ಕುಟುಂಬ ಜೀವನದ ಬಗ್ಗೆ ಬಹಳ ಕೇರ್ ತೆಗೆದುಕೊಳ್ಳುತ್ತಿದ್ದ ನಟಿ ಮೀನಾ ಅವರು ಪತಿ ಹಾಗೂ ಮಗಳ ಜೊತೆ ಬಹಳ ಸಂತೋಷವಾಗಿದ್ದರು. ನಟಿ ಮೀನಾ ಅವರು ಬಹಳ ವರ್ಷದಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ ಹೀಗಾಗಿ ಅವರು ಈಗಾಗಲೇ ಬಹಳಷ್ಟು ಹಣವನ್ನು ಸಿನಿಮಾಗಳಿಂದ ಗಳಿಸಿದ್ದಾರೆ ಹಾಗೂ ಅವರ ಪತಿ ವಿದ್ಯಾ ಸಾಗರ್ ಕೂಡ ಬಹಳ ಶ್ರೀಮಂತ ಮನೆತನದವರು ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಕೂಡ ಆಗಿದ್ದರು ಈಗ ಉದ್ಯಮಿ ಕೂಡ ಆಗಿದ್ದ ಇವರು ಹೆಚ್ಚು ಕಡಿಮೆ ರೂ.300 ಕೋಟಿಗಿಂತಲೂ ಹೆಚ್ಚಿನ ಆಸ್ತಿಗೆ ಒಡೆಯರಾಗಿದ್ದಾರೆ. ಈ ಕಾರಣಕ್ಕಾಗಿ ನಟಿ ಮೀನ ಅವರನ್ನು ವಿದ್ಯಾಸಾಗರ್ ಅವರ ಜೊತೆ ಕುಟುಂಬಸ್ಥರು ಮದುವೆ ಮಾಡಿ ಕೊಟ್ಟಿದ್ದರು.
ಇಬ್ಬರಿಗೂ ಕೂಡ ಗಳಿಕೆ ಇತ್ತು ಇಬ್ಬರಿಗೂ ಮುದ್ದಾದ ಮಗುವೂ ಕೂಡ ಇತ್ತು ಹಾಗೂ ಇಬ್ಬರು ಸಮಾಜದಲ್ಲಿ ಗುರುತಿಸಿಕೊಂಡಿದ್ದರು. ಬದುಕಿನಲ್ಲಿ ಎಲ್ಲಾ ಇತ್ತು ಆದರೆ ವಿಧಿ ಆರೋಗ್ಯದ ವಿಷಯದಲ್ಲಿ ವಿದ್ಯಾಸಾಗರ್ ಅವರ ಬದುಕಿನಲ್ಲಿ ಆಟವಾಡಿ ಇಂತಹ ಒಂದು ಘೋ-ರ ಅನ್ಯಾಯವನ್ನು ಮಾಡಿದೆ ಎನ್ನಬಹುದು. ಸಾವು ಸುದ್ದಿಯಾಗುತ್ತಿದ್ದ ಹಾಗೆ ಮತ್ತೊಂದು ವಿಷಯ ಈಗ ಎಲ್ಲೆಡೆ ಗಾಳಿಸುದ್ದಿಯಾಗಿ ಹಬ್ಬಿದೆ. ಇದನ್ನು ಕೇಳಿದ ಎಲ್ಲರಿಗೂ ಆಶ್ಚರ್ಯ ಎನಿಸಬಹುದು ಹಾಗೂ ಕೆಲವು ವರ್ಷಗಳ ಹಿಂದೆ ಈ ಜೋಡಿಯ ಕುರಿತಾಗಿ ಈ ಗಾಳಿ ಸುದ್ದಿ ಇತ್ತು. ಇವರಿಬ್ಬರ ನಡುವೆ ಬಿರುಕು ಏರ್ಪಟ್ಟಿದ್ದೆ ಈ ಜೋಡಿ ಸದ್ಯದಲ್ಲೇ ಬೇರೆ ಆಗಲಿದ್ದಾರೆ ಎಂದು ಹಾಗೂ ವಿದ್ಯಾಸಾಗರ ಹಾಗೂ ಮೀನ ಅವರ ನಡುವೆ ವಿ-ಚ್ಛೇ-ದ-ನ-ವೇ ಆಗಿದೆ ಎನ್ನುವ ಸುದ್ದಿಗಳು ಕೂಡ ಹರಿದಾಡಿದ್ದವು. ಆದರೆ ಅವೆಲ್ಲ ಬರಿ ಗಾಳಿ ಸುದ್ದಿ ಆಗಿತ್ತು ಅದರಲ್ಲಿ ಯಾವ ನಿಜವೂ ಕೂಡ ಇರಲಿಲ್ಲ.
ಆದರೆ ಈಗ ಹೊರ ಬರುತ್ತಿರುವ ವಿಷಯ ಮಾತ್ರ ಅಪ್ಪಟ ಸತ್ಯವಾಗಿದೆ. ಹೌದು ನಟಿ ಮೀನಾಪತಿ ವಿದ್ಯಾಸಾಗರ್ ಅವರು ತಮ್ಮೆಲ್ಲ ಆಸ್ತಿಯಲ್ಲಿ ಮೀನಾ ಅವರಿಗೆ ಯಾವ ಅಧಿಕಾರ ಇರದಂತೆ ಮಾಡಿದ್ದಾರೆ ಇಷ್ಟಕ್ಕೂ ಅವರು ತಮ್ಮ ಗಳಿಕೆಯನ್ನೆಲ್ಲ ಏನು ಮಾಡಿದರು ಎಂದರೆ ಅವರು ಮೀನ ಮತ್ತು ವಿದ್ಯಾಸಾಗರ್ ಅವರ ಪುತ್ರಿಯಾದ ನೈನಿಕ ಹೆಸರಿನಲ್ಲಿ ಎಲ್ಲಾ ಆಸ್ತಿಯನ್ನು ಬರೆದು ಹೋಗಿದ್ದಾರೆ. ಇವರು ಮಾಡಿಸಿರುವ ವೀಲ್ ಪ್ರಕಾರ ನೈನಿಕ ಅವರನ್ನು ಯಾರು ನೋಡಿಕೊಳ್ಳುತ್ತಾರೆ ಅವರು ಅವರ ಕೇರ್ ಟೇಕರ್ ಆಗಿರ ಬಹುದು ಅಷ್ಟೇ ಆದರೆ ನೈನಿಕ ಅವರಿಗೆ 18 ವರ್ಷ ತುಂಬಿದ ಬಳಿಕ ಮಾತ್ರ ಎಲ್ಲಾ ಆಸ್ತಿಗೂ ಅವಳು ಒಡತಿಯಾಗುತ್ತಾರೆ ಮತ್ತು ಆನಂತರ ಅವರು ಅವರ ಪತಿಗೆ ಬೇಕಾದರೂ ಅದನ್ನು ಮಾಡಿಕೊಡಬಹುದು ಅಥವಾ ಅವರೇ ಅದನ್ನು ನೋಡಿಕೊಂಡು ಹೋಗಬಹುದು ಅಲ್ಲಿಯವರೆಗೆ ಮೀನಾಪತಿ ವಿದ್ಯಾಸಾಗರ್ ಅವರ ಆಸ್ತಿಯಲ್ಲಿ ಯಾರೊಬ್ಬರಿಗೂ ಅಧಿಕಾರ ಇರುವುದಿಲ್ಲ ಎಂದು ವೀಲ್ ಮಾಡಿಸಿ ಹೋಗಿದ್ದಾರೆ.