ಮನೆ ಕಟ್ಟಿಸುತ್ತಿದ್ದೀರಾ.? ಈ ವಿಷಯಗಳು ಗೊತ್ತಿರಲಿ. ಮನೆ ಕಟ್ಟಿಸುವ ಲೇಬರ್ ಕಾಂಟ್ರಾಕ್ಟ್ ನಲ್ಲಿ ಏನು ಸೇರಿದೆ.? ಏನೆಲ್ಲಾ ಸೇರಿಲ್ಲ ಈಗಿನ ಕಾಲದಲ್ಲಿ ಲೇಬರ್ ಗಳ ಬೆಲೆಗಳ ವಿವರ ಹೇಗಿದೆ.? ಇವುಗಳನ್ನು ತಿಳಿದುಕೊಂಡೆ ಮನೆ ಕಟ್ಟುವ ಕೆಲಸಕ್ಕೆ ಕೈ ಹಾಕಿ.! ಮನೆ ಕಟ್ಟಿಸುವ ವಿಚಾರ ಕೊಡುವ ಟೆನ್ಷನ್ ಅಷ್ಟು ಮತ್ಯಾವ ಸಂಗತಿಯೂ ಟೆನ್ಷನ್ ಕೊಡಲಾರದು ಎಂದೇ ಹೇಳಬಹುದು.
ಯಾಕೆಂದರೆ ಇದು ಒಂದೆರಡು ದಿನಕ್ಕೆ ಮುಗಿಯುವ ವಿಚಾರ ಅಲ್ಲವೇ ಅಲ್ಲ ಮತ್ತು ನಾವು ಅಂದುಕೊಂಡ ಬಜೆಟ್ ಗೆ ಆಗದೇ ಬೆಳೆದುಕೊಂಡು ಹೋಗುತ್ತದೆ. ನಮ್ಮ ಹಣದೊಂದಿಗೆ ನಮ್ಮ ಸಮಯ ಕೂಡ ಖರ್ಚು ಮಾಡಬೇಕು ಜೊತೆಗೆ ಅಂದುಕೊಂಡ ಸಮಯಕ್ಕೆ ಕೆಲಸ ಆಗದೆ ಇದ್ದರೆ ಅಥವಾ ಹಣ ಇಲ್ಲದೆ ಹೋದರೆ ಅಂದುಕೊಂಡ ರೀತಿ ಬಿಲ್ಡಿಂಗ್ ಬರುತ್ತಿಲ್ಲ ಎಂದರೆ ಕಟ್ಟಿಯೂ ಖುಷಿ ಇರುವುದಿಲ್ಲ.
ಮನೆ ಕಟ್ಟುವ ವಿಚಾರದಲ್ಲಿ ಪ್ರತಿಯೊಂದು ಹಂತದಲ್ಲೂ ತುಂಬಾ ಕನ್ಫ್ಯೂಷನ್ ಇರುತ್ತದೆ. ಇದರಲ್ಲಿ ಮೆಟೀರಿಯಲ್ ಕಾಂಟಾಕ್ಟ್ ಕೊಡಬೇಕಾ? ಅಥವಾ ನಾವೇ ನಿಂತು ಲೇಬರ್ ಹತ್ತಿರ ಕಟ್ಟಿಸಬೇಕಾ? ಒಂದು ವೇಳೆ ನೀವೇ ಕಟ್ಟಿಸುವುದಾದರೆ ಯಾವ ಯಾವ ಕೆಲಸಗಳಿಗೆ ಎಷ್ಟು ಖರ್ಚಾಗುತ್ತದೆ ಮತ್ತು ಒಂದು ದಿನಕ್ಕೆ ಲೇಬರ್ ಚಾರ್ಜ್ ಎಷ್ಟಿರುತ್ತದೆ ಎನ್ನುವ ಸಂಗತಿ ಬಗ್ಗೆ ಕೆಲ ಇನ್ಫರ್ಮೇಷನ್ ಈ ಲೇಖನದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಈ ಕಾಲೇಜ್ ನಲ್ಲಿ ಡೊನೇಷನ್ ಇಲ್ಲ, ಕೇವಲ ರೂ.3,700 ಕ್ಕೆ ಊಟ-ವಸತಿ, ಇಲ್ಲಿ ಮಕ್ಕಳು ಓದುತ್ತಲೇ ದುಡಿಯುತ್ತಾರೆ.! ಹೇಗೆ ಅಂತ ನೋಡಿ.!
* ಲೇಬರ್ ಕಾಂಟ್ರಾಕ್ಟ್ ನಲ್ಲಿಯೇ ಮಾಡಿಸುವುದಾದರೆ ಈಗಿನ ರೇಟ್ ಪ್ರಕಾರ ಒಂದು ಚದರಕ್ಕೆ ರೂ.25,000 ದಿಂದ ರೂ.30,000 ನಡೆಯುತ್ತಿದೆ. (ಇದರಲ್ಲಿ ಮೆಟೀರಿಯಲ್ ಗಳು ಹಾಗೂ ಫಿನಿಶಿಂಗ್ ವರ್ಕ್ ಸೇರಿರುವುದಿಲ್ಲ).
* ಮೆಟೀರಿಯಲ್ ಕಾಂಟ್ರಾಕ್ಟ್ ಮಾತ್ರವಲ್ಲದೇ ಲೇಬರ್ ಕಾಂಟ್ರಾಕ್ಟ್ ಆದರೂ ಕೂಡ ನೀವು ಇಲ್ಲಿ ಅಗ್ರಿಮೆಂಟ್ ಮಾಡಿಕೊಳ್ಳಲೇಬೇಕು. ಆ ಅಗ್ರಿಮೆಂಟ್ ನಲ್ಲಿ ಯಾವೆಲ್ಲ ಕೆಲಸಗಳು ಸೇರಿರುತ್ತವೆ, ಯಾವುದು ಸೇರಿರುವುದಿಲ್ಲ? ಯಾವುದಕ್ಕೆ ಎಷ್ಟು ಮಾತನಾಡಲಾಗಿದೆ ಮತ್ತು ಈ ಸಮಯದಲ್ಲಿ ಯಾವ ರೀತಿ ಸಮಸ್ಯೆ ಆದರೆ ಯಾರು ಪರಿಹಾರ ಕೊಡಬೇಕು ಎನ್ನುವ ಎಲ್ಲಾ ಅಂಶಗಳನ್ನು ಕೂಡ ಬರೆದು ಎರಡು ಕಡೆಯವರಿಂದ ಒಪ್ಪಿಗೆಯಾಗಿ, ಸಹಿಯೂ ಕೂಡ ಆಗಿರಬೇಕು.
* ಸಾಮಾನ್ಯವಾಗಿ ಲೇಬರ್ ಕಾಂಟ್ರಾಕ್ಟ್ ನಲ್ಲಿ ಸೇರಿಸಲ್ಪಡುವ ಕೆಲಸಗಳು. (JCB ನಿಂದ ಸಮ ಮಾಡುವುದು (Excavating), PCC ಫೂಟಿಂಗ್ (PCC footing), ಎಲ್ಲಾ ಕಡೆಗೂ ಕಾಲಮ್, ಭೀಮ್, ಸ್ಟೇರ್ ಕೇಸ್, ಬಾರ್ ಬೆಂಡಿಂಗ್ ಸ್ಟೀಲ್ ವರ್ಕ್, ಸೆಂಟ್ರಿಂಗ್ ಕೆಲಸ (Shuttering work), ಪ್ರತಿಯೊಂದರ ಕಾಂಕ್ರೀಟ್ ಕೆಲಸ (Concrete Work),
ಈ ಸುದ್ದಿ ಓದಿ:- ಮನೆ ಕಟ್ಟುವವರಿಗೆ ಸಂಕಷ್ಟ.! ಸಿಮೆಂಟ್, ಕೆಂಪು ಇಟ್ಟಿಗೆ, ಕಬ್ಬಿಣದ ಬೆಲೆ ಎಷ್ಟಾಗಿದೆ ಗೊತ್ತಾ.?
ಸಾಯಿಲ್ ವರ್ಕ್ (Soil Work), ಮನೆ ಒಳ ಹಾಗೂ ಹೊರಗಿನ ಬ್ರಿಕ್ ವರ್ಕ್ (Internal and External Brick work), ಪ್ಲಾಸ್ಟರಿಂಗ್ (Plastering), ಸಿಂಪಲ್ ಎಲಾವೇಶನ್ (Simple Ekavation), ಡೋರ್ ಮತ್ತು ವಿಂಡೋ ಫ್ರೇಮ್ (Door and Window frame), ಕಿಚನ್ ಸ್ಲಾಬ್ (Kitchen slab), ಮರ ಕಟ್ಟುವ ಕೆಲಸ, ಫ್ಲೋರ್ RCC, ವಾಟರ್ ಟ್ಯಾಂಕ್ ಬೇಸ್, ಬಟ್ಟೆ ಒಗೆಯುವ ಕಲ್ಲು ಮತ್ತು ಚಿಕ್ಕ ಪುಟ್ಟ ಸರ್ಜಾಗಳು ಇವುಗಳು ಸೇರಿರುತ್ತವೆ.
* ಸಾಮಾನ್ಯವಾಗಿ ಯಾವುದು ಈ ರೀತಿ ಲೇಬರ್ ಕಾಂಟ್ಯಾಕ್ಟ್ ನಲ್ಲಿ ಸೇರಿರುವುದಿಲ್ಲ ಎನ್ನುವುದರ ಬಗ್ಗೆಯೂ ಕೂಡ ಹೇಳುತ್ತಿದ್ದೇವೆ.
(ಫ್ಯಾರಫಿಟ್ ವಾಲ್, ಸಂಪ್ ಟ್ಯಾಂಕ್, ಓವರ್ ಹೆಡ್ ಟ್ಯಾಂಕ್, ಲೇಔಟ್ ಮೇಕಿಂಗ್, ಪ್ಲಂಬಿಂಗ್ ವರ್ಕ್, ಎಲೆಕ್ಟ್ರಿಕಲ್ ವರ್ಕ್, ಪೇಯಿಂಟ್ ವರ್ಕ್, ಫ್ಲೋರಿಂಗ್ ಟೈಲ್ಸ್ ಮತ್ತು ಗ್ರಾನೈಟ್ ಫ್ಯಾಬ್ರಿಕೇಷನ್ಸ್, ಸ್ಯಾನಿಟರಿ ವರ್ಕ್, ಕಾರ್ಪೆಂಟರ್ ವರ್ಕ್, ಕ್ಯಾನ್ಟಿಲಿವೇರ್, ಸ್ಲಾಪ್ ರೂಪಿಂಗ್, ವಾಟರ್ ಪ್ರೂಫಿಂಗ್, ಆಂಟಿ ಟರ್ಮಿಕ್ ಟ್ರೀಟ್ಮೆಂಟ್) ಇವುಗಳು ಸೇರಿರುವುದಿಲ್ಲ.
ಈ ಕೆಲಸಗಳಿಗೆ ಸಪರೇಟ್ ಆಗಿ ಲೇಬರ್ ಕರೆತಂದು ಮಾಡಿಸಬೇಕಾಗುತ್ತದೆ ಮತ್ತು ಈ ಕೆಲಸಗಳನ್ನು ಮಾಡಿಸುವಾಗ ಯಾವುದಕ್ಕೆ ಎಷ್ಟು ವೆಚ್ಚಗಳುತ್ತದೆ ಎನ್ನುವುದನ್ನು ಲೆಕ್ಕ ಹಾಕಿ ಲೇಬರ್ ಕಾಂಟಾಕ್ಟ್ ಬೆಸ್ಟ್ ಆ.? ಅಥವಾ ಮೆಟೀರಿಯಲ್ ಕಾಂಟ್ರಾಕ್ಟ್ ಬೆಸ್ಟಾ.? ಎನ್ನುವುದನ್ನು ನಿರ್ಣಯ ಮಾಡಲು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.