ಈಗ ನಮ್ಮ ದೇಶದಲ್ಲಿಯೂ ಕೂಡ ಕೃಷಿ ಚಟುವಟಿಕೆ ಆಧುನೀಕರಣಗೊಳ್ಳುತ್ತಿದೆ. ಕೃಷಿಯಲ್ಲಿ ರಾಸಾಯನಿಕಗಳ ಬಳಕೆ, ಯಂತ್ರೋಪಕರಣ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ರೈತರು (Farmers) ಸಮಯ ಉಳಿತಾಯ ಮಾಡಿಕೊಳ್ಳುವುದರ ಜೊತೆಗೆ ಕಡಿಮೆ ಮಾನವ ಶಕ್ತಿ ಬಳಕೆಯಲ್ಲಿ ಪರಿಣಾಮಕಾರಿಯಾಗಿ ಕೃಷಿ ಚಟುವಟಿಕೆ ಮಾಡಿ ಮುಗಿಸುತ್ತಿದ್ದಾರೆ.
ಸರ್ಕಾರಗಳು (Government) ಕೂಡ ಇವುಗಳನ್ನು ಉತ್ತೇಜನ ಮಾಡುವ ಸಲುವಾಗಿ ಸಬ್ಸಿಡಿ (Subsidy) ರೂಪದಲ್ಲಿ ಇವುಗಳ ಖರೀದಿಗೆ ಸಾಲ ಸೌಲಭ್ಯ ನೀಡುತ್ತಿದೆ. ಈ ಯಂತ್ರೋಪಕರಣಗಳ ಪಟ್ಟಿಯಲ್ಲಿ ಡ್ರೋನ್ (Drone) ಕೂಡ ಸೇರುತ್ತದೆ. ಡ್ರೋನ್ ಈಗ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿದೆ, ಡ್ರೋನ್ ಸಹಾಯದಿಂದ ಬೆಳೆಗಳಿಗೆ ನ್ಯಾನೋ ಯೂರಿಯಾದಂತಹ (Nano Urea) ರಾಸಾಯನಿಕಗಳನ್ನು ಸಿಂಪಡಿಸುವ ಕೆಲಸ ಸರಾಗವಾಗುತ್ತದೆ.
ಆದರೆ ಸದ್ಯಕ್ಕೆ ದೇಶದಲ್ಲಿ ಆರ್ಥಿಕವಾಗಿ ಸದೃಢರಾಗಿರುವ ದೊಡ್ಡ ಗಾತ್ರದ ರೈತ ವರ್ಗಕ್ಕೆ ಮಾತ್ರ ಡ್ರೋನ್ ಕೊಳ್ಳಲು ಮುಂದಾಗಿದ್ದಾರೆ. ಯಾಕೆಂದರೆ ಈ ಡ್ರೋನ್ ಗಳ ಖರೀದಿಗೆ ಕನಿಷ್ಠ 15 ಲಕ್ಷವಾದರೂ ಹಣ ಬೇಕು. ಡ್ರೋನ್ ಬಳಕೆಯನ್ನು ಕೃಷಿ ಕ್ಷೇತ್ರದಲ್ಲಿ ಮನಗಂಡಂತಹ ಸರ್ಕಾರ ಡ್ರೋನ್ ಖರೀದಿ ಮಾಡುವವರಿಗೆ ನೆರವಾಗಿದೆ. ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ ಆಪರೇಟಿವ್ ಲಿಮಿಟೆಡ್ (IFFCO) ದಿಂದ ರೈತರಿಗೆ ಉಚಿತ ಡ್ರೋನ್‌ಗಳನ್ನು ನೀಡಲಾಗುತ್ತಿದೆ.
ಈ ರೀತಿ ಡ್ರೋನ್ ಗಳನ್ನು ಪಡೆದರೆ ಇತರ ದುರುಪಯೋಗ ಮಾಡಿಕೊಳ್ಳಬಾರದು ಎನ್ನುವ ಕಾರಣಕ್ಕಾಗಿ ರೈತರಿಂದ 1 ಲಕ್ಷ ಭದ್ರತಾ ಠೇವಣಿ ಪಡೆಯುತ್ತಿದೆ. ರೈತನು ಡ್ರೋನ್ ಮರಳಿಸುವ ಸಮಯದಲ್ಲಿ ಈ ಹಣವನ್ನು ಹಿಂತಿರುಗಿಸುತ್ತದೆ. ಉಚಿತವಾಗಿದ್ದರೂ ಕೂಡ ರೈತರಿಗೆ ಅತ್ಯುತ್ತಮ ಗುಣಮಟ್ಟದ ಡ್ರೋನ್‌ಗಳನ್ನು ನೀಡಲಾಗುವುದು ಎಂದು ಕಂಪನಿ ಹೇಳಿದೆ.
ಮೊಬೈಲ್ ಮೂಲಕ ಕೇವಲ 5 ನಿಮಿಷದಲ್ಲಿ ಕಲರ್ ರೇಷನ್ ಕಾರ್ಡ್ ಡೌನ್‌ಲೋಡ್ ಮಾಡುವ ವಿಧಾನ
ಈ ಕಂಪನಿಗಳಿಂದ ಡ್ರೋನ್ ಬಳಸಿ ಈ ಮೂಲಕ ಕೃಷಿ ಬೆಳೆಗಳಿಗೆ ಔಷಧಿ ಸಿಂಪಡಿಸುವ ರೈತರಿಗೆ ಸರ್ಕಾರ ಸಹಾಯಧನ ಕೂಡ ನೀಡುತ್ತಿದೆ, ಬಿಹಾರ ರಾಜ್ಯ ಸರ್ಕಾರವು (Bihar government) 10:26:10, ಯೂರಿಯಾ ಮತ್ತು ಇತರ ರಾಸಾಯನಿಕಗಳನ್ನು ಹೊಲಗಳಲ್ಲಿ ಸಿಂಪಡಿಸಲು ಡ್ರೋನ್‌ಗಳನ್ನು ಬಳಸುವ ರೈತರಿಗೆ ಪ್ರತಿ ಎಕರೆಗೆ 250 ರೂಪಾಯಿ ಸಹಾಯಧನ ಸರ್ಕಾರ ನಿರ್ಧರಿಸಿದೆ. ಶೀಘ್ರದಲ್ಲೇ ಇದು ಎಲ್ಲ ರಾಜ್ಯಗಳಲ್ಲೂ ಜಾರಿಗೆ ಬರುವ ಸಾಧ್ಯತೆ ಇದೆ.
ಈ ಯೋಜನೆ ಕುರಿತು ಕೆಲ ಪ್ರಮುಖ ಅಂಶಗಳು:-
● ಕೆಲವು ತೋಟಗಾರಿಕಾ ಬೆಳೆಗಳಿಗೆ ಸರಳವಾಗಿ ರಾಸಾಯನಿಕ ಸಿಂಪಡಿಸುವುದು ಕಷ್ಟ, ಡ್ರೋನ್ ಮೂಲಕ ಇದು ಸರಾಗವಾಗುತ್ತದೆ ಮತ್ತು ಡ್ರೋನ್ ಮೂಲಕ ರಾಸಾಯನಿಕ ಸಿಂಪಡಣೆಗೆ ಕಡಿಮೆ ನೀರು, ವ್ಯಯವಾಗುತ್ತದೆ ಎನ್ನುವುದು ಗಮನಾರ್ಹ.
● ಈ ಉಚಿತ ಡ್ರೋನ್ ವಿತರಣೆ ಯೋಜನೆಯಡಿ ಡ್ರೋನ್ ಪಡೆದ ರೈತರಿಗೆ ಕಂಪೆನಿಯಿಂದ ಸ್ಪ್ರೇಯರ್ (Sprayer) ಕೂಡ ಸಿಗಲಿದೆ, ಇದರ ಜೊತೆಗೆ ಒಂದು ವಾರಗಳ ಕಾಲ ಉಚಿತವಾಗಿ ಪ್ರಾಯೋಗಿಕ ತರಬೇತಿ (practical training) ಕೂಡ ಸಿಗುತ್ತದೆ.
● ರಾಸಾಯನಿಕ ಸಿಂಪಡಣೆ ಮಾಡುವುದರಿಂದ ರೈತನು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದ ಈಗ ಡ್ರೋನ್ ಬಳಕೆಯಿಂದ ರೈತನ ಆರೋಗ್ಯವು ಸುಧಾರಿಸಲಿದೆ.
● ಪಾಸ್‌ಪೋರ್ಟ್ (passport) ಹೊಂದಿರುವ ರೈತರಿಗೆ ಮಾತ್ರ ಈ ಯೋಜನೆಯಡಿ ಡ್ರೋನ್ ಪಡೆಯಲು ಅವಕಾಶವಿರುತ್ತದೆ.
● IFFCO ಈ ಡ್ರೋನ್ ಅನ್ನು ರೈತರು, ಸಹಕಾರ ಸಂಘಗಳು, FPO ಗಳು ಅಥವಾ ರೈತ ಉತ್ಪಾದಕ ಸಂಸ್ಥೆಗಳು ಮತ್ತು ರಾಜ್ಯದ ನೋಂದಾಯಿತ ಪ್ಯಾಕ್‌ಗಳಿಗೆ ಒದಗಿಸಲಿದೆ. ನೋಂದಾಯಿತ FPO ಗಳು ಮತ್ತು ಇತರ ರೈತ ಸಂಘಟನೆಗಳಿಗೆ ಸೇರುವ ಮೂಲಕ ರೈತರು ಈ ಸರ್ಕಾರದ ಯೋಜನೆಯ ಲಾಭವನ್ನು ಸುಲಭವಾಗಿ ಪಡೆಯಬಹುದುದಾಗಿದೆ.
● ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಡಬಹುದು.