ದೇಶದಲ್ಲಿ ಹಲವಾರು ಉಚಿತ ಮಾದರಿ ವಸತಿ ಶಾಲೆಗಳು ಇವೆ. ದೇಶದಲ್ಲಿರುವ ಬಡ ಪ್ರತಿಭಾವಂತ ಕುಟುಂಬಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮತ್ತು ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳು ಕೂಡ ಗುಣಮಟ್ಟದ ಶಿಕ್ಷಣ ಪಡೆಯುವಂತಾಗಲಿ ಎನ್ನುವ ಉದ್ದೇಶದಿಂದ ಇಂತಹ ಶಾಲೆಗಳನ್ನು ನಿರ್ಮಿಸಿ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡುತ್ತಿದೆ.
ಮೊರಾರ್ಜಿ ದೇಸಾಯಿ ಶಾಲೆ, ನವೋದಯ ಶಾಲೆ, ಏಕಲವ್ಯ ಶಾಲೆಯ ರೀತಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಮೂಲಕ ಮೌಲಾನಾ ಆಜಾದ್ ಮಾದರಿ ಶಾಲೆಗಳು (Moulana Azad Model Schools) ಕೂಡ ಇದೇ ರೀತಿ ಕಾರ್ಯ ನಿರ್ವಹಿಸುತ್ತಿದ್ದೆ.
ಈ ಸುದ್ದಿ ಓದಿ:- ಕಾರ್ಮಿಕ ಕಾರ್ಡ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ 10,000 ಆರ್ಥಿಕ ನೆರವು, ಅರ್ಜಿ ಸಲ್ಲಿಸುವುದು ಹೇಗೆ? ಎಲ್ಲಿ? ಏನೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ವಿಷಯವೇನೆಂದರೆ, ಮೌಲನ್ ಅಜಾದ್ ವಸತಿ ಶಾಲೆಯ ಪ್ರವೇಶಾತಿ ಪಡೆಯಲು ಕೂಡ ಇತರೆ ಮಾದರಿ ಶಾಲೆಗಳಲ್ಲಿ ನೋಂದಾಯಿಸಿಕೊಂಡು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಮತ್ತು ನೀಡುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗಷ್ಟೇ ಶಾಲೆಗಳಲ್ಲಿ ದಾಖಲಾತಿಗೆ ಅವಕಾಶ ಸಿಗುವುದು.
ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮುಂದಿನ ತರಗತಿ ದಾಖಲಾತಿಗಾಗಿ ಶಾಲೆ ಅರ್ಹ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ ಮಾಡುತ್ತದೆ. ಅಂತೆಯೇ 2024-25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 6ನೇ ತರಗತಿಯಲ್ಲಿ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿರುವ ಕುರಿತ ಪ್ರಕಟಣೆಯನ್ನು (Notification) ಹೊರಡಿಸಿದೆ.
ಈ ಸುದ್ದಿ ಓದಿ:-ಸೈಟ್, ಆಸ್ತಿ ಪತ್ರ, ಜಮೀನಿನ ಎಲ್ಲಾ ದಾಖಲೆಗಳನ್ನು ಕೇವಲ ಒಂದೇ ಕ್ಲಿಕ್ ನಲ್ಲಿ ಮೊಬೈಲ್ ಮೂಲಕವೇ ಡೌನ್ಲೋಡ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!
ಒಟ್ಟು 12,000 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಲು ಅರ್ಜಿ ಆಹ್ವಾನ ಮಾಡಲಾಗಿದೆ, ಯಾರು ಈ ಶಾಲೆಗಳಿಗೆ ಪ್ರವೇಶಾತಿ ಪಡೆಯಲು ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು? ಆಯ್ಕೆ ವಿಧಾನ ಹೇಗಿರುತ್ತದೆ? ಕೊನೆ ದಿನಾಂಕ ಯಾವಾಗ ಇತ್ಯಾದಿ ಮಾಹಿತಿಗಾಗಿ ಅಂಕಣವನ್ನು ಕೊನೆಯವರೆಗೂ ಓದಿ.
ಅರ್ಜಿ ಸಲ್ಲಿಸಲು ಅರ್ಹತೆಗಳು:-
* ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
* ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳು, ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸೇರಿದ ವಿದ್ಯಾರ್ಥಿಯಾಗಿರಬೇಕು
* ವಿದ್ಯಾರ್ಥಿಯ ವಯಸ್ಸು 09 ವರ್ಷ ಮೇಲ್ಪಟ್ಟು 13 ವರ್ಷದ ಒಳಗಿರಬೇಕು.
* ಪ್ರಸ್ತುತ ವರ್ಷದಲ್ಲಿ ಮಾನ್ಯತೆ ಪಡೆದ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು.
* ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ಎಲ್ಲ ಮೂಲಗಳಿಂದ ರೂ.2,50,000 ಮೀರಿರಬಾರದು.
ಆಯ್ಕೆ ವಿಧಾನ:-
* ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಶಾಲೆಯ ಆಡಳಿತ ಮಂಡಳಿಯಿಂದ 100 ಅಂಕಗಳ ಪ್ರವೇಶಾತಿ ಪರೀಕ್ಷೆ ನಡೆಸಲಾಗುತ್ತದೆ.
* ಈ ಪ್ರವೇಶಾತಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಪ್ರತಿಭಾವಂತ 1200 ವಿದ್ಯಾರ್ಥಿಗಳನ್ನು ಆಯ್ದುಕೊಳ್ಳಲಾಗುತ್ತದೆ.
* ಈ ವಿಚಾರದಲ್ಲಿ ಆಡಳಿತ ಮಂಡಳಿಯ ನಿರ್ಧಾರವೇ ಅಂತಿಮವಾಗಿರುತ್ತದೆ ಆದರೆ ಪರೀಕ್ಷೆಯು ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನಡೆಯುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :-
* ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ
* 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ SATS ಸಂಖ್ಯೆ
* ಕುಟುಂಬದ ಆದಾಯ ಪ್ರಮಾಣ ಪತ್ರ
* ಕುಟುಂಬದ ಜಾತಿ ಪ್ರಮಾಣ ಪತ್ರ
* ವ್ಯಾಸಂಗ ಪ್ರಮಾಣ ಪತ್ರ
* ಚಾಲ್ತಿಯಲ್ಲಿರುವ ಪೋಷಕರ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
* ಇತರೆ ಅಗತ್ಯ ದಾಖಲಾತಿಗಳು
ಅರ್ಜಿ ಸಲ್ಲಿಸುವುದು ಹೇಗೆ :-
* ಶಾಲೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಆನ್ಲೈನ್ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು
* ಮೊದಲಿಗೆ ವಿದ್ಯಾರ್ಥಿಯ ವಿವರಗಳನ್ನು ಭರ್ತಿ ಮಾಡಿ ಕೇಳಲಾಗಿರುವ ದಾಖಲೆಗಳ ಸಂಖ್ಯೆಯನ್ನು ನಮೂದಿಸಬೇಕು
* ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಬೇಕು.
* ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ :-
https://dom.karnataka.gov.in/new-page/Online%20Application/kn
* ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವುದಾದರೆ ವೆಬ್ಸೈಟ್ ವಿಳಾಸ:
https://drive.google.com/file/d/1AOPKstHa5itJS4bDrYB2mc4I_UZ4JC0N/view?usp=sharing
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:- 15 ಮಾರ್ಚ್, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 14 ಏಪ್ರಿಲ್, 2024.