ಕರ್ನಾಟಕ ರಾಜ್ಯದ (Karnataka government) ಮಹಿಳೆಯರಿಗಾಗಿ (for womens) ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಈಗ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಮಹಿಳೆಯರ ಪಾಲು ಹೆಚ್ಚಾಗಿದೆ ಎಂದೇ ಹೇಳಬಹುದು. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಹಾಗೂ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣ ಮತ್ತು ಗೃಹಲಕ್ಷ್ಮಿ ಯೋಜನೆಯ ಸಹಾಯಧನವು ಮಹಿಳೆಯರಿಗೆ ಹೆಚ್ಚಿನ ಅನುಕೂಲತೆ ನೀಡುತ್ತಿದೆ.
ಸರ್ಕಾರದ ವತಿಯಿಂದ ಮಹಿಳೆಯರನ್ನು ಆರ್ಥಿಕವಾಗಿ ಸಧೃಡರನ್ನಾಗಿ ಮಾಡುವ ಉದ್ದೇಶದಿಂದ ಇನ್ನು ಕೆಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಮಹಿಳೆಯರಿಗಾಗಿ ರಾಜ್ಯದಲ್ಲಿ ಹೊಸದಾಗಿ ಜಾರಿಗೆ ತರಲಾಗಿರುವ ಶ್ರಮ ಶಕ್ತಿ ಮಹಿಳಾ ವಿಶೇಷ ಯೋಜನೆಯ (Shramashakthi vishesha Yojane) ಕುರಿತು ನಾವು ಇಂದು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಯೋಜನೆಗೆ ಹೆಸರು:- ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ
ಅರ್ಜಿ ಸಲ್ಲಿಸಲು ಅರ್ಹತೆಗಳು:-
● ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿಚ್ಛೇದಿತ, ಅವಿವಾಹಿತ ಮತ್ತು ವಿಧವೆ ಮಹಿಳೆಯರು ಶ್ರಮಶಕ್ತಿ ವಿಶೇಷ ಯೋಜನೆಗೆ ಅರ್ಜಿ ಸಲ್ಲಿಸಬಹುದು.
● ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
● ಅರ್ಜಿದಾರರ ವಯಸ್ಸು ಕನಿಷ್ಠ 18 ಹಾಗೂ ಗರಿಷ್ಠ 55 ವರ್ಷ ಮೀರಿದಬಾರದು.
● ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯವು 3.5 ಲಕ್ಷಗಳನ್ನು ಮೀರಿರಬಾರದು.
● ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಹುದ್ದೆಯಲ್ಲಿ ಇರಬಾರದು.
● ಕಳೆದ 5 ವರ್ಷಗಳಿಂದ ಅರ್ಜದಾರರ ಕುಟುಂಬದ ಯಾವ ಸದಸ್ಯರು ಕೂಡ ಸರ್ಕಾರದ ಯಾವುದೇ ನಿಗಮಗಳ ಯೋಜನೆಯ ಫಲಾನುಭವಿಗಳಾಗಿರಬಾರದು.
● ಅರ್ಜಿ ಸಲ್ಲಿಸುವ ಸಮಯದಲ್ಲಿ ಕೇಳಿರುವ ಎಲ್ಲಾ ದಾಖಲೆಗಳನ್ನು ಹೊಂದಿದ್ದು, ಅವುಗಳ ವಿವರವನ್ನು ಅರ್ಜಿ ನಮೂನೆ ಜೊತೆ ಸಲ್ಲಿಸಬೇಕು.
ಕೊನೆಗೂ ಬಂತು, ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಿದೆಯೋ ಇಲ್ಲವೋ ಎಂದು ಸ್ಟೇಟಸ್ ಚೆಕ್ ಮಾಡುವ ಆಪ್ಷನ್.!
ಬೇಕಾಗುವ ದಾಖಲೆಗಳು:-
● ಯಾವ ಉದ್ದೇಶಕ್ಕಾಗಿ ಸಾಲ ಪಡೆಯುತ್ತಿದ್ದೀರಾ ಎನ್ನುವ ಯೋಜನೆಯ ಕುರಿತ ಯೋಜನಾ ವರದಿ
● ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣ ಪತ್ರ
● ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಅಲ್ಪಸಂಖ್ಯಾತರ ಪ್ರಮಾಣ ಪತ್ರ
● ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣ ಪತ್ರ
● ನಿವಾಸ ದೃಢೀಕರಣ ಪತ್ರ
● ಅರ್ಜಿದಾರರ ಆಧಾರ್ ಕಾರ್ಡ್
● ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ವಿವರ
● ಶ್ಯೂರಿಟಿ ನೀಡುವವರ ಸ್ವಯಂ ಘೋಷಣೆ ಪತ್ರ
● ಅರ್ಜಿದಾರರ ಸ್ವಯಂ ಘೋಷಣೆ ಪತ್ರ
● ಮೊಬೈಲ್ ಸಂಖ್ಯೆ
ಪ್ರಯೋಜನಗಳು:-
● ಈ ಯೋಚನೆಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರಿಗೆ ಅವರ ಕೌಶಲ್ಯ ಅಭಿವೃದ್ಧಿ ಅಥವಾ ಉದ್ಯಮ ಸ್ಥಾಪನೆಗೆ ಸರ್ಕಾರವು ಸಬ್ಸಿಡಿ ರೂಪದಲ್ಲಿ ಸಾಲ ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಪ್ರಯತ್ನಿಸುತ್ತಿದೆ.
● ಈ ಯೋಜನೆಗೆ ಅರ್ಜಿ ಸಲ್ಲಿಸಿ ಆಯ್ಕೆ ಆಗುವ ಮಹಿಳೆಯರು ಸರ್ಕಾರದಿಂದ 50,000 ಸಾಲ ಸೌಲಭ್ಯ ಪಡೆಯಬಹುದು ಇದರಲ್ಲಿ 50% ಸಬ್ಸಿಡಿ ಕೂಡ ಸಿಗಲಿದೆ.
SBI ನಲ್ಲಿ ಖಾತೆ ಇದ್ದವರಿಗೆ ವಿಶೇಷ ಸೂಚನೆ, ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ ಮುಗಿಸುವುದು ಕಡ್ಡಾಯ.!
ಅರ್ಜಿ ಸಲ್ಲಿಸುವ ವಿಧಾನ:-
● ಈ ಮೇಲೆ ತಿಳಿಸಿದ ಎಲ್ಲ ಅರ್ಹತೆಗಳನ್ನು ಪೂರೈಸುವ ಮಹಿಳೆಯರು ಶ್ರಮಶಕ್ತಿ ಮಹಿಳಾ ವಿಶೇಷ ಯೋಜನೆಗೆ ಅರ್ಜಿ ಸಲ್ಲಿಸಬಹುದು
● ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ
● ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು kmdconline.karnataka.gov.in ವೆಬ್ ಸೈಟ್ ಗೆ ಬೇಟಿ ಕೊಟ್ಟು ಅರ್ಜಿ ನಮೂನೆ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
● ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು KMDC ಕಚೇರಿಗಳಿಗೆ ಹೋಗಿ ಅರ್ಜಿ ಫಾರಂ ಪಡೆದು ವಿವರಗಳನ್ನು ಭರ್ತಿ ಮಾಡಿ ಕೇಳಲಾದ ದಾಖಲೆಗಳ ಪ್ರತಿಗಳನ್ನು ಲಗತ್ತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 25 ಸೆಪ್ಟೆಂಬರ್ 2023.