ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಹಣ ಸಂಪಾದನೆ ಮಾಡಬಹುದು. ಆದರೆ, ಸಂಪಾದನೆ ಮಾಡಿದ ಹಣಕ್ಕೆ ಇಲ್ಲವಾದಲ್ಲಿ ಮುಂದೊಂದು ದಿನ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಯಾವ ರೀತಿಯೆಲ್ಲಾ ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸಮಸ್ಯೆಗಳು ಎದುರಾಗಬಹುದು ಹಾಗಾಗಿ ಯಾವ ರೀತಿ ನಿಯಮಬದ್ಧವಾಗಿ ನಮ್ಮ ಹಣಕಾಸಿನ ವಹಿವಾಟು ನಡೆಯಬೇಕು ಎನ್ನುವುದರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕಾದ ಒಂದು ಮುಖ್ಯವಾದ ವಿಷಯವನ್ನು ಇಂದು ನಾವು ಈ ಲೇಖನದಲ್ಲಿ ಪ್ರಸ್ತಾಪಿಸುತ್ತಿದ್ದೇವೆ.
ಹಿಂದೆಲ್ಲಾ ನಗದು ಮೂಲಕವೇ ಹಣಕಾಸಿನ ವಹಿವಾಟು ನಡೆಯುತ್ತಿತ್ತು ಆದರೆ ಈಗ ಪ್ರಪಂಚ ಡಿಜಿಟಲೀಕರಣವಾಗಿದೆ ನಮ್ಮ ಪ್ರತಿಯೊಂದು ಟ್ರಾನ್ಸಾಕ್ಷನ್ ಗಳು ಕೂಡ ಡಿಜಿಟಲ್ ರೂಪದಲ್ಲಿ ಸರ್ಕಾರದ ಬಳಿ ಡಾಕ್ಯೂಮೆಂಟ್ ಇರುತ್ತದೆ. ನಮ್ಮ ಆದಾಯಕ್ಕಿಂತ ಹೆಚ್ಚಿನ ವಹಿವಾಟುಗಳು ನಮ್ಮ ಖಾತೆಯಿಂದ ನಡೆಯುತ್ತಿದೆ ಎಂದರೆ ಅದು ಚೆಕ್ ಮೂಲಕವೇ ಆಗಲಿ ಅಥವಾ UPI ಆಪ್ ಗಳ ಮೂಲಕವೇ ಆಗಲಿ ಕ್ರೆಡಿಟ್ ಕಾರ್ಡ್ ಮೂಲಕವೇ ಆಗಲಿ ಅದಕ್ಕೆ ಪೂರಕವಾದ ದಾಖಲೆ ನಮ್ಮ ಬಳಿ ಇರಬೇಕು.
ಉದಾಹರಣೆಗೆ ಒಬ್ಬ ವ್ಯಕ್ತಿ ವೇತನವು ರೂ.30,000 ಇದೆ ಎಂದರೆ ಅದಕ್ಕೆಸಮವಾಗಿ ಅಥವಾ ಕಡಿಮೆಯಾಗಿ ಇದ್ದರೆ ಟ್ರಾನ್ಸಾಕ್ಷನ್ ಗಳು ಆಗಿದ್ದರೆ ಯಾವುದೇ ತೊಂದರೆ ಇಲ್ಲ. ಆದರೆ ಅದಕ್ಕಿಂತಲೂ ಹೆಚ್ಚಿಗೆ ವಹಿವಾಟು ನಡೆದಾಗ ಆದಾಯ ತೆರಿಗೆ ಇಲಾಖೆ ನಿಮ್ಮ ಮೇಲೆ ನಿಗಾ ಇಡುತ್ತದೆ. ವ್ಯಾಪಾರದ ಮೂಲಕ ಆಗಿರಲಿ ಅಥವಾ ಕೃಷಿಯ ಮೂಲಕವೇ ಆಗಿರಲಿ ಅವರ ವಾರ್ಷಿಕ ಆದಾಯ ಎಷ್ಟಿರುತ್ತದೆ ಅದಕ್ಕೆ ಸರಿಯಾದ ದಾಖಲೆ ಇರಬೇಕು.
ಈ ಸುದ್ದಿ ಓದಿ:- ಪತ್ನಿ ಹೆಸರಿನಲ್ಲಿ ಆಸ್ತಿ ಖರೀದಿಸುವ ಮುನ್ನ ಈ ತೀರ್ಪಿನ ಬಗ್ಗೆ ತಿಳಿದುಕೊಳ್ಳಿ…
ವ್ಯಾಪಾರದಿಂದ ಲಾಭ ಬಂದರು ಕೃಷಿಯಿಂದ ಮಾರಾಟ ಮಾಡಿ ಹಣ ಪಡೆದಿದ್ದರು ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಖಂಡಿತ ಈಗಿನ ಕಾಲದಲ್ಲಿ ಕೊಡುತ್ತಾರೆ, ಅದನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು ಮತ್ತು ಆದಾಯ ತೆರಿಗೆ ಮಿತಿಗಿಂತ ಹೆಚ್ಚಿನ ಹಣಕಾಸಿನ ವಹಿವಾಟು ಮಾಡುತ್ತಿದ್ದರೆ ತಪ್ಪದೆ ITR ಫೈಲ್ ಮಾಡಬೇಕು.
ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರು ಕೂಡ ನೀವು ಸಿಕ್ಕಾಪಟ್ಟೆ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಎಚ್ಚರವಾಗಿರಿ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ಗಳನ್ನು ನೀವು ಮಾತ್ರ ನಿಮ್ಮ ಅಗತ್ಯತೆಗಳಿಗೆ ಬಳಸಬೇಕು. ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಬೇರೆಯವರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ತೆಗೆದುಕೊಳ್ಳುವುದು ಅಥವಾ ಬೇರೆ ಯಾರಿಗೋ ನಿಮ್ಮ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಲು ಕೊಡುವುದರಿಂದ ಕೂಡ ನಿಮಗೆ ಸಮಸ್ಯೆಗಳು ಎದುರಾಗುತ್ತಿದೆ.
ಏಕೆಂದರೆ, ಒಂದು ಆರ್ಥಿಕ ವರ್ಷದಲ್ಲಿ ನಿಮ್ಮ ವಾರ್ಷಿಕ ಆದಾಯದ ಮಿತಿ 10 ಲಕ್ಷ ಆಗಿರುತ್ತದೆ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಉಪಯೋಗಿಸಿ 25 ಲಕ್ಷದವರೆಗೆ ಟ್ರಾನ್ಸಾಕ್ಷನ್ ಮಾಡಿದ್ದರೆ ಉಳಿದ 15 ಲಕ್ಷ ಹಣವನ್ನು ತೀರಿಸಲು ನೀವು ಖಾತೆಗೆ ಒಂದೇ ಸಾರಿ 15 ಲಕ್ಷ ಹಣ ಹಾಕಿದರೆ ಅದರ ದಾಖಲೆ ಕೂಡ ನೀವು ಕೊಡಬೇಕಾಗುತ್ತದೆ.
ಈ ಸುದ್ದಿ ಓದಿ:-ಬಾಡಿಗೆ ಮನೆಯಲ್ಲಿ ಇರುವವರಿಗೆ ಸಿಹಿ ಸುದ್ದಿ ಇನ್ಮುಂದೆ ಅಡ್ವಾನ್ಸ್ ಕೊಡುವ ಹಾಗಿಲ್ಲ.!
ಈ ರೀತಿಯಾಗಿ ನೀವು ನಿಮ್ಮ ಆದಾಯ ಮಿತಿಮೀರಿದ ಮೇಲೆ ಆದ ಸಾಲಕ್ಕೆ ಒಂದೇ ಬಾರಿಗೆ ಹಣ ಕಟ್ಟಿ ತೀರಿಸಿದರೆ ಅದನ್ನು ಹೆಚ್ಚಿಗೆ ಸಮಯದಲ್ಲಿ ಬ್ಲಾಕ್ ಮನಿ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಅದು ಸರಿಯಾದ ಹಣವೇ ಆಗಿದ್ದು ಅದಕ್ಕೆ ಸಂಬಂಧಪಟ್ಟ ಸರಿಯಾದ ದಾಖಲೆಗಳು ಇದ್ದರೆ ಯಾವುದೇ ಸಮಸ್ಯೆ ಇಲ್ಲ.
ನೀವೇನಾದರೂ ಆದಾಯ ತೆರಿಗೆ ಇಲಾಖೆ ಬಗ್ಗೆ ಬಹಳ ನಿರ್ಲಕ್ಷ ತೋರಿ ಲಕ್ಷಾಂತರ ಅಕೌಂಟ್ ಗಳಿರುತ್ತವೆ ನನ್ನನ್ನು ಯಾರು ಗಮನಿಸುವುದಿಲ್ಲ ಎಂದು ಕಾನೂನುಬಾಹಿರವಾಗಿ ಅಥವಾ ನಿಯಮಗಳನ್ನು ಮೀರಿ ಟ್ರಾನ್ಸಾಕ್ಷನ್ ನಡೆಸಿದರೆ ಮುಂದಿನ ಐದು ವರ್ಷ ಅಥವಾ ಎಂಟು ವರ್ಷದ ಒಳಗೆ ನಿಮಗೆ ನೋಟಿಸ್ ಬರಬಹುದು. ಎಲ್ಲಾ ವಹಿವಾಟಿಗೂ ಸರಿಯಾದ ದಾಖಲೆ ಕೊಟ್ಟರೆ ಸರಿ, ಇಲ್ಲವಾದಲ್ಲಿ 200%-400% ಫೆನಾಲ್ಟಿ ಕಟ್ಟಬೇಕಾಗುತ್ತದೆ ಹಾಗಾಗಿ ಎಚ್ಚರಿಕೆಯಿಂದ ಇರಿ ಮತ್ತು ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳಿ.